ಗೃಹ ವ್ಯವಹಾರಗಳ ಸಚಿವಾಲಯ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ(Azadi Ka Amrita Mahotsav) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಭಾರತ ಸರ್ಕಾರದ ಕಾರ್ಯಕ್ರಮವಾಗಿದ್ದು, ಭಾರತ ದೇಶದ 75 ವರ್ಷಗಳ ಸ್ವಾತಂತ್ರ್ಯ ಮತ್ತು ಇಲ್ಲಿನ ಜನರ, ಇಲ್ಲಿನ ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸುವ ಮತ್ತು ಸ್ಮರಿಸುವ ಒಂದು ಉಪಕ್ರಮವಾಗಿದೆ. 


ಭಾರತದ ಸ್ವಾತಂತ್ರ್ಯದ 75 ವರ್ಷಗಳ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನ ನೆನಪಿಗಾಗಿ ಇದೇ 2023 ಜನವರಿ 17 ರಿಂದ 23 ರವರೆಗೆ ಒಂದು ವಾರ ಕಾಲ ಆಜಾದಿ ಕಾ ಅಮೃತ್ ಮಹೋತ್ಸವದ ಅದ್ವಿತೀಯ ಕಾರ್ಯಕ್ರಮಗಳನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ ಆಚರಿಸುತ್ತದೆ. 

 ಜನವರಿ 23,2023ರಂದು ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆಯಲಿರುವ ಭವ್ಯವಾದ ಸಮಾರೋಪ ಸಮಾರಂಭದಲ್ಲಿ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣ ಸಂದರ್ಭದಲ್ಲಿ ಎಲ್ಲ ಭಾರತೀಯರು ತಮ್ಮ ಸಂಪ್ರದಾಯ ಮತ್ತು ಪರಂಪರೆಯನ್ನು ಹೆಮ್ಮೆಯಿಂದ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದ್ದರು. 

ಭಾರತವು ಶ್ರೀಮಂತ ಮತ್ತು ಅದ್ಭುತವಾದ ಇತಿಹಾಸವನ್ನು ಹೊಂದಿದ್ದು, ನಮ್ಮ ದೇಶದ ವೀರರ ಅಭೂತಪೂರ್ವ ಶೌರ್ಯ, ಧೈರ್ಯ, ತ್ಯಾಗ, ತಪಸ್ಸು, ಯುದ್ಧಗಳು ಮತ್ತು ವಿಜಯಗಳ ಸಾಹಸ ಕಥೆಗಳಿಂದ ತುಂಬಿದೆ.

ಭಾರತ ಮಾತೆಯ ಅಂತಹ ಮಹಾನ್ ಪುತ್ರರಲ್ಲಿ ಒಬ್ಬರು ನೇತಾಜಿ ಸುಭಾಸ್ ಚಂದ್ರ ಬೋಸ್. ಅವರು ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಳು ತಲೆತಲಾಂತರದವರೆಗೆ ಭಾರತೀಯ ಪೀಳಿಗೆಗೆ ಸ್ಫೂರ್ತಿ ನೀಡಿವೆ ಮತ್ತು ದೇಶವಾಸಿಗಳಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಿದೆ.

ಈ ಐತಿಹಾಸಿಕ ಅದ್ವಿತೀಯ ಸಪ್ತಾಹ ಕಾರ್ಯಕ್ರಮದಲ್ಲಿ ಮಣಿಪುರ, ನಾಗಾಲ್ಯಾಂಡ್, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೇತಾಜಿ ಅವರ ಜೀವನ ಮತ್ತು ಸಾಧನೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಚಟುವಟಿಕೆಗಳ ಸರಣಿಯನ್ನು ಆಯೋಜಿಸಲಾಗುತ್ತದೆ.

Posted On: 16 JAN 2023 6:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ(Azadi Ka Amrit Mahotsav)ವನ್ನು ಆಚರಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದ ಸಂದರ್ಭದಲ್ಲಿ ಭಾರತದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ, ಎಲ್ಲ ಭಾರತೀಯರು ತಮ್ಮ ಪರಂಪರೆ, ಇತಿಹಾಸ ಬಗ್ಗೆ ಹೆಮ್ಮೆ ಪಡುವಂತೆ ಕರೆ ನೀಡಿದ್ದರು. ಭಾರತವು ಶ್ರೀಮಂತ ಮತ್ತು ಅದ್ಭುತವಾದ ಇತಿಹಾಸವನ್ನು ಹೊಂದಿದ್ದು, ನಮ್ಮ ವೀರಪುರುಷರು ಮತ್ತು ಮಹಿಳೆಯರ ಅಭೂತಪೂರ್ವ ಶೌರ್ಯ, ಧೈರ್ಯ, ತ್ಯಾಗ, ತಪಸ್ಸು, ಯುದ್ಧಗಳು ಮತ್ತು ವಿಜಯಗಳ ಕಥೆಗಳಿಂದ ತುಂಬಿದೆ. ಭಾರತ ಮಾತೆಯ ಅಂತಹ ಮಹಾನ್ ಪುತ್ರರಲ್ಲಿ ಒಬ್ಬರು ನೇತಾಜಿ ಸುಭಾಸ್ ಚಂದ್ರ ಬೋಸ್. ಅವರು ಸ್ವಾತಂತ್ರ್ಯ ಚಳವಳಿಗೆ ನೀಡಿರುವ ಕೊಡುಗೆಗಳು ಇಂದಿನ ಮತ್ತು ಮುಂದಿನ ಭಾರತೀಯ ತಲೆಮಾರುಗಳಿಗೆ ಸ್ಫೂರ್ತಿ ನೀಡಿವೆ. ದೇಶವಾಸಿಗಳಲ್ಲಿ ಹೆಮ್ಮೆಯ ಭಾವವನ್ನು ಮೂಡಿಸುತ್ತದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಇದೇ ಜನವರಿ 17 ರಿಂದ 23ರವರೆಗೆ ಆಜಾದಿ ಕಾ ಅಮೃತ್ ಮಹೋತ್ಸವ ಅತ್ಯಪೂರ್ವ ಸಾಂಪ್ರದಾಯಿಕ ಸಪ್ತಾಹ ಕಾರ್ಯಕ್ರಮವನ್ನು ಆಚರಿಸುತ್ತಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ವಿಷಯದ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜನವರಿ 23 ರಂದು ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆಯಲಿರುವ ಭವ್ಯವಾದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನೇತಾಜಿಯವರ ಜೀವನ ಮತ್ತು ಕೆಲಸ ಸಾಧನೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಮತ್ತು ಮಣಿಪುರ, ನಾಗಾಲ್ಯಾಂಡ್, ಗುಜರಾತ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಣಿಪುರದಲ್ಲಿ ಜನವರಿ 17 ರಂದು ಮಂತ್ರಿಪುಖ್ರಿ, ಕೀತಲ್ಮನ್ಬಿ, ಕಾಂಗ್ವಾಯ್, ಮೊಯಿರಾಂಗ್ ಮತ್ತು ನಂಬೋಲ್ ಗಳಲ್ಲಿ, ನಾಗಲ್ಯಾಂಡ್ ನ ರುಝಾಝೋ ಮತ್ತು ಚೆಸೆಜು ಗ್ರಾಮಗಳು, ಕೊಹಿಮಾದಲ್ಲಿ ಜನವರಿ 18 ರಂದು, ಗುಜರಾತ್ ನ ಹರಿಪುರ, ಬಾರ್ಡೋಲಿ ಮತ್ತು ಸೂರತ್ ನಲ್ಲಿ ಜನವರಿ 19 ರಂದು ಒಡಿಶಾದ ಕಟಕ್ ನಲ್ಲಿ ಜನವರಿ 20 ರಂದು, ಜನವರಿ 21 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿಯವರ ಅಪಾರ ಕೊಡುಗೆಯನ್ನು ಕೊಂಡಾಡುವ ಚಟುವಟಿಕೆಗಳ ಸರಣಿ ಕಾರ್ಯಕ್ರಮಗಳು ಈ ಸ್ಥಳಗಳಲ್ಲಿ ವಾರವಿಡೀ ನಡೆಸಲು ಯೋಜಿಸಲಾಗಿದೆ,

ಜನ ಭಾಗಿದಾರಿಯ ಸ್ಫೂರ್ತಿ, ಪ್ರೇರಣೆಯೊಂದಿಗೆ ಎಲ್ಲ ಕಾರ್ಯಕ್ರಮಗಳಲ್ಲಿ ದೊಡ್ಡ ಪ್ರಮಾಣದ ಸಾರ್ವಜನಿಕರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ, ಇದರಿಂದ ನಾಗರಿಕರು ನಮ್ಮ ದೇಶದ ವೀರರಿಂದ ಸ್ಫೂರ್ತಿ ಪಡೆದು ಅವರ ಮಹಾನ್ ಆದರ್ಶ ಗುಣಗಳನ್ನು ಮುಂದುವರಿಸಿಕೊಂಡು ಹೋಗಬಹುದು. 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು, ಅಲ್ಲಿ ನೇತಾಜಿಯವರು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವು ವರ್ಷಗಳ ಮೊದಲು ಅಂದರೆ 31.12.1943 ರಂದು ಮೊದಲ ಬಾರಿಗೆ ಭಾರತದ ನೆಲದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.

*****
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಈ ಸ್ಮರಣೀಯ ಅದ್ವಿತೀಯ ಸಪ್ತಾಹ ಕಾರ್ಯಕ್ರಮವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಮತ್ತು ಕೊಡುಗೆಗಳಿಗೆ ಒಂದು ಗೌರವ ಸಮರ್ಪಣೆಯಾಗಿದೆ. ಅವರ ಉನ್ನತ ಆದರ್ಶಗಳ ಸ್ಮರಣೆಯಾಗಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಜೀವನದಿಂದ ಇಡೀ ದೇಶಕ್ಕೆ ಸ್ಫೂರ್ತಿಯನ್ನು ಪಡೆಯುವ ಕ್ಷಣವಾಗಿದೆ.



(Release ID: 1891691) Visitor Counter : 201