ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪರೀಕ್ಷಾ ಪೇ ಚರ್ಚಾ-2023 ಸಂವಾದ ಕಾರ್ಯಕ್ರಮ ಜನವರಿ 27, 2023ರಂದು ನಡೆಯಲಿದೆ - ಶ್ರೀ ಧರ್ಮೇಂದ್ರ ಪ್ರಧಾನ್


ಪಿಪಿಸಿ-2023 ಸಂವಾದ ಕಾರ್ಯಕ್ರಮಕ್ಕೆ 38.80 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಪಿಪಿಸಿ-2022 ಸಂವಾದ ಕಾರ್ಯಕ್ರಮದಲ್ಲಿ ಸುಮಾರು 15.7 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದರು

150ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು ಪಿಪಿಸಿ-2023ಕ್ಕೆ ನೋಂದಾಯಿಸಿಕೊಂಡಿದ್ದಾರೆ

Posted On: 03 JAN 2023 7:21PM by PIB Bengaluru

ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಮಂತ್ರಿಯವರ ಸಂವಾದ ಕಾರ್ಯಕ್ರಮ "ಪರೀಕ್ಷಾ ಪೇ ಚರ್ಚಾ-2023ರ" 6ನೇ ಆವೃತ್ತಿ 2023ರ ಜನವರಿ 27ರಂದು ನವದೆಹಲಿಯ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಘೋಷಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮವಾದ 'ಪರೀಕ್ಷಾ ಪೇ ಚರ್ಚಾ' ಎಂಬ ಪರಿಕಲ್ಪನೆಯನ್ನು ರೂಪಿಸಿದರು.  ಇದರಲ್ಲಿ ರಾಷ್ಟ್ರದಾದ್ಯಂತ ಮತ್ತು ವಿದೇಶಗಳ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಭಾಗವಹಿಸುತ್ತಾರೆ. ಇದರಲ್ಲಿ, ಪರೀಕ್ಷೆಗಳು ಮತ್ತು ಶಾಲೆಯ ನಂತರದ ಜೀವನಕ್ಕೆ ಸಂಬಂಧಿಸಿದ ಆತಂಕಗಳ ಬಗ್ಗೆ ಚರ್ಚಿಸಲು ಅವರೊಂದಿಗೆ ಸಂವಾದ ನಡೆಸಲಾಗುತ್ತದೆ.  ಈ ಕಾರ್ಯಕ್ರಮವು ಜೀವನವನ್ನು ಉತ್ಸವವಾಗಿ ಆಚರಿಸಲು, ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಿದೆ.

ಪಿಪಿಸಿ-2023ಕ್ಕೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ರಾಜ್ಯ ಮಂಡಳಿಗಳು, ಸಿಬಿಎಸ್ಇ, ಕೆವಿಎಸ್, ಎನ್ ವಿಎಸ್ ಮತ್ತು ಇತರ ಮಂಡಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಾರೆ. 2022ಕ್ಕೆ ಹೋಲಿಸಿದರೆ ಈ ವರ್ಷದ ನೋಂದಣಿಯು ದ್ವಿಗುಣಗೊಂಡಿದೆ. ಸುಮಾರು 38.80 ಲಕ್ಷ ಮಂದಿ (ವಿದ್ಯಾರ್ಥಿಗಳು - 31.24 ಲಕ್ಷ, ಶಿಕ್ಷಕರು - 5.60 ಲಕ್ಷ, ಪೋಷಕರು - 1.95 ಲಕ್ಷ) ಪಿಪಿಸಿ -2023ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಪಿಪಿಸಿ-2022ರಲ್ಲಿ 15.7 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದರು. 150 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು ಪಿಪಿಸಿ-2023ಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಾಲಕಾಲಕ್ಕೆ ನಿರ್ಧರಿಸಿದಂತೆ ಕೋವಿಡ್ -19 ಪ್ರೋಟೋಕಾಲ್ಗಳಿಗೆ ಬದ್ಧವಾಗಿ, ಈ ಕಾರ್ಯಕ್ರಮವು 2022ರಂತೆಯೇ ಟೌನ್ ಹಾಲ್ ಮಾದರಿಯಲ್ಲಿ ರೂಪಿಸಲಾಗಿದೆ. ಭಾಗವಹಿಸುವವರನ್ನು ಆಯ್ಕೆ ಮಾಡಲು (9ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು) 2022ರ ನವೆಂಬರ್ 25 ಮತ್ತು ಡಿಸೆಂಬರ್ 30ರ ನಡುವೆ ವಿವಿಧ ವಿಷಯಗಳ ಬಗ್ಗೆ https://innovateindia.mygov.in/ppc-2023/ ಸೈಟ್ ನಲ್ಲಿ ಆನ್ ಲೈನ್ ಸೃಜನಶೀಲ ಬರವಣಿಗೆ ಸ್ಪರ್ಧೆಯನ್ನು ಈ ಕೆಳಗಿನ ವಿಷಯಗಳಲ್ಲಿ ನಡೆಸಲಾಯಿತು:

I.  ವಿದ್ಯಾರ್ಥಿಗಳಿಗಾಗಿ ವಿಷಯಗಳು:
1. ನಿಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ತಿಳಿಯಿರಿ (ನಮ್ಮ ಸ್ವಾತಂತ್ರ್ಯ ಹೋರಾಟಗಾರರು)
2. ನಮ್ಮ ಸಂಸ್ಕೃತಿಯೇ ನಮ್ಮ ಹೆಮ್ಮೆ (ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ)
3. ನನ್ನ ಪುಸ್ತಕ, ನನ್ನ ಸ್ಫೂರ್ತಿ (ನನ್ನ ಪ್ರೀತಿಯ ಪುಸ್ತಕ)
4. ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ಉಳಿಸಿ (ಭವಿಷ್ಯದ ಪೀಳಿಗೆಗಾಗಿ ಪರಿಸರದ ಸಂರಕ್ಷಣೆ)
5. ನನ್ನ ಜೀವನ, ನನ್ನ ಆರೋಗ್ಯ (ಒಳ್ಳೆಯ ಆರೋಗ್ಯ ಏಕೆ ಬೇಕು?)
6. ನನ್ನ ನವೊದ್ಯಮದ ಕನಸು (ನನ್ನ ನವೊದ್ಯಮದ ಕನಸು)
7. ಎಸ್ ಟಿಇಎಂ ಶಿಕ್ಷಣ / ಗಡಿಗಳಿಲ್ಲದ ಶಿಕ್ಷಣ (ಗಡಿಯಿಲ್ಲದ ಶಿಕ್ಷಣ) 
8. ಶಾಲೆಗಳಲ್ಲಿ ಕಲಿಕೆಗಾಗಿ ಆಟಿಕೆ ಮತ್ತು ಆಟಗಳು (ಶಾಲೆಗಳಲ್ಲಿ ಕಲಿಕೆಗಾಗಿ ಆಟ ಮತ್ತು ಆಟಿಕೆಗಳು)

II.  ಶಿಕ್ಷಕರಿಗೆ ವಿಷಯಗಳು:
1. ನಮ್ಮ ಪರಂಪರೆ (ನಮ್ಮ ಪರಂಪರೆ)
2. ಕಲಿಕಾ ಪರಿಸರವನ್ನು ಸಕ್ರಿಯಗೊಳಿಸುವುದು (ಕಲಿಕೆಗಾಗಿ ಸಮರ್ಥ ವಾತಾವರಣ)
3. ಕೌಶಲ ಶಿಕ್ಷಣ (ಕುಶಲತೆಯ ಶಿಕ್ಷಣ)
4. ಪಠ್ಯಕ್ರಮದ ಹೊರೆ ಇಳಿಕೆ ಮತ್ತು ನಿರ್ಭಯ ಪರೀಕ್ಷಾ ಪದ್ದತಿ (ಪಠ್ಯಕ್ರಮದ ಹೊರೆ ಇಳಿಕೆ ಮತ್ತು ನಿರ್ಭಯ ಪರೀಕ್ಷಾ ಪದ್ದತಿ)
5. ಭವಿಷ್ಯದ ಶೈಕ್ಷಣಿಕ ಸವಾಲುಗಳು (ಭವಿಷ್ಯದ ಶೈಕ್ಷಣಿಕ ಸವಾಲುಗಳು)

III. ಪೋಷಕರಿಗೆ ವಿಷಯಗಳು:
1. ನನ್ನ ಮಗು, ನನ್ನ ಶಿಕ್ಷಕ (ನನ್ನ ಮಗು, ನನ್ನ ಶಿಕ್ಷಕ)
2. ವಯಸ್ಕರ ಶಿಕ್ಷಣ - ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿಸುವುದು (ವಯಸ್ಕರ ಶಿಕ್ಷಣ - ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿಸುವುದು)
3. ಕಲಿತು ಒಟ್ಟಿಗೆ ಬೆಳೆಯುವುದು (ಕಲಿತು ಒಟ್ಟಿಗೆ ಬೆಳೆಯುವುದು)

MyGovನಲ್ಲಿ ಸೃಜನಶೀಲ ಬರವಣಿಗೆ ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2050 ಸ್ಪರ್ಧಿಗಳಿಗೆ ಪ್ರಧಾನ ಮಂತ್ರಿಯವರಿಂದ ರಚಿತವಾದ ಹಿಂದಿ ಮತ್ತು ಇಂಗ್ಲಿಷ್ ನ ಎಕ್ಸಾಮ್ ವಾರಿಯರ್ಸ್ ಪುಸ್ತಕವನ್ನು ಒಳಗೊಂಡ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. 

ಎನ್.ಸಿ.ಇ.ಆರ್.ಟಿ ಆಯ್ಕೆ ಮಾಡಿದ ಸ್ಪರ್ಧಿಗಳ ಕೆಲವು ಪ್ರಶ್ನೆಗಳು ಪಿಪಿಸಿ -2023ರಲ್ಲಿ ಕಾಣಿಸಿಕೊಳ್ಳಲಿವೆ.

******


(Release ID: 1892726) Visitor Counter : 181