ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕರ್ನಾಟಕದ ಧಾರವಾಡದಲ್ಲಿಂದು ನಡೆದ 26ನೇ ರಾಷ್ಟ್ರೀಯ ಯುವ ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಶ್ರೀ ಅನುರಾಗ್ ಠಾಕೂರ್
ಸ್ವಚ್ಛ, ಸುಂದರ, ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನಶೀಲರಾಗುವಂತೆ ಯುವಜನರಿಗೆ ಕರೆ ನೀಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್
ರಾಷ್ಟ್ರೀಯ ಯುವ ಉತ್ಸವವು ಏಕತೆ ಮತ್ತು ಸಮಗ್ರತೆಯನ್ನು ಸಂಕೇತಿಸುತ್ತದೆ ಏಕೆಂದರೆ ಇದು ಅಕ್ಷರಶಃ ಭಾರತದ ಕಿರುಚಿತ್ರಣವನ್ನು ಸೃಷ್ಟಿಸುತ್ತದೆ: ಶ್ರೀ ಅನುರಾಗ್ ಠಾಕೂರ್
Posted On:
16 JAN 2023 6:05PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರಿಂದು ಕರ್ನಾಟಕದ ಧಾರವಾಡದಲ್ಲಿ ನಡೆದ 26 ನೇ ರಾಷ್ಟ್ರೀಯ ಯುವ ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಐದು ದಿನಗಳ ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದ್ದರು.
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರು ಜಿ -20 ನಾಯಕರಿಗೆ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಪರಿಹಾರಗಳನ್ನು ಸೂಚಿಸುವ ದಾಖಲೆಗಳನ್ನು ತಯಾರಿಸಲು ವೈ -20 ಮಾತುಕತೆ ಮತ್ತು ವೈ -20 ನಡಿಗೆಯಲ್ಲಿ ಸೇರುವಂತೆ ಯುವಕರನ್ನು ಆಹ್ವಾನಿಸಿದರು.
ಸ್ವಚ್ಛ, ಸುಂದರ, ಸಶಕ್ತ ರಾಷ್ಟ್ರವನ್ನು ನಿರ್ಮಿಸುವ ಸರ್ಕಾರದ ಉಪಕ್ರಮಗಳಲ್ಲಿ ಸಕ್ರಿಯವಾಗಿ ಸೇರುವಂತೆ ಸಚಿವರು ಯುವ ಪೀಳಿಗೆಯನ್ನು ಆಗ್ರಹಿಸಿದರು. ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ವಿವಿಧ ಯುವ ಕಲ್ಯಾಣ ಕ್ರಮಗಳ ಬಗ್ಗೆ ವಿವರಿಸಿದ ಶ್ರೀ ಅನುರಾಗ್ ಸಿಂಗ್ ಠಾಕೂರ್, ಈ ಕ್ರಮಗಳನ್ನು ರಾಷ್ಟ್ರ ನಿರ್ಮಾಣದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಹಸಿರು ಉತ್ಸವ ಎಂದು ಆಚರಿಸಲಾದ ರಾಷ್ಟ್ರೀಯ ಯುವ ಉತ್ಸವವನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು. ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಜೀವನದಲ್ಲಿ ತ್ಯಾಜ್ಯ ಕಡಿತ ಉಪಕ್ರಮಗಳ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡುವಂತೆ ಅವರು ಯುವಕರಿಗೆ ಕರೆ ನೀಡಿದರು.
ಷ್ಟ್ರೀಯ ಯುವ ಉತ್ಸವವು ಏಕತೆ ಮತ್ತು ಸಮಗ್ರತೆಯನ್ನು ಸಂಕೇತಿಸುತ್ತದೆ ಏಕೆಂದರೆ ಇದು ಅಕ್ಷರಶಃ ಭಾರತದ ಕಿರು ಚಿತ್ರಣವನ್ನು ರೂಪಿಸುತ್ತದೆ ಎಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು. ಯುವ ಪ್ರತಿನಿಧಿಗಳು ಯುವ ಉತ್ಸವದಿಂದ ತಾವು ತೆಗೆದುಕೊಂಡು ಹೋಗುವ ಸಂದೇಶಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಸಚಿವರು ತಿಳಿಸಿದರು.
ದೇಶವು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಅಭೂತಪೂರ್ವ ವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಉಲ್ಲೇಖಿಸಿದರು. 2019-20ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಮತ್ತು ಕೊಡುಗೆ ನೀಡಿದ 19 ವ್ಯಕ್ತಿಗಳು ಮತ್ತು ಆರು ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಕರ್ನಾಟಕದ ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಚುನಾಯಿತ ಪ್ರತಿನಿಧಿಗಳು ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 1891701)
Visitor Counter : 233