ರಾಷ್ಟ್ರಪತಿಗಳ ಕಾರ್ಯಾಲಯ
ನಾಳೆ , 74ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ರಾಷ್ಟ್ರಪತಿಯವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
प्रविष्टि तिथि:
24 JAN 2023 5:09PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 74 ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ನಾಳೆ (ಜನವರಿ 25, 2023ರಂದು) ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಆಕಾಶವಾಣಿಯ(ಆಲ್ ಇಂಡಿಯಾ ರೇಡಿಯೊ-ಎ.ಐ.ಆರ್) ಎಲ್ಲ ರಾಷ್ಟ್ರೀಯ ನೆಟ್ವರ್ಕ್ ಗಳಲ್ಲಿ ಮತ್ತು ದೂರದರ್ಶನದ ಎಲ್ಲ ಚಾನೆಲ್ ಗಳಲ್ಲಿ ನಾಳೆ ಸಂಜೆ 1900 ಗಂಟೆಯಿಂದ ಹಿಂದಿಯಲ್ಲಿ ಹಾಗೂ ಅನಂತರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸಾರವಾಗಲಿದೆ. ದೂರದರ್ಶನದ ಹಿಂದಿ ಮತ್ತು ಇಂಗ್ಲಿಷ್ ಭಾಷಣದ ಪ್ರಸಾರವನ್ನು ದೂರದರ್ಶನದ ಪ್ರಾದೇಶಿಕ ಚಾನಲ್ ಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿವೆ. ಎ.ಐ.ಆರ್. ಆಯಾ ಪ್ರಾದೇಶಿಕ ನೆಟ್ವರ್ಕ್ ಗಳಲ್ಲಿ ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ರಾತ್ರಿ 2130 ಗಂಟೆಗಳಿಂದ ಪ್ರಸಾರ ಮಾಡಲಿವೆ.
*****
(रिलीज़ आईडी: 1893415)
आगंतुक पटल : 224