ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ನಾಳೆ ನಾಗ್ಪುರದಲ್ಲಿ ಉದ್ಘಾಟಿಸಲ್ಪಡುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವು ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಿದ್ದು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಪಾಲ್ಗೊಳ್ಳುವಿಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಿದೆ


​​​​​​​ಈ ವರ್ಷದ ವಿಜ್ಞಾನ ಕಾಂಗ್ರೆಸ್ ನ ಕೇಂದ್ರಬಿಂದುವನ್ನು "ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ" ಎಂದು ಬಹಳ ಚಿಂತನಶೀಲವಾಗಿ ರಚಿಸಲಾಗಿದೆ.

ಈ ವರ್ಷದ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ವಿಶಿಷ್ಟ ಲಕ್ಷಣವೆಂದರೆ "ಮಕ್ಕಳ ವಿಜ್ಞಾನ ಮೇಳ" ("ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್")

ನೊಬೆಲ್ ಪ್ರಶಸ್ತಿ ವಿಜೇತರು, ಪ್ರಮುಖ ಭಾರತೀಯ ಮತ್ತು ವಿದೇಶಿ ಸಂಶೋಧಕರು, ಬಾಹ್ಯಾಕಾಶ, ರಕ್ಷಣೆ, ಮಾಹಿತಿ ತಂತ್ರಜ್ಞಾನ ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ತಂತ್ರಜ್ಞರನ್ನು ಒಳಗೊಂಡ ಸಂಪೂರ್ಣ ಅಧಿವೇಶನಗಳು ನಡೆಯಲಿವೆ.

ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಗಮನಾರ್ಹ ಕೊಡುಗೆಗಳನ್ನು ಪ್ರದರ್ಶಿಸಲು "ಪ್ರೈಡ್ ಆಫ್ ಇಂಡಿಯಾ" ಎಂಬ ಮೆಗಾ ಪ್ರದರ್ಶನ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ

Posted On: 02 JAN 2023 3:01PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ನಾಗ್ಪುರದಲ್ಲಿ ಉದ್ಘಾಟಿಸಲಿರುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಒಳಗೊಳ್ಳುವಿಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಿದೆ.

ಮಾಧ್ಯಮಗಳಿಗೆ ನೀಡಿದ ಪೂರ್ವ-ಸಮ್ಮೇಳನ ಸಂಕ್ಷಿಪ್ತ ವರದಿಯಲ್ಲಿ ಈ ವಿಷಯವನ್ನು ತಿಳಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್, ಈ ವರ್ಷದ ವಿಜ್ಞಾನ ಕಾಂಗ್ರೆಸ್ ನ ಕೇಂದ್ರಬಿಂದುವನ್ನು "ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ" ಎಂದು ಬಹಳ ಚಿಂತನಶೀಲವಾಗಿ ರೂಪಿಸಲಾಗಿದೆ ಎಂದು ಹೇಳಿದರು. ಸಮಗ್ರ ಬೆಳವಣಿಗೆ, ಪರಾಮರ್ಶೆಗೊಂಡ ಆರ್ಥಿಕತೆಗಳು ಮತ್ತು ಸುಸ್ಥಿರ ಗುರಿಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಅಂತೆಯೇ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಬೆಳವಣಿಗೆಗೆ ಸಂಭಾವ್ಯ ಅಡೆತಡೆಗಳ ಬಗ್ಗೆ ಕೂಡಾ ಈ ಸಮ್ಮೇಳನ ಗಮನ ಹರಿಸಲಿದೆ ಎಂದು ಅವರು ಹೇಳಿದರು.

ಈ ವರ್ಷ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ವಿಶಿಷ್ಟ ಲಕ್ಷಣವೆಂದರೆ ಮಕ್ಕಳಿಗೆ ತಮ್ಮ ವೈಜ್ಞಾನಿಕ ಮನೋಭಾವ ಮತ್ತು ಜ್ಞಾನವನ್ನು ಬಳಸಲು ಮತ್ತು ವೈಜ್ಞಾನಿಕ ಪ್ರಯೋಗದ ಮೂಲಕ ಅವರ ಸೃಜನಶೀಲತೆಯನ್ನು ಅರಿತುಕೊಳ್ಳಲು ಅವಕಾಶವನ್ನು ಒದಗಿಸಲು "ಮಕ್ಕಳ ವಿಜ್ಞಾನ ಮೇಳವನ್ನು" ("ಚಿಲ್ಡ್ರನ್ ಸೈನ್ಸ್ ಕಾಂಗ್ರೆಸ್") ಆಯೋಜಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಈ ವರ್ಷದ ವಿಜ್ಞಾನ ಕಾಂಗ್ರೆಸ್ ನಲ್ಲಿ "ಬುಡಕಟ್ಟು ವಿಜ್ಞಾನ ಕಾಂಗ್ರೆಸ್" ಎಂಬ ಶೀರ್ಷಿಕೆಯ ರೂಪದಲ್ಲಿ ಹೊಸ ಕಾರ್ಯಕ್ರಮವನ್ನು ಸೇರಿಸಲಾಗುತ್ತಿದೆ ಎಂದು ತಿಳಿಸಿದರು. ಇದು ಬುಡಕಟ್ಟು ಮಹಿಳೆಯರ ಸಬಲೀಕರಣವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ ಮತ್ತು ಸ್ಥಳೀಯ ಉಚ್ಚಾರಣಾ ಜ್ಞಾನ ವ್ಯವಸ್ಥೆ ಮತ್ತು ಅಭ್ಯಾಸವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತರು, ಪ್ರಮುಖ ಭಾರತೀಯ ಮತ್ತು ವಿದೇಶಿ ಸಂಶೋಧಕರು, ಬಾಹ್ಯಾಕಾಶ, ರಕ್ಷಣೆ, ಮಾಹಿತಿ ತಂತ್ರಜ್ಞಾನ ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ತಂತ್ರಜ್ಞರು ಈ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಈ ತಾಂತ್ರಿಕ ಗೋಷ್ಠಿಗಳು ಕೃಷಿ ಮತ್ತು ಅರಣ್ಯ ವಿಜ್ಞಾನ, ಪ್ರಾಣಿ, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನ, ಮಾನವಶಾಸ್ತ್ರೀಯ ಮತ್ತು ನಡವಳಿಕೆಯ ವಿಜ್ಞಾನ, ರಾಸಾಯನಿಕ ವಿಜ್ಞಾನ, ಭೂ ವ್ಯವಸ್ಥೆ ವಿಜ್ಞಾನ, ಎಂಜಿನಿಯರಿಂಗ್ ವಿಜ್ಞಾನ, ಪರಿಸರ ವಿಜ್ಞಾನ, ಮಾಹಿತಿ ಮತ್ತು ಸಂವಹನ ವಿಜ್ಞಾನ ಮತ್ತು ತಂತ್ರಜ್ಞಾನ, ವಸ್ತು ವಿಜ್ಞಾನ, ಗಣಿತ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಹೊಸ ಜೀವಶಾಸ್ತ್ರ, ಭೌತಿಕ ವಿಜ್ಞಾನ ಮತ್ತು ಸಸ್ಯ ವಿಜ್ಞಾನಗಳಲ್ಲಿ ನಾವಿನ್ಯ ಮತ್ತು ಅನ್ವಯಿಕ ಸಂಶೋಧನೆಯನ್ನು ಪ್ರದರ್ಶಿಸಲಿವೆ ಎಂದು ಅವರು ಹೇಳಿದರು.

ಸರ್ಕಾರ, ಕಾರ್ಪೊರೇಟ್, ಸಾರ್ವಜನಿಕ ವಲಯದ ಘಟಕಗಳು, ಶೈಕ್ಷಣಿಕ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಮತ್ತು ದೇಶಾದ್ಯಂತದ ನವೋದ್ಯಮಿಗಳು ಮತ್ತು ಉದ್ಯಮಿಗಳ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಮೆಗಾ ಎಕ್ಸ್ಪೋ "ಪ್ರೈಡ್ ಆಫ್ ಇಂಡಿಯಾ" ದ ವಿಶೇಷ ಆಕರ್ಷಣೆಯನ್ನು ಡಾ. ಜಿತೇಂದ್ರ ಸಿಂಗ್ ಉಲ್ಲೇಖಿಸಿದರು. ಪ್ರಮುಖ ಬೆಳವಣಿಗೆಗಳು, ಪ್ರಮುಖ ಸಾಧನೆಗಳು ಮತ್ತು ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನವು ನೀಡಿದ ಮಹತ್ವದ ಕೊಡುಗೆಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.

ಈ 14 ವಿಭಾಗಗಳನ್ನು ಹೊರತುಪಡಿಸಿ, ಮಹಿಳಾ ವಿಜ್ಞಾನ ಮೇಳ, ರೈತರ ವಿಜ್ಞಾನ ಮೇಳ, ಮಕ್ಕಳ ವಿಜ್ಞಾನ ಮೇಳ, ಬುಡಕಟ್ಟು ಸಮಾವೇಶ, ವಿಜ್ಞಾನ ಮತ್ತು ಸಮಾಜದ ಬಗ್ಗೆ ಒಂದು ವಿಭಾಗ ಮತ್ತು ವಿಜ್ಞಾನ ಸಂವಹನಕಾರರ ಕಾಂಗ್ರೆಸ್ ಕೂಡಾ ಇರಲಿದೆ. 

ಉದ್ಘಾಟನಾ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲರು ಮತ್ತು ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಾಧಿಪತಿ ಭಗತ್ ಸಿಂಗ್ ಕೋಶ್ಯಾರಿ, ಕೇಂದ್ರ ಸಚಿವ ಮತ್ತು ಆರ್.ಟಿ.ಎಂ.ಎನ್.ಯು ಶತಮಾನೋತ್ಸವ ಸಲಹಾ ಸಮಿತಿಯ ಅಧ್ಯಕ್ಷ ನಿತಿನ್ ಗಡ್ಕರಿ,  ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್, ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭಾಗವಹಿಸಲಿದ್ದಾರೆ.

ರಾಷ್ಟ್ರಸಂತ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುಭಾಷ್ ಆರ್. ಚೌಧರಿ ಮತ್ತು ಕೋಲ್ಕತಾದ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಘದ (ಐ.ಎಸ್.ಸಿ.ಎ) ಪ್ರಧಾನ ಅಧ್ಯಕ್ಷೆ ಡಾ. (ಶ್ರೀಮತಿ) ವಿಜಯ್ ಲಕ್ಷ್ಮಿ ಸಕ್ಸೇನಾ ಅವರು ಪ್ರಮುಖವಾಗಿ ಉಪಸ್ಥಿತರಿರಲಿದ್ದಾರೆ. 

ವಿಜ್ಞಾನ್ ಜ್ಯೋತ್ - ಜ್ಞಾನದ ಜ್ವಾಲೆಯನ್ನು ಒಲಿಂಪಿಕ್ ಜ್ವಾಲೆಯ ಮಾದರಿಯಲ್ಲಿ ರೂಪಿಸಲಾಗಿದೆ. ಇದು ಸಮಾಜದಲ್ಲಿ, ವಿಶೇಷವಾಗಿ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಮರ್ಪಿತವಾದ ಆಂದೋಲನವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಈ ಜ್ವಾಲೆಯು 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಂತ್ಯದವರೆಗೂ ಉರಿಯುತ್ತಲೇ ಇರುತ್ತದೆ.

*****



(Release ID: 1888138) Visitor Counter : 205