ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಶೂಟಿಂಗ್ ಆಯ್ಕೆ ಮಾಡಿಕೊಳ್ಳಲು ನನ್ನ ಸಹೋದರನೇ ನನಗೆ ಸ್ಫೂರ್ತಿ; ಆತ ಸದಾ ನನಗೆ ಸಹಾಯ ಮಾಡಲು ಇರುತ್ತಾರೆ" ಎಂದ ಶಿವ ನರ್ವಾಲ್
Posted On:
29 JAN 2023 2:45PM by PIB Bengaluru
ಭಾರತದ ಅಗ್ರ ಶೂಟರ್‌ಗಳಲ್ಲಿ ಒಬ್ಬರಾದ ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮನೀಶ್ ನರ್ವಾಲ್ ಅವರು 2021ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದಾಗ ಹೊಸ ವಿಶ್ವ ದಾಖಲೆಗೈಯ್ದರು.
ಅವರ ಸಾಧನೆಯು ಅವರಿಗೆ ಪ್ರತಿಷ್ಠಿತ ಖೇಲೋ ರತ್ನ ಪ್ರಶಸ್ತಿಯನ್ನು ತಂದುಕೊಟ್ಟಿತಲ್ಲದೆ, ನೂರಾರು ಮಕ್ಕಳಿಗೆ ಶೂಟಿಂಗ್ ಆಯ್ಕೆ ಮಾಡಿಕೊಳ್ಳಲು ಮತ್ತು ಅವರ ಕ್ರೀಡಾ ಉತ್ಸಾಹವನ್ನು ಜೀವಂತವಾಗಿಟ್ಟುಕೊಳ್ಳಲು ಪ್ರೇರೇಪಿಸಿತು.
ಆದರೆ 2021ಕ್ಕೂ ಮುನ್ನವೇ ಅವರು, ಮನೀಷ್ ಅವರು ಶೂಟಿಂಗ್ ಅನ್ನು ತೆಗೆದುಕೊಳ್ಳಲು ಮಾತ್ರವಲ್ಲದೆ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸಲು ಮತ್ತು ಕ್ಷೇತ್ರದಲ್ಲಿ ಸ್ವತಃ ಗುರುತಿಸಿಕೊಳ್ಳಲು ಮನೆಗೆ ಹತ್ತಿರದಲ್ಲಿಯೇ ಇದ್ದ ವ್ಯಕ್ತಿಗೆ ಸ್ಪೂರ್ತಿ ತುಂಬಿದರು- ಅವರೇ ಅವರ ಕಿರಿಯ ಸಹೋದರ ಶಿವ ನರ್ವಾಲ್.
ಶಿವ ಅವರು ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2020 ಆವೃತ್ತಿಯಲ್ಲಿ ಚಿನ್ನವನ್ನು ಗೆದ್ದರು ಮತ್ತು ನಂತರ 2021 ರ ಕ್ರೀಡಾಕೂಟದಲ್ಲೂ ಮತ್ತೊಮ್ಮೆ ಚಿನ್ನದ ಪದಕವನ್ನು ಗೆದ್ದರು. 17 ವರ್ಷ ವಯೋಮಾನದ ಇವರು, ಕಳೆದ ವರ್ಷ ಈಜಿಪ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಮಾಡಿದರು ಮತ್ತು 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ಗೆ ತಲುಸಿ ಪ್ಯಾರಿಸ್ ಒಲಿಂಪಿಕ್ ಕೋಟಾವನ್ನು 8 ನೇ ಸ್ಥಾನವನ್ನು ಗಳಿಸುವ ಸನಿಹಕ್ಕೆ ಬಂದಿದ್ದರು.
ನಂತರ ಅವರು ವಿಶ್ವ ಚಾಂಪಿಯನ್‌ಶಿಪ್‌ನ ಪದಕವನ್ನು ಕಳೆದುಕೊಂಡ ನಿರಾಶೆಯನ್ನು ಬದಿಗೊತ್ತಿ ಏಷ್ಯನ್ ಏರ್‌ಗನ್ ಚಾಂಪಿಯನ್‌ಶಿಪ್ ನತ್ತ ಸೆಳೆಯಿತು ಮತ್ತು ಅವರು ಪುರುಷರ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನವನ್ನು ಗೆದ್ದರು.
ಮನೀಷ್ ಇದೀಗ ದೇಶದ ಅತ್ಯುತ್ತಮ ಪ್ಯಾರಾ-ಶೂಟರ್‌ಗಳಲ್ಲಿ ಒಬ್ಬನಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದರೂ, ಶಿವನ ಸದ್ಯದ ಗುರಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಮತ್ತೊಂದು ಪದಕವನ್ನು ಗೆಲ್ಲುವುದು ಮಾತ್ರವಲ್ಲದೆ ತನ್ನ ಹ್ಯಾಟ್ರಿಕ್ ಚಿನ್ನದ ಪದಕದೊಂದಿಗೆ ಮುಕ್ತಾಯಗೊಳಿಸುವುದು.
“ನಾನು ಮತ್ತೊಮ್ಮೆ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2022ಕ್ಕೆ ಆಯ್ಕೆಯಾಗಿದ್ದೇನೆ ಎಂಬುದು ನಿಜಕ್ಕೂ ನನಗೆ ಸಂತಸ ತಂದಿದೆ. ಈ ಹಿಂದೆ, ಕೆಐಜಿವೈ 2020 ಮತ್ತು ಕೆಐಜಿವೈ 2021 ರಲ್ಲಿ ನನ್ನ ಪ್ರದರ್ಶನವು ನಿಜವಾಗಿಯೂ ಉತ್ತಮವಾಗಿತ್ತು ಮತ್ತು ನನ್ನ ಪ್ರದರ್ಶನವು ಮಧ್ಯಪ್ರದೇಶದಲ್ಲಿಯೂ ಉತ್ತಮವಾಗಿ ಮುಂದುವರಿಯುತ್ತದೆ ಮತ್ತು ನಾನು ಮತ್ತೊಮ್ಮೆ ಹರಿಯಾಣಕ್ಕಾಗಿ ಚಿನ್ನವನ್ನು ಗೆಲ್ಲುತ್ತೇನೆಂಬ ಭರವಸೆ ನನಗಿದೆ’’ ಎಂದರು.
ಮನೀಶ್‌ನ ಸಹೋದರನಾಗಿರುವುದರಿಂದ ನಿಮ್ಮೆ ಮೇಲೆ ಹೆಚ್ಚಿನ ಒತ್ತಡವಿದೆಯೇ ಎಂದು ಕೇಳಿದಾಗ, “ಆ ಕಿರಿಯ ಸಹೋದರ ಸದಾ ನನ್ನನ್ನು ಬೆಂಬಲಿಸುತ್ತಾನೆ ಮತ್ತು 'ನನಗೆ ಸಹಾಯ ಮಾಡಲು ಅವನು ಸದಾ ಇರುತ್ತಾನೆ' ಎಂದು ಹೇಳಿದ್ದಾರೆ.
"ನನ್ನ ಹಿರಿಯ ಅಕ್ಕ ಮತ್ತು ಸಹೋದರ ಇಬ್ಬರೂ ಶೂಟಿಂಗ್ ಮಾಡುತ್ತಾರೆ ಮತ್ತು ಮನೀಷ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದನ್ನು ನೋಡಿದ ನಂತರ ನಾನು ಶೂಟಿಂಗ್ ಆರಂಭಿಸಿದೆ" ಎಂದು ಶಿವ ಹೇಳಿದರು.
ನಂತರ ಅವರು "ಶೂಟಿಂಗ್‌ನಲ್ಲಿ ನನಗೆ ಯಾವುದೇ ಸಮಸ್ಯೆ ಎದುರಾದರೂ ಮನೀಷ್ ಸದಾ ನನ್ನನ್ನು ಬೆಂಬಲಿಸುತ್ತಾರೆ ಮತ್ತು ನನಗೆ ಸಹಾಯ ಮಾಡಲು ಸದಾ ಇರುತ್ತಾರೆ" ಎಂದು ತಿಳಿಸಿದರು.
ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಕಳೆದ ಆವೃತ್ತಿಯಲ್ಲಿ, ಅರ್ಹತಾ ಹಂತದಲ್ಲಿ ಶಿವ ಅವರು 588 ಅಂಕ ಗಳಿಸಿ ಪ್ರಾಬಲ್ಯ ಮರೆದಿದ್ದರು, ಇದು ಅವರ ನಂತರದ ಎರಡನೇ ಸ್ಥಾನದಲ್ಲಿದ್ದ ಅವರ ತಂಡದ ಸಹ ಆಟಗಾರ ಸಾಮ್ರಾಟ್ ರಾಣಾ ಅವರಿಗಿಂತ ಐದು ಅಂಕಗಳು ಹೆಚ್ಚಿದ್ದವು. ಸ್ಪರ್ಧೆಗಳಲ್ಲಿ ಅವರು ನಂತರ ಚಿನ್ನ ಗೆದ್ದರೆ, ಸಮಾನಾಂತರವಾಗಿ ಅವರ ಸಹೋದರಿ ಶಿಖಾ ನರ್ವಾಲ್ ಬಾಲಕಿಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದಿದ್ದರು.
**
(Release ID: 1894551)
Visitor Counter : 186