ಕೃಷಿ ಸಚಿವಾಲಯ
azadi ka amrit mahotsav

ದಕ್ಷಿಣ-ದಕ್ಷಿಣ ಸಹಯೋಗ ಮತ್ತು ಸಿರಿಧಾನ್ಯ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಲಾಕ್ಷ ಲಿಖಿ ಅವರ ನೇತೃತ್ವದ ಉನ್ನತ ಮಟ್ಟದ ಭಾರತೀಯ ನಿಯೋಗವು ಇಂದು ನೈಜೀರಿಯಾದ ರಾಜಧಾನಿ ಅಬುಜಾಗೆ ಆಗಮಿಸಲಿದೆ.


ಆಫ್ರಿಕಾಖಂಡದ 54 ರಾಷ್ಟ್ರಗಳಲ್ಲಿ 2 ನೇ ಶ್ರೀಮಂತ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ನೈಜೀರಿಯಾವು ಸಿರಿಧಾನ್ಯ ಮೇಲಿನ ದಕ್ಷಿಣ-ದಕ್ಷಿಣ ಸಹಕಾರದ ಮಾದರಿಯಾಗಬಹುದು ಎಂದು ಶ್ರೀ ಲಿಖಿ ಹೇಳಿದರು

140 ಕ್ಕೂ ಹೆಚ್ಚು ದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳು ಇಂದು ಗಣರಾಜ್ಯೋತ್ಸವದ ಆಚರಣೆಯಲ್ಲಿ ಭಾಗವಹಿಸಲಿದ್ದು, ಅನಿವಾಸಿ (ವಲಸಿಗ) ಭಾರತೀಯರ ಸಹಾಯದಿಂದ ಬೇಯಿಸಿದ ಸಿರಿಧಾನ್ಯ ಭಕ್ಷ್ಯಗಳ ವಿಶೇಷ  ಪ್ರದರ್ಶನಗಳು / ಸ್ಪರ್ಧೆಗಳನ್ನು ಆಯೋಜಿಸುತ್ತಿವೆ ಮತ್ತು ಈ ಸಂದರ್ಭದಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ವಿತರಿಸಲಾಗುತ್ತಿದೆ.

74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಸೆಮಿನಾರ್‌ಗಳು, ಮಾತುಕತೆ-ಚರ್ಚೆಗಳು, ತಂಡ ಚರ್ಚೆಗಳು ಜೊತೆಗೆ ಸ್ಥಳೀಯ ಚೇಂಬರ್‌ ಗಳು, ಆಹಾರ ಬ್ಲಾಗರ್‌ ಗಳು, ಆಹಾರ ಪದಾರ್ಥಗಳ ಆಮದುದಾರರು ಮತ್ತು ಸ್ಥಳೀಯ ರೆಸ್ಟೋರೆಂಟ್‌ ಗಳು ಸಹ ಇಂದು ಸಿರಿಧಾನ್ಯಯನ್ನು ಆಚರಿಸಲಿದ್ದಾರೆ.

ಕೃಷಿ ವಲಯದಲ್ಲಿ, ವಿಶೇಷವಾಗಿ "ಸಿರಿಧಾನ್ಯ ಉತ್ಪಾದನೆ ಮತ್ತು ಪ್ರಚಾರ" ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಭಾರತ ಮತ್ತು ಆಫ್ರಿಕಾದ ಪೂರಕ ವಲಯದ ಆದ್ಯತೆಗಳು ಮತ್ತು ವಿಕಸನಗೊಳ್ಳುತ್ತಿರುವ ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಇದೇ ರೀತಿಯ ಪಾತ್ರಗಳು ಹಲವಾರು ನೂತನ ಅವಕಾಶಗಳನ್ನು ರೂಪಿಸುತ್ತವೆ: ಶ್ರೀ ಲಿಖಿ

Posted On: 26 JAN 2023 2:47PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಲಾಕ್ಷ ಲಿಖಿ ನೇತೃತ್ವದ ಉನ್ನತ ಮಟ್ಟದ ಭಾರತೀಯ ನಿಯೋಗವು ಇಂದು ನೈಜೀರಿಯಾದ ರಾಜಧಾನಿ ಅಬುಜಾಗೆ ಆಗಮಿಸಿದ್ದು, ಸಿರಿಧಾನ್ಯ ಮೇಲಿನ ದಕ್ಷಿಣ-ದಕ್ಷಿಣ ಸಹಯೋಗ ಮತ್ತು ಸಹಕಾರವನ್ನು ಮುಂದಿನ ಉನ್ನತ ಹಂತಕ್ಕೆ ಕೊಂಡೊಯ್ಯುಲಿದ್ದಾರೆ.

2023 ರ ಜನವರಿ 26 ರಿಂದ 29 ರ ಜನವರಿ ವರೆಗೆ ನಡೆಯುವ ನಾಲ್ಕು ದಿನಗಳ "ಸಿರಿಧಾನ್ಯ-ನಿರ್ದಿಷ್ಟ ಭೇಟಿ" ಗಾಗಿ ನೈಜೀರಿಯಾಕ್ಕೆ ನಿರ್ಗಮನ ಸಂದರ್ಭದಲ್ಲಿ ಶ್ರೀ ಅಭಿಲಾಕ್ಷ ಲಿಖಿ ಅವರು ನೀಡಿದ ಹೇಳಿಕೆಯಲ್ಲಿ, “ಭಾರತವು 2023 ರ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಅನ್ನು ಪ್ರಾರಂಭಿಸುವ ಹಿನ್ನೆಲೆಯಲ್ಲಿ ಇದು ಬರುತ್ತದೆ. ಈ ವರ್ಷದ ಮೊದಲ ದಿನದಿಂದಲೇ  ಕೇಂದ್ರ ಸಚಿವಾಲಯಗಳು, ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಭಾರತೀಯ ರಾಯಭಾರಿ ಕಚೇರಿಗಳು ಕೇಂದ್ರೀಕೃತ ಚಟುವಟಿಕೆಗಳೊಂದಿಗೆ ಪ್ರಾರಂಭಿಸುತ್ತಿವೆ” ಎಂದು ತಿಳಿಸಿದರು.  

ನೈಜೀರಿಯಾವು ಆಫ್ರಿಕಾ ಖಂಡದ 54 ರಾಷ್ಟ್ರಗಳಲ್ಲಿ 2 ನೇ ಶ್ರೀಮಂತ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ಇದು ಈಜಿಪ್ಟ್, ದಕ್ಷಿಣ ಆಫ್ರಿಕಾ, ಅಲ್ಜೀರಿಯಾ, ಮೊರಾಕೊ, ಇಥಿಯೋಪಿಯಾ, ಕೀನ್ಯಾ, ಅಂಗೋಲಾ, ಘಾನಾ ಮತ್ತು ಸುಡಾನ್ ಗಳಂತಹ ಆಫ್ರಿಕಾ ಖಂಡದ ದೇಶಗಳು ಎದುರಿಸುತ್ತಿರುವ ಅತ್ಯಂತ ಭೀಕರವಾದ ಸವಾಲುಗಳಲ್ಲಿ ಒಂದಾಗಿರುವ "ಆಹಾರ ಭದ್ರತೆಯ ಕೊರತೆ"ಯನ್ನು ಪರಿಹರಿಸಲು ಹಾಗೂ ಇತರ ಭಾರತೀಯ ಪ್ರಮುಖ ಪಾಲುದಾರ ದೇಶಗಳೊಂದಿಗೆ ವ್ಯವಹರಿಸಲು ಸಿರಿಧಾನ್ಯ ಕುರಿತ ಈ ದಕ್ಷಿಣ-ದಕ್ಷಿಣ ಸಹಕಾರದ ವ್ಯವಸ್ಥೆ ಮಾದರಿಯಾಗಬಹುದು. ಇದೇ ರೀತಿಯ ಪಾತ್ರಗಳು ಕೃಷಿ ವಲಯ, ಮತ್ತು ವಿಶೇಷವಾಗಿ ಸಿರಿಧಾನ್ಯ ಉತ್ಪಾದನೆ ಮತ್ತು ಪ್ರಚಾರದ ಕ್ಷೇತ್ರಗಳಲ್ಲಿನ ಸಹಯೋಗಕ್ಕೆ ಭಾರತ ಮತ್ತು ಆಫ್ರಿಕಾದ ಪೂರಕ ವಲಯದ ಆದ್ಯತೆಗಳು ಮತ್ತು ವಿಕಾಸಗೊಳ್ಳುತ್ತಿರುವ ಜಾಗತಿಕ ಆಹಾರ ಮಾರುಕಟ್ಟೆಗಳಲ್ಲಿ ಹಲವಾರು ನೂತನ ಅವಕಾಶಗಳನ್ನು ರೂಪಿಸುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು 2023 ರನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಆಗಿ ಆಚರಿಸಲು ಪ್ರಸ್ತಾವಿಸಿದೆ, ಇದನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು (ಯು.ಎನ್.ಜಿ.ಎ.) ಅಂಗೀಕರಿಸಿದೆ. 2023 ರನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಆಗಿ  ಆಚರಿಸುವ ಈ ಘೋಷಣೆಯು ಭಾರತ ಸರ್ಕಾರವು ಜಾಗತಿಕವಾಗಿ ಮುಂಚೂಣಿಯಲ್ಲಿರಲು ಸಹಕಾರಿಯಾಗಿದೆ.  ಶ್ರೀ ನರೇಂದ್ರ ಮೋದಿ ಅವರು ಭಾರತವನ್ನು 'ಸಿರಿಧಾನ್ಯಗಳ ಜಾಗತಿಕ ಕೇಂದ್ರʼವಾಗಿಸುವುದರ ಜೊತೆಗೆ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ರನ್ನು 'ಜನರ ಆಂದೋಲನ'ವನ್ನಾಗಿ ಮಾಡುವ ತಮ್ಮ ದೃಷ್ಟಿಕೋನವನ್ನು ಈಗಾಗಲೇ ಹಂಚಿಕೊಂಡಿದ್ದಾರೆ.  

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು(ಎಫ್.ಎ.ಒ), ಈಗಾಗಲೇ ಇಟಲಿಯ ರೋಮ್‌ನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಇದರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಶುಭಾ ಠಾಕೂರ್, ಜಂಟಿ ಕಾರ್ಯದರ್ಶಿ (ಬೆಳೆ), ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರ ನೇತೃತ್ವದ ಭಾರತೀಯ ನಿಯೋಗವು ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾರತದ ಔಪಚಾರಿಕ ಸಂದೇಶವನ್ನು ಸುಶ್ರೀ ಶೋಭಾ ಕರಂದ್ಲಾಜೆಯವರು ಈ ಕಾರ್ಯಕ್ರಮದಲ್ಲಿ ನಿವೇದಿಸಿದ್ದರು.   

ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಆಚರಣೆಯ ಸಂದರ್ಭದಲ್ಲಿ 140 ಕ್ಕೂ ಹೆಚ್ಚು ದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳು ಅಲ್ಲಿನ ಅನಿವಾಸಿ (ವಲಸಿಗ) ಭಾರತೀಯರನ್ನು ಸೇರಿಸಿಕೊಂಡು ವಿಶೇಷ ಸೆಮಿನಾರ್‌ ಗಳು, ಮಾತುಕತೆ-ಚರ್ಚೆಗಳು, ತಂಡ ಚರ್ಚೆಗಳು ಜೊತೆಗೆ ಸ್ಥಳೀಯ ಚೇಂಬರ್ ಗಳು, ಆಹಾರ ಬ್ಲಾಗರ್ ಗಳು, ಆಹಾರ ಪದಾರ್ಥಗಳ ಆಮದುದಾರರು ಮತ್ತು ಸ್ಥಳೀಯ ರೆಸ್ಟೋರೆಂಟ್ ಗಳ ಸಹಯೋಗದೊಂದಿಗೆ ವಿವಿಧ ಸಿರಿಧಾನ್ಯ ಉತ್ಸವಗಳನ್ನು ಏರ್ಪಡಿಸಲಾಗುವುದು.

ಭಾರತೀಯ ವಲಸೆಗಾರರ ಸಹಾಯದಿಂದ ಬೇಯಿಸಿದ ಸಿರಿಧಾನ್ಯ ಭಕ್ಷ್ಯಗಳ ಪ್ರದರ್ಶನಗಳು/ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಮತ್ತು ಗಣರಾಜ್ಯೋತ್ಸವದ ಆಚರಣೆಯ ಭಾಗವಾಗಿ ಸಿರಿಧಾನ್ಯ ಭಕ್ಷ್ಯಗಳನ್ನು ವಿತರಿಸಲಾಗುವುದು

ನೈಜೀರಿಯಾ ಭೇಟಿಯ ಕುರಿತು ಮಾತನಾಡಿದ ಶ್ರೀ ಲಿಖಿ ಅವರು, “ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಇದರ ಪ್ರಚಾರದ ಭಾಗವಾಗಿ, ಅಬುಜಾದಲ್ಲಿರುವ ಭಾರತದ ರಾಯಭಾರಿ ಮತ್ತು ಲಾಗೋಸ್‌ ನಲ್ಲಿರುವ ಭಾರತೀಯ ದೂತವಾಸ ಕೇಂದ್ರಗಳು   ಈ ಉನ್ನತ ಮಟ್ಟದ ನೈಜೀರಿಯಾ ಭೇಟಿಯ ಸಂದರ್ಭದಲ್ಲಿ ಸಿರಿಧಾನ್ಯ ಆಹಾರ ಉತ್ಸವ ಮತ್ತು ಸಿರಿಧಾನ್ಯ ಆಹಾರ ತಯಾರಿ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಭಾರತದ ರಾಯಭಾರಿ ಕಚೇರಿ ಆವರಣದಲ್ಲಿ ಸಿರಿಧಾನ್ಯ ಆಹಾರ ಉತ್ಸವ ನಡೆಯಲಿದೆ ಮತ್ತು ನೈಜೀರಿಯಾದ ಗಣ್ಯರು ಮತ್ತು ಭಾರತೀಯ ಸಮುದಾಯವನ್ನು ಒಳಗೊಂಡಂತೆ ಆಹ್ವಾನಿತರೊಂದಿಗೆ ವಿವಿಧ ತಯಾರಿಗಾಗಿ ಸಿರಿಧಾನ್ಯ ಮಳಿಗೆಗಳನ್ನು ಒದಗಿಸಲಾಗಿದೆ “ ಎಂದು ಹೇಳಿದರು

“ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು 2023 ರ ಜನವರಿ 24 ರಂದು ಭೋಪಾಲ್‌ನಲ್ಲಿ ನಡೆದ ಇಂಡಿಯಾ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್‌ ನಲ್ಲಿ ಸಮಾರೋಪ ಭಾಷಣ ಮಾಡುತ್ತಾ, “ಭಾರತವು ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಸಮಯದಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ನಡೆಯುತ್ತಿದೆ” ಎಂದು ಉಲ್ಲೇಖಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಾವಿಂದು  ಕೃಷಿ ಮತ್ತು ಸಂಬಂಧಿತ ವಲಯಗಳು, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯಲ್ಲಿ ಮಾತ್ರವಲ್ಲದೆ, ಭಾರತದ “ಸಾಫ್ಟ್‌ ಪವರ್”‌  ಅನ್ನು ಸಾರ್ವತ್ರಿಕವಾಗಿ ಪರಿಚಯಿಸುವುದು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಸಾಧನೆಗಳನ್ನು ಇಡೀ ಜಗತ್ತಿಗೆ ಪ್ರದರ್ಶಿಸುತ್ತಿದ್ದೇವೆ. 2023 ರ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ಆಚರಣೆಗಳಲ್ಲಿ ನಿಜವಾಗಿಯೂ "ಇಡೀ ಸರ್ಕಾರ" ಮತ್ತು "ಸಂಪೂರ್ಣ ಸಮಾಜ" ಪಾಲ್ಗೊಳ್ಳುವಿಕೆಯ ಹಲವಾರು ವಿಧಾನಗಳ ಮನೋಭಾವವು ಕಂಡುಬರುತ್ತದೆ”  ಎಂದು ಶ್ರೀ ಲಿಖಿ ಅವರು ತಿಳಿಸಿದರು.

ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ ಅವರು ತಮ್ಮ ವಾರದ ಭಾರತ ಭೇಟಿಯ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್  ಅವರನ್ನು ಜನವರಿ 12, 2023 ರಂದು ಭೇಟಿಯಾದರು ಮತ್ತು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ (ಐವೈಎಂ) 2023 ಎಂದು ಘೋಷಿಸಿದ್ದರ  ಗೌರವಾರ್ಥವಾಗಿ ಖಾಸಗಿ ವಲಯದಿಂದ ಸಿರಿಧಾನ್ಯಗಳ ವಿಶೇಷ ಕೃಷಿ ಮತ್ತು ಉತ್ಪಾದನೆಗಾಗಿ ಅವರ ದೇಶದಲ್ಲಿ 200 ಎಕರೆ ಭೂಮಿಯನ್ನು ನೀಡಿದ್ದರು ಎಂಬುದನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಬಹುದು.

ಕೃಷಿ ಮತ್ತು ಆಹಾರದ ಬಗ್ಗೆ ಭಾರತದ ದೃಷ್ಟಿಯನ್ನು ಪ್ರಸ್ತುತಪಡಿಸಲು ಫೆಬ್ರವರಿ, 2023 ರಲ್ಲಿ ನಿಗದಿಪಡಿಸಲಾದ ಕೆರಿಬಿಯನ್ ಸಮುದಾಯದ (ಕಾರಿಕೊಮ್) ಸರ್ಕಾರದ ಮುಖ್ಯಸ್ಥರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಪ್ಪಿಕೊಂಡರೆ ಅವರನ್ನು ಆದರಿಸಿ ನಿಜವಾಗಿಯೂ ಗೌರವಿಸಲಾಗುವುದು ಎಂದು ಡಾ ಇರ್ಫಾನ್ ಅಲಿ ಅವರು ಶ್ರೀ ತೋಮರ್ ಅವರನ್ನು ಈ ಸಂದರ್ಭದಲ್ಲಿ ಕೇಳಿಕೊಂಡಿದ್ದರು.   ಒಂದುವೇಳೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಸಮಾವೇಶ ಮೂಲಕ 17 ರಾಷ್ಟ್ರಗಳ ಮುಖ್ಯಸ್ಥರನ್ನು ಉದ್ದೇಶಿಸಿ ಭಾಷಣ ಮಾಡಿದರೆ ಕೂಡಾ ಸಿರಿಧಾನ್ಯಯನ್ನು ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ಕೆರಿಬಿಯನ್ ಸಮುದಾಯದಲ್ಲಿ ಬಹಳ ಉತ್ತೇಜನ ಲಭಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರು. ಅಧಿವೇಶನದಲ್ಲಿ ಸಿರಿಧಾನ್ಯ ಕುರಿತು ಮಾತನಾಡಲು ಭಾರತೀಯ ಕೃಷಿ ಸಚಿವರು ಭಾಷಣ ಮಾಡಲು ವಿಶೇಷ ಸಮಯಾವಕಾಶವನ್ನು ಹೊಂದಿಸುವುದಾಗಿ ಕೂಡಾ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.

*****


(Release ID: 1894021) Visitor Counter : 177