ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

​​​​​​​ರಾಷ್ಟ್ರೀಯ ಮಹಿಳಾ ಆಯೋಗದ 31ನೇ ಸಂಸ್ಥಾಪನಾ ದಿನದ ಕಾರ್ಯಕ್ರಮ ಉದ್ದೇಶಿಸಿ ನಾಳೆ ಭಾರತದ ರಾಷ್ಟ್ರಪತಿಗಳ ಭಾಷಣ


ರಾಷ್ಟ್ರೀಯ ಮಹಿಳಾ ಆಯೋಗದಿಂದ ಸಂಸ್ಥಾಪನಾ ದಿನದ ಆಚರಣೆ ಸಂಬಂಧ ಎರಡು ದಿನಗಳ ಕಾರ್ಯಕ್ರಮ; ಕಾರ್ಯಕ್ರಮದ ಧ್ಯೇಯವಾಕ್ಯ "ಸಶಕ್ತ ನಾರಿ ಸಶಕ್ತ ಭಾರತʼ

Posted On: 30 JAN 2023 11:11AM by PIB Bengaluru

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಹೊಸದೆಹಲಿಯಲ್ಲಿ ನಾಳೆ ಅಂದರೆ ಜನವರಿ 31ರಂದು ರಾಷ್ಟ್ರೀಯ ಮಹಿಳಾ ಆಯೋಗದ 31 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ʼಸಶಕ್ತ ನಾರಿ ಸಶಕ್ತ ಭಾರತʼ ಧ್ಯೇಯವಾಕ್ಯದೊಂದಿಗೆ ಉತ್ತಮ ಸಾಧನೆ ಮಾಡಿದ ಹಾಗೂ ತಮ್ಮ ಹೆಗ್ಗುತರನ್ನು ದಾಖಲಿಸುವ ರೀತಿಯ ಸಾಗಿದ ಮಹಿಳೆಯರ ಯಶೋಗಾಥೆ ಗುರುತಿಸುವ ಹಾಗೂ ಸಂಭ್ರಮಿಸುವ ಕಾರ್ಯಕ್ರಮವಾಗಿ  ಆಚರಿಸಲಾಗುತ್ತಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್‌ ಇರಾನಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ.ಮುಂಜ್ ಪರ ಮಹೇಂದ್ರಭಾಯ್‌ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ರಾಷ್ಟ್ರೀಯ ಹಾಗೂ ರಾಜ್ಯ ಮಹಿಳಾ ಆಯೋಗಗಳು, ರಾಯಭಾರ ಕಚೇರಿಗೂ, ಕಾನೂನು ಕ್ಷೇತ್ರದ ಗಣ್ಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಸಕರು, ವಿಶ್ವವಿದ್ಯಾಲಯ ಹಾಗೂ ಕಾಲೇಜು ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು, ಸೇನೆ ಹಾಗೂ ಅರೆಸೇನಾ ಪಡೆಯ ಅಧಿಕಾರಿಗಳು, ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳು, ರಾಷ್ಟ್ರೀಯ ಮಹಿಳಾ ಆಯೋಗದ ಸಲಹಾ ಸಮಿತಿ ಸದಸ್ಯರು, ಆಯೋಗದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಸ್ವಯಂಸೇವಾ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

ಆಯೋಗವು ತನ್ನ 31ನೇ ಸಂಸ್ಥಾಪನಾ ದಿನದ ಪ್ರಯುಕ್ತ ಜನವರಿ 31ರಿಂದ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಿದೆ. ಎರಡನೇ ದಿನ ಸ್ಫೂರ್ತಿದಾಯಕ ಹಾಗೂ ಸಬಲೀಕರಣದ ಹಾದಿಯನ್ನು ಮುನ್ನಡೆಸಿ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರೊಂದಿಗೆ ಸಂವಾದ ನಡೆಯಲಿದೆ. ಈ ಚರ್ಚೆಯ ಮುಖಾಂತರ ನಾನಾ ಸಾಮಾಜಿಕ- ಆರ್ಥಿಕ ಹಿನ್ನೆಲೆಯ ಮಹಿಳೆಯರಲ್ಲಿ ನಿರ್ಧಾರ ಕೈಗೊಳ್ಳುವಿಕೆ ಹಾಗೂ ನಾಯಕತ್ವದಲ್ಲಿ ಲಿಂಗ ಸಮಾನತೆ ಕುರಿತಂತೆ ವೈವಿಧ್ಯದ ಅಭಿಪ್ರಾಯ ಮಂಡನೆ, ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸುವ ಗುರಿಯನ್ನು ಹೊಂದಿದೆ.

1990ರ ರಾಷ್ಟ್ರೀಯ ಮಹೀಳಾ ಆಯೋಗ ಕಾಯ್ದೆಯಡಿ ಶಾಸನಬದ್ಧ ಸಂಸ್ಥೆಯಾಗಿ 1992ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ರಚನೆಯಾಯಿತು. ಮಹಿಳೆಯರಿಗಿರುವ ಸಾಂವಿಧಾನಿಕ ಹಾಗೂ ಕಾನೂನು ರಕ್ಷಣೆಗಳ ಪರಿಶೀಲನೆ, ಶಾಸನಾತ್ಮಕ ಪರಿಹಾರ ಕ್ರಮಗಳ ಬಗ್ಗೆ ಶಿಫಾರಸು ಮಾಡಲು, ಕುಂದು-ಕೊರತೆ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಕಲ್ಪಿಸುವುದು ಹಾಗೂ ಮಹಿಳೆಯರ ಕುರಿತಾದ  ನೀತಿಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಉದ್ದೇಶದಿಂದ ಈ ಆಯೋಗ ರಚನೆಯಾಗಿದೆ.

*****



(Release ID: 1894654) Visitor Counter : 349