ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ವಲಯದ ಉತ್ತೇಜನಕ್ಕೆ ಎಂಟು ಪರಿಸರ ಉದ್ಯಾನವನಗಳ ನಿರ್ಮಾಣ


ಗಣಿ ಪ್ರವಾಸೋದ್ಯಮ; 2023 ರಲ್ಲಿ ಇನ್ನೂ ಎರಡು ಉದ್ಯಾನವನಗಳು ಪೂರ್ಣಗೊಳ್ಳಲಿವೆ

Posted On: 30 DEC 2022 1:13PM by PIB Bengaluru

ಹಿಂಪಡೆದಿರುವ ಭೂಮಿಯಲ್ಲಿ ಪರಿಸರ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಮತ್ತು ಗಣಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಲ್ಲಿದ್ದಲು ಸಚಿವಾಲಯ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ದೇಶದ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಎಂಟು ಪರಿಸರ ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಅಂತಹ ಎರಡು ಉದ್ಯಾನವನಗಳನ್ನು 2023ರೊಳಗೆ ಪೂರ್ಣಗೊಳಿಸಲಾಗುತ್ತದೆ. 

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಪಶ್ಚಿಮ ಕಲ್ಲಿದ್ದಲು ಕ್ಷೇತ್ರಗಳ (WCL) ಜುರೆ/ಬಾಲಗಂಗಾಧರ ತಿಲಕ್ ಪರಿಸರ ಸ್ನೇಹಿ ಪಾರ್ಕ್ ನ್ನು ಉದ್ಘಾಟಿಸಿದರು. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಲಿಮಿಟೆಡ್-NLCIL ಇತ್ತೀಚೆಗೆ ಗಣಿಯಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪಾಂಡಿಚೇರಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ (PTDC) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಮೂಲಕ ಗಣಿ I ಮತ್ತು ಗಣಿ-II ಮತ್ತು ಸುಸ್ಥಿರ ಗಣಿಗಾರಿಕೆ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ.

ಸಿಂಗ್ರೌಲಿ ಪರಿಸರ ಪ್ರವಾಸೋದ್ಯಮ ಸರ್ಕ್ಯೂಟ್ ನ್ನು ಹೆಚ್ಚಿಸಲು ನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್-NCL ಮತ್ತು ಮಧ್ಯಪ್ರದೇಶ ಪ್ರವಾಸೋದ್ಯಮ ಮಂಡಳಿ ನಡುವೆ ಒಪ್ಪಂದ ಮತ್ತು ಮಹಾರಾಷ್ಟ್ರದ ಪ್ರವಾಸೋದ್ಯಮ ನಿರ್ದೇಶನಾಲಯದೊಂದಿಗೆ ಪಶ್ಚಿಮ ಕಲ್ಲಿದ್ದಲು ಕ್ಷೇತ್ರಗಳ ಮೂಲಕ ಮತ್ತೊಂದು ಒಪ್ಪಂದ ಸಹ ಕಲ್ಲಿದ್ದಲು ವಲಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ. 

ಸುಸ್ಥಿರ ಅಭಿವೃದ್ಧಿ ಮತ್ತು ಹಸಿರೀಕರಣ ಉಪಕ್ರಮಗಳಿಗೆ ಅನುಗುಣವಾಗಿ ಕಲ್ಲಿದ್ದಲು/ಲಿಗ್ನೈಟ್ ಸಾರ್ವಜನಿಕ ವಲಯ ಘಟಕಗಳು ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 2,300 ಹೆಕ್ಟೇರ್ ಭೂಮಿಯಲ್ಲಿ ಸುಮಾರು 47 ಲಕ್ಷ ಸಸಿಗಳನ್ನು ನೆಟ್ಟಿವೆ.

*****



(Release ID: 1887540) Visitor Counter : 115