ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಬ್ಲಾಕ್‌ಗಳ ವಾಣಿಜ್ಯ ಹರಾಜಿಗೆ ಬಿಡ್‌ಗಳನ್ನು 2023ರ ಜನವರಿ 13 ರವರೆಗೆ ಸಲ್ಲಿಸಬಹುದು
Posted On:
10 JAN 2023 9:07AM by PIB Bengaluru
ಕಲ್ಲಿದ್ದಲು ಸಚಿವಾಲಯವು 2022 ರ ನವೆಂಬರ್ 03 ರಂದು 141 ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನ 5 ನೇ ಹಂತದ 6 ನೇ ಕಂತಿನ ಎರಡನೇ ಪ್ರಯತ್ನವನ್ನು ಪ್ರಾರಂಭಿಸಿದೆ. ಹೂಡಿಕೆದಾರ ಸಮುದಾಯದ ವಿವಿಧ ಬೇಡಿಕೆಗಳನ್ನು ಪರಿಗಣಿಸಿ ನಡೆಯುತ್ತಿರುವ ಈ ಕಂತಿನ ಅಡಿಯಲ್ಲಿ ಕಲ್ಲಿದ್ದಲು ಗಣಿಗಳನ್ನು ಆಯ್ಕೆ ಮಾಡಲಾಗಿದೆ; ಕೆಲವು ಕಲ್ಲಿದ್ದಲು ಗಣಿಗಳನ್ನು ಉದ್ಯಮದ ಹಿಮ್ಮಾಹಿತಿಯ ಆಧಾರದ ಮೇಲೆ ಅವುಗಳ ಗಾತ್ರವನ್ನು ಮರುಹೊಂದಾಣಿಕೆ ಮಾಡಲಾಗಿದೆ.
ನಿಗದಿತ ಕಾಲಮಿತಿಗಳಿಗೆ ಅನುಗುಣವಾಗಿ ಬಿಡ್‌ದಾರರು ತಮ್ಮ ಬಿಡ್‌ಗಳನ್ನು ಆನ್‌ಲೈನ್‌ನಲ್ಲಿ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್‌ನಲ್ಲಿ 2023ರ ಜನವರಿ 13, ರವರೆಗೆ 12:00 ಗಂಟೆಗಳ ಒಳಗೆ ಮತ್ತು ಭೌತಿಕವಾಗಿ ಅದೇ ದಿನ 16:00 ಗಂಟೆಯ ಒಳಗೆ ಸಲ್ಲಿಸಬಹುದು. ಬಿಡ್‌ಗಳನ್ನು ಸೋಮವಾರ, 2023ರ ಜನವರಿ 16 ರಂದು 10:00 ಗಂಟೆಗೆ ಬಿಡ್‌ದಾರರ ಪ್ರತಿನಿಧಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ.
*****
(Release ID: 1889970)
Visitor Counter : 125