ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ʻಸಾರ್ವಜನಿಕ ಸೇವಾ ಪ್ರಸಾರʼದ ಬಾಧ್ಯತೆಯ ಬಗ್ಗೆ ಸಲಹಾಸೂಚಿ ಹೊರಡಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ

Posted On: 30 JAN 2023 5:45PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯವು 09.11.2022 ರಂದು "ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್ ಮತ್ತು ಡೌನ್‌ಲಿಂಕಿಂಗ್ ಮಾರ್ಗಸೂಚಿಗಳು, 2022" ಅನ್ನು ಹೊರಡಿಸಿದೆ. ಮಾರ್ಗಸೂಚಿಗಳ ಪ್ರಕಾರ, ಖಾಸಗಿ ಪ್ರಸಾರಕರು ಪ್ರತಿದಿನ 30 ನಿಮಿಷಗಳ ಕಾಲ ʻಸಾರ್ವಜನಿಕ ಸೇವಾ ಪ್ರಸಾರʼವನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ, ಸಚಿವಾಲಯವು ಖಾಸಗಿ ಉಪಗ್ರಹ ಟಿವಿ ಚಾನೆಲ್ ಪ್ರಸಾರಕರು ಮತ್ತು ಅವರ ಸಂಘಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದೆ ಮತ್ತು ಅವರ ಅಭಿಪ್ರಾಯಗಳ ಆಧಾರದ ಮೇಲೆ 30.01.2023 ರಂದು "ಸಲಹಾಸೂಚಿ" ಹೊರಡಿಸಿದೆ.

ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಅಡಗಿರುವ ಪ್ರಸ್ತುತತೆಯುಳ್ಳ ವಿಷಯವಸ್ತುವನ್ನೂ(ಕಂಟೆಂಟ್) ʻಸಾರ್ವಜನಿಕ ಸೇವಾ ಪ್ರಸಾರʼವೆಂದು ಪರಿಗಣಿಸಬಹುದು ಎಂದು ಸಚಿವಾಲಯ "ಸಲಹಾಸೂಚಿ" ಮೂಲಕ ಸ್ಪಷ್ಟಪಡಿಸಿದೆ. ಅಂತಹ ವಿಷಯವಸ್ತುವಿನ(ಕಂಟೆಂಟ್‌) ಪ್ರಸಾರವು ನಿರಂತರ 30 ನಿಮಿಷಗಳು ಇರಬೇಕೆಂದಿಲ್ಲ. ಸಣ್ಣಸಣ್ಣ ಸಮಯದ ಸ್ಲಾಟ್‌ಗಳಲ್ಲೂ ಅದು ಹಂಚಿರಬಹುದು. ಪ್ರಸಾರಕರು ʻಬ್ರಾಡ್‌ಕಾಸ್ಟ್‌ ಸೇವಾ ಪೋರ್ಟಲ್‌ʼನಲ್ಲಿ ಮಾಸಿಕ ವರದಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ. ಪ್ರಸಾರದ ಥೀಮ್ ಈ ಕೆಳಗಿನವುಗಳನ್ನು ಒಳಗೊಂಡಂತೆ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಪ್ರಸ್ತುತತೆಯ ವಿಷಯವನ್ನು ಒಳಗೊಂಡಿರಬೇಕು:

  • i. ಶಿಕ್ಷಣ ಮತ್ತು ಸಾಕ್ಷರತೆಯ ಪ್ರಚಾರ;
  1. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ;
  1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ;
  1. ವಿಜ್ಞಾನ ಮತ್ತು ತಂತ್ರಜ್ಞಾನ;
  1. ಮಹಿಳೆಯರ ಕಲ್ಯಾಣ;
  1. ಸಮಾಜದ ದುರ್ಬಲ ವರ್ಗಗಳ ಕಲ್ಯಾಣ;
  1. ಪರಿಸರ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ; ಮತ್ತು
  1. ರಾಷ್ಟ್ರೀಯ ಭಾವೈಕ್ಯತೆ

ಸ್ವಯಂಪ್ರೇರಿತ ಅನುಸರಣೆ ಮತ್ತು ಸ್ವಯಂ ಪ್ರಮಾಣೀಕರಣದ ಮೂಲಕ ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳ ʻಸಾರ್ವಜನಿಕ ಸೇವಾ ಪ್ರಸಾರʼದ ಗುರಿಯನ್ನು ಸಾಧಿಸಲು ಈ "ಸಲಹಾಸೂಚಿ" ಉದ್ದೇಶಿಸಿದೆ.

"ಸಲಹಾಸೂಚಿ"ಯ ಪ್ರತಿಯು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಲಭ್ಯವಿದೆ:

https://mib.gov.in/sites/default/files/Advisory%20on%20Obligation%20of%20PSB_1.pdf

ಜತೆಗೆ ʻಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್‌ʼನಲ್ಲೂ ಲಭ್ಯವಿದೆ:

https://new.broadcastseva.gov.in/digigov-portal-web-app/Upload?flag=iframeAttachView&attachId=140703942&whatsnew=true

*****

 

 


(Release ID: 1894821) Visitor Counter : 252