ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

​​​​​​​ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ ಮೇಡ್ ಇನ್ ಇಂಡಿಯಾ ಮೊಬೈಲ್ ಆಪರೇಟಿಂಗ್ ಸಿಸ್ಟಮ್ 'ಭರೋಸ್' ಅನ್ನು ಶ್ರೀ ಧರ್ಮೇಂದ್ರ ಪ್ರಧಾನ್ ಹಾಗು ಶ್ರೀ ಅಶ್ವಿನಿ ವೈಷ್ಣವ್  ಅವರು ಪರೀಕ್ಷಿಸಿದರು.


ಭಾರತದಲ್ಲಿ ಪ್ರಬಲ, ಸ್ಥಳೀಯ ಮತ್ತು ಸ್ವಾವಲಂಬಿ ಡಿಜಿಟಲ್ ಮೂಲಸೌಕರ್ಯದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ 'ಭರೋಸ್'  ( 'BharOS' ) ಒಂದು ಪ್ರಮುಖ ಉಪಕ್ರಮವಾಗಿದೆ - ಶ್ರೀ ಧರ್ಮೇಂದ್ರ ಪ್ರಧಾನ್

प्रविष्टि तिथि: 24 JAN 2023 2:32PM by PIB Bengaluru

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು  ಮದ್ರಾಸ್ ಐಐಟಿ ಅಭಿವೃದ್ಧಿಪಡಿಸಿದ ಮೇಡ್ ಇನ್ ಇಂಡಿಯಾ ಮೊಬೈಲ್ ಆಪರೇಟಿಂಗ್ ಸಿಸ್ಟಮ್ 'ಭರೋಸ್' ಅನ್ನು ಇಂದು ಯಶಸ್ವಿಯಾಗಿ ಪರೀಕ್ಷಿಸಿದರು.

ದೇಶದ ಬಡ ಜನರು ಬಲಿಷ್ಠ, ಸ್ಥಳೀಯ, ವಿಶ್ವಸನೀಯ ಮತ್ತು ಸ್ವಾವಲಂಬಿ ಡಿಜಿಟಲ್ ಮೂಲಸೌಕರ್ಯದ ಮುಖ್ಯ ಫಲಾನುಭವಿಗಳಾಗುತ್ತಾರೆ ಎಂದು ಶ್ರೀ ಪ್ರಧಾನ್ ಹೇಳಿದರು. ಸರ್ಕಾರದ ಸಂಪೂರ್ಣ ವಿಧಾನದೊಂದಿಗೆ ನೀತಿ ಸಕ್ರಿಯಗೊಳಿಸುವವರನ್ನು ಉತ್ತೇಜಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನದ  ಪ್ರಯೋಗವಾಗಿದೆ ಎಂದು ಅವರು ಹೇಳಿದರು. 'ಭರೋಸ್' ದತ್ತಾಂಶ ಗೋಪ್ಯತೆಯೆಡೆಗೆ ಯಶಸ್ವಿ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. 

ಭಾರತದಲ್ಲಿ ಪ್ರಬಲವಾದ, ಸ್ಥಳೀಯ ಮತ್ತು ಸ್ವಾವಲಂಬಿ ಡಿಜಿಟಲ್ ಮೂಲಸೌಕರ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ 'ಭರೋಸ್' - ಮೇಡ್ ಇನ್ ಇಂಡಿಯಾ ಮೊಬೈಲ್ ಆಪರೇಟಿಂಗ್ ಸಿಸ್ಟಂನ ಯಶಸ್ವಿ ಪರೀಕ್ಷೆಯು ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಶ್ರೀ ಪ್ರಧಾನ್ ಹೇಳಿದರು.

*****


(रिलीज़ आईडी: 1893410) आगंतुक पटल : 184
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Gujarati , Tamil , Telugu