ಪ್ರಧಾನ ಮಂತ್ರಿಯವರ ಕಛೇರಿ
ಫೆಬ್ರವರಿ 3ರಂದು ವಿಶ್ವ ಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಯವರು
प्रविष्टि तिथि:
01 FEB 2023 8:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಫೆಬ್ರವರಿ 3ರಂದು ಸಂಜೆ 4:30ಕ್ಕೆ ಅಸ್ಸಾಂನ ಬಾರ್ಪೇಟಾದ ಕೃಷ್ಣಗುರು ಸೇವಾಶ್ರಮದಲ್ಲಿ ನಡೆಯಲಿರುವ ವಿಶ್ವ ಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಯವರು ಕೃಷ್ಣಗುರು ಸೇವಾಶ್ರಮದ ಭಕ್ತರನ್ನುದ್ದೇಶಿಸಿ ಭಾಷಣ ಕೂಡಾ ಮಾಡಲಿದ್ದಾರೆ.
ಪರಮಗುರು ಕೃಷ್ಣಗುರು ಈಶ್ವರ್ ಅವರು 1974ರಲ್ಲಿ ಅಸ್ಸಾಂನ ಬಾರ್ಪೇಟಾದ ನಸಾತ್ರಾ ಗ್ರಾಮದಲ್ಲಿ ಕೃಷ್ಣಗುರು ಸೇವಾಶ್ರಮವನ್ನು ಸ್ಥಾಪಿಸಿದರು. ಅವರು ಮಹಾನ್ ವೈಷ್ಣವ ಸಂತ ಶ್ರೀ ಶಂಕರದೇವ ಅವರ ಅನುಯಾಯಿಯಾಗಿದ್ದ ಮಹಾವೈಷ್ಣವ ಮನೋಹರದೇವ ಅವರ ಒಂಬತ್ತನೇ ವಂಶಸ್ಥರಾಗಿದ್ದಾರೆ. ವಿಶ್ವಶಾಂತಿಗಾಗಿ ಕೃಷ್ಣಗುರು ಏಕನಾಮ ಅಖಂಡ ಕೀರ್ತನೆಯು ಕೃಷ್ಣಗುರು ಸೇವಾಶ್ರಮದಲ್ಲಿ ಒಂದು ತಿಂಗಳ ಕಾಲ ಜನವರಿ 6ರಿಂದ ನಡೆಯುತ್ತಿದೆ.
******
(रिलीज़ आईडी: 1895869)
आगंतुक पटल : 169
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam