ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಸಾಮಾಜಿಕ ವಲಯದ ಮೂಲಸೌಕರ್ಯಕ್ಕೆ ಸಂಬಂಧಿಸಿದ ದತ್ತಾಂಶ ಪದರಗಳ ಪಿಎಂ ಗತಿಶಕ್ತಿ ನಕ್ಷೆ
Posted On:
07 JAN 2023 2:34PM by PIB Bengaluru
ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ, ಗ್ರಾಮ ಪಂಚಾಯಿತಿಗಳು, ಪುರಸಭಾ ನಿಗಮ, ಸಮಾಜ ಕಲ್ಯಾಣ ವಸತಿ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಮುಖ ಸ್ವತ್ತುಗಳ ದತ್ತಾಂಶ ಪದರಗಳನ್ನು ನಕ್ಷೆ ಮಾಡಲಾಗುತ್ತಿದೆ ಮತ್ತು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಯೋಜನೆಯಲ್ಲಿ ಪಿಎಂ ಗತಿಶಕ್ತಿ ತತ್ವಗಳ ಗರಿಷ್ಠ ಬಳಕೆಗಾಗಿ ದತ್ತಾಂಶ ದೃಢೀಕರಣವನ್ನು ಮಾಡಲಾಗುತ್ತಿದೆ.
ನವದೆಹಲಿಯ ವಾಣಿಜ್ಯ ಭವನದಲ್ಲಿ ಡಿಪಿಐಐಟಿಯ ವಿಶೇಷ ಕಾರ್ಯದರ್ಶಿ (ಲಾಜಿಸ್ಟಿಕ್ಸ್) ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ವಲಯದ ಸಚಿವಾಲಯಗಳು / ಇಲಾಖೆಗಳ ಆನ್ ಬೋರ್ಡಿಂಗ್ (ಹೊಸದಾಗಿ ಸೇರ್ಪಡೆಗೊಂಡವರಿಗೆ ಆಯಾ ಇಲಾಖೆಗಳ ಪರಿಚಯ) ಕುರಿತ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು.
ಸಭೆಯಲ್ಲಿ ನಗರ ವ್ಯವಹಾರಗಳ ವಸತಿ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಪಂಚಾಯತ್ ರಾಜ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಅಂಚೆ ಇಲಾಖೆ ಮತ್ತು ಬಿಎಸ್ಎಜಿ-ಎನ್ ಭಾಗವಹಿಸಿದ್ದವು. 12 ಸಚಿವಾಲಯಗಳು / ಇಲಾಖೆಗಳನ್ನು ಪರಿಚಯಿಸಲಾಯಿತು. ಶಾಲೆಗಳು, ಆಸ್ಪತ್ರೆಗಳು ಮತ್ತು ಅಂಗನವಾಡಿ ಕೇಂದ್ರಗಳು ಇತ್ಯಾದಿಗಳಂತಹ ಪ್ರಮುಖ ಪದರಗಳನ್ನು ಒಳಗೊಂಡಿರುವ ಎನ್ಎಂಪಿ ವೇದಿಕೆಯಲ್ಲಿ ದತ್ತಾಂಶ ಏಕೀಕರಣದ ಅಂತಿಮ ಹಂತಗಳಲ್ಲಿವೆ.
ಸಾಮಾಜಿಕ ವಲಯದ ಸಚಿವಾಲಯಗಳು/ ಇಲಾಖೆಗಳು ಎನ್ಎಂಪಿಯನ್ನು ಅಳವಡಿಸಿಕೊಳ್ಳುವ ಅನುಕೂಲಗಳ ಜತೆಗೆ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಯೋಜನಾ ಸಲಕರಣೆಗಳು, ಮಾದರಿ ಶಾಲೆಗಳಿಗೆ ಸಂಪರ್ಕ ಮತ್ತು ವಿಪತ್ತು ನಿರ್ವಹಣಾ ಯೋಜನೆಯಂತಹ ಪ್ರಕರಣಗಳ ಬಳಕೆಯಂತಹ ಪ್ರಕರಣಗಳ ಬಗ್ಗೆ ಬಿಎಸ್ಎಜಿ-ಎನ್ ಪ್ರಸ್ತುತಿಯನ್ನು ನೀಡಿತು.
ಸಚಿವಾಲಯಗಳು/ಇಲಾಖೆಗಳು ಗತಿಶಕ್ತಿಯನ್ನು ಅಳವಡಿಸಿಕೊಳ್ಳುವ ಪ್ರಗತಿ, ಎನ್.ಎಂ.ಪಿ. ಪ್ಲಾಟ್ ಫಾರ್ಮ್ ನಲ್ಲಿ ಸಂಯೋಜಿಸಬಹುದಾದ ದತ್ತಾಂಶ ಪದರಗಳು ಮತ್ತು ಏಕೀಕರಣ ಪ್ರಕ್ರಿಯೆಯಲ್ಲಿ ಸಚಿವಾಲಯಗಳು/ ಇಲಾಖೆಗಳು ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತುತಪಡಿಸಿದವು.
ಪ್ರಾತ್ಯಕ್ಷಿಕೆಗಳ ನಂತರ ಭಾಗವಹಿಸುವವರೊಂದಿಗೆ ಚರ್ಚೆಗಳು ನಡೆದವು, ಆಸಕ್ತಿದಾಯಕ ಮತ್ತು ಸಾಮಾಜಿಕ-ಆರ್ಥಿಕವಾಗಿ ಉಪಯುಕ್ತವಾದ ವಿಚಾರಗಳನ್ನು ರಚಿಸಲಾಯಿತು, ಉದಾಹರಣೆಗೆ, ಪ್ರವೇಶಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕೇಂದ್ರಗಳ ನಕ್ಷೆ, ಉದ್ಯಮದೊಂದಿಗೆ ಸಂಪರ್ಕವನ್ನು ಉತ್ತೇಜಿಸಲು ಹೊಸ ತಾಂತ್ರಿಕ ಸಂಸ್ಥೆಯನ್ನು ಸ್ಥಾಪಿಸಲು ಸ್ಥಳದ ಮೌಲ್ಯಮಾಪನ, ಶಾಲೆಗಳ ಸ್ಥಳಗಳನ್ನು ವಿಶ್ಲೇಷಿಸುವುದು ಮತ್ತು ಯಾವುದೇ ಸಂಪರ್ಕ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಇತ್ಯಾದಿ.
*****
(Release ID: 1889398)
Visitor Counter : 173