ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 12 ರಂದು ಹುಬ್ಬಳ್ಳಿಯಲ್ಲಿ 26 ನೇ ರಾಷ್ಟ್ರೀಯ ಯುವ ಉತ್ಸವವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ
ಉತ್ಸವದ ವಿಷಯ: ವಿಕಸಿತ ಯುವ – ವಿಕಸಿತ ಭಾರತ
ಕೆಲಸ, ಉದ್ಯಮ ಮತ್ತು ನಾವೀನ್ಯದ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಐದು ವಿಷಯಗಳ ಚರ್ಚೆಗಳಿಗೆ ಯುವ ಶೃಂಗಸಭೆಯು ಸಾಕ್ಷಿಯಾಗಲಿದೆ : ಹವಾಮಾನ ಬದಲಾವಣೆ; ಆರೋಗ್ಯ; ಶಾಂತಿ; ಮತ್ತು ಭವಿಷ್ಯದ ಯುವಶಕ್ತಿಯ ಹಂಚಿಕೊಳ್ಳುವಿಕೆ
ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಗಳಿಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ
ಯೋಗಥಾನ್ - - ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಸುಮಾರು 10 ಲಕ್ಷ ಜನರನ್ನು ಯೋಗ ಮಾಡಲು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ
ಎಂಟು ಸ್ಥಳೀಯ ಕ್ರೀಡೆಗಳು ಮತ್ತು ಸಮರ ಕಲೆಗಳನ್ನು ರಾಷ್ಟ್ರ ಮಟ್ಟದ ಪ್ರದರ್ಶಕರು ಪ್ರಸ್ತುತಪಡಿಸುತ್ತಾರೆ
Posted On:
10 JAN 2023 3:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 12, 2023ರಂದು ಸಂಜೆ 4 ಗಂಟೆಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ 26 ನೇ ರಾಷ್ಟ್ರೀಯ ಯುವ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನದಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದಂದು ಅವರ ಆದರ್ಶಗಳು, ಬೋಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಮತ್ತು ಪಾಲಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರಮಟ್ಟದಲ್ಲಿ ನಮ್ಮ ಪ್ರತಿಭಾವಂತ ಯುವಕರಿಗೆ ಮಾನ್ಯತೆ ನೀಡಲು, ರಾಷ್ಟ್ರ ನಿರ್ಮಾಣದತ್ತ ಅವರನ್ನು ಪ್ರೇರೇಪಿಸಲು ಪ್ರತಿ ವರ್ಷ ರಾಷ್ಟ್ರೀಯ ಯುವ ಉತ್ಸವವನ್ನು ನಡೆಸಲಾಗುತ್ತದೆ. ಇದು ದೇಶದ ಎಲ್ಲ ಭಾಗಗಳಿಂದ ವೈವಿಧ್ಯಮಯ ಸಂಸ್ಕೃತಿಗಳನ್ನು ಸಾಮಾನ್ಯ ವೇದಿಕೆಯ ಮೇಲೆ ತರುತ್ತದೆ ಮತ್ತು ʼಏಕ ಭಾರತ, ಶ್ರೇಷ್ಠ ಭಾರತʼದ ಚೈತನ್ಯದೊಂದಿಗೆ ಭಾಗವಹಿಸುವವರನ್ನು ಒಂದುಗೂಡಿಸುತ್ತದೆ. ಈ ವರ್ಷ ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ “ವಿಕಸಿತ ಯುವ - ವಿಕಸಿತ ಭಾರತ” ಎನ್ನುವ ವಿಷಯದೊಂದಿಗೆ ಉತ್ಸವವನ್ನು ಆಯೋಜಿಸಲಾಗಿದೆ.
ಉತ್ಸವವು ಯುವ ಶೃಂಗಸಭೆಗೆ ಸಾಕ್ಷಿಯಾಗಲಿದ್ದು, ಇದು ಜಿ20 ಮತ್ತು ವೈ20 ಕಾರ್ಯಕ್ರಮಗಳಿಂದ ಉಂಟಾಗುವ ಐದು ವಿಷಯಗಳ ಕುರಿತು ಸಮಗ್ರ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಕೆಲಸದ ಭವಿಷ್ಯ, ಉದ್ಯಮ, ನಾವೀನ್ಯ ಮತ್ತು 21 ನೇ ಶತಮಾನದ ಕೌಶಲ್ಯಗಳು; ಹವಾಮಾನ ಬದಲಾವಣೆ ಮತ್ತು ವಿಪತ್ತಿನ ಅಪಾಯಗಳ ಕಡಿತ; ಶಾಂತಿ ನಿರ್ಮಾಣ ಮತ್ತು ಸಮನ್ವಯ; ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಭವಿಷ್ಯದ ಯುವಕ ಶಕ್ತಿಯ ಹಂಚಿಕೆ; ಹಾಗು ಆರೋಗ್ಯ ಮತ್ತು ಯೋಗಕ್ಷೇಮ. ಶೃಂಗಸಭೆಯು ಅರವತ್ತಕ್ಕೂ ಹೆಚ್ಚು ಪ್ರಖ್ಯಾತ ತಜ್ಞರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಹಲವಾರು ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ಕಾರ್ಯಕ್ರಮಗಳು ಸಹ ನಡೆಯಲಿವೆ. ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜಾನಪದ ನೃತ್ಯಗಳು ಮತ್ತು ಹಾಡುಗಳನ್ನು ಒಳಗೊಂಡಿರುತ್ತವೆ ಮತ್ತು ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಗಳಿಗೆ ಹೆಚ್ಚುಒತ್ತುನೀಡುತ್ತವೆ. ಸ್ಪರ್ಧಾತ್ಮಕವಲ್ಲದ ಕಾರ್ಯಕ್ರಮಗಳು ಯೋಗಥಾನ್ ಅನ್ನು ಒಳಗೊಂಡಿದೆ, ಇದು ಯೋಗ ಮಾಡಲು ಸುಮಾರು 10 ಲಕ್ಷ ಜನರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಮಟ್ಟದ ಪ್ರದರ್ಶಕರಿಂದ ಎಂಟು ಸ್ಥಳೀಯ ಕ್ರೀಡೆಗಳು ಮತ್ತು ಸಮರ ಕಲೆಗಳನ್ನು ಕಾರ್ಯುಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಇತರ ಆಕರ್ಷಣೆಗಳಾದ ಆಹಾರೋತ್ಸವ, ಯುವ ಕಲಾವಿದರ ಶಿಬಿರ, ಸಾಹಸ ಕ್ರೀಡಾ ಚಟುವಟಿಕೆಗಳು, ವಿಶೇಷ ಕಾರ್ಯಕ್ರಮವಾದ ನಿಮ್ಮ ರಕ್ಷಣಾ ದಳದ ಬಗ್ಗೆ ತಿಳಿಯಿರಿ ಎನ್ನುವ ( ನೋ ಯುವರ್ ಆರ್ಮಿ , ನೇವಿ ಏರ್ ಫೋರ್ಸ್) ಸೇನೆ, ನೌಕಾಪಡೆ ಮತ್ತು ವಾಯುಪಡೆ ಶಿಬಿರಗಳು ಇರುತ್ತವೆ.
*****
(Release ID: 1890042)
Visitor Counter : 255
Read this release in:
Assamese
,
Malayalam
,
Gujarati
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Telugu