ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕಲಾ ಉತ್ಸವದ ವಿಜೇತರು ಸೇರಿದಂತೆ 200 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಾಳೆ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಮೆರವಣಿಗೆಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ
ಪ್ರಧಾನ ಮಂತ್ರಿಗಳ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸುವವರು ಜನವರಿ 29ರಂದು ಬೀಟಿಂಗ್ ರಿಟ್ರೀಟ್ ಸಮಾರಂಭಕ್ಕೂ ಸಾಕ್ಷಿಯಾಗಲಿದ್ದಾರೆ
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನಮ್ಮ ಶ್ರೀಮಂತ ಪರಂಪರೆಯ ಪರಿಚಯವನ್ನು ಪಡೆಯುವ ಸಲುವಾಗಿ ರಾಜ್ ಘಾಟ್, ಸದೈವ್ ಅಟಲ್, ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ, ಕರ್ತವ್ಯ ಮಾರ್ಗ ಇತ್ಯಾದಿಗಳಿಗೆ ಭೇಟಿ ನೀಡಲಿದ್ದಾರೆ
Posted On:
25 JAN 2023 6:05PM by PIB Bengaluru
ಕಲಾ ಉತ್ಸವದ ವಿಜೇತರು ಮತ್ತು ಪ್ರಧಾನ ಮಂತ್ರಿಯವರ ಪರೀಕ್ಷಾ ಪೇ ಚರ್ಚಾಗೆ ಹಾಜರಾಗುವ ವಿದ್ಯಾರ್ಥಿಗಳು ಸೇರಿದಂತೆ 200 ವಿದ್ಯಾರ್ಥಿಗಳು ಮತ್ತು ರಾಜ್ಯಗಳ ಶಿಕ್ಷಕರು 2023ರ ಜನವರಿ 26ರಂದು ಗಣರಾಜ್ಯೋತ್ಸವ ಮೆರವಣಿಗೆ ಮತ್ತು 2023ರ ಜನವರಿ 29ರಂದು ನಡೆಯಲಿರುವ ಬೀಟಿಂಗ್ ರಿಟ್ರೀಟ್ ನಲ್ಲಿ ಭಾಗಿಯಾಗಲಿದ್ದಾರೆ. ಗಣರಾಜ್ಯೋತ್ಸವದ ಮೆರವಣಿಗೆಯ ಸಮಯದಲ್ಲಿ ಈ ಮಕ್ಕಳನ್ನು ಕರ್ತವ್ಯ ಪಥದ ಆವರಣ 18ರಲ್ಲಿ ಕೂರಿಸಲಾಗುವುದು. 2023ರ ಜನವರಿ 27ರಂದು ನವದೆಹಲಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಧಾನ ಮಂತ್ರಿಯವರ ಟೌನ್ ಹಾಲ್ ಕಾರ್ಯಕ್ರಮವಾದ ಪರೀಕ್ಷಾ ಪೆ ಚರ್ಚಾದಲ್ಲಿ ಭಾರತದಾದ್ಯಂತದ 2400 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೈಹಿಕವಾಗಿ ಭಾಗವಹಿಸಲಿದ್ದಾರೆ. ಇದಲ್ಲದೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ದೇಶ ವಿದೇಶಗಳಿಂದ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ರಾಜ್ ಘಾಟ್, ಸದೈವ್ ಅಟಲ್, ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ, ಕರ್ತವ್ಯ ಪಥ ಮುಂತಾದ ರಾಷ್ಟ್ರೀಯ ಪ್ರಾಮುಖ್ಯದ ಸ್ಥಳಗಳಿಗೆ ಕರೆದೊಯ್ದು ನಮ್ಮ ಶ್ರೀಮಂತ ಪರಂಪರೆಯ ಪರಿಚಯ ಮಾಡಿಕೊಡಲಾಗುವುದು.
ಪರೀಕ್ಷಾ ಪೇ ಚರ್ಚಾ ಪ್ರಧಾನಮಂತ್ರಿಯವರ ಪರಿಕಲ್ಪನೆಯಾಗಿದ್ದು,ಇದರಲ್ಲಿ ವಿದ್ಯಾರ್ಥಿಗಳು, ಪೋಷಕರು, ಮತ್ತು ಶಿಕ್ಷಕರು ತಮ್ಮ ಜೀವನ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅವರೊಂದಿಗೆ ಸಂವಹನ ನಡೆಸುತ್ತಾರೆ. ಈ ವರ್ಷದ ಪರೀಕ್ಷಾ ಪೇ ಚರ್ಚಾ ಆವೃತ್ತಿಯು ನವದೆಹಲಿಯ ತಲ್ಕಟೋರಾ ಒಳ ಕ್ರೀಡಾಂಗಣದಲ್ಲಿ 2023ರ ಜನವರಿ 27ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ಮತ್ತು ಇತರ ಪ್ರಮುಖ ಟಿವಿ ಚಾನೆಲ್ ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಈ ವರ್ಷ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸುಮಾರು 38.80 ಲಕ್ಷ ನೋಂದಣಿಗಳನ್ನು ಮಾಡಲಾಗಿದೆ. ಅದರಲ್ಲಿ 16 ಲಕ್ಷಕ್ಕೂ ಹೆಚ್ಚು ರಾಜ್ಯ ಮಂಡಳಿಗಳಿಂದ ಬಂದಿವೆ. ಇದು ಪಿಪಿಸಿ-2022ರ ಸಮಯದಲ್ಲಿ ನಡೆದ ನೋಂದಣಿಗಳಿಗಿಂತ (15.73 ಲಕ್ಷ) ಎರಡು ಪಟ್ಟು ಹೆಚ್ಚಾಗಿದೆ. 155 ದೇಶಗಳಿಂದ ಈ ಕಾರ್ಯಕ್ರಮಕ್ಕಾಗಿ ನೋಂದಣಿ ಮಾಡಲಾಗಿದೆ.
ದೇಶಾದ್ಯಂತದ 102 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮತ್ತು ಕಲಾ ಉತ್ಸವ ಸ್ಪರ್ಧೆಯ 80 ವಿಜೇತರು 2023ರ ಜನವರಿ 27ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
*****
(Release ID: 1893814)
Visitor Counter : 134