ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

‘2023ರ ವಿಜ್ಞಾನ ದೃಷ್ಟಿ’ ಕುರಿತು ನವದೆಹಲಿಯಲ್ಲಿ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು


2047 ರಲ್ಲಿ ಭಾರತ @100 ಅನ್ನು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳು ವ್ಯಾಖ್ಯಾನಿಸಲಿವೆ ಎಂದು ಸಚಿವರು ಹೇಳಿದರು

ಈ ಅಮೃತ ಕಾಲದ ಅವಧಿಯಲ್ಲಿ ಭಾರತವನ್ನು ಸಂಶೋಧನೆ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳು ಸ್ಥಳೀಯ ಮಟ್ಟಕ್ಕೆ ತಲುಪಬೇಕು; ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್

Posted On: 01 JAN 2023 2:33PM by PIB Bengaluru

ಹೊಸ ವರ್ಷದ ಮೊದಲ ದಿನದಂದು ಮಾಧ್ಯಮ ಸಂವಾದದಲ್ಲಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಉಸ್ತುವಾರಿ), ಭೂ ವಿಜ್ಞಾನ(ಸ್ವತಂತ್ರ ಉಸ್ತುವಾರಿ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆಗಳ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು  ‘2023ರ ವಿಜ್ಞಾನ ದೃಷ್ಟಿ’ಯು 2047 ರ ಭಾರತವನ್ನು ನಿರ್ಧರಿಸಲಿವೆ ಎಂದು ಹೇಳಿದರು .  

2047  ನೇ ವರ್ಷದಲ್ಲಿ ಭಾರತವು 100 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ, ಶತಮಾನದ ಕನಸುಗಳನ್ನು ನನಸಾಗಿಸುವ ಕೊನೆಯ 25 ವರ್ಷಗಳಲ್ಲಿ ಮೊದಲ ವರ್ಷ 2023ನೇ ಇಸವಿಯಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಜಿ-20ಯ ಆತಿಥೇಯ ರಾಷ್ಟ್ರವಾಗಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತನ್ನ ಸ್ಥಾನಮಾನವನ್ನು ದೃಢೀಕರಿಸಿ ಪುನರುಚ್ಚರಿಸುವ ವರ್ಷವೂ ಇದೇ ಆಗಿದೆ, ಮತ್ತು ಪ್ರಧಾನಮಂತ್ರಿಯವರ ಪ್ರಸ್ತಾಪದ ಮೇರೆಗೆ ಜಗತ್ತು ಅಂತರರಾಷ್ಟ್ರೀಯ ಸಿರಿಧಾನ್ಯ(ರಾಗಿ) ವರ್ಷವನ್ನು ಆಚರಿಸುತ್ತಿದೆ”  ಎಂದು ಸಚಿವರು ಹೇಳಿದರು.

“ಭವಿಷ್ಯವು ನವೀನ ಆಲೋಚನೆಗಳು ಮತ್ತು ಔಟ್-ಆಫ್-ಬಾಕ್ಸ್ ಚಿಂತನೆಯ ಗುರಿಗಳನ್ನು ಹೊಂದಿರುವವರಿಗೆ ಸೇರಿದ್ದು ಮತ್ತು ಅದನ್ನು ಸಾಧಿಸುವ ದೃಢತೆ ಮತ್ತು ಧೈರ್ಯವನ್ನು ಹೊಂದಿದ ಒಬ್ಬ ಪ್ರಧಾನಮಂತ್ರಿಯವರನ್ನು ನಾವು ಹೊಂದಿದ್ದೇವೆ. ಪ್ರಧಾನಮಂತ್ರಿಯವರು ಕೇವಲ ಔಟ್-ಆಫ್-ಬಾಕ್ಸ್ ಚಿಂತನೆಯನ್ನು ಮಾತ್ರ ಯೋಚಿಸುವುದಿಲ್ಲ, ಆದರ ಜೊತೆಗೆ 130 ಕೋಟಿ ಭಾರತೀಯರನ್ನು ದೃಢವಾದ ಧೈರ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದ್ದಾರೆ “ ಎಂದು  ಡಾ ಜಿತೇಂದ್ರ ಸಿಂಗ್ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ "ಆವಿಷ್ಕಾರ" ದ ಒಲವನ್ನು ಉಲ್ಲೇಖಿಸಿದ ಡಾ ಜಿತೇಂದ್ರ ಸಿಂಗ್ ಅವರು, "ಸ್ಪೂರ್ತಿದಾಯಕ ಜೈ ಜವಾನ್ ಜೈ ಕಿಸಾನ್ ಕರೆಗಾಗಿ ನಾವು ಇಂದಿಗೂ ನಮ್ಮ ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಜೈ ಜವಾನ್ ಜೈ ಕಿಸಾನ್ ಎಂದರೆ, "ಸೈನಿಕನಿಗೆ ನಮಸ್ಕಾರ, ರೈತನಿಗೆ ಜಯವಾಗಲಿ" ಎಂದರ್ಥ. ನಂತರ ಅಟಲ್ ಬಿಹಾರಿ ವಾಜಪೇಯಿ ಅವರು “ಜೈ ವಿಜ್ಞಾನ” ಎಂಬ ಹೊಸ ಶಬ್ದವನ್ನು ಸೇರಿಸಿದರು, ಮತ್ತು ನಾವು ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು  ನೀಡಿದ್ದೇವೆ. ಆದರೆ ಈ ಅಮೃತ್ ಕಾಲ್ ಅವಧಿಯಲ್ಲಿ “ಜೈ ಸಂಶೋಧನೆ (ಅನುಸಂಧಾನ )”‌ ಅನ್ನು ಅವುಗಳಿಗೆ ಸೇರಿಸುವುದು ಅನಿವಾರ್ಯವಾಗಿದೆ. ಹಾಗಾಗಿ, ಈಗ  "ಜೈ ಜವಾನ್ ,ಜೈ ಕಿಸಾನ್ ,ಜೈ ವಿಜ್ಞಾನ ,ಜೈ ಅನುಸಂಧಾನ್" ಎಂದಾಗುತ್ತದೆ ಎಂದು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿಯವರು ಹೇಳಿದ್ದಾರೆ” ಎಂದು ಹೇಳಿದರು.

“ ಭಾರತವನ್ನು ಸಂಶೋಧನೆ ಮತ್ತು ನಾವೀನ್ಯತೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಈ ಅಮೃತ ಕಾಲ್‌ ನಲ್ಲಿ ನಾವು ಅನೇಕ ರಂಗಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡಬೇಕು, ಹಾಗೂ ಅದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಸಂಶೋಧನೆಗಳನ್ನು ಸ್ಥಳೀಯ ಮಟ್ಟಕ್ಕೆ ಕೊಂಡೊಯ್ಯುವ ಅಗತ್ಯತೆ ಇದೆ “ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2022ರ ಸೆಪ್ಟೆಂಬರ್‌ನಲ್ಲಿ ನಡೆದ ಕೇಂದ್ರ-ರಾಜ್ಯಗಳ ವಿಜ್ಞಾನ ಸಮಾವೇಶದಲ್ಲಿ ವಿವರಿಸಿದ್ದರು” ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ವ್ಯವಹರಿಸುವ ಇಲಾಖೆಗಳು ಈಗಾಗಲೇ 2023 ರ ವರ್ಷದ ಕಾರ್ಯಚಟುವಟಿಕೆಗಳಿಗೆ ತಮ್ಮ ಗಮನ ಕೇಂದ್ರೀಕರಿಸಿವೆ ಮತ್ತು ಅಗತ್ಯ ಕ್ಷೇತ್ರಗಳನ್ನು ಗುರುತಿಸಿಕೊಂಡಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಚಿಂತನೆಯಿಂದಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಭಾಗವಹಿಸುವ ಅವಕಾಶವನ್ನು ತೆರೆದ ನಂತರ ಕಿರು ಅವಧಿಯಲ್ಲಿ ಇಸ್ರೋ ಇಂದು 100 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಹೊಂದಿದೆ. ಇದರ ಜೊತೆಗೆ, ವೈಜ್ಞಾನಿಕ ಪರಿಶೋಧನೆ ಕಾರ್ಯಾಚರಣೆಗಳು, ತಂತ್ರಜ್ಞಾನ ಪ್ರದರ್ಶನ ಕಾರ್ಯಾಚರಣೆಗಳು ಮತ್ತು 2024 ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮ "ಗಗನ್ಯಾನ್" ಮೇಲೆ ಕಲಸ ಕೇಂದ್ರೀಕೃತವಾಗಿದೆ.  

ಜೈವಿಕ ತಂತ್ರಜ್ಞಾನ ವಿಭಾಗವು (ಡಿ.ಬಿ.ಟಿ) ಅಸ್ತಿತ್ವದಲ್ಲಿರುವ ಮತ್ತು ಸಮಕಾಲೀನ ರೋಗಲಕ್ಷಣಗಳಿಗೆ ಲಭ್ಯವಿರುವ ಲಸಿಕೆಗಳ ಸುಧಾರಣೆಗೆ ಹೂಡಿಕೆ ಮಾಡುವ ಮೂಲಕ ಕೋವಿಡ್-19 ಲಸಿಕೆ ಮಿಷನ್‌ ನ ಯಶಸ್ಸನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಇದರ ಜೊತೆಗೆ, ಗಮನಾರ್ಹವಾಗಿ, ಅಂತರರಾಷ್ಟ್ರೀಯ ಸಿರಿಧಾನ್ಯ(ರಾಗಿ)  ವರ್ಷದಲ್ಲಿ ಸಿರಿಧಾನ್ಯಗಳ ಮತ್ತು ಸಸ್ಯ ವೈರಸ್‌ ಗಳ ರೋಗ-ಜೀನೋಮಿಕ್ಸ್‌ನಲ್ಲಿ ಪ್ರಮುಖ ಸಂಶೋಧನಾ ಕಾರ್ಯಾಚರಣೆಗಳನ್ನು ಈ ವರ್ಷದಲ್ಲಿ ಪ್ರಾರಂಭಿಸಲಾಗುವುದು.

2023 ರಲ್ಲಿ ಹಸಿರು ಹೈಡ್ರೋಜನ್ ಮೇಲೆ ಸಿ.ಎಸ್.ಐ.ಆರ್.‌ ಸಂಸ್ಥೆಯು ವಿಶೇಷವಾಗಿ ಗಮನ ಕೇಂದ್ರೀಕರಿಸಲಿದೆ. ಈಗಾಗಲೇ ಶುದ್ಧ ಇಂಧನ (ಕ್ಲೀನ್ ಎನರ್ಜಿ) ಮಿಷನ್‌ ನ ಭಾಗವಾಗಿ ಹಸಿರು ಹೈಡ್ರೋಜನ್ ದೇಶೀಯವಾಗಿ ಯಶಸ್ಸು ಕಂಡಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣಗಳಲ್ಲಿ ಈಗಾಗಲೇ ಎರಡು ಬಾರಿ, ಮೊದಲು ಬಾರಿ 2021ರಲ್ಲಿ ಮತ್ತು ನಂತರ 2022ರಲ್ಲಿ, ಆಳ ಸಾಗರ ಸಂಕಲ್ಪ(ಡೀಪ್ ಓಷನ್ ಮಿಷನ್) ಬಗ್ಗೆ ಉಲ್ಲೇಖಿಸಿದ್ದಾರೆ. ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಆಳವಾದ ಸಾಗರದ ಮಿಷನ್ ಮತ್ತು ತಂತ್ರಜ್ಞಾನಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ. ಇವುಗಳು ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ವಿಶೇಷ ಮೌಲ್ಯವನ್ನು ನೀಡಲಿವೆ. ನೀಲಿ ಆರ್ಥಿಕತೆಯಲ್ಲಿ ಮತ್ತಷ್ಟು ಪ್ರಗತಿಗೆ 2023ನೇ ವರ್ಷವು ಸಾಕ್ಷಿಯಾಗಲಿದೆ.

ಭಾರತದ ಚುನಾವಣಾ ಆಯೋಗಕ್ಕೆ ಚುನಾವಣಾ ನಿರ್ವಹಣೆಗಾಗಿ ಸೆಪ್ಟೆಂಬರ್/ಅಕ್ಟೋಬರ್ 2023 ರೊಳಗೆ ಸುಮಾರು 21.00 ಲಕ್ಷ ಬ್ಯಾಲೆಟ್ ಯುನಿಟ್‌ಗಳು (ಬಿ.ಯು), ಕಂಟ್ರೋಲ್ ಯುನಿಟ್‌ಗಳು (ಸಿ.ಯು) ಮತ್ತು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿ.ವಿ.ಪಿ.ಎ.ಟಿ) ಉಪಕರಣಗಳನ್ನು ಕೇಂದ್ರ ಪರಮಾಣು ಶಕ್ತಿ ಇಲಾಖೆ (ಡಿ.ಎ.ಇ) ಸಂಸ್ಥೆಯು ನೀಡಲಿದೆ .

*****


(Release ID: 1887910) Visitor Counter : 209