ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಮಧ್ಯಪ್ರದೇಶದಲ್ಲಿ ನಡೆಯಲಿದೆ “ಖೇಲೋ ಇಂಡಿಯಾ” ಯುವ ಕ್ರೀಡೋತ್ಸವ

Posted On: 28 JAN 2023 4:49PM by PIB Bengaluru

ಮಧ್ಯಪ್ರದೇಶದಲ್ಲಿ ಜನವರಿ 30, 2023 ರಿಂದ ಪ್ರಾರಂಭವಾಗುವ “ಖೇಲೋ ಇಂಡಿಯಾ ಯುವ ಕ್ರೀಡೋತ್ಸವ”  ಅನೇಕ ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಡೆವಲಪ್‌ಮೆಂಟ್ ಕ್ರೀಡಾಪಟುಗಳಿಗೆ ಅವಕಾಶ ನೀಡತ್ತದೆ. ಈ ಖೇಲೋ ಇಂಡಿಯಾ ಯುವ ಕ್ರೀಡೋತ್ಸವವು, ಈಗಾಗಲೇ ಅಂತರರಾಷ್ಟ್ರೀಯ ಸಾಧಕರಾಗಿರುವ ಟಾಪ್ಸ್ ಕ್ರೀಡಾಪಟುಗಳನ್ನು ತಳಮಟ್ಟದಲ್ಲಿ ಮುಂಚೂಣಿಯಲ್ಲಿರಿಸಲು ಮತ್ತು ಕಠಿಣ ಕ್ರೀಡಾ ಸ್ಪರ್ಧೆಯನ್ನು ಎದುರಿಸಲು ಪ್ರೇರೇಪಿಸಿ, ಸಜ್ಜಾಗಿಸಿ, ಆಟಗಳ ಪರಿಮಾಣ ಹೆಚ್ಚಿಸಿ, ಪಲಿತಾಂಶಗಳನ್ನು ಉತ್ತಮಗೊಳಿಸುತ್ತದೆ.

ಭೋಪಾಲ್, ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಜಬಲ್‌ಪುರ್, ಮಂಡ್ಲಾ, ಖಾರ್ಗೋನ್ (ಮಹೇಶ್ವರ್), ಬಾಲಾಘಾಟ್ ಎಂಬ ಮಧ್ಯಪ್ರದೇಶದ 8 ನಗರಗಳಲ್ಲಿ ಮತ್ತು ನವದೆಹಲಿಯಲ್ಲಿ ಒಟ್ಟು 6000 ಅಥ್ಲೀಟ್‌ಗಳು ಸ್ಪರ್ಧೆಗೆ ಸಿದ್ಧರಾಗಿದ್ದಾರೆ.

ಖೇಲೋ ಇಂಡಿಯಾ ಯುವ ಕ್ರೀಡೋತ್ಸವದಲ್ಲಿ  ಒಟ್ಟು 27 ಕ್ರೀಡಾ ವಿಭಾಗಗಳಿರುತ್ತದೆ; ಕ್ರೀಡಾಕೂಟಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜಲ ಕ್ರೀಡೆಗಳನ್ನು ಕೂಡಾ ಸೇರಿಸಲಾಗಿದೆ. ವಾಟರ್ ಸ್ಪೋರ್ಟ್ಸ್ ವಿಭಾಗಗಳಾದ ಕ್ಯಾನೋ ಸ್ಲಾಲೋಮ್, ಕಯಾಕಿಂಗ್, ಕ್ಯಾನೋಯಿಂಗ್ ಮತ್ತು ರೋಯಿಂಗ್ ಹಾಗೂ ಫೆನ್ಸಿಂಗ್ ಮುಂತಾದ ಕ್ರೀಡೆಗಳು ಸೇರಿವೆ ಮತ್ತು ಸ್ಥಳೀಯ ಆಟಗಳ ಜೊತೆಗೆ  ಇವುಗಳು ಕ್ರೀಡೋತ್ಸವನ್ನು ವೈಶಿಷ್ಟ್ಯಗೊಳಿಸುತ್ತವೆ.

ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ (ಎಂ.ವೈ.ಎ.ಎಸ್) ಆಶ್ರಯದಲ್ಲಿ 2014 ರಲ್ಲಿ ಪ್ರಾರಂಭವಾದ ಈ ವಿನೂತನ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯು ಎಲ್ಲ ಕ್ರೀಡಾಪಟುಗಳಿಗೆ ಸಮಗ್ರ ಬೆಂಬಲವನ್ನು ಒದಗಿಸುವ ಪೂರಕ ವೃತ್ತಿಪರ ವ್ಯವಸ್ಥೆಯಾಗಿದೆ. ಈ ಯೋಜನೆಯಡಿ ಕ್ರೀಡಾಪಟುಗಳಿಗೆ ಅತ್ಯುತ್ತಮ ಜಾಗತಿಕ ತರಬೇತುದಾರರಿಂದ ವೈಯಕ್ತಿಕ ವಿಶೇಷ ತರಬೇತಿಯನ್ನು ಪೂರೈಸಲಾಗುತ್ತದೆ, ಅಂತರರಾಷ್ಟ್ರೀಯ ತರಬೇತಿ ಅವಧಿಗಳು, ವೀಸಾ ಸೌಲಭ್ಯ ಬೆಂಬಲ ಮತ್ತು ಎದುರಾಳಿಯ ಪ್ರದರ್ಶನಗಳನ್ನು ಪತ್ತೆಹಚ್ಚಲು ಉನ್ನತ-ಸಾಲಿನ ಸಂಶೋಧನಾ ಬೆಂಬಲವನ್ನು ಕೂಡಾ ನೀಡಲಾಗುತ್ತದೆ.

ಒಲಿಂಪಿಕ್ಸ್ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ಅನ್ವೇಷಣೆಯಲ್ಲಿ ಕ್ರೀಡಾಪಟುಗಳಿಗೆ ಹಣಕಾಸಿನ ನೆರವು ಮತ್ತು ಇತರ ಸಹಾಯವನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಂಬರುವ 2028 ರಲ್ಲಿ ಒಲಿಂಪಿಕ್ ವಿಜೇತರನ್ನು ಸಿದ್ದಗೊಳಿಸಲು ಪೂರ್ವಭಾವಿಯಾಗಿ 2020 ರಲ್ಲಿ, 10 - 12 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಆಯ್ಕೆ ಮಾಡಿ ಟಾಪ್ಸ್‌ ಯೋಜನೆಯಡಿಯಲ್ಲಿ ಹಲವಾರು  ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಲಾಯಿತು.

“ಖೇಲೋ ಇಂಡಿಯಾ” ಯುವ ಕ್ರೀಡೋತ್ಸವ ಇದರ ಈ ವರ್ಷದ ಆವೃತ್ತಿಯು ಯು-18 ವಯಸ್ಸಿನ ವಿಭಾಗದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ಮಾತ್ರ ಒಳಗೊಂಡಿರುತ್ತದೆ. ಭಾಗವಹಿಸಲು ಪಟ್ಟಿಮಾಡಲಾದ ಟಾಪ್ಸ್ ಡೆವಲಪ್‌ಮೆಂಟ್ ಕ್ರೀಡಾಪಟುಗಳ  ವಿವರ ಈ ರೀತಿಯಿದೆ:

ಬಿಲ್ಲುಗಾರಿಕೆ

ಬಿಶಾಲ್ ಚಾಂಗ್ಮೈ - ಮಹಾರಾಷ್ಟ್ರ

ಮಂಜಿರಿ ಅಲೋನ್ - ಮಹಾರಾಷ್ಟ್ರ

ರಿಧಿ - ಹರಿಯಾಣ

 

ಟೇಬಲ್ ಟೆನ್ನಿಸ್

ಪಯಸ್ ಜೈನ್ - ದೆಹಲಿ

ಯಶಸ್ವಿನಿ ಘೋರ್ಪಡೆ - ಕರ್ನಾಟಕ 

 

ಈಜು

ಅಪೇಕ್ಷಾ ಫರ್ನಾಂಡಿಸ್ - ಮಹಾರಾಷ್ಟ್ರ

ರಿಧಿಮಾ ವೀರೇಂದ್ರಕುಮಾರ್ - ಕರ್ನಾಟಕ 

 

ಫೆನ್ಸಿಂಗ್

ಶ್ರೇಯಾ ಗುಪ್ತಾ (ಸಾಬರ್) - ಜಮ್ಮು ಮತ್ತು ಕಾಶ್ಮೀರ

 

ಭಾರ ಎತ್ತುವಿಕೆ

ಆಕಾಂಕ್ಷಾ ವ್ಯವಹಾರೆ - ಮಹಾರಾಷ್ಟ್ರ

ಮಾರ್ಕಿಯೊ ಟಾರಿಯೊ - ಅರುಣಾಚಲ ಪ್ರದೇಶ

ಬೋನಿ ಮಂಗ್ಖ್ಯಾ - ರಾಜಸ್ಥಾನ

 

ಬ್ಯಾಡ್ಮಿಂಟನ್

ಉನ್ನತಿ ಹೂಡಾ - ಹರಿಯಾಣ

ಶೂಟಿಂಗ್

 

ಶಿವ ನರ್ವಾಲ್ (10ಎಂ.ಎ.ಪಿ.) - ಹರಿಯಾಣ

ತೇಜಸ್ವನಿ (25ಎಂ.ಎಸ್.ಪಿ) - ಹರಿಯಾಣ

ನಿಶ್ಚಲ್ (50ಎಂ3ಪಿ ರೈಫಲ್) - ಹರಿಯಾಣ

*****
 



(Release ID: 1894365) Visitor Counter : 142