ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪರೀಕ್ಷಾ ಪೆ ಚರ್ಚಾ-2023ರ ತಯಾರಿ ಬಗ್ಗೆ ಪರಾಮರ್ಶೆ ನಡೆಸಿದ ಶ್ರೀ ಧರ್ಮೇಂದ್ರ ಪ್ರಧಾನ್ 

Posted On: 09 JAN 2023 3:54PM by PIB Bengaluru

ಪರೀಕ್ಷಾ ಪೆ ಚರ್ಚಾ-2023(PPC 2023 ) ಸಂವಾದ ಕಾರ್ಯಕ್ರಮ ಕುರಿತು ಮತ್ತು ಅದರ ಸಿದ್ಧತೆ ಬಗ್ಗೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲ ಇಲಾಖೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಇಲಾಖೆ ರಾಜ್ಯ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಡಾ ಸುಭಾಷ್ ಸರ್ಕಾರ್ ಅವರೊಂದಿಗೆ ಅವಲೋಕನ ನಡೆಸಿದರು. 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DoSEL) ಕಾರ್ಯದರ್ಶಿ ಶ್ರೀ. ಸಂಜಯ್ ಕುಮಾರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಶಿಕ್ಷಣ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಪ್ರೆಸ್ ಇನ್ಫರ್ಮೇಶನ್ ಬ್ಯೂರೋ, ಎನ್ ಸಿಇಆರ್ ಟಿ, ಸಿಬಿಎಸ್ ಇ, ಎನ್ ವಿಎಸ್, ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಮೈ ಗವರ್ಮೆಂಟ್ (MyGov) ನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪರೀಕ್ಷಾ ಪೆ ಚರ್ಚಾ 2023ಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಒಳಗೊಳ್ಳುವಿಕೆ ಬಗ್ಗೆ ಇನ್ನಷ್ಟು ವ್ಯಾಪಕವಾಗಿ ವಿಸ್ತರಿಸುವಂತೆ ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಡೆಸಿಕೊಡುತ್ತಿರುವ ಪರೀಕ್ಷಾ ಪೆ ಚರ್ಚಾ ಸಂವಾದವು, ಪರೀಕ್ಷೆಗಿಂತ ಮೊದಲು ವಿದ್ಯಾರ್ಥಿ ಸಮುದಾಯಕ್ಕೆ ಶಕ್ತಿ ಮತ್ತು ಸ್ಫೂರ್ತಿಯನ್ನು ತುಂಬುತ್ತದೆ ಎಂದು ಶ್ರೀ ಪ್ರಧಾನ್ ಹೇಳಿದರು.

****


(Release ID: 1889816) Visitor Counter : 211