ನೌಕಾ ಸಚಿವಾಲಯ

ಭಾರತದಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮಕ್ಕೆ ನಾಂದಿಹಾಡಲಿರುವ ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ 'ಗಂಗಾ ವಿಲಾಸ್': ಶ್ರೀ ಸರ್ಬಾನಂದ ಸೋನೊವಾಲ್


• ಜನವರಿ 13ರಂದು ವಾರಣಾಸಿಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಹಸಿರು ನಿಶಾನೆ

• ಇಂಡೋ ಬಾಂಗ್ಲಾದೇಶ ಶಿಷ್ಟಾಚಾರ ಮಾರ್ಗವಾಗಿ ಉತ್ತರಪ್ರದೇಶದ ವಾರಣಾಸಿಯಿಂದ ಅಸ್ಸಾಂನ ದಿಬ್ರುಗಡ್ ವರೆಗೆ 3,200 ಕಿ.ಮೀ ದೂರವನ್ನು ಕ್ರಮಿಸಿ, 50 ಪ್ರವಾಸಿ ತಾಣಗಳನ್ನು ಒಳಗೊಂಡ 27 ವಿವಿಧ ನದಿ ವ್ಯವಸ್ಥೆಗಳ ಮೂಲಕ ಸಂಚರಿಸಲಿರುವ ಹಡಗು

• ಎಂ.ವಿ. ಗಂಗಾ ವಿಲಾಸ ಭಾರತವನ್ನು ವಿಶ್ವದ ರಿವರ್ ಕ್ರೂಸ್ ನಕ್ಷೆಯಲ್ಲಿ ಸೇರಿಸಲಿದೆ: ಶ್ರೀ ಸೋನೊವಾಲ್

Posted On: 08 JAN 2023 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಜನವರಿ 13ರಂದು ವಾರಾಣಸಿಯಲ್ಲಿ ಚಾಲನೆ ನೀಡಲಿರುವ ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಎಂ.ವಿ.ಗಂಗಾ ವಿಲಾಸ ಕ್ರೂಸ್, ಭಾರತಕ್ಕೆ ರಿವರ್ ಕ್ರೂಸ್ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಮತ್ತು ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ. ಐಷಾರಾಮಿಯಾದ ಈ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ 27 ನದಿ ವ್ಯವಸ್ಥೆಗಳಲ್ಲಿ 3,200 ಕಿ.ಮೀ.ಗಿಂತಲೂ ಹೆಚ್ಚು ದೂರವನ್ನು ಕ್ರಮಿಸಲಿದೆ. ಈ ಸೇವೆಯ ಪ್ರಾರಂಭದೊಂದಿಗೆ ರಿವರ್ ಕ್ರೂಸ್ ನ ಬಳಕೆಯಾಗದ ಅಗಾಧ ಸಾಮರ್ಥ್ಯವು ಅನಾವರಣಗೊಳ್ಳಲು ಸಜ್ಜಾಗಿದೆ ಎಂದು ಶ್ರೀ ಸೋನೊವಾಲ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೋನೊವಾಲ್, "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ, ನಮ್ಮ ಶ್ರೀಮಂತ ಜಲ ವ್ಯವಸ್ಥೆಯಿಂದ ಪಡೆಯಬೇಕಾದ ಅಪಾರ ಸಂಪತ್ತನ್ನು ನಾವು ಅನ್ವೇಷಿಸುತ್ತಿದ್ದೇವೆ. ಒಳನಾಡು ಜಲಮಾರ್ಗಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ಈ ಮಾರ್ಗವು ಅಪಾರವಾದ ಉತ್ತೇಜನವನ್ನು ಪಡೆದಿದೆ, ಏಕೆಂದರೆ ಸರಕು ಸಾಗಣೆ ಮತ್ತು ಪ್ರಯಾಣಿಕರ ಪ್ರವಾಸೋದ್ಯಮವನ್ನು ಹೆಚ್ಚಿಸುವ ಪ್ರಯತ್ನಗಳು ಉತ್ತೇಜನಕಾರಿ ಫಲಿತಾಂಶಗಳೊಂದಿಗೆ ಫಲ ನೀಡಿವೆ. ಎಂ.ವಿ. ಗಂಗಾ ವಿಲಾಸ್ ಕ್ರೂಸ್ ದೇಶದಲ್ಲಿ ನೀಡಬೇಕಾದ ಬೃಹತ್ ಸಂಭಾವ್ಯ ನದಿ ಪ್ರವಾಸೋದ್ಯಮವನ್ನು ಅನಾವರಣಗೊಳ್ಳುವತ್ತ ಒಂದು ಹೆಜ್ಜೆಯಾಗಿದೆ. ಪ್ರವಾಸಿಗರು ಭಾರತದ ಜೀವವೈವಿಧ್ಯತೆಯ ಆಧ್ಯಾತ್ಮಿಕ, ಶೈಕ್ಷಣಿಕ, ಸ್ವಾಸ್ಥ್ಯ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನುಭವಿಸಲು ಸಾಧ್ಯವಾಗುವುದರಿಂದ ನಮ್ಮ ಶ್ರೀಮಂತ ಪರಂಪರೆಯು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಮೆರೆಯುತ್ತದೆ. ಕಾಶಿಯಿಂದ ಸಾರಾನಾಥ್ ವರೆಗೆ, ಮಜುಲಿಯಿಂದ ಮಯೋಂಗ್ ವರೆಗೆ, ಸುಂದರ್ಬನ್ಸ್ ನಿಂದ ಕಾಜಿರಂಗದವರೆಗೆ, ಈ ಕ್ರೂಸ್ ಜೀವಮಾನದ ಅಪೂರ್ವ ಅನುಭವವನ್ನು ನೀಡಲಿದೆ. ಪ್ರಧಾನಿ ಮೋದಿಯವರ ಮಾರ್ಗದರ್ಶನದ ಈ ಅದ್ಭುತ ಉಪಕ್ರಮವು ಭಾರತದಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮದಲ್ಲಿ ಹೊಸ ಯುಗದ ಆರಂಭವಾಗಿದೆ ಮತ್ತು ನೀತಿ ಮತ್ತು ಆಚರಣೆಯ ಮೂಲಕ ಆಕ್ಟ್ ಈಸ್ಟ್ ಅನ್ನು ಸಕ್ರಿಯಗೊಳಿಸುವ ನಮ್ಮ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.

ದೇಶದ ಉತ್ಕೃಷ್ಟತೆಯನ್ನು ಹೊರಹೊಮ್ಮಿಸಲು, ಎಂ.ವಿ. ಗಂಗಾ ವಿಲಾಸ ಕ್ರೂಸ್ ಅನ್ನು ಜಗತ್ತಿಗೆ ಪ್ರದರ್ಶಿಸಲು ಅಣಿಯಾಗಿಸಲಾಗಿದೆ. ವಿಶ್ವ ಪಾರಂಪರಿಕ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್ ನ ಸಾಹಿಬ್ಗಂಜ್, ಪಶ್ಚಿಮ ಬಂಗಾಳದ ಕೋಲ್ಕತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳವರೆಗೆ ಈ ಕ್ರೂಸ್ ಅನ್ನು ಆಯೋಜಿಸಲಾಗಿದೆ. ಎಂ.ವಿ. ಗಂಗಾ ವಿಲಾಸ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 1.4 ಮೀಟರ್ ಡ್ರಾಫ್ಟ್ ನೊಂದಿಗೆ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್ ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್ ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಹಡಗನ್ನು ಮಾಲಿನ್ಯ ಮುಕ್ತ ಕಾರ್ಯವಿಧಾನಗಳು ಮತ್ತು ಶಬ್ದ ನಿಯಂತ್ರಣ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಂಡಿರುವುದರಿಂದ, ಇದು ಮೂಲತಃ ಸುಸ್ಥಿರ ತತ್ವಗಳನ್ನು ಅನುಸರಿಸುತ್ತದೆ. ಎಂ.ವಿ. ಗಂಗಾ ವಿಲಾಸದ ಮೊದಲ ಪ್ರಯಾಣವು ಸ್ವಿಟ್ಜರ್ ಲ್ಯಾಂಡ್ ನ 32 ಪ್ರವಾಸಿಗರು ವಾರಣಾಸಿಯಿಂದ ದಿಬ್ರುಗಢದವರೆಗಿನ ಪ್ರಯಾಣವನ್ನು ಆನಂದಿಸಲು ಸಾಕ್ಷಿಯಾಗಲಿದೆ. ದಿಬ್ರುಗಢಕ್ಕೆ ಎಂ.ವಿ. ಗಂಗಾ ವಿಲಾಸ್ ಆಗಮನದ ನಿರೀಕ್ಷಿತ ದಿನಾಂಕವು 2023ರ ಮಾರ್ಚ್ 1 ಆಗಿದೆ.

ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿನ ನಿಲ್ದಾಣಗಳನ್ನು ಒಳಗೊಂಡ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ಎಂ.ವಿ. ಗಂಗಾ ವಿಲಾಸ ಪ್ರವಾಸವನ್ನು ಸಜ್ಜುಗೊಳಿಸಲಾಗಿದೆ. ವಾರಣಾಸಿಯ ಪ್ರಸಿದ್ಧ "ಗಂಗಾ ಆರತಿ"ಯಿಂದ, ಇದು ಬೌದ್ಧ ಧರ್ಮದ ಬಗ್ಗೆ ಅಪಾರ ಶ್ರದ್ದಾ ಗೌರವದ ಸ್ಥಳವಾದ ಸಾರನಾಥದಲ್ಲಿ ನಿಲ್ಲುತ್ತದೆ. ಇದು ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಅಸ್ಸಾಂನ ವೈಷ್ಣವ ಸಾಂಸ್ಕೃತಿಕ ಕೇಂದ್ರವಾದ ಅತಿದೊಡ್ಡ ದ್ವೀಪ ಕೇಂದ್ರವಾದ ಮಜುಲಿಯನ್ನು ಸಹ ತಲುಪುತ್ತದೆ. ಪ್ರವಾಸಿಗರು ಬಿಹಾರ ಸ್ಕೂಲ್ ಆಫ್ ಯೋಗ ಮತ್ತು ವಿಕ್ರಂಶಿಲಾ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡಲಿದ್ದು, ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ಶ್ರೀಮಂತ ಭಾರತೀಯ ಪರಂಪರೆಯನ್ನು ಅನುಭವಿಸಲು ಅನುವು ಮಾಡಿಕೊಡಲಾಗಿದೆ. ರಾಯಲ್ ಬೆಂಗಾಲ್ ಹುಲಿಗಳಿಗೆ ಹೆಸರುವಾಸಿಯಾದ ಬಂಗಾಳ ಕೊಲ್ಲಿಯ ಡೆಲ್ಟಾದ ಜೀವವೈವಿಧ್ಯ ಶ್ರೀಮಂತ ವಿಶ್ವ ಪರಂಪರೆಯ ತಾಣಗಳಾದ ಸುಂದರ್ಬನ್ಸ್ ಮತ್ತು ಒಂದೇ ಕೊಂಬಿನ ಘೇಂಡಾಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಈ ಹಡಗು ಸಂಚರಿಸಲಿದೆ.

ದೇಶದಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಸೋನೊವಾಲ್, ಈ ಕ್ಷೇತ್ರದ ಅಭಿವೃದ್ಧಿಯು ಒಳನಾಡಿನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮದ ಯಶಸ್ಸಿಗಾಗಿ ಅನುಕೂಲ ಸಾಮರ್ಥ್ಯವನ್ನು ನಿರ್ಮಿಸಲು ಸರ್ಕಾರವು ಬಂಡವಾಳ ವೆಚ್ಚವನ್ನು ಮಾಡುತ್ತಿದೆ ಎಂದು ಹೇಳಿದರು. ದೇಶದಲ್ಲಿ ಈ ವಿಭಾಗದ ಗರಿಷ್ಠ ಮಾನ್ಯತೆ ಮತ್ತು ತ್ವರಿತ ಅಭಿವೃದ್ಧಿಗಾಗಿ ನದಿ ಪ್ರವಾಸೋದ್ಯಮ ಸರ್ಕ್ಯೂಟ್ ಗಳನ್ನು ಅಭಿವೃದ್ಧಿಪಡಿಸಿ ಅಸ್ತಿತ್ವದಲ್ಲಿರುವ ಪ್ರವಾಸೋದ್ಯಮ ಸರ್ಕ್ಯೂಟ್ ಗಳೊಂದಿಗೆ ಸಂಯೋಜಿಸಲಾಗುವುದು ಎಂದು ಅವರು ಹೇಳಿದರು.

ಎಂ.ವಿ. ಗಂಗಾ ವಿಲಾಸ್ ಹಡಗು ಈ ರೀತಿಯ ಪ್ರಯತ್ನದ ಮೊದಲ ಬಾರಿಯ ಹಡಗು ಸೇವೆಯಾಗಿದೆ. ಹಡಗು, ಬಂದರುಗಳು ಮತ್ತು ಜಲಸಾರಿಗೆ ಸಚಿವಾಲಯದ (ಎಂ.ಒ.ಪಿ.ಎಸ್.ಡಬ್ಲ್ಯೂ) ಅಡಿಯಲ್ಲಿ ಬರುವ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರದ (ಐ.ಡಬ್ಲ್ಯೂ.ಎ.ಐ) ಬೆಂಬಲದೊಂದಿಗೆ, ಈ ಸೇವೆಯ ಯಶಸ್ಸು ದೇಶದ ಇತರ ಭಾಗಗಳಲ್ಲಿ ನದಿ ವಿಹಾರವನ್ನು ಉತ್ತೇಜಿಸಲು ಉದ್ಯಮಿಗಳನ್ನು ಉತ್ತೇಜಿಸುವ ಸಾಧ್ಯತೆಯಿದೆ.

ಜಾಗತಿಕ ರಿವರ್ ಕ್ರೂಸ್ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ಶೇಕಡಾ 5%ರಷ್ಟು ಬೆಳೆದಿದೆ ಮತ್ತು 2027ರ ವೇಳೆಗೆ ಕ್ರೂಸ್ ಮಾರುಕಟ್ಟೆಯ ಶೇಕಡಾ 37%ರಷ್ಟನ್ನು ಹೊಂದುವ ನಿರೀಕ್ಷೆಯಿದೆ. ವಿಶ್ವದಲ್ಲಿ ಸುಮಾರು 60% ರಷ್ಟು ರಿವರ್ ಕ್ರೂಸ್ ಬೆಳವಣಿಗೆಯೊಂದಿಗೆ ಯುರೋಪ್ ಈ ಬೆಳವಣಿಗೆಯಲ್ಲಿ ಮುನ್ನುಗ್ಗುತ್ತಿದೆ. ಭಾರತದಲ್ಲಿ, ಕೋಲ್ಕತಾ ಮತ್ತು ವಾರಣಾಸಿ ನಡುವೆ 8 ರಿವರ್ ಕ್ರೂಸ್ ಹಡಗುಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಜಲಮಾರ್ಗ-2 (ಬ್ರಹ್ಮಪುತ್ರ) ನದಿಯಲ್ಲಿಯೂ ಕ್ರೂಸ್ ಕಾರ್ಯನಿರ್ವಹಿಸುತ್ತಿವೆ. ರಿವರ್ ರಾಫ್ಟಿಂಗ್, ಕ್ಯಾಂಪಿಂಗ್, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಕಯಾಕಿಂಗ್ ಮುಂತಾದ ಪ್ರವಾಸೋದ್ಯಮ ಚಟುವಟಿಕೆಗಳು ದೇಶದ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಜಲಮಾರ್ಗ-2ರ ಉದ್ದಕ್ಕೂ 10 ಪ್ರಯಾಣಿಕರ ಟರ್ಮಿನಲ್ ಗಳ ನಿರ್ಮಾಣ ನಡೆಯುತ್ತಿದ್ದು, ಇದು ರಿವರ್ ಕ್ರೂಸ್ ನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪ್ರಸ್ತುತ, ನಾಲ್ಕು ರಿವರ್ ಕ್ರೂಸ್ ಹಡಗುಗಳು ರಾಷ್ಟ್ರೀಯ ಜಲಮಾರ್ಗ-2ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಜಲಮಾರ್ಗ-3 (ವೆಸ್ಟ್ ಕೋಸ್ಟ್ ಕೆನಾಲ್), ರಾಷ್ಟ್ರೀಯ ಜಲಮಾರ್ಗ-8, ರಾಷ್ಟ್ರೀಯ ಜಲಮಾರ್ಗ-4, ರಾಷ್ಟ್ರೀಯ ಜಲಮಾರ್ಗ-87, ರಾಷ್ಟ್ರೀಯ ಜಲಮಾರ್ಗ-97 ಮತ್ತು ರಾಷ್ಟ್ರೀಯ ಜಲಮಾರ್ಗ-5ರಲ್ಲಿ ಸೀಮಿತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಳನಾಡು ಜಲಮಾರ್ಗಗಳ ಸಾಮರ್ಥ್ಯವನ್ನು ಹೆಚ್ಚಿಸಲು ಬಂಡವಾಳವನ್ನು ಭರಿಸುವುದರೊಂದಿಗೆ, ನದಿ ವಿಹಾರವು ಆರ್ಥಿಕತೆಗೆ, ವಿಶೇಷವಾಗಿ ನದಿ ದಡಗಳಲ್ಲಿ ವ್ಯವಸ್ಥಿತವಾದ ಮುನ್ನಡೆ ಮತ್ತು ಹಿನ್ನಡೆ ಸಂಪರ್ಕದೊಂದಿಗೆ ಮತ್ತಷ್ಟು ಅಭಿವೃದ್ದಿ ಹೊಂದಲು ಸಜ್ಜಾಗಿದೆ.

****(Release ID: 1889595) Visitor Counter : 206