ಸಂಪುಟ

15ನೇ ಹಣಕಾಸು ಆಯೋಗದ ಬಾಕಿ ಅವಧಿಗೆ (2022-23 ರಿಂದ 2025-26) ರೂ.12882.2 ಕೋಟಿ ವೆಚ್ಚದಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಯೋಜನೆಗಳ ಮುಂದುವರಿಕೆಗೆ ಸಂಪುಟ ಅನುಮೋದನೆ ನೀಡಿದೆ.

Posted On: 05 JAN 2023 4:08PM by PIB Bengaluru

 

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಚಿವ ಸಂಪುಟವು 15ನೇ ಹಣಕಾಸು ಆಯೋಗದ ಬಾಕಿ ಅವಧಿಗೆ (2022-23 ರಿಂದ 2025-26) ₹ 12882.2 ಕೋಟಿ ವೆಚ್ಚದಲ್ಲಿ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಯೋಜನೆಗಳ ಮುಂದುವರಿಕೆಗೆ ಅನುಮೋದನೆ ನೀಡಿದೆ.

ವೆಚ್ಚ ಹಣಕಾಸು ಸಮಿತಿ (ಇ.ಎಫ್.ಸಿ) ಶಿಫಾರಸುಗಳ ಆಧಾರದ ಮೇಲೆ, ಈಶಾನ್ಯ ವಿಶೇಷ ಮೂಲಸೌಕರ್ಯ ಯೋಜನೆಗೆ (ಎನ್.ಇ.ಎಸ್.ಐ.ಡಿ.ಎಸ್.) ವೆಚ್ಚವು ರೂ.8139.5 ಕೋಟಿಗಳಾಗಿದ್ದು, ಚಾಲ್ತಿಯಲ್ಲಿರುವ ಯೋಜನೆಗಳ ಬದ್ಧ ಹೊಣೆಗಾರಿಕೆಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ನಡೆಯುತ್ತಿರುವ ಯೋಜನೆಗಳ ಬದ್ಧ ಹೊಣೆಗಾರಿಕೆಗಳನ್ನು ಒಳಗೊಂಡಂತೆ ‘ಎನ್.ಇ.ಸಿ.ಯ ಯೋಜನೆಗಳಿಗೆ’ಒಟ್ಟು ರೂ. 3202.7 ಕೋಟಿ ವೆಚ್ಚವಾಗುತ್ತದೆ. ಅಸ್ಸಾಂನಲ್ಲಿ ಬಿ.ಟಿ.ಸಿ, ಡಿ.ಹೆಚ್.ಎ.ಸಿ., ಮತ್ತು ಕೆ.ಎ.ಎ.ಟಿ.ಸಿಗಾಗಿ ವಿಶೇಷ ಪ್ಯಾಕೇಜ್ ಗಳ ವೆಚ್ಚವು ರೂ.1540 ಆಗಿರುತ್ತದೆ (ಬಿಟಿಸಿ - ರೂ. 500 ಕೋಟಿ, ಕೆ.ಎ.ಎ.ಟಿ.ಸಿ - ರೂ. 750 ಕೋಟಿ ಮತ್ತು ಬಿಟಿಸಿ, ಡಿ.ಹೆಚ್.ಎ.ಸಿ., ಮತ್ತು ಕೆ.ಎ.ಎ.ಟಿ.ಸಿ.ಯ ಹಳೆಯ ಪ್ಯಾಕೇಜ್ ಗಳು - ರೂ. 290 ಕೋಟಿ). ಎನ್.ಇ.ಎಸ್.ಐ.ಡಿ.ಎಸ್. ಎಂಬುದು  100% ಕೇಂದ್ರೀಯ ನಿಧಿಯೊಂದಿಗೆ ಕೇಂದ್ರ ವಲಯದ ಯೋಜನೆಯಾಗಿದ್ದು, - ಎನ್.ಇ.ಎಸ್.ಐ.ಡಿ.ಎಸ್. (ರಸ್ತೆಗಳು) ಮತ್ತು ಎನ್.ಇ.ಎಸ್.ಐ.ಡಿ.ಎಸ್. (ರಸ್ತೆ ಮೂಲಸೌಕರ್ಯ ಹೊರತುಪಡಿಸಿ) ಎಂಬ ಎರಡು ಘಟಕಗಳನ್ನಾಗಿ ಪುನರ್ರಚನೆ ಮಾಡುವ ಮೂಲಕ ಅನುಷ್ಠಾನವಾಗುತ್ತದೆ.  

ರೂ. 6, 600 ಕೋಟಿ ವೆಚ್ಚದೊಂದಿಗೆ ಸಚಿವಾಲಯದ ಹೊಸ ಯೋಜನೆ “ಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ - ಪಿಎಂ-ಡಿವೈನ್”ಅನ್ನು ಅಕ್ಟೋಬರ್-2022 ರಲ್ಲಿ ಪ್ರತ್ಯೇಕವಾಗಿ ಅನುಮೋದಿಸಲಾಗಿದೆ.  ಈ ಯೋಜನೆಯಡಿಯಲ್ಲಿ ಮೂಲಸೌಕರ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ಜೀವನೋಪಾಯ ಕ್ಷೇತ್ರಗಳ ದೊಡ್ಡ ಮತ್ತು ಹೆಚ್ಚಿನ ಪರಿಣಾಮದ ಬೃಹತ್ ಪ್ರಸ್ತಾಪಗಳನ್ನು ಪರಿಗಣಿಸಲಾಗಿದೆ.

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಯೋಜನೆಗಳ ಉದ್ದೇಶಗಳು, ಒಂದೆಡೆ ವಿವಿಧ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರಯತ್ನಗಳಿಗೆ ಪೂರಕವಾಗಿದೆ ಮತ್ತು ಮತ್ತೊಂದೆಡೆ ಈಶಾನ್ಯ ಪ್ರದೇಶ ರಾಜ್ಯಗಳ ಯೋಜನೆಗಳ ವ್ಯಾಪ್ತಿಯಲ್ಲಿರದ ಅಭಿವೃದ್ಧಿ/ಕಲ್ಯಾಣ ಚಟುವಟಿಕೆಗಳ ಅಗತ್ಯತೆಗಳಿಗೆ ಪೂರಕವಾಗಿದೆ. ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಯೋಜನೆಗಳು ಎಂಟು ಈಶಾನ್ಯ ರಾಜ್ಯಗಳಿಗೆ ತಮ್ಮ ಭಾವನೆಗಳ ಅಗತ್ಯಗಳಿಗೆ ಅನುಗುಣವಾಗಿ ಕೊರತೆಗಳನ್ನು - ಉದಾ., ಸಂಪರ್ಕ ಮತ್ತು ಸಾಮಾಜಿಕ ವಲಯದ ಕೊರತೆಗಳನ್ನು ಕಡಿಮೆಗೊಳಿಸಲು, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದೇಶದಲ್ಲಿ ಜೀವನೋಪಾಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಹಾಗೂ ಇವುಗಳನ್ನು ತುಂಬುವ ನಿಟ್ಟಿನಲ್ಲಿ ಬೆಂಬಲವನ್ನು ಒದಗಿಸಲು ಸಹಾಯ ಮಾಡುತ್ತದೆ.

15 ನೇ ಹಣಕಾಸು ಆಯೋಗದ ಅವಧಿಯ ಬಾಕಿಗಾಗಿ ಅನುಮೋದಿತ ಯೋಜನೆಗಳ ವಿಸ್ತರಣೆ, ಅಂದರೆ 2025-26 ರ ವರೆಗೆ,

-ಯೋಜನೆಯ ಆಯ್ಕೆಯ ವಿಷಯದಲ್ಲಿ , ಯೋಜನೆಗಳ ಅನುಷ್ಠಾನಕ್ಕಾಗಿ ಉತ್ತಮ ಯೋಜನೆಗಳನ್ನು ಸಕ್ರಿಯಗೊಳಿಸಿ,

-ಸೂಕ್ತ ಹಾಗೂ ಅಧಿಕ ಪಾವತಿಯೊಂದಿಗೆ ಯೋಜನೆಗಳ ಮಂಜೂರಾತಿ, ಮತ್ತು

-ಯೋಜನೆಯ ಅವಧಿಯಲ್ಲಿಯೇ ಯೋಜನೆಯ ಅನುಷ್ಠಾನ

2025-26 ರ ವೇಳೆಗೆ ಗರಿಷ್ಠ ಸಂಖ್ಯೆಯ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಆದ್ದರಿಂದ, ಯೋಜನೆಗಳು 2022-23 ಮತ್ತು 2023-24 ರಲ್ಲಿ ಪ್ರಾಥಮಿಕವಾಗಿ ಹೊಸ ನಿರ್ಬಂಧಗಳನ್ನು ಹೊಂದಿರುತ್ತವೆ; 2024-25 ಮತ್ತು 2025-26 ರ ಅವಧಿಯಲ್ಲಿ ಖರ್ಚು ಮಾಡುವುದನ್ನು ಮುಂದುವರಿಸಲಾಗುವುದು. ಚಾಲ್ತಿಯಲ್ಲಿರುವ ಮಂಜೂರಾದ ಯೋಜನೆಗಳನ್ನು ಪೂರ್ಣಗೊಳಿಸಲು ಗಮನಹರಿಸಲಾಗುವುದು.

ಸ್ವಾವಲಂಬಿ ಭಾರತಕ್ಕಾಗಿ ಆತ್ಮನಿರ್ಭರ್ ಭಾರತ್ ಅಭಿಯಾನದ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಅಪಾರ ಜನಸಂಖ್ಯೆ ಮತ್ತು ಬೇಡಿಕೆಗಳು – ಇವುಗಳ ಮೂಲಕ ಈ ಯೋಜನೆಗಳಿಗೆ  ಉತ್ತೇಜನವನ್ನು ನೀಡಲಾಗುವುದು.

ಕೇಂದ್ರ ಸರ್ಕಾರವು ಈಶಾನ್ಯ ಅಭಿವೃದ್ಧಿಯನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿದೆ. ಕಳೆದ 8 ವರ್ಷಗಳಲ್ಲಿ ಪ್ರಧಾನಮಂತ್ರಿ ಅವರು ಈಶಾನ್ಯ ಪ್ರದೇಶಕ್ಕೆ 50ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರೆ, 74 ಸಚಿವರು ಈಶಾನ್ಯ ಪ್ರದೇಶಕ್ಕೆ 400ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ.

ಈಶಾನ್ಯವು ಈ ಹಿಂದೆ ಅಶಾಂತಿ, ಬಾಂಬ್ ಸ್ಫೋಟಗಳು, ಬಂದ್ ಗಳಿಗೆ ಹೆಸರುವಾಸಿಯಾಗಿತ್ತು ಆದರೆ ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶಾಂತಿ ಸ್ಥಾಪಿಸಲಾಗಿದೆ.

ದಂಗೆಯ ಘಟನೆಗಳಲ್ಲಿ 74% ಕಡಿತ, ಭದ್ರತಾ ಪಡೆಗಳ ಮೇಲಿನ ದಾಳಿಯ ಘಟನೆಗಳಲ್ಲಿ 60% ಕಡಿಮೆ ಮತ್ತು ನಾಗರಿಕರ ಸಾವುಗಳಲ್ಲಿ 89% ಕಡಿಮೆಯಾಗಿದೆ. ಸುಮಾರು 8,000 ಯುವಕರು ಶರಣಾಗಿದ್ದಾರೆ ಮತ್ತು ಮುಖ್ಯವಾಹಿನಿಗೆ ಸೇರಿದ್ದಾರೆ, ತಮ್ಮ ಮತ್ತು ತಮ್ಮ ಕುಟುಂಬಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸುತ್ತಿದ್ದಾರೆ.

ಇದಲ್ಲದೆ, 2019 ರಲ್ಲಿ ತ್ರಿಪುರಾದ ರಾಷ್ಟ್ರೀಯ ವಿಮೋಚನೆಯೊಂದಿಗಿನ ಒಪ್ಪಂದ, 2020 ರಲ್ಲಿ ಬಿ.ಆರ್.ಯು ಮತ್ತು ಬೋಡೋ ಒಪ್ಪಂದ ಮತ್ತು 2021 ರಲ್ಲಿ ಕರ್ಬಿ ಒಪ್ಪಂದವಾಯಿತು. ಅಸ್ಸಾಂ-ಮೇಘಾಲಯ ಮತ್ತು ಅಸ್ಸಾಂ-ಅರುಣಾಚಲ ಗಡಿ ವಿವಾದಗಳು ಬಹುತೇಕ ಅಂತ್ಯಗೊಂಡಿವೆ ಮತ್ತು ಶಾಂತಿಯ ಮರುಸ್ಥಾಪನೆಯೊಂದಿಗೆ, ಈಶಾನ್ಯ ಪ್ರದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಿದೆ.

2014 ರಿಂದ, ಈಶಾನ್ಯ ಪ್ರದೇಶಕ್ಕೆ ಬಜೆಟ್ ಹಂಚಿಕೆಗಳಲ್ಲಿ ಕೇಂದ್ರ ಸರ್ಕಾರವು ಭಾರಿ ಹೆಚ್ಚಳವನ್ನು ಮಾಡಿದೆ. 2014 ರಿಂದ ಈ ಪ್ರದೇಶಕ್ಕೆ ರೂ. 4 ಲಕ್ಷ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ.

ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಕಳೆದ 04 ವರ್ಷಗಳಲ್ಲಿ ವಾಸ್ತವಿಕ ವೆಚ್ಚ ರೂ 7534.46 ಕೋಟಿ ವ್ಯಯವಾಗಿರುತ್ತದೆ.  ಹಾಗೂ ಮುಂದಿನ ನಾಲ್ಕು ವರ್ಷಗಳಲ್ಲಿ 2025-26 ರ ಅವಧಿವರೆಗಿನ ವೆಚ್ಚಕ್ಕಾಗಿ ರೂ 19482.20 ಕೋಟಿ (ಅಂದಾಜು 2.60 ಪಟ್ಟು) ನಿಧಿಯು ಲಭ್ಯವಿದೆ.

ಈ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬೃಹತ್ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಸಂಪರ್ಕವನ್ನು ಸುಧಾರಿಸುವುದು ಪ್ರಧಾನ ಗುರಿಯಾಗಿದೆ.

ರೈಲ್ವೆ ಸಂಪರ್ಕವನ್ನು ಸುಧಾರಿಸಲು 2014 ರಿಂದ ರೂ. 51,019 ಕೋಟಿಗಳನ್ನು ಖರ್ಚು ಮಾಡಲಾಗಿದೆ. 19 ಹೊಸ ಯೋಜನೆಗಳ ಮೂಲಕ ರೂ. 77,930 ಕೋಟಿ ಮಂಜೂರಾಗಿದೆ.

ಸರಾಸರಿ ವಾರ್ಷಿಕ ಬಜೆಟ್ ಹಂಚಿಕೆಗೆ ಹೋಲಿಸಿದರೆ 2009-14ರ ಅವಧಿಯಲ್ಲಿ ಹಂಚಿಕೆ ಮಾಡಿದ ಮೊತ್ತ ರೂ. 2,122 ಕೋಟಿಗಳು, ಆದರೆ, ಕಳೆದ 8 ವರ್ಷಗಳಲ್ಲಿ ಮಾಡಿದ ಖರ್ಚು ಒಟ್ಟು ರೂ. 9,970 ಕೋಟಿ, ಇದು ಸರಾಸರಿ ವಾರ್ಷಿಕ ಬಜೆಟ್ ಹಂಚಿಕೆಯಲ್ಲಿ 370% ರಷ್ಟು ಹೆಚ್ಚಳವಾಗಿದೆ

ಸ್ತೆ ಸಂಪರ್ಕ ಸುಧಾರಣೆಗಾಗಿ ರೂ. 1.05 ಲಕ್ಷ ಕೋಟಿಗಳ 375 ಯೋಜನೆಗಳು ಕಾಮಗಾರಿ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರದ 209 ಯೋಜನೆಗಳ ಅಡಿಯಲ್ಲಿ 9,476 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ ರೂ. 1,06,004 ಕೋಟಿ ಮಂಜೂರು ಮಾಡಿದೆ.

ವಾಯುಯಾನ ಸಂಪರ್ಕವು ಸಹ ಬೃಹತ್ ಪ್ರಮಾಣದಲ್ಲಿ ಸುಧಾರಿಸಿದೆ. 68 ವರ್ಷಗಳಲ್ಲಿ ಈಶಾನ್ಯರಾಜ್ಯಗಳು ಕೇವಲ 9 ವಿಮಾನ ನಿಲ್ದಾಣಗಳನ್ನು ಹೊಂದಿದ್ದವು, ಇದು ಎಂಟು ವರ್ಷಗಳ ಅಲ್ಪಾವಧಿಯಲ್ಲಿ ಇದು 17 ಕ್ಕೆ ಏರಿದೆ.

2014 ರಿಂದ ಇಂದಿನ ತನಕ, ಈಶಾನ್ಯದಲ್ಲಿ ವಾಯುಯಾನ ಸಂಚಾರ ಚಲನೆಯು (ವರ್ಷದಿಂದ ವರ್ಷಕ್ಕೆ) 113% ರಷ್ಟು ಹೆಚ್ಚಾಗಿದೆ. ವಾಯುಯಾನ ಸಂಪರ್ಕಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಈಶಾನ್ಯ ಪ್ರದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ರೂ. 2,000 ಕೋಟಿ ಹೂಡಿಕೆ ಮಾಡಲಾಗುವುದು.

2014 ರಿಂದ, ದೂರಸಂಪರ್ಕ ಸಂಪರ್ಕವನ್ನು ಸುಧಾರಿಸಲು, 10% ಜಿಬಿಎಸ್ ಅಡಿಯಲ್ಲಿ ರೂ.3466 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಈಶಾನ್ಯ ಪ್ರದೇಶಗಳ 4,525 ಗ್ರಾಮಗಳಲ್ಲಿ 4ಜಿ ಸಂಪರ್ಕಕ್ಕೆ ಸಂಪುಟ ಅನುಮೋದನೆ ನೀಡಿದೆ. 2023 ರ ಅಂತ್ಯದ ವೇಳೆಗೆ ಈ ಪ್ರದೇಶದಲ್ಲಿ ಸಂಪೂರ್ಣ ದೂರಸಂಪರ್ಕ ಸಂಪರ್ಕವನ್ನು ಒದಗಿಸಲು ಕೇಂದ್ರ ಸರ್ಕಾರವು 500 ದಿನಗಳ ಯೋಜನೆ ಮುಕ್ತಾಯ ಗುರಿಯನ್ನು ಹೊಂದಿದೆ.

ಜಲಮಾರ್ಗಗಳು ಈಶಾನ್ಯದ ಜೀವನ ಮತ್ತು ಸಂಸ್ಕೃತಿಗೆ ಅವಿಭಾಜ್ಯವಾಗಿವೆ. ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರವು ಈ ಪ್ರದೇಶದಲ್ಲಿ ಜಲಮಾರ್ಗ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. 2014 ರ ಮೊದಲು ಈಶಾನ್ಯ ಪ್ರದೇಶದಲ್ಲಿ ಕೇವಲ 1 ರಾಷ್ಟ್ರೀಯ ಜಲಮಾರ್ಗವಿತ್ತು. ಈಗ ಈಶಾನ್ಯ ಪ್ರದೇಶದಲ್ಲಿ ಒಟ್ಟು 18 ರಾಷ್ಟ್ರೀಯ ಜಲಮಾರ್ಗಗಳಿವೆ. ಇತ್ತೀಚೆಗೆ ರಾಷ್ಟ್ರೀಯ ಜಲಮಾರ್ಗ 2 ಮತ್ತು ರಾಷ್ಟ್ರೀಯ ಜಲಮಾರ್ಗ 16 ಅಭಿವೃದ್ಧಿಗೆ ರೂ. 6000 ಕೋಟಿಗಳನ್ನು ಮಂಜೂರು ಮಾಡಲಾಗಿದೆ.  

ಈಶಾನ್ಯ ಪ್ರದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು 2014 ಮತ್ತು 2021 ರ ನಡುವೆ ಅಸ್ತಿತ್ವದಲ್ಲಿರುವ ಸರ್ಕಾರಿ ಐ.ಟಿ.ಐ.ಗಳನ್ನು ಮಾದರಿ ಐ.ಟಿ.ಐ.ಗಳಾಗಿ ನವೀಕರಿಸಲು ಅಂದಾಜು ರೂ.190 ಕೋಟಿಗಳನ್ನು ಖರ್ಚು ಮಾಡಲಾಗಿದೆ. 193 ಹೊಸ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಕೌಶಲ್ಯಕ್ಕಾಗಿ ರೂ. 81.83 ಕೋಟಿ ವೆಚ್ಚ ಮಾಡಲಾಗಿದೆ. ವಿವಿಧ ಯೋಜನೆಗಳಡಿ ಒಟ್ಟು 16,05,801 ಮಂದಿ ಕೌಶಲ್ಯ ಪಡೆದಿದ್ದಾರೆ.

ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ತೇಜಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಎಂ.ಎಸ್.ಎಂ.ಇ.ಗಳನ್ನು ಉತ್ತೇಜಿಸಲಾಗಿದೆ. 978 ಘಟಕಗಳನ್ನು ಬೆಂಬಲಿಸಲು  ರೂ. 645.07 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಡಿ.ಪಿ.ಐ.ಐ.ಟಿ. ಪ್ರಕಾರ, ಈಶಾನ್ಯಪ್ರದೇಶದಿಂದ 3,865 ಸ್ಟಾರ್ಟ್ಅಪ್ ಗಳನ್ನು ನೋಂದಾಯಿಸಲಾಗಿದೆ.

ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದು ಕಳೆದ ಎಂಟನೇ ವರ್ಷಗಳಲ್ಲಿ ಪ್ರಮುಖ ಗುರಿಯಾಗಿತ್ತು. 2014-15 ರಿಂದ, ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ರೂ. 31,793.86 ಕೋಟಿಗಳನ್ನು ಮಂಜೂರು ಮಾಡಿದೆ.

ಸುಸಜ್ಜಿತ ಕ್ಯಾನ್ಸರ್ ಆರೈಕೆ ಯೋಜನೆಯ ಅಡಿಯಲ್ಲಿ ರಾಜ್ಯಮಟ್ಟದ 19 ಕ್ಯಾನ್ಸರ್ ಸಂಸ್ಥೆಗಳು ಮತ್ತು 20 ಸುಸಜ್ಜಿತ ಆರೈಕೆ ಕ್ಯಾನ್ಸರ್ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗಿದೆ

ಕಳೆದ ಎಂಟು ವರ್ಷಗಳಲ್ಲಿ, ಈ ಪ್ರದೇಶದಲ್ಲಿ ಶಿಕ್ಷಣ ಮೂಲಸೌಕರ್ಯವನ್ನು ಸುಧಾರಿಸಲು ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

2014 ರಿಂದ ಇಲ್ಲಿಯವರೆಗೆ, ಈಶಾನ್ಯದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ರೂ. 14,009 ಕೋಟಿ ವ್ಯಯಿಸಿದೆ.  191 ಹೊಸ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. 2014 ರಿಂದ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳ ಸಂಖ್ಯೆಯಲ್ಲಿ 39%ರಷ್ಟು ಹೆಚ್ಚಳವಾಗಿದೆ. 2014-15 ರಿಂದ ಸ್ಥಾಪಿಸಲಾದ ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 40% ರಷ್ಟು ಹೆಚ್ಚಳವಾಗಿದೆ.

ಪರಿಣಾಮವಾಗಿ, ಉನ್ನತ ಶಿಕ್ಷಣದಲ್ಲಿ ಒಟ್ಟು ವಿದ್ಯಾರ್ಥಿಗಳ ದಾಖಲಾತಿಯಲ್ಲಿ 29% ರಷ್ಟು ಹೆಚ್ಚಳವಾಗಿದೆ.

ಈ ಪ್ರದೇಶದಲ್ಲಿ ಇಂಧನ ಅಭಿವೃದ್ಧಿಗೆ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದೆ. ಈ ನಿಟ್ಟಿನಲ್ಲಿ 2014-15 ರಿಂದ ಕೇಂದ್ರ ಸರ್ಕಾರ ರೂ.37,092 ಕೋಟಿಗಳನ್ನು ಮಂಜೂರು ಮಾಡಿದೆ. ಇಲ್ಲಿಯವರೆಗೆ ರೂ.10,003 ಕೋಟಿ ಖರ್ಚು ಮಾಡಲಾಗಿದೆ.    

ರೂ. 9,265 ಕೋಟಿಗಳ ಮೌಲ್ಯದ ಈಶಾನ್ಯ ಗ್ಯಾಸ್ ಗ್ರಿಡ್ (ಎನ್.ಇ.ಜಿ.ಜಿ) ಯೋಜನೆ ಪ್ರಗತಿಯಲ್ಲಿದೆ ಮತ್ತು ಈಶಾನ್ಯ ಪ್ರದೇಶದಲ್ಲಿ ಆರ್ಥಿಕತೆಯನ್ನು ಸುಧಾರಿಸುತ್ತದೆ.

ಅರುಣಾಚಲ ಪ್ರದೇಶದ ಗಡಿ ಗ್ರಾಮಗಳನ್ನು ವಿದ್ಯುತ್ತೀಕರಣಗೊಳಿಸಲು (ಬೆಳಗಿಸಲು) ಪ್ರಧಾನಮಂತ್ರಿಯವರು ರೂ. 550 ಕೋಟಿಗಳ ಪ್ಯಾಕೇಜ್ ಘೋಷಿಸಿದ್ದಾರೆ.

ಮೊದಲ ಬಾರಿಗೆ ಜಿಲ್ಲಾ ಮಟ್ಟದ ಎಸ್.ಡಿ.ಜಿ. ಸೂಚ್ಯಂಕವನ್ನು ಸ್ಥಾಪಿಸಲಾಗಿದೆ. ಎಸ್.ಡಿ.ಜಿ. ಸೂಚ್ಯಂಕದ ಎರಡನೇ ಆವೃತ್ತಿ ಸಿದ್ಧವಾಗಿದೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.



(Release ID: 1888948) Visitor Counter : 145