ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಜಾಗತಿಕವಾಗಿ ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಮತ್ತು ಅದರ ಇಂಧನ ಪರಿವರ್ತನೆ ಕಾರ್ಯಸೂಚಿಯಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು 2023 ರ ಆಟೋ ಎಕ್ಸ್ ಪೋದಲ್ಲಿ ಶ್ರೀ ಹರ್ದೀಪ್ ಎಸ್. ಪುರಿ ಹೇಳಿದರು.


ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಏಕಕಾಲದಲ್ಲಿ ಪರಿಹರಿಸುವಾಗ ಪರಿಸರವನ್ನು ರಕ್ಷಿಸುವ ತನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಭಾರತವು ಎಷ್ಟರ ಮಟ್ಟಿಗೆ ಆವಿಷ್ಕಾರ ಮಾಡಲು ಸಿದ್ಧವಿದೆ ಎಂಬುದನ್ನು ಇಂದಿನ ಕಾರ್ಯಕ್ರಮ ಗುರುತಿಸುತ್ತದೆ: ಶ್ರೀ ಹರ್ದೀಪ್ ಎಸ್. ಪುರಿ

ಆಟೋ ಎಕ್ಸ್ ಪೋ-2023 ಅನ್ನು "ಚಲನಶೀಲತೆಯ ಜಗತ್ತನ್ನು ಅನ್ವೇಷಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ

Posted On: 13 JAN 2023 12:54PM by PIB Bengaluru

" ಜಾಗತಿಕವಾಗಿ ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಮತ್ತು ತನ್ನ ಇಂಧನ ಪರಿವರ್ತನೆ ಕಾರ್ಯಸೂಚಿಯಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಏಕಕಾಲದಲ್ಲಿ ಪರಿಹರಿಸುವಾಗ ಪರಿಸರವನ್ನು ರಕ್ಷಿಸುವ ತನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಭಾರತವು ಎಷ್ಟರ ಮಟ್ಟಿಗೆ ಆವಿಷ್ಕಾರ ಮಾಡಲು ಸಿದ್ಧವಿದೆ ಎಂಬುದನ್ನು ಇಂದಿನ ಕಾರ್ಯಕ್ರಮವು ಸೂಚಿಸುತ್ತದೆ "ಎಂದು ಶ್ರೀ ಹರ್ದೀಪ್ ಎಸ್. ಪುರಿ ಹೇಳಿದರು.

ಆಟೋ ಎಕ್ಸ್ ಪೋ  -2023 ರಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು, ಆಟೋಮೊಬೈಲ್ ಉದ್ಯಮಕ್ಕಾಗಿ, ಈ ಕಾರ್ಯಕ್ರಮವು ನಮ್ಮ ತಂತ್ರಜ್ಞಾನ, ಸಾಮರ್ಥ್ಯ ಮತ್ತು ನಾಳಿನ-ಸುರಕ್ಷಿತ, ಸ್ವಚ್ಛ, ಸಂಪರ್ಕಿತ ಮತ್ತು ಹಂಚಿಕೆಯ ಚಲನಶೀಲತೆಯ ದೃಷ್ಟಿಕೋನದ ಪ್ರದರ್ಶನವಾಗಿದೆ ಎಂದು ಹೇಳಿದರು. ಸಂದರ್ಶಕರಿಗೆ, ಇದು ಪ್ರತಿದಿನ ತೆರೆದುಕೊಳ್ಳುತ್ತಿರುವ ಮತ್ತು ನಮ್ಮ ಎಲ್ಲಾ ಅಗತ್ಯಗಳಿಗೆ ಉತ್ತಮ ಪರಿಹಾರಗಳನ್ನು ನೀಡುವ ಚಲನಶೀಲತೆಯ ಪರಿಸರ ವ್ಯವಸ್ಥೆಯ ಅನುಭವವಾಗಿರುತ್ತದೆ. " ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ವೇದಿಕೆಯನ್ನು ಒದಗಿಸುತ್ತದೆ," ಎಂದು ಅವರು ಹೇಳಿದರು.

"ಚಲನಶೀಲತೆಯ ಜಗತ್ತನ್ನು ಅನ್ವೇಷಿಸಿ" ಎಂಬ ಧ್ಯೇಯವಾಕ್ಯದೊಂದಿಗೆ ಆಟೋ ಎಕ್ಸ್ ಪೋ -2023 ಅನ್ನು ಆಟೋಮೋಟಿವ್ ಕಾಂಪೊನೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸಿಎಂಎ), ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮತ್ತು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ (ಎಸ್ಐಎಎಂ) ಆಯೋಜಿಸಿವೆ.

ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಕಂಪನಿಗಳು ಮತ್ತು 30000 ಕ್ಕೂ ಅಧಿಕ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದೆ. " ಇದು ಭಾರತವನ್ನು ಜಾಗತಿಕ ಆರ್ಥಿಕ ಬೆಳವಣಿಗೆಯ ಎಂಜಿನ್ ಮತ್ತು ಜಾಗತಿಕ ಬಳಕೆಯ ಚಾಲಕ, ಅನುಕೂಲಕರ ಮತ್ತು ಹೂಡಿಕೆ-ಸ್ನೇಹಿ ವಾತಾವರಣ ಮತ್ತು ನುರಿತ ಕಾರ್ಯಪಡೆಯಿಂದ ಬೆಂಬಲಿತವಾಗಿ ತೋರಿಸಲು ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ," ಎಂದು ಶ್ರೀ ಹರ್ದೀಪ್ ಎಸ್. ಪುರಿ ಒತ್ತಿ ಹೇಳಿದರು.

ಎಥೆನಾಲ್ ಮಿಶ್ರಣದ ವಿಷಯದಲ್ಲಿ ಭಾರತ ಸಾಧಿಸಿದ ಪ್ರಗತಿಯ ಬಗ್ಗೆ ಮಾತನಾಡಿದ ಸಚಿವರು, ನಾವು 2013-14 ರಲ್ಲಿ ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇ.1.53 ರಿಂದ 2022 ರಲ್ಲಿ ಶೇ. 10.17 ಕ್ಕೆ ಹೆಚ್ಚಿಸಿದ್ದೇವೆ, ಇದು 2022 ರ ನವೆಂಬರ್ ಗಡುವಿನ ಮೊದಲೇ ಇದೆ ಮತ್ತು 2030 ರಿಂದ 2025-26 ರವರೆಗೆ ಪೆಟ್ರೋಲ್ ನಲ್ಲಿ ಶೇ. 20 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸುವ ಗುರಿಯನ್ನು ನಾವು ಹೆಚ್ಚಿಸಿದ್ದೇವೆ ಎಂದು ಹೇಳಿದರು. ಇದು ದೇಶದ ಇಂಧನ ಭದ್ರತೆಯನ್ನು ಹೆಚ್ಚಿಸುವುದಲ್ಲದೆ, 41,500 ಕೋಟಿ ರೂ.ಗಳಿಗೂ ಹೆಚ್ಚು ವಿದೇಶೀ ವಿನಿಮಯ ಉಳಿತಾಯಕ್ಕೆ ಅನುವಾದಿಸಿದೆ, 27 ಲಕ್ಷ ಮೆಟ್ರಿಕ್ ಟನ್ ಜಿಎಚ್ ಜಿ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಮತ್ತು ರೈತರಿಗೆ 40,600 ಕೋಟಿ ರೂ.ಗಳಿಗೂ ಹೆಚ್ಚು ತ್ವರಿತವಾಗಿ ಪಾವತಿಸುವ ಮೂಲಕ ರೈತರಿಗೆ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು.

ಭದ್ರತಾ ಠೇವಣಿ ಮೊತ್ತವನ್ನು ಶೇ.5ರಿಂದ ಶೇ.1ಕ್ಕೆ ಇಳಿಸಿ, ಸುಗಮ ವ್ಯಾಪಾರಕ್ಕಾಗಿ ಎಥೆನಾಲ್ ಪೂರೈಕೆದಾರರಿಗೆ ಸುಮಾರು 400 ಕೋಟಿ ರೂ.ಗಳ ಲಾಭವನ್ನು ವಿಸ್ತರಿಸುವ ಬಗ್ಗೆ ಮತ್ತು ಜೈವಿಕ ಇಂಧನದ ಮೇಲಿನ ಜಿಎಸ್ ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು.

ಹರಿಯಾಣದ ಪಾಣಿಪತ್ (ಪರಾಲಿ), ಪಂಜಾಬಿನ ಬಟಿಂಡಾ, ಒಡಿಶಾದ ಬಾರ್ಗಡ್ (ಪರಲಿ), ಅಸ್ಸಾಂನ ನುಮಾಲಿಗಢ (ಬಿದಿರು) ಮತ್ತು ಕರ್ನಾಟಕದ ದಾವಣಗೆರೆಯಲ್ಲಿ ಸರ್ಕಾರವು ದೇಶದಲ್ಲಿ ಐದು 2ಜಿ ಎಥೆನಾಲ್ ಜೈವಿಕ ಸಂಸ್ಕರಣಾಗಾರಗಳನ್ನು ಸ್ಥಾಪಿಸುತ್ತಿದೆ ಎಂದು ಸಚಿವರು ಹೇಳಿದರು.

"ನಾವು ಜಿ 20 ರ ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಜತೆಗೆ ಜೈವಿಕ ಇಂಧನಗಳ ಮೇಲೆ ಜಾಗತಿಕ ಮೈತ್ರಿಯನ್ನು ಸಹ ಪ್ರಾರಂಭಿಸುತ್ತಿದ್ದೇವೆ," ಎಂದು ಅವರು ಹೇಳಿದರು.

2023 ರ ಫೆಬ್ರವರಿ 6 ರಿಂದ 8 ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿರುವ ಭಾರತ ಇಂಧನ ಸಪ್ತಾಹದಲ್ಲಿ (ಐಇಡಬ್ಲ್ಯೂ) ಭಾಗವಹಿಸಲು ಇಂಧನ ವಲಯದ ಎಲ್ಲಾ ಮಧ್ಯಸ್ಥಗಾರರನ್ನು ಸಚಿವರು ತಮ್ಮ ಸಮಾರೋಪ ಭಾಷಣದಲ್ಲಿ ಆಹ್ವಾನಿಸಿದರು. ಐಇಡಬ್ಲ್ಯೂನ ಮೊದಲ ಆವೃತ್ತಿಯು "ಬೆಳವಣಿಗೆ, ಸಹಯೋಗ ಮತ್ತು ಪರಿವರ್ತನೆ" ವಿಷಯದ ಮೇಲೆ ಆಧಾರಿತವಾಗಿದೆ ಮತ್ತು 30 ಕ್ಕೂ ಹೆಚ್ಚು ಇಂಧನ ಸಚಿವರು, ಜಾಗತಿಕ ಕಂಪನಿಗಳ 50ಕ್ಕೂ ಹೆಚ್ಚು  ಸಿಇಒಗಳು, 650 ಪ್ರದರ್ಶಕರು ಮತ್ತು 30000 ಕ್ಕೂ ಅಧಿಕ ಪ್ರತಿನಿಧಿಗಳ ಹಾಜರಾತಿಯನ್ನು ನಿರೀಕ್ಷಿಸಲಾಗಿದೆ.

*****



(Release ID: 1890970) Visitor Counter : 129