ಹಣಕಾಸು ಸಚಿವಾಲಯ
ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ
ಮುನ್ಸಿಪಲ್ ಬಾಂಡ್‌ಗಳಿಗೆ ಸಾಲ ಯೋಗ್ಯತೆಯನ್ನು ಸುಧಾರಿಸಲು ನಗರಗಳಿಗೆ ಪ್ರೋತ್ಸಾಹಕಗಳು
ನಗರಗಳು ಮತ್ತು ಪಟ್ಟಣಗಳಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳ ಶೇ.100ರಷ್ಟು ಯಾಂತ್ರಿಕ ನಿಷ್ಕ್ರಿಯತೆಗೆ ಅನುವು ಮಾಡಿಕೊಡಲಾಗುವುದು
Posted On:
01 FEB 2023 1:18PM by PIB Bengaluru
ನಗರಗಳನ್ನು ‘ನಾಳೆಯ ಸುಸ್ಥಿರ ನಗರಗಳಾಗಿ’ ಪರಿವರ್ತಿಸಲು ನಗರ ಯೋಜನೆ ಸುಧಾರಣೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ನಗರಗಳನ್ನು ಪ್ರೋತ್ಸಾಹಿಸಲಾಗುವುದು. ಇದರರ್ಥ ಭೂ ಸಂಪನ್ಮೂಲಗಳ ಸಮರ್ಥ ಬಳಕೆ, ನಗರ ಮೂಲಸೌಕರ್ಯಕ್ಕೆ ಸಾಕಷ್ಟು ಸಂಪನ್ಮೂಲಗಳು, ಸಾರಿಗೆ ಆಧಾರಿತ ಅಭಿವೃದ್ಧಿ, ನಗರ ಭೂಮಿಯ ಹೆಚ್ಚಿನ ಲಭ್ಯತೆ ಮತ್ತು ಕೈಗೆಟುಕುವಿಕೆ ಮತ್ತು ಎಲ್ಲರಿಗೂ ಅವಕಾಶಗಳನ್ನ ಕಲ್ಪಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವಾಗ ತಿಳಿಸಿದರು.
ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ
ಆದ್ಯತಾ ವಲಯದ ಸಾಲದ ಕೊರತೆಯನ್ನು ಬಳಸಿಕೊಂಡು ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಯುಐಡಿಎಫ್) ಸ್ಥಾಪಿಸಲಾಗುವುದು ಎಂದು ಶ್ರೀಮತಿ ಸೀತಾರಾಮನ್ ಉಲ್ಲೇಖಿಸಿದರು. ಇದನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನಗರ ಮೂಲಸೌಕರ್ಯಗಳನ್ನು ರಚಿಸಲು ಸಾರ್ವಜನಿಕ ಏಜೆನ್ಸಿಗಳು ಬಳಸುತ್ತವೆ.
ಮುನ್ಸಿಪಲ್ ಬಾಂಡ್‌ಗಳಿಗೆ ನಗರಗಳನ್ನು ಸಿದ್ಧಗೊಳಿಸುವುದು
ಮುನ್ಸಿಪಲ್ ಬಾಂಡ್‌ಗಳಿಗೆ ತಮ್ಮ ಕ್ರೆಡಿಟ್ ಅರ್ಹತೆಯನ್ನು ಸುಧಾರಿಸಲು ನಗರಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದನ್ನು ಆಸ್ತಿ ತೆರಿಗೆ ಆಡಳಿತ ಸುಧಾರಣೆಗಳು ಮತ್ತು ನಗರ ಮೂಲಸೌಕರ್ಯಗಳ ಮೇಲೆ ರಿಂಗ್-ಫೆನ್ಸಿಂಗ್ ಬಳಕೆದಾರರ ಶುಲ್ಕಗಳ ಮೂಲಕ ಮಾಡಲಾಗುತ್ತದೆ.
ನಗರ ನೈರ್ಮಲ್ಯ
ಎಲ್ಲ ನಗರಗಳು ಮತ್ತು ಪಟ್ಟಣಗಳಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಒಳಚರಂಡಿಗಳನ್ನು ಶೇ. 100 ರಷ್ಟು ಯಾಂತ್ರಿಕವಾಗಿ ತೆಗೆದುಹಾಕಲು ಅನುವು ಮಾಡಿಕೊಡಲಾಗುವುದು. ಒಣ ಮತ್ತು ಹಸಿ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಹೆಚ್ಚಿನ ಗಮನ ನೀಡಲಾಗುವುದು.
*****
(Release ID: 1895612)
Visitor Counter : 252