ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಸಚಿವಾಲಯವು 2023-24ರ ಒಟ್ಟಾರೆ ಉತ್ಪಾದನೆಯ ಗುರಿಗಳನ್ನು ಪರಿಶೀಲಿಸುತ್ತದೆ.


2023-24ರಲ್ಲಿ ಒಂದು ಬಿಲಿಯನ್ ಟನ್ ಉತ್ಪಾದನೆಯ  ಗುರಿಯನ್ನು ಸಚಿವಾಲಯ ಹೊಂದಿದೆ‌.

ಕೋಲ್ ಇಂಡಿಯಾ ಲಿಮಿಟೆಡ್ (Coal India Limited- CIL)  ನ 97 ಕಲ್ಲಿದ್ದಲು ಗಣಿಗಳು ವರ್ಷಕ್ಕೆ ಒಂದು ಮಿಲಿಯನ್ ಟನ್‌ಗಿಂತಲೂ ಹೆಚ್ಚಿನ ಕಲ್ಲಿದ್ದಲನ್ನು ಉತ್ಪಾದಿಸುತ್ತವೆ.

Posted On: 18 JAN 2023 3:48PM by PIB Bengaluru

ಕಲ್ಲಿದ್ದಲು ಸಚಿವಾಲಯವು 2023-24ರ ಅವಧಿಯಲ್ಲಿ ಒಂದು ಬಿಲಿಯನ್ ಟನ್ (ಬಿಟಿ) ಕಲ್ಲಿದ್ದಲನ್ನು ಉತ್ಪಾದಿಸುವ ಗುರಿ ಹೊಂದಿದೆ.  ಈ ಗುರಿಯನ್ನು ಸಾಧಿಸಲು, ಎಲ್ಲಾ ಕಲ್ಲಿದ್ದಲು ಕಂಪನಿಗಳೊಂದಿಗೆ  ಕಲ್ಲಿದ್ದಲು ಕಾರ್ಯದರ್ಶಿಯವರಿಂದ  ಆಳವಾದ ಪರಿಶೀಲನೆಯನ್ನು ನಡೆಸಲಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್
 (CIL) ಗೆ 780  ಮಿಲಿಯನ್ ಟನ್ (MT) ಗುರಿಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ, ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್‌ಗೆ 75 MT ಮತ್ತು ಕ್ಯಾಪ್ಟಿವ್ ಮತ್ತು ವಾಣಿಜ್ಯ ಗಣಿಗಳಿಗೆ 162 MT.  ಕೋಲ್ ಇಂಡಿಯಾ ಲಿಮಿಟೆಡ್ ( CIL ) ನಲ್ಲಿ ಒಟ್ಟು 290 ಗಣಿಗಳು ಕಾರ್ಯನಿರ್ವಹಿಸುತ್ತಿವೆ, ಅದರಲ್ಲಿ 97 ಗಣಿಗಳು ವರ್ಷಕ್ಕೆ ಒಂದಕ್ಕಿಂತ ಹೆಚ್ಚಿನ ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲನ್ನು ಉತ್ಪಾದಿಸುತ್ತವೆ.

ಅಂತಹ ಎಲ್ಲಾ 97 ಕಲ್ಲಿದ್ದಲು ಗಣಿಗಳಿಗೆ, ಭೂಸ್ವಾಧೀನ, ಅರಣ್ಯ ತೆರವು, ಪರಿಸರ ತೆರವು, ರೈಲು ಸಂಪರ್ಕ ಮತ್ತು ರಸ್ತೆ ಸಂಪರ್ಕದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು, ಗುರಿ ಸಾಧಿಸಲು ನಿರ್ದಿಷ್ಟ ಸಮಯ-ರೇಖೆಗಳನ್ನು ನಿಗದಿಪಡಿಸಲಾಗಿದೆ.  ಕಲ್ಲಿದ್ದಲು ಕಂಪನಿಗಳ ನಿರಂತರ ಪ್ರಯತ್ನದಿಂದ 97 ಕಲ್ಲಿದ್ದಲು ಗಣಿಗಳ ಪೈಕಿ 56 ಗಣಿಗಳಲ್ಲಿ ಯಾವುದೇ ಸಮಸ್ಯೆಗಳು ಬಾಕಿ ಉಳಿದಿಲ್ಲ ಎಂಬುದು ಗಮನಾರ್ಹ.  ಕೇವಲ 41 ಗಣಿಗಳಲ್ಲಿ 61 ಸಮಸ್ಯೆಗಳಿದ್ದು,ಇವುಗಳನ್ನು ಪರಿಹರಿಸಲು ಸಂಬಂಧಿತ ರಾಜ್ಯ ಸರ್ಕಾರದೊಂದಿಗೆ ಕಲ್ಲಿದ್ದಲು ಕಂಪನಿಗಳ ಉನ್ನತ ನಿರ್ವಹಣೆಯಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಕೇಂದ್ರ ಸಚಿವಾಲಯಗಳು ನಿರಂತರ ಸಮನ್ವಯ ಮತ್ತು ಮೇಲ್ವಿಚಾರಣೆಯನ್ನು ನಡೆಸುತ್ತಿವೆ.

ಕೋಲ್ ಇಂಡಿಯಾ ಲಿಮಿಟೆಡ್( CIL )2021-22 ವರ್ಷದಲ್ಲಿ 622 ಮಿಲಿಯನ್ ಟನ್  (MT) ಉತ್ಪಾದಿಸಿದೆ ಮತ್ತು 2022-23 ವರ್ಷಕ್ಕೆ  16% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನೋಂದಾಯಿಸಿ,   513 (ಮಿಲಿಯನ್ ಟನ್) MT ಅನ್ನು ಇದುವರೆಗೆ ಉತ್ಪಾದಿಸಲಾಗಿದೆ ಎಂಬುದು ಗಮನಾರ್ಹವಾಗಿದೆ.  ಪ್ರಸಕ್ತ ಹಣಕಾಸು ವರ್ಷದಲ್ಲಿ ಸಿಐಎಲ್ ನಿಗದಿಪಡಿಸಿದ 700 ಮಿಲಿಯನ್ ಟನ್ (MT) ಗುರಿಯನ್ನು ಮೀರುತ್ತದೆ. ಅಲ್ಲದೇ ಅದರ ಪ್ರಕಾರ 2023-24 ವರ್ಷಕ್ಕೆ 780 ಮಿಲಿಯನ್ ಟನ್‌‌ಗಳಷ್ಟು ಉತ್ಪಾದನೆಯನ್ನು (MT) ಸಾಧಿಸುತ್ತದೆ ಎಂಬ ನಿರೀಕ್ಷೆಯಿದೆ.

*****



(Release ID: 1892003) Visitor Counter : 97