ಹಣಕಾಸು ಸಚಿವಾಲಯ

​​​​​​​2023-24 ರ ಬಂಡವಾಳ ವೆಚ್ಚದಲ್ಲಿ ಶೇ.37.4 ಹೆಚ್ಚಳ, 10 ಲಕ್ಷ ಕೋಟಿ ರೂ.ಗೆ ಏರಿಕೆ


2023-24ರಲ್ಲಿ ಆದಾಯ ವೆಚ್ಚವು ಶೇ. 1.2 ರಷ್ಟು ವೃದ್ಧಿಯಾಗಲಿದ್ದು, 35.02 ಲಕ್ಷ ಕೋಟಿ ರೂ.ಗಳಾಗಲಿದೆ.

2023-24 ರಲ್ಲಿ ಒಟ್ಟು ವೆಚ್ಚವು 45.03 ಲಕ್ಷ ಕೋಟಿ ರೂ.ಗಳಾಗಲಿದೆ; 2022-23 ಕ್ಕೆ ಹೋಲಿಸಿದರೆ ಶೇ. 7.5 ಹೆಚ್ಚಳ

ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಆರ್ಥಿಕ ಸಹಾಯದಲ್ಲಿ ಶೇ.30 ಹೆಚ್ಚಳ; 1.30 ಲಕ್ಷ ಕೋಟಿ ರೂ.ಗೆ ಏರಿಕೆ

Posted On: 01 FEB 2023 12:46PM by PIB Bengaluru

"ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿನ ಹೂಡಿಕೆಗಳು ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತವೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅವರು ಇಂದು ಸಂಸತ್ತಿನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು.

ಬೆಳವಣಿಗೆ ಮತ್ತು ಉದ್ಯೋಗಗಳ ಚಾಲಕಶಕ್ತಿಯಾಗಿ ಬಂಡವಾಳ ಹೂಡಿಕೆ

ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಉತ್ತಮ ಆವರ್ತವನ್ನು ಹೆಚ್ಚಿಸಲು 2023-24 ನೇ ಸಾಲಿನ ಬಜೆಟ್ ಬಿಇ (ಬಜೆಟ್‌ ಅಂದಾಜು) ಯಲ್ಲಿದ್ದ ಶೇ.37.4 ರಷ್ಟು ಬಂಡವಾಳ ವೆಚ್ಚವನ್ನು ಆರ್‌ ಇ (ಪರಿಷ್ಕೃತ ಅಂದಾಜು) 2022-23 ರಲ್ಲಿ 7.28 ಲಕ್ಷ ಕೋಟಿಯಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಮೂಲಕ ಮತ್ತೊಮ್ಮೆ ಮುನ್ನಡೆ ಸಾಧಿಸಿದೆ.

2019-20 ನೇ ಹಣಕಾಸು ವರ್ಷದ ಬಂಡವಾಳ ವೆಚ್ಚದ ಸುಮಾರು 3 ಪಟ್ಟು ಹೆಚ್ಚಳವಾಗಿದೆ ಎಂದು ಎಂದು ಹಣಕಾಸು ನೀತಿಯ ಹೇಳಿಕೆಗಳು ಎತ್ತಿ ತೋರಿಸಿವೆ. ಪ್ರಮುಖ ಮೂಲಸೌಕರ್ಯ ಮತ್ತು ಕಾರ್ಯತಂತ್ರದ ಸಚಿವಾಲಯಗಳಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೇ, ರಕ್ಷಣೆ ಇತ್ಯಾದಿಗಳು 2023-24 ನೇ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ. ಹಣಕಾಸಿನ ನೀತಿಯ ಪ್ರಕಾರ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಸರ್ಕಾರ ನೀಡುತ್ತಿರುವ ಒತ್ತು ಹೆಚ್ಚಿನ ಬಂಡವಾಳ ವೆಚ್ಚಕ್ಕೆ ಕಾರಣವಾಗಿದೆ. ಇದು ದೇಶಾದ್ಯಂತ ಇಂತಹ ಹೂಡಿಕೆಗಳ ಇಕ್ವಿಟಿ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದು ಮುಂದಿನ 25 ವರ್ಷಗಳಲ್ಲಿ ಮೂಲಸೌಕರ್ಯ, ಹೂಡಿಕೆ, ಆವಿಷ್ಕಾರ ಮತ್ತು ಒಳಗೊಳ್ಳುವಿಕೆಯ ನಾಲ್ಕು ʼಐʼ ಗಳಿಗೆ ಸರ್ಕಾರದ ಗಮನ ಮತ್ತು ಬದ್ಧತೆಗೆ ಅನುಗುಣವಾಗಿದೆ.

ಸಹಕಾರಿ ಹಣಕಾಸು ಒಕ್ಕೂಟ ವ್ಯವಸ್ಥೆಯ ಮನೋಭಾವದಲ್ಲಿ ರಾಜ್ಯಗಳ ಕೈಗಳನ್ನು ಬಲಪಡಿಸಲು, 2022-23 ರಲ್ಲಿ ಪರಿಚಯಿಸಲಾದ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ಯೋಜನೆಯನ್ನು 2023-24 ರಲ್ಲಿ 1.30 ಲಕ್ಷ ಕೋಟಿ ರೂ.ಗಳ ವರ್ಧಿತ ವೆಚ್ಚದೊಂದಿಗೆ ವಿಸ್ತರಿಸಲಾಗಿದೆ. ಇದು 2022-23 ರ ಬಜೆಟ್‌ ಅಂದಾಜು ಹಂಚಿಕೆಗಿಂತ ಶೇಕಡಾ 30 ರಷ್ಟು ಹೆಚ್ಚಳವಾಗಿದೆ ಮತ್ತು 2023-24 ನೇ ಆರ್ಥಿಕ ವರ್ಷದ ಜಿಡಿಪಿಯ ಸುಮಾರು 0.4 ಶೇಕಡಾವನ್ನು ಹೊಂದಿದೆ.

ಆದಾಯ ವೆಚ್ಚ

2023-24ರಲ್ಲಿ ಆದಾಯ ವೆಚ್ಚವು ಶೇ.1.2 ರಷ್ಟು ಬೆಳವಣಿಗೆಯೊಂದಿಗೆ 35.02 ಲಕ್ಷ ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ. ಆದಾಯ ವೆಚ್ಚದ ಪ್ರಮುಖ ಅಂಶಗಳಲ್ಲಿ ಬಡ್ಡಿ ಪಾವತಿಗಳು, ಪ್ರಮುಖ ಸಹಾಯಧನಗಳು, ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳು, ಪಿಂಚಣಿಗಳು, ರಕ್ಷಣಾ ಆದಾಯ ವೆಚ್ಚಗಳು ಮತ್ತು ಹಣಕಾಸು ಆಯೋಗದ ಅನುದಾನಗಳ ರೂಪದಲ್ಲಿ ರಾಜ್ಯಗಳಿಗೆ ವರ್ಗಾವಣೆ, ಕೇಂದ್ರ ಪ್ರಾಯೋಜಿತ ಯೋಜನೆಗಳು ಇತ್ಯಾದಿ ಸೇರಿವೆ. ಕೇಂದ್ರ ವಲಯದ ಯೋಜನೆಗಳಿಗೆ ಕೇಂದ್ರ ಸ್ವಾಯತ್ತ ಸಂಸ್ಥೆಗಳಿಗೆ ನೀಡುವ ಅನುದಾನಗಳು ಇದರ ಗಣನೀಯ ಭಾಗವಾಗಿವೆ.

ಬಡ್ಡಿ ಪಾವತಿಗಳು

ಬಡ್ಡಿ ಪಾವತಿಗಳು ರೂ 10.80 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಇದು ಒಟ್ಟು ಆದಾಯ ವೆಚ್ಚದ ಶೇ.30.8 ಆಗಿದೆ.

ಸಹಾಯಧನಗಳು

ಹಣಕಾಸು ನೀತಿಯ ಪ್ರಕಾರ ಸಬ್ಸಿಡಿಗಳು ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಸಬ್ಸಿಡಿಗಳನ್ನು ಒಳಗೊಂಡಿರುವ ಆದಾಯದ ವೆಚ್ಚಗಳ ಗಮನಾರ್ಹ ಭಾಗವನ್ನು ಹೊಂದಿವೆ. BE 2023-24 ರ ಬಜೆಟ್‌ ಅಂದಾಜಿನಲ್ಲಿ ಪ್ರಮುಖ ಸಬ್ಸಿಡಿಗಳು ರೂ 3.75 ಲಕ್ಷ ಕೋಟಿ ರೂ. ಗಳಾಗಿದ್ದು, (ಜಿಡಿಪಿಯ ಶೇ.1.2) ಇದು ಆದಾಯ ವೆಚ್ಚದ ಶೇ.10.7 ಆಗಿದೆ.

ಹಣಕಾಸು ಆಯೋಗದ ಅನುದಾನ

ಬಜೆಟ್‌ನ ಪ್ರಕಾರ ರಾಜ್ಯಗಳಿಗೆ ಆದಾಯ ಕೊರತೆ ಅನುದಾನ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಮತ್ತು ಇತರ ವರ್ಗಗಳ ಅಡಿಯಲ್ಲಿ ಒಟ್ಟು ಹಣಕಾಸು ಆಯೋಗದ ಅನುದಾನಗಳು 2023-24 ರಲ್ಲಿ 1.65 ಲಕ್ಷ ಕೋಟಿ ರೂ.ಗಳಾಗಿವೆ.

ಪಿಂಚಣಿಗಳು

2022-23 ರ ಬಜೆಟ್‌ ಅಂದಾಜಿನಲ್ಲಿದ್ದ 2.07 ಲಕ್ಷ ಕೋಟಿ ರೂಪಾಯಿಗಳಿಂದ 2022-23 ರ ಪರಿಷ್ಕೃತ ಅಂದಾಜಿನ ವೆಚ್ಚವು ಸುಮಾರು 2.45 ಲಕ್ಷ ಕೋಟಿಗೆ ಏರಿದೆ. 2022-23 ರ ಪರಿಷ್ಕೃತ ಅಂದಾಜಿನ ಈ ಹೆಚ್ಚಳದ ಹಿಂದಿನ ಪ್ರಮುಖ ಕಾರಣವೆಂದರೆ ರಕ್ಷಣಾ ಸಿಬ್ಬಂದಿಗೆ ಸಂಬಂಧಿಸಿದಂತೆ ಒ ಆರ್‌ ಒ ಪಿ ಬಾಕಿಗಳನ್ನು ಪಾವತಿಸಿದ್ದು. ಬಿಇ 2023-24 ರಲ್ಲಿ ಪಿಂಚಣಿ ಪಾವತಿಗಳನ್ನು ರೂ. 2.34 ಲಕ್ಷ ಕೋಟಿಗಳೆಂದು ನಿರೀಕ್ಷಿಸಲಾಗಿದೆ, ಇದು ಅಂದಾಜು ಜಿಡಿಪಿಯ 0.8 ಪ್ರತಿಶತವಾಗಿದೆ. ಇದು ರಕ್ಷಣಾ ಪಿಂಚಣಿಯ ಸುಮಾರು 1.38 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಒಳಗೊಂಡಿದೆ.

 

ಒಟ್ಟು ವೆಚ್ಚ

ಹಣಕಾಸು ನೀತಿ ಹೇಳಿಕೆಯಂತೆ, 2023-24ರಲ್ಲಿ ಒಟ್ಟು ವೆಚ್ಚ 45.03 ಲಕ್ಷ ಕೋಟಿ ರೂ. ಗಳಾಗಿದೆ. ಇದು 2022-23ಕ್ಕಿಂತ ಶೇ.7.5 ಹೆಚ್ಚಳವಾಗಿದೆ.

ರಾಜ್ಯಗಳಿಗೆ ಅನುದಾನ ಹಂಚಿಕೆ

15 ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಗಳಿಗೆ ಅನುದಾನವು ವರ್ಷದಲ್ಲಿ ಹೆಚ್ಚಿದ ತೆರಿಗೆ ಸ್ವೀಕೃತಿಗಳಿಂದಾಗಿ ಸುಮಾರು 9.48 ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪಾವತಿಸಬೇಕಾದ ಪೂರ್ವ ಅವಧಿಯ ಹೊಂದಾಣಿಕೆಗಳಲ್ಲಿ ಸರಿಸುಮಾರು 32,600 ಕೋಟಿ ರೂಪಾಯಿಗಳ ಮೊತ್ತವನ್ನು ಸರಿಹೊಂದಿಸುತ್ತದೆ. 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, 2023-24 ರ ಬಜೆಟ್‌ ಅಂದಾಜಿನಲ್ಲಿ ರಾಜ್ಯಗಳಿಗೆ ತೆರಿಗೆ ಅನುದಾನವು 10.21 ಲಕ್ಷ ಕೋಟಿ ರೂ.ಗಳಾಗಿದೆ.

*****

 



(Release ID: 1895592) Visitor Counter : 411