ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

2023ರ ಜನವರಿ 27 ರಿಂದ 31 ರವರೆಗೆ ಮುಂಬೈನಲ್ಲಿ ಎಸ್.ಸಿ.ಒ ಚಲನಚಿತ್ರೋತ್ಸವ ಆಯೋಜನೆ 


ಸ್ಪರ್ಧೆ ಮತ್ತು ಸ್ಪರ್ಧೆಯೇತರ ವಿಭಾಗಗಳಲ್ಲಿ 57 ಚಲನಚಿತ್ರಗಳ ಪ್ರದರ್ಶನ 

ಭಾರತದಿಂದ ಸ್ಪರ್ಧಾ ವಿಭಾಗದಲ್ಲಿ ಮರಾಠಿ ಚಿತ್ರ 'ಗೋದಾವರಿ' ಮತ್ತು ಗುಜರಾತಿ ಚಿತ್ರ 'ದಿ ಲಾಸ್ಟ್ ಫಿಲ್ಮ್ ಶೋ' ನಾಮನಿರ್ದೇಶನ

Posted On: 23 JAN 2023 5:53PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಮೂಲಕ 2023ರ ಜನವರಿ 27 ರಿಂದ 31 ರವರೆಗೆ ಮುಂಬೈನಲ್ಲಿ ಶಾಂಘೈ ಸಹಕಾರ ಸಂಸ್ಥೆ ಚಲನಚಿತ್ರೋತ್ಸವವನ್ನು ಆಯೋಜಿಸಿದೆ. ಎಸ್.ಸಿ.ಒದಲ್ಲಿ ಭಾರತದ ಅಧ್ಯಕ್ಷತೆಯ ಅಂಗವಾಗಿ ಎಸ್. ಸಿ.ಒ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ.

ಉತ್ಸವದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೆಚ್ಚುವರಿ ಕಾರ್ಯದರ್ಶಿ ನೀರಜಾ ಶೇಖರ್, ಚಲನಚಿತ್ರೋತ್ಸವವು ಸಿನಿಮಾ ಸಹಭಾಗಿತ್ವವನ್ನು ರೂಪಿಸಿ, ಎಸ್.ಸಿ.ಒ.ದಲ್ಲಿ ವಿವಿಧ ದೇಶಗಳ ಸಂಸ್ಕೃತಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಇದು ಸಾಮೂಹಿಕ ಸಿನಿಮಾದ ಅನುಭವದ ಮೂಲಕ ಎಸ್.ಸಿಒ ಸದಸ್ಯ ಚಲನಚಿತ್ರ ಸಮುದಾಯದ ನಡುವೆ ಸಹಯೋಗವನ್ನು ಸೃಷ್ಟಿಸುತ್ತದೆ. ಎಸ್.ಸಿ.ಒ ರಾಷ್ಟ್ರಗಳು ತಂದಿರುವ ಚಿತ್ರಗಳನ್ನು ಎಸ್.ಸಿ.ಒ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಇದು ಪ್ರೇಕ್ಷಕರಿಗೆ ವಿಭಿನ್ನ ಸಂಸ್ಕೃತಿಗಳ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಈ ಚಲನಚಿತ್ರಗಳು ಎಸ್.ಸಿ.ಒ  ದೇಶಗಳ ಜನರಿಗೆ ಪರಸ್ಪರ ಚೆನ್ನಾಗಿ ಅರಿತುಕೊಳ್ಳಲು ಒಂದು ಗವಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಸ್ಪರ್ಧೆ ಮತ್ತು ಸ್ಪರ್ಧೆಯೇತರ ಪ್ರದರ್ಶನಗಳಲ್ಲಿ ಎಸ್.ಸಿಒ ರಾಷ್ಟ್ರಗಳ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಶ್ರೀಮತಿ ಶೇಖರ್ ಮಾಹಿತಿ ನೀಡಿದರು. ಚಲನಚಿತ್ರ ಪ್ರದರ್ಶನಗಳ ಜೊತೆಗೆ, ಉತ್ಸವದಲ್ಲಿ ಮಾಸ್ಟರ್ ತರಗತಿಗಳು, ಸಂವಾದ ಅಧಿವೇಶನಗಳು, ದೇಶ ಮತ್ತು ರಾಜ್ಯ ಪೆವಿಲಿಯನ್ ಗಳು, ಛಾಯಾಚಿತ್ರ ಮತ್ತು ಪೋಸ್ಟರ್ ಪ್ರದರ್ಶನಗಳು, ಕರಕುಶಲ ಮಳಿಗೆಗಳು ಮತ್ತು ಇನ್ನೂ ಅನೇಕ ಸಂಗತಿಗಳು ಇರಲಿವೆ.

ಎಸ್.ಸಿ.ಒ ದಲ್ಲಿ ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಎಸ್.ಸಿ.ಒ  ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿರುವುದರಿಂದ ಭಾರತೀಯ ಚಲನಚಿತ್ರದ ಜಾಗತಿಕ ಪ್ರಥಮ ಪ್ರದರ್ಶನದೊಂದಿಗೆ ಉತ್ಸವವು ಪ್ರಾರಂಭವಾಗಲಿದೆ. ಉದ್ಘಾಟನಾ ಸಮಾರಂಭವು  2023ರ ಜನವರಿ 27 ರಂದು ಮುಂಬೈನ ಎನ್.ಸಿ.ಪಿಎಯ ಜಮ್ಶೆಡ್ ಭಾಭಾ ಥಿಯೇಟರ್ ನಲ್ಲಿ ನಡೆಯಲಿದೆ.

ಮುಂಬೈನ ಎರಡು ಸ್ಥಳಗಳಲ್ಲಿ, ಪೆಡ್ಡರ್ ರಸ್ತೆಯಲ್ಲಿರುವ ಚಲನಚಿತ್ರ ವಿಭಾಗದ ಸಮುಚ್ಛಯದಲ್ಲಿನ 4 ಸಭಾಂಗಣಗಳಲ್ಲಿ ಮತ್ತು ವರ್ಲಿಯ ನೆಹರೂ ತಾರಾಲಯ ಕಟ್ಟಡದಲ್ಲಿ 1 ಎನ್ಎಫ್.ಡಿ.ಸಿ ಥಿಯೇಟರ್ ನಲ್ಲಿ ಚಲನಚಿತ್ರೋತ್ಸವ ಪ್ರದರ್ಶನಗಳು ನಡೆಯಲಿವೆ.

ಸ್ಪರ್ಧೆಯ ವಿಭಾಗವು ಎಸ್.ಸಿ.ಒ  ಸದಸ್ಯ ರಾಷ್ಟ್ರಗಳಿಗೆ ಮಾತ್ರವಾಗಿದ್ದು, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ (ಚಲನಚಿತ್ರ), ವಿಶೇಷ ತೀರ್ಪುಗಾರರ ಪ್ರಶಸ್ತಿಗಳಂತಹ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ಒಳಗೊಂಡಿದೆ. 

ಸ್ಪರ್ಧೆಯೇತರ ವಿಭಾಗವು ಎಲ್ಲಾ ಎಸ್.ಸಿ.ಒ  ದೇಶಗಳಿಗೆ, ಅಂದರೆ ಸದಸ್ಯ ರಾಷ್ಟ್ರಗಳು ಮತ್ತು ವೀಕ್ಷಕ ರಾಜ್ಯಗಳು ಮತ್ತು ಸಂವಾದನಾತ್ಮಕ ಪಾಲುದಾರ ರಾಷ್ಟ್ರಗಳಿಗೆ ಈ ಕೆಳಗಿನ ವಿಭಾಗಗಳಲ್ಲಿ ಇರುತ್ತದೆ- 

a.    ಎಸ್.ಸಿ.ಓ. ದೇಶದ ಗಮನ: ಚಲನಚಿತ್ರೋತ್ಸವದಲ್ಲಿ ಆಯಾ ಎಸ್.ಸಿಒ ದೇಶವನ್ನು ಪ್ರತಿನಿಧಿಸಲು ಈ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ವಿವಿಧ ದೇಶಗಳ ನಡುವೆ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ ಮತ್ತು ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಸಂಸ್ಕೃತಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

b.    ನಿರ್ದೇಶಕರ ಕೇಂದ್ರಿತವಾದ ಎಸ್.ಸಿ.ಒ  ದೇಶದ ಪ್ರಸಿದ್ಧ ನಿರ್ದೇಶಕರು ನಿರ್ಮಿಸಿದ ಚಲನಚಿತ್ರಗಳಾಗಿದ್ದು, ಅವರು ತಮ್ಮ ಕರಕುಶಲತೆ ಮತ್ತು ಸಿನೆಮಾ ಪರಂಪರೆಯ ದೇಶದಲ್ಲಿ ಉತ್ತಮ ಗೌರವಕ್ಕೆ ಪಾತ್ರರಾಗಿದ್ದಾರೆ, ದೇಶದ ಪರಂಪರೆಗೂ ಕೊಡುಗೆ ನೀಡಿದ್ದಾರೆ.

c.   ಮಕ್ಕಳ ಗಮನದ ಚಿತ್ರಗಳು ಎಳೆಯ ಪ್ರೇಕ್ಷಕರಿಗೆ ಶಿಕ್ಷಣ ನೀಡಿ, ಮನರಂಜಿಸುತ್ತವೆ, ಇದು ಅರ್ಥ ಮಾಡಿಕೊಳ್ಳಲೂ ಸುಲಭವಾಗಿರುತ್ತದೆ. ಹೀಗೆ ಚಿಕ್ಕ ಮಕ್ಕಳ ಆಸಕ್ತಿಯನ್ನು ಬೆಳೆಸುತ್ತದೆ ಮತ್ತು ಅವರ ಮನಸ್ಸನ್ನು ಅರಳಿಸುತ್ತದೆ.

d.   ಕಿರು ಚಿತ್ರಗಳ ಅವಧಿ 20 ನಿಮಿಷ ಮೀರುವುದಿಲ್ಲ, ಅವು ಕಲಾತ್ಮಕವಾಗಿ ಮತ್ತು ಸಿನಿಮೀಯವಾಗಿ ನಿಪುಣವಾಗಿರುವ ಮತ್ತು ಮೂಲ ಕಲ್ಪನೆಗಳನ್ನು ಅನ್ವಯಿಸುವ ಮೂಲಕ ಪ್ರೇಕ್ಷಕರ ಪರಿಕಲ್ಪನೆಗಳನ್ನು ಸೆಳೆಯುತ್ತವೆ. 

e.   ಭಾರತೀಯ ಮರುಸ್ಥಾಪಿಸಿದ ಮಹಾನ್ ಚಿತ್ರಗಳು - 5 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಎಸ್.ಸಿಒ ರಾಷ್ಟ್ರಗಳ ಒಟ್ಟು 57 ಚಲನಚಿತ್ರಗಳು ಎಸ್.ಸಿಒ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ಸ್ಪರ್ಧಾ ವಿಭಾಗದಲ್ಲಿ 14 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಸ್ಪರ್ಧೆಯೇತರ ವಿಭಾಗದಲ್ಲಿ 43 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸ್ಪರ್ಧಾ ವಿಭಾಗದಲ್ಲಿ ಒಟ್ಟು 14 ಚಲನಚಿತ್ರಗಳ ನಾಮನಿರ್ದೇಶನ

•    ನಿಖಿಲ್ ಮಹಾಜನ್ ನಿರ್ದೇಶನದ ಮರಾಠಿ ಚಿತ್ರ 'ಗೋದಾವರಿ' ಮತ್ತು ಪಾನ್ ನಳಿನ್ ನಿರ್ದೇಶನದ ಗುಜರಾತಿ ಚಿತ್ರ 'ದಿ ಲಾಸ್ಟ್ ಫಿಲ್ಮ್ ಶೋ' ಭಾರತದ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿವೆ.

•    ರಷ್ಯಾದ ಎ.ಜೈರೋವ್, ಎಂ.ಮಾಮಿರ್ಬೆಕೊವ್ ನಿರ್ದೇಶನದ, ಚಲನಚಿತ್ರ ಮಾಮ್, ಐ ಆಮ್ ಅಲೈವ್! ಮತ್ತು ಬೈರಾಕಿಮೊವ್ ಅಲ್ಡಿಯಾರ್ ನಿರ್ದೇಶನದ ಪ್ಯಾರಾಲಿಂಪಿಯನ್ ಸದಸ್ಯ ರಾಷ್ಟ್ರವಾದ ಕಜಕಿಸ್ತಾನದಿಂದ ನಾಮನಿರ್ದೇಶನಗೊಂಡಿವೆ.

•    ಕಿರ್ಗಿಜ್ ಚಲನಚಿತ್ರಗಳಾದ ಬಕಿತ್ ಮುಕುಲ್ ನಿರ್ದೇಶನದ ಅಕೆರ್ಕೆ ಕೋಚ್ (ದಿ ರೋಡ್ ಟು ಈಡನ್), ತಾಲೈಬೆಕ್ ಕುಲ್ಮೆಂಡೀವ್ ನಿರ್ದೇಶನದ ದಸ್ತಾನ್ ಝಾಪರ್ ಉಲು ಮತ್ತು ಉಯ್ ಸತ್ಯಲತ್ (ಹೋಮ್ ಫಾರ್ ಸೇಲ್) ಕಿರ್ಗಿಸ್ತಾನದ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿವೆ.

•    ಯಿಹುಯಿ ಶಾವೊ ಅವರ ಬಿ ಫಾರ್ ಬಿಜಿ ಮತ್ತು ಕ್ಸಿಯಾವೋಜಿ ರಾವ್ ನಿರ್ದೇಶನದ ಹೋಮ್ ಕಮಿಂಗ್ ಎಂಬ ಇಟಾಲಿಯನ್ ಮತ್ತು ಚೀನೀ ಚಲನಚಿತ್ರಗಳು ಚೀನಾದ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿವೆ.

•    ಲಿಯುಬೊವ್ ಬೊರಿಸೊವಾ ಸಖಾ ನಿರ್ದೇಶನದ ರಷ್ಯಾದ ಚಲನಚಿತ್ರಗಳಾದ ಡೋಂಟ್ ಬರಿ ಮಿ ವಿತೌಟ್ ಇವಾನ್ ಮತ್ತು ಎವ್ಗೆನಿ ಗ್ರಿಗೊರೆವ್ ನಿರ್ದೇಶನದ ಪೊಡೆಲ್ನಿಕಿ (ದಿ ರಯಟ್) ರಷ್ಯಾದ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿವೆ. 

•    ಡಿ.ಮಸೈಡೋವ್ ನಿರ್ದೇಶಿಸಿದ ಉಜ್ಬೇಕ್ ಚಲನಚಿತ್ರ ಏಲ್ ಕಿಸ್ಮತಿ (ಮಹಿಳೆಯ ಹಣೆಬರಹ) ಮತ್ತು

•    ಹಿಲೋಲ್ ನಾಸಿಮೊವ್ ನಿರ್ದೇಶನದ ಮೆರೋಸ್ (ಲೆಗಸಿ) ಉಜ್ಬೇಕಿಸ್ತಾನದ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿದೆ.

•    ಮುಹಿದ್ದೀನ್ ಮುಜಾಫರ್ ನಿರ್ದೇಶನದ ತಜಿಕ್ ಚಲನಚಿತ್ರಗಳಾದ ಡೋವ್ (ಫಾರ್ಚೂನ್) ಮತ್ತು ಮಹಮದ್ರಬಿ ಇಸ್ಮೊಯಿಲೋವ್ ನಿರ್ದೇಶನದ ಒಖಿರಿನ್ ಸಯ್ದಿ ಸಯೋದ್ (ಹಂಟರ್ಸ್ ಫೈನಲ್ ಪ್ರೇ) ತಜಿಕಿಸ್ತಾನ್ ಸದಸ್ಯ ರಾಷ್ಟ್ರದಿಂದ ನಾಮನಿರ್ದೇಶನಗೊಂಡಿವೆ.

ಎಸ್.ಸಿ.ಒ  ಚಲನಚಿತ್ರೋತ್ಸವದಲ್ಲಿ ಭಾರತೀಯ ಚಲನಚಿತ್ರಗಳು

•    ನಿಖಿಲ್ ಮಹಾಜನ್ ನಿರ್ದೇಶನದ ಅತ್ಯಂತ ಮೆಚ್ಚುಗೆ ಪಡೆದ ಮರಾಠಿ ಚಿತ್ರ ಗೋದಾವರಿ ಮತ್ತು ಅತ್ಯುತ್ತಮ ವಿದೇಶಿ ಭಾಷಾ ವಿಭಾಗದಲ್ಲಿ ಆಸ್ಕರ್ ಗೆ ಭಾರತದ ಅಧಿಕೃತ ಪ್ರವೇಶ ಪಡೆದ, ಲಾಸ್ಟ್ ಫಿಲ್ಮ್ ಶೋ ಎಂದೂ ಕರೆಯಲಾಗುವ ಗುಜರಾತಿ ಚಿತ್ರ ಚೆಲ್ಲೋ ಶೋ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಶೂಜಿತ್ ಸಿರ್ಕಾರ್ ಅವರ ಸರ್ದಾರ್ ಉಧಮ್, ಎಸ್.ಎಸ್.ರಾಜಮೌಳಿ ಅವರ  ಚಲನ ಚಿತ್ರ ಆರ್.ಆರ್.ಆರ್. ಎಸ್.ಸಿ.ಒ  ರಾಷ್ಟ್ರ ಕೇಂದ್ರೀಕೃತವಾಗಿದೆ. ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿ ನಿರ್ದೇಶಕ ಕೇಂದ್ರಿತವಾದರೆ, ಮಕ್ಕಳ ಕೇಂದ್ರೀತವಾಗಿರುವ ಮೃದುಲ್ ಟೂಲಿದಾಸ್ ಜೂನಿಯರ್ ಮತ್ತು ಕಿರುಚಿತ್ರ ಚೇತನ್ ಭಕುನಿ ಅವರ ಜುಗಲ್ಬಂದಿ ಪ್ರದರ್ಶನಗೊಳ್ಳಲಿವೆ. ಇದಲ್ಲದೆ ಪುನರ್ ಸ್ಥಾಪಿತ ಐದು ಮಹಾನ್ ಚಿತ್ರಗಳನ್ನು ಸಹ ಉತ್ಸವದಲ್ಲಿ ಪ್ರದರ್ಶಿಸಲಾಗುವುದು. ಶತ್ರಂಜ್ ಕೆ ಖಿಲಾಡಿ;   (1977, ಹಿಂದಿ), ಸುಬರ್ಣರೇಖಾ (1965, ಬಂಗಾಳಿ), ಚಂದ್ರಲೇಖಾ (1948, ತಮಿಳು), ಇರು ಕೊಡಗುಲ್ (1969, ತಮಿಳು) ಮತ್ತು ಚಿದಂಬರಂ (1985, ಮಲಯಾಳಂ).

ಎಸ್.ಸಿ.ಒ.ದ ಅಧಿಕೃತ ಭಾಷೆಗಳಾದ ರಷ್ಯನ್ ಮತ್ತು ಚೈನೀಸ್ ಸಹ ಚಲನಚಿತ್ರೋತ್ಸವದ ಅಧಿಕೃತ ಭಾಷೆಯಾಗಿದೆ. ಭಾರತದಲ್ಲಿ ಆಯೋಜಿಸಲಾಗುತ್ತಿರುವ ಈ ಉತ್ಸವದ ಕ್ರಿಯಾತ್ಮಕ ಭಾಷೆಯಾಗಿ ಇಂಗ್ಲಿಷ್ ಅನ್ನು ಸಹ ಸೇರಿಸಲಾಗುವುದು. ಪ್ರದರ್ಶಿಸಲಾಗುವ ಚಲನಚಿತ್ರಗಳನ್ನು ತೀರ್ಪುಗಾರರು ಮತ್ತು ಸ್ಥಳೀಯ ಪ್ರೇಕ್ಷಕರ ಅನುಕೂಲಕ್ಕಾಗಿ ಇಂಗ್ಲಿಷ್ ನಲ್ಲಿ ಡಬ್ ಮಾಡಿ ಅಥವಾ ಉಪಶೀರ್ಷಿಕೆಯೊಂದಿಗೆ ಹಾಕಲಾಗುತ್ತದೆ.

'ಮಾಸ್ಟರ್ ಕ್ಲಾಸ್' ಮತ್ತು 'ಸಂವಾದನಾತ್ಮಕ' ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಎಸ್.ಸಿಒ ದೇಶಗಳ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಮತ್ತು ನಟರು ಭಾರತೀಯ ಚಲನಚಿತ್ರ ವ್ಯಕ್ತಿಗಳೊಂದಿಗೆ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಅನಿಮೇಷನ್ ಇತಿಹಾಸವನ್ನು ಪತ್ತೆಹಚ್ಚುವ ಮತ್ತು ಅನಿಮೇಷನ್ ಮತ್ತು ದೃಶ್ಯ ಪರಿಣಾಮಗಳ ಸಹಾಯದಿಂದ 'ಶಾಟ್ ರಚಿಸುವ' ಅನಂತ ಸಾಧ್ಯತೆಗಳನ್ನು ಪ್ರಸ್ತುತಪಡಿಸುವ ಉದ್ಯಮ ತಜ್ಞರೊಂದಿಗೆ ಅಧಿವೇಶನಗಳು ನಡೆಯಲಿವೆ. ಉದಯೋನ್ಮುಖ ತಂತ್ರಜ್ಞಾನಗಳ ಸಹಾಯದಿಂದ ಚಲನಚಿತ್ರ ವಿತರಣೆಯ ಭೂರಮೆ ಮತ್ತು ರಂಗಭೂಮಿ ಭಾಷಾ ಅನುವಾದಗಳ ಭೂರಮೆವನ್ನು ಬದಲಾಯಿಸುವ ಬಗ್ಗೆಯೂ ಕೆಲವು ಅಧಿವೇಶನಗಳನ್ನು ನಡೆಸಲಾಗುತ್ತಿದೆ.

ಎಸ್.ಸಿ.ಒ  ಚಲನಚಿತ್ರೋತ್ಸವ ಪೋರ್ಟಲ್ ನಲ್ಲಿ ಆನ್ ಲೈನ್ ಪ್ರತಿನಿಧಿ ನೋಂದಣಿ ಮಾಡಬಹುದು: https://sco.nfdcindia.com/, ಜೊತೆಗೆ ಭೌತಿಕ ನೋಂದಣಿ ಡೆಸ್ಕ್ ಗಳು ಮುಂಬೈನ ಪೆಡ್ಡರ್ ರಸ್ತೆಯಲ್ಲಿರುವ ಚಲನಚಿತ್ರ ವಿಭಾಗದ ಸಮುಚ್ಛಯದಲ ಮುಖ್ಯ ಉತ್ಸವ ಸ್ಥಳದಲ್ಲಿ ಲಭ್ಯವಿರುತ್ತವೆ.  ಪ್ರತಿನಿಧಿಗಳ ನೋಂದಣಿ ಶುಲ್ಕವನ್ನು ಉತ್ಸವಕ್ಕೆ 3೦೦ ರೂ ಅಥವಾ ದಿನಕ್ಕೆ 1೦೦ ರೂ. ನಿಗದಿ ಪಡಿಸಲಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ.

ಎಸ್.ಸಿ.ಒ  ಚಲನಚಿತ್ರೋತ್ಸವ 2023 ರ ತೀರ್ಪುಗಾರರಲ್ಲಿ ಈ ಕೆಳಕಂಡವರು ಸೇರಿದ್ದಾರೆ
ಭಾರತ


 ರಾಹುಲ್ ರಾವೈಲ್

ಚಲನಚಿತ್ರ ನಿರ್ಮಾಪಕ

ರಾಹುಲ್ ರಾವೈಲ್ ಅವರು ಲವ್ ಸ್ಟೋರಿ, ಬೇತಾಬ್, ಅರ್ಜುನ್, ಅಂಜಾಮ್ ಮುಂತಾದ ಚಿತ್ರಗಳಿಂದ ಹೆಸರುವಾಸಿಯಾಗಿರುವ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಸಂಕಲನಕಾರರಾಗಿದ್ದಾರೆ. ಸನ್ನಿ ಡಿಯೋಲ್, ಅಮೃತಾ ಸಿಂಗ್, ಪರೇಶ್ ರಾವಲ್, ಕಾಜೋಲ್, ಐಶ್ವರ್ಯಾ ರೈ ಬಚ್ಚನ್ ಮತ್ತು ಜಾನ್ ಅಬ್ರಹಾಂ ಅವರಂತಹ ಅನೇಕ ಯಶಸ್ವಿ ನಟರನ್ನು ಅವರು ಪರಿಚಯಿಸಿದ್ದಾರೆ. ಅವರು 2017 ಮತ್ತು 2018 ರಲ್ಲಿ ಐಎಫ್ಎಫ್ಐನಲ್ಲಿ ಭಾರತೀಯ ಪನೋರಮಾ ಮತ್ತು 2019 ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರರಾಗಿದ್ದರು ಮತ್ತು ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ನೇತೃತ್ವ ವಹಿಸಿದ್ದಾರೆ. ಅವರ ಪುಸ್ತಕ 'ರಾಜ್ ಕಪೂರ್ - ದಿ ಮಾಸ್ಟರ್ ಅಟ್ ವರ್ಕ್' ಸಿನೆಮಾದ ಸಂಭಾವ್ಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವೆಂದು ಪರಿಗಣಿಸಲಾಗಿದೆ.

ಚೀನಾ
 

ಶ್ರೀಮತಿ ನಿಂಗ್ ಯಿಂಗ್
ಚಲನಚಿತ್ರ ನಿರ್ದೇಶಕಿ

ನಿಂಗ್ ಯಿಂಗ್ ಜಾಗತಿಕವಾಗಿ ಮೆಚ್ಚುಗೆ ಪಡೆದ ಮತ್ತು ಪ್ರಶಸ್ತಿ ವಿಜೇತ ಚೀನೀ ಚಲನಚಿತ್ರ ನಿರ್ದೇಶಕರಾಗಿದ್ದಾರೆ, ಇವರನ್ನು ಹೆಚ್ಚಾಗಿ ಚೀನಾದ ಆರನೇ ತಲೆಮಾರಿನ ಚಲನಚಿತ್ರ ನಿರ್ಮಾಪಕ ಕೊಟೆರಿಯ ಸದಸ್ಯ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಶಕಗಳಲ್ಲಿ ಬೀಜಿಂಗ್ ಹಾದುಹೋದ ಬೃಹತ್ ಬದಲಾವಣೆಗಳನ್ನು ವಿಶ್ಲೇಷಿಸಿದ ಫಾರ್ ಫನ್, ಆನ್ ದಿ ಬೀಟ್ ಮತ್ತು ಐ ಲವ್ ಬೀಜಿಂಗ್ ಮೊದಲಾದ ಬೀಜಿಂಗ್ ನ ತ್ರಿವಳಿ ಚಿತ್ರಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ. ರೈಲ್ರೋಡ್ ಆಫ್ ಹೋಪ್ (2002) ಚೀನಾದಾದ್ಯಂತ ಅಗ್ಗದ ಕಾರ್ಮಿಕರ ಸಾಮೂಹಿಕ ವಲಸೆಯನ್ನು ಬಿಂಬಿಸಿದ್ದು,  ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಥಮ ಪ್ರದರ್ಶನಗೊಂಡು ಗ್ರ್ಯಾಂಡ್ ಪ್ರಿಕ್ಸ್ ಡು ಸಿನೆಮಾ ಡು ರೀಲ್ ಮತ್ತು ಪರ್ಪೆಚುಯಲ್ ಮೋಷನ್ (2005) ಅನ್ನು ಗೆದ್ದುಕೊಂಡಿತು.

ಕಜಕಿಸ್ತಾನ್
 

ಶ್ರೀ ದಿಮಾಶ್ ಕುಡೈಬರ್ಗೆನ್
ಸಂಗೀತಗಾರ

ದಿನ್ಮುಖಮೇಡ್ 'ದಿಮಾಶ್' ಕಾನಟುಲಿ ಕುಡೈಬರ್ಗೆನ್ ಪಾಪ್, ಶಾಸ್ತ್ರೀಯ ಕ್ರಾಸ್ ಒವರ್ ಜಾನಪದ ಮತ್ತು ಒಪೆರಾಟಿಕ್ ಪಾಪ್ ಸಂಗೀತದ ಪ್ರಕಾರದಲ್ಲಿ ವಿಶ್ವಪ್ರಸಿದ್ಧ ಮತ್ತು ಪ್ರತಿಭಾವಂತ ಸಂಗೀತ ಕಲಾವಿದ. ದಿಮಾಶ್ ಮತ್ತು ಅವರ ಸಂಗೀತವು ಪೂರ್ವ ಯುರೋಪ್ ಮತ್ತು ಏಷ್ಯಾದಾದ್ಯಂತ ಪ್ರಸಿದ್ಧವಾಗಿದೆ, ವಿಶೇಷವಾಗಿ ಕಜಕಿಸ್ತಾನ್ (ಅವರ ತಾಯ್ನಾಡು), ಚೀನಾ ಮತ್ತು ರಷ್ಯಾದಲ್ಲಿ ಅವರು ನೇರ ಪ್ರದರ್ಶನವನ್ನು ನೋಡಲು ಉತ್ಸುಕರಾಗಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿಮಾಶ್ ಅವರ ಗಾಯನ ಸಾಮರ್ಥ್ಯ  ಅವರು ಆರು ಆಕ್ಟೇವ್ ಗಳ ವ್ಯಾಪ್ತಿಯನ್ನು ಹೊಂದಿದ್ದಾರೆ, ಮಿಗಿಲಾಗಿ, ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ.
 
ಕಿರ್ಗಿಸ್ತಾನ್
 

ಶ್ರೀಮತಿ ಗುಲ್ಬಾರಾ ಟೊಲೊಮುಶೊವಾ
ಚಲನಚಿತ್ರ ನಿರ್ಮಾಪಕಿ ಮತ್ತು ಚಲನಚಿತ್ರ ವಿಮರ್ಶಕಿ

ಗುಲ್ಬಾರಾ ಟೊಲೊಮುಶೊವಾ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕಿ ಮತ್ತು ಚಲನಚಿತ್ರ ವಿಮರ್ಶಕರಾಗಿದ್ದಾರೆ ಮತ್ತು ಅವರು ಲೇಖನಗಳ ಮೂಲಕ ಮತ್ತು ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ತೀರ್ಪುಗಾರ ಸದಸ್ಯರಾಗಿದ್ದಾರೆ. ಅವರು ಫಿಪ್ರೆಸ್ಸಿ (ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಶೆಯ ಒಕ್ಕೂಟಿ) ಮತ್ತು ನೆಟ್ಪ್ಯಾಕ್ (ಏಷ್ಯಾ ಸಿನಿಮಾದ ಉತ್ತೇಜನಕ್ಕಾಗಿ ಜಾಲ)ದ ಸದಸ್ಯರಾಗಿದ್ದಾರೆ. ಅವರು ಕಿರ್ಗಿಸ್ತಾನದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದಲ್ಲಿ ಛಾಯಾಗ್ರಹಣ ವಿಭಾಗದಲ್ಲಿ ಪ್ರಮುಖ ತಜ್ಞರಾಗಿದ್ದಾರೆ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅವರ ಪರಿಣಾಮಕಾರಿ ಕೆಲಸಕ್ಕಾಗಿ ಅವರ ದೇಶ ಮತ್ತು ವಿದೇಶಗಳಲ್ಲಿ ಗೌರವಗಳನ್ನು ಪಡೆದಿದ್ದಾರೆ.

ರಷ್ಯಾ
 

ಶ್ರೀ ಇವಾನ್ ಕುದ್ರಿಯಾವ್ತ್ಸೆವ್
ಚಲನಚಿತ್ರ ನಿರ್ಮಾಪಕ ಮತ್ತು ಪತ್ರಕರ್ತ

ಇವಾನ್ ಕುದ್ರಿಯಾವ್ತ್ಸೆವ್ ಪ್ರಸಿದ್ಧ ಪತ್ರಕರ್ತ ಮತ್ತು ನಿರ್ಮಾಪಕ, ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಆಯ್ಕೆ ಸಮಿತಿಯ ಅಧ್ಯಕ್ಷರು ಮತ್ತು ಚಲನಚಿತ್ರ ಕಲೆ ಮತ್ತು ವಿಜ್ಞಾನ ಕುರಿತ ರಾಷ್ಟ್ರೀಯ ಅಕಾಡೆಮಿ ಸದಸ್ಯರಾಗಿದ್ದಾರೆ. ಅವರು ಸಿನೆಮಾ ಟಿವಿ ಚಾನೆಲ್ ಅನ್ನು ಅದರ ಪ್ರಧಾನ ಸಂಪಾದಕರಾಗಿ ಮುನ್ನಡೆಸುತ್ತಿದ್ದಾರೆ ಮತ್ತು ರಷ್ಯಾದ ಚಲನಚಿತ್ರ ಮಾರುಕಟ್ಟೆಯಲ್ಲಿ ಪರಿಣಿತರಾಗಿದ್ದಾರೆ, ಚಲನಚಿತ್ರ ಉದ್ಯಮದ ವೃತ್ತಿಪರರನ್ನು ಗುರುತಿಸುವ ರಷ್ಯಾದ ಪ್ರಮುಖ ಪ್ರಶಸ್ತಿಯಾದ ಎಕ್ಸ್ ಪರ್ಟ್ ಕೌನ್ಸಿಲ್ ಆಫ್ ದಿ ಗೋಲ್ಡನ್ ಈಗಲ್ ಪ್ರಶಸ್ತಿಯ ಮುಖ್ಯಸ್ಥರಾಗಿದ್ದಾರೆ. 2009 ರಿಂದ, ಇವಾನ್ ರಷ್ಯಾದ ಪ್ರಮುಖ ಸುದ್ದಿ ಟಿವಿ ಚಾನೆಲ್ ರಷ್ಯಾ 24 ನಲ್ಲಿ ಸಾಪ್ತಾಹಿಕ ಚಲನಚಿತ್ರೋದ್ಯಮದ ಸುದ್ದಿ ಕಾರ್ಯಕ್ರಮ 'ಇಂಡಸ್ಟ್ರಿಯಾ ಕಿನೊ' ಅನ್ನು ನಡೆಸಿಕೊಡುತ್ತಿದ್ದಾರೆ.

ತಜಕಿಸ್ತಾನ್
 

ಶ್ರೀ ಮೆಹಮದ್ ಸೈದ್ ಶೋಹಿಯೋನ್
ಚಲನಚಿತ್ರ ನಿರ್ಮಾಪಕ, ನಟ, ಲೇಖಕ

ಮೆಹಮದ್ ಸೈದ್ ಶೋಹಿಯೋನ್ ಪ್ರಮುಖ ನಟ, ನಿರ್ಮಾಪಕ ಮತ್ತು ಲೇಖಕರು.  ಅವರು 30 ವರ್ಷಗಳಿಂದ ಸಂಸ್ಕೃತಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವಾಟರ್ ಬಾಯ್ (2021), ಫಾರ್ಚೂನ್ (2022) ಮತ್ತು ಬಚೈ ಹೋಬಿ (2020) ಯಂತಹ ಚಲನಚಿತ್ರಗಳೊಂದಿಗೆ ಸಿನೆಮಾ, ರಂಗಭೂಮಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಹಲವಾರು ಪ್ರಕಟಣೆಗಳನ್ನು ಹೊರತಂದಿದ್ದಾರೆ. ಅವರು ತಜಕಿಸ್ತಾನ್ ಗಣರಾಜ್ಯದ ಸಂಸ್ಕೃತಿ ಸಚಿವಾಲಯದಲ್ಲಿ ಮೊದಲ ಉಪ ಸಚಿವರಾಗಿದ್ದರು, ದೂರದರ್ಶನ ಮತ್ತು ರೇಡಿಯೋ ಪ್ರಸಾರ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಪ್ರಸ್ತುತ ರಾಜ್ಯ ಉದ್ಯಮವಾದ ಟೋಜಿಕ್ಫಿಲ್ಮ್ ನ ನಿರ್ದೇಶಕರಾಗಿದ್ದಾರೆ.

ಉಜ್ಬೇಕಿಸ್ತಾನ್
 

ಶ್ರೀ ಮತ್ಯಕುಬ್ ಸಾದುಲ್ಲಾಯೆವಿಚ್ ಮಚನೊವ್
ನಟ 

ಮತ್ಯಕುಬ್ ಸದುಲ್ಲಾಯೆವಿಚ್ ಮಚನೊವ್ ಅವರು ಗೌರವಾನ್ವಿತ ನಟರಾಗಿದ್ದು, 'ಉಜ್ಬೇಕಿಸ್ತಾನ್ ಗಣರಾಜ್ಯದ ಗೌರವಾನ್ವಿತ ಕಲಾವಿದ' (2001), ಆರ್ಡರ್ ಆಫ್ ಫ್ರೆಂಡ್ಶಿಪ್ (ಡಸ್ಟ್ಲಿಕ್) (2012) ಮತ್ತು 'ಫಾರ್ ಡಿಸ್ಟಿಂಕ್ಯೂಟೆಡ್ ಲೇಬರ್' (2021) ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ. ಅವರು 1977 ರಲ್ಲಿ ಉಜ್ಬೇಕಿಸ್ತಾನದ ಕಲೆ ಮತ್ತು ಸಂಸ್ಕೃತಿಯ ರಾಷ್ಟ್ರೀಯ ಸಂಸ್ಥೆಯಿಂದ  ಪದವಿ ಪಡೆದು, ರಂಗ ಕಲಾವಿದರಾಗಿ ಜೀವನ ಆರಂಭಿಸಿ,  ಡ್ಯಾಡಿಸ್ ಡಾಟರ್, ಹೋಲಿ ಸಿನ್ನರ್, ನೈಟ್ ವಿಸಿಟರ್, ಡೆಲಾನಿ ಮೈಸಾರ, ಸೈತಾನ್ಸ್ ಏಂಜಲ್ಸ್ ಮುಂತಾದವುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು, ಮತ್ತು ದಿ ಅವೇಕನಿಂಗ್ ಮತ್ತು ದಿ ಯೂತ್ ಆಫ್ ಜೀನಿಯಸ್ ನಂತಹ ಚಿತ್ರಗಳಲ್ಲಿ ನಟಿಸಿದರು.

ಎಸ್.ಸಿ.ಓ. ಬಗ್ಗೆ

ಎಸ್.ಸಿ.ಒ  ಒಂದು ಬಹುಪಕ್ಷೀಯ ಸಂಸ್ಥೆಯಾಗಿದ್ದು, ಇದನ್ನು 15 ಜೂನ್ 2001 ರಂದು ಸ್ಥಾಪಿಸಲಾಯಿತು. ಎಸ್.ಸಿ.ಒ  ಪ್ರಸ್ತುತ ಎಂಟು ಸದಸ್ಯ ರಾಷ್ಟ್ರಗಳನ್ನು (ಚೀನಾ, ಭಾರತ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್), ಮೂರು ವೀಕ್ಷಕ ರಾಷ್ಟ್ರಗಳು (ಬೆಲಾರಸ್, ಇರಾನ್ ಮತ್ತು ಮಂಗೋಲಿಯಾ) ಮತ್ತು ಹದಿನಾಲ್ಕು ಸಂವಾದ ಪಾಲುದಾರರನ್ನು (ಅರ್ಮೇನಿಯಾ, ಅಜೆರ್ಬೈಜಾನ್, ಕಾಂಬೋಡಿಯಾ, ನೇಪಾಳ, ಶ್ರೀಲಂಕಾ, ಈಜಿಪ್ಟ್, ಸೌದಿ ಅರೇಬಿಯಾ, ಕತಾರ್, ಬಹ್ರೇನ್, ಕುವೈತ್, ಮಾಲ್ಡೀವ್ಸ್, ಮ್ಯಾನ್ಮಾರ್, ಯುಎಇ ಮತ್ತು ಟರ್ಕಿ) ಒಳಗೊಂಡಿದೆ.

***




(Release ID: 1893133) Visitor Counter : 211