ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಜಿ-20 ಭಾರತ ಆರೋಗ್ಯ ಟ್ರ್ಯಾಕ್


ಜಿ-20 ಸಮಾವೇಶದ ನೇಪಥ್ಯದಲ್ಲಿ ನಡೆದ ಮೊದಲ ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ವೈದ್ಯಕೀಯ ಪ್ರವಾಸೋದ್ಯಮದ (ವೈದ್ಯಕೀಯ ಮೌಲ್ಯ ಪ್ರಯಾಣ) ಮೌಲ್ಯಾಧಾರಿತ ಆರೋಗ್ಯ ರಕ್ಷಣೆಯ ಮೂಲಕ ಸಮಗ್ರ ಆರೋಗ್ಯ ರಕ್ಷಣೆ ಹೇಗೆ, ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಪ್ರಸ್ತುತಪಡಿಸಲಾಗಿದೆ.

ವೈದ್ಯಕೀಯ ಪ್ರವಾಸೋದ್ಯಮ ಆರೋಗ್ಯ ವ್ಯವಸ್ಥೆಗಳ ದುರ್ಬಲತೆ ಮತ್ತು ಅಸಮಾನತೆಗಳನ್ನು ಪರಿಹರಿಸಲು ಮತ್ತು ಆದರ್ಶಪ್ರಾಯವಾದ ಆರೋಗ್ಯ ರಕ್ಷಣೆಗೆ ಅತ್ಯಗತ್ಯ ಅಂಶವಾಗಿದೆ: ವೈದ್ಯ ರಾಜೇಶ್ ಕೋಟೆಚಾ

"ಬಹು ವಿವಿಧ ಸಹಯೋಗಗಳು ಮಾಡಬಹುದಾದ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ ಚೌಕಟ್ಟನ್ನು ರೂಪಿಸಲು ಜ್ಞಾನ ಹಂಚಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ"

Posted On: 20 JAN 2023 1:41PM by PIB Bengaluru

"ವೈದ್ಯಕೀಯ ಪ್ರವಾಸೋದ್ಯಮವು ಆರೋಗ್ಯ ವ್ಯವಸ್ಥೆಗಳ ದುರ್ಬಲತೆಗಳು ಮತ್ತು ಅಸಮಾನತೆಗಳನ್ನು ಪರಿಹರಿಸಲು ಆದರ್ಶಪ್ರಾಯವಾದ ಆರೋಗ್ಯ ರಕ್ಷಣೆಗೆ ಅತ್ಯಗತ್ಯ ಅಂಶವಾಗಿದೆ" 

ಕೇರಳದ ತಿರುವನಂತಪುರಂನಲ್ಲಿ ಇಂದು ಜಿ20 ಭಾರತದ ಅಧ್ಯಕ್ಷತೆಯಲ್ಲಿ 1ನೇ ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಯ ಮೂರನೇ ದಿನದಂದು ವೈದ್ಯಕೀಯ ಮೌಲ್ಯ ಪ್ರಯಾಣ (ವೈದ್ಯಕೀಯ ಪ್ರವಾಸೋದ್ಯಮ) ಕುರಿತಾದ ಸಭೆಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಮುಖ್ಯ ಭಾಷಣ ಮಾಡಿದರು.

ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ ಕೆ ಪಾಲ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ಉಪಸ್ಥಿತರಿದ್ದರು.

ಸಾಂಕ್ರಾಮಿಕ ರೋಗದ ತೀವ್ರ ಪರಿಣಾಮವನ್ನು ಪ್ರಸ್ತಾಪಿಸಿದ ವೈದ್ಯ ರಾಜೇಶ್ ಕೋಟೆಚಾ ಅವರು, ರಾಷ್ಟ್ರದ ಆರ್ಥಿಕ ಭದ್ರತೆಯ ಮೇಲೆ ಆರೋಗ್ಯವು ಗಣನೀಯ ಪರಿಣಾಮ ಬೀರುತ್ತದೆ. ಆದ್ದರಿಂದ ಆಧುನಿಕ ಔಷಧದ ಜೊತೆಗೆ ಸಾಂಪ್ರದಾಯಿಕ ವೈದ್ಯಕೀಯ ವಿಧಾನಗಳನ್ನು ಸಂಯೋಜಿಸಲು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ತಿಳಿಸಿದರು.

ಸಮಗ್ರ ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆಯು ರೋಗಿಯ ಕೇಂದ್ರಿತ ವಿಧಾನವನ್ನು ಸಮಗ್ರವಾಗಿ ಕೇಂದ್ರೀಕರಿಸುವ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತದೆ. ಇದು ಮೌಲ್ಯಾಧಾರಿತ ಆರೋಗ್ಯ ರಕ್ಷಣೆಯ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ನೆರವಾಗುತ್ತದೆ ಎಂದು ಸಚಿವರು ತಿಳಿಸಿದರು.

'ಒಂದು ಜಗತ್ತು, ಒಂದು ಆರೋಗ್ಯ' ಎಂಬ ಪರಿಕಲ್ಪನೆಯೊಂದಿಗೆ "ಜ್ಞಾನ ಹಂಚಿಕೆ ಮತ್ತು ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗಾಗಿ ಚೌಕಟ್ಟನ್ನು ರೂಪಿಸಲು ಬಹುಪಕ್ಷೀಯ ಸಹಯೋಗಗಳು ಕಡ್ಡಾಯವಾಗಿದೆ" ಎಂದು ವೈದ್ಯ ರಾಜೇಶ್ ಕೋಟೆಚಾ ಅವರು  ಹೇಳಿದರು. 

ಸಮಗ್ರ ಆರೋಗ್ಯ ರಕ್ಷಣೆಯ ಆಧಾರದ ಮೇಲೆ ವೈದ್ಯಕೀಯ ಪ್ರವಾಸೋದ್ಯಮ ಮೂಲಕ ಜಗತ್ತನ್ನು ಸಂಪರ್ಕಿಸುವುದು ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಗಳ ದುರ್ಬಲತೆಗಳು ಮತ್ತು ಅಸಮಾನತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಪಂಚದಾದ್ಯಂತ ಮೌಲ್ಯಾಧಾರಿತ ಆರೋಗ್ಯ ಸೇವೆಗಳಿಗೆ ಸಮಾನವಾದ ಅವಕಾಶವನ್ನು ಸಕ್ರಿಯಗೊಳಿಸುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಇದು  ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಸಾಂಪ್ರದಾಯಿಕ ಆರೋಗ್ಯ ಸೇವೆಗಳ ಪ್ರಚಾರ ಮತ್ತು ತಡೆಗಟ್ಟುವ ಕ್ರಮಗಳು ಮತ್ತು ಗುಣಪಡಿಸುವಲ್ಲಿ ಅದರ ಶಕ್ತಿಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳೊಂದಿಗೆ ಆಧುನಿಕ ಔಷಧದ ಸಂಯೋಜನೆಯು, ರೋಗವನ್ನು ಗುಣಪಡಿಸಲು ಮಾತ್ರವಲ್ಲದೆ ದೇಹಾರೋಗ್ಯವನ್ನು ಸಮಗ್ರವಾಗಿ ಗುಣಪಡಿಸುವಲ್ಲಿ ಪ್ರಬಲ ಎಂದು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಕೊಳ್ಳಲಾಯಿತು.
ಸಂಯೋಜಿತ ಆರೋಗ್ಯ ರಕ್ಷಣೆಯು ಈ ಸಮಯದ ಅಗತ್ಯವಾಗಿದೆ ಮತ್ತು ಆರೋಗ್ಯ ರಕ್ಷಣೆ ದೃಢವಾದ, ಹೆಚ್ಚಿನ ಮೌಲ್ಯದ ಉನ್ನತ ಬೆಳವಣಿಗೆಯ ವಿಭಾಗವಾಗಲಿದೆ ಎಂದು ಪ್ರತಿನಿಧಿಗಳು ಗಮನಸೆಳೆದರು. 
ಈ ಅಧ್ಯಕ್ಷತೆಯಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಮುಂದಕ್ಕೆ ಕೊಂಡೊಯ್ಯಲು ಜ್ಞಾನ ಮತ್ತು ಸ್ವತ್ತುಗಳನ್ನು ಸಾಮೂಹಿಕವಾಗಿ ರೂಪಿಸಲು ಮತ್ತು ಬಳಸಿಕೊಳ್ಳಬೇಕು ಎಂದು ವೇದಿಕೆಯ ಮೇಲಿದ್ದ ಗಣ್ಯರು ವಿವರಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್, ಜಂಟಿ ಕಾರ್ಯದರ್ಶಿ ಶ್ರೀ ವಿಶಾಲ್ ಚೌಹಾಣ್, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಇಂಡೋನೇಷ್ಯಾ, ಜಪಾನ್, ಮೆಕ್ಸಿಕೋ, ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ ಸೇರಿದಂತೆ G20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 
ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೈಜೀರಿಯಾ, ಸಿಂಗಾಪುರ್, ಸ್ಪೇನ್, ಓಮನ್, ನೆದರ್ಲೆಂಡ್ ಮತ್ತು ಯುಎಇ ಸೇರಿದಂತೆ ವಿಶೇಷ ಆಹ್ವಾನಿತ ದೇಶಗಳು ಭಾಗವಹಿಸಿದ್ದವು. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಆಫ್ರಿಕನ್ ಯೂನಿಯನ್ - AU, ASEAN, BMGF, CEPI, ಕಾಮನ್ವೆಲ್ತ್, FAO, G20 ಇನ್ನೋವೇಶನ್ ಹಬ್, GAVI, ಗ್ಲೋಬಲ್ AMR R & D Hub, OECD, ರಾಕ್ಫೆಲ್ಲರ್ ಫೌಂಡೇಶನ್, STOP TB-ಪಾರ್ಟ್ನರ್ಶಿಪ್, ವರ್ಲ್ಡ್ ಎಕನಾಮಿಕ್ ಫೋರಮ್, ವೆಲ್ಕಮ್ ಟ್ರಸ್ಟ್, ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ಬ್ಯಾಂಕ್, UNICEF, UNEP ಮುಂತಾದ ಸಂಸ್ಥೆಗಳ ಪ್ರತಿನಿಧಿಗಳು ಅಧಿವೇಶನದಲ್ಲಿ ಉಪಸ್ಥಿತರಿದ್ದರು.

*****



(Release ID: 1892608) Visitor Counter : 167