ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸಫ್ದರ್  ಜಂಗ್ ಆಸ್ಪತ್ರೆಗೆ ಭೇಟಿ ನೀಡಿದರು, ಕೋವಿಡ್ 19 ನಿರ್ವಹಣೆಗಾಗಿ ಆಸ್ಪತ್ರೆಯ ಮೂಲಸೌಕರ್ಯಗಳ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅಣಕು ಪ್ರದರ್ಶನವನ್ನು ಪರಿಶೀಲಿಸಿದರು


"ಉಪಕರಣಗಳು, ಪ್ರಕ್ರಿಯೆಗಳು ಮತ್ತು ಮಾನವ ಸಂಪನ್ಮೂಲಗಳ ವಿಷಯದಲ್ಲಿ ಸಂಪೂರ್ಣ ಕೋವಿಡ್ ಮೂಲಸೌಕರ್ಯವು ಕಾರ್ಯಾಚರಣೆಗೆ ಸಿದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ"

ಸೂಕ್ತ ಕೋವಿಡ್ ನಡವಳಿಕೆಯನ್ನು ಅನುಸರಿಸಲು ಮತ್ತು ಪರಿಶೀಲಿಸದೇ ಯಾವುದೇ  ಮಾಹಿತಿಯನ್ನು ಹಂಚಿಕೊಳ್ಳದಿರುವಂತೆ ಪ್ರತಿಯೊಬ್ಬರನ್ನು ಆಗ್ರಹಿಸಲಾಗಿದೆ 

Posted On: 27 DEC 2022 2:11PM by PIB Bengaluru

ಕೋವಿಡ್ 19 ನಿರ್ವಹಣೆಗಾಗಿ ಆಸ್ಪತ್ರೆಯ ಮೂಲಸೌಕರ್ಯಗಳ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಅಣಕು ಪ್ರದರ್ಶನವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ ಮನ್ಸುಖ್ ಮಾಂಡವಿಯಾ ಅವರು ಇಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಭೇಟಿ ನೀಡಿದರು.

 "ನಾನು ಇತ್ತೀಚೆಗೆ ಕೋವಿಡ್ 19 ಸ್ಥಿತಿ ಮತ್ತು ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಸಿದ್ಧತೆಯನ್ನು ರಾಜ್ಯ ಆರೋಗ್ಯ ಮಂತ್ರಿಗಳೊಂದಿಗೆ ಪರಿಶೀಲಿಸಿದ್ದೇನೆ. ಕೋವಿಡ್ 19 ನಿರ್ವಹಣೆಗೆ ಸನ್ನದ್ಧತೆಯನ್ನು ಪರಿಶೀಲಿಸಲು ಇಂದು ದೇಶಾದ್ಯಂತ ಅಣಕು ಪ್ರದರ್ಶನಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸಿದ್ಧತೆಯು ಅತಿವಶ್ಯಕವಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಇಂದು ಅಣಕು ಪ್ರದರ್ಶನಗಳನ್ನು ಕೈಗೊಂಡಿವೆ. ರಾಜ್ಯ ಆರೋಗ್ಯ ಸಚಿವರು ತಮ್ಮ ತಮ್ಮ ರಾಜ್ಯಗಳಲ್ಲಿ ಇದನ್ನು ಪರಿಶೀಲಿಸುತ್ತಿದ್ದಾರೆ” ಎಂದು ಕೇಂದ್ರ ಸಚಿವರು ಹೇಳಿದರು.

ಅವರು ಸಫ್ದರ್ ರ್‌ಜಂಗ್ ಆಸ್ಪತ್ರೆ ಮತ್ತು ವರ್ಧಮಾನ್ ಮಹಾವೀರ್ ವೈದ್ಯಕೀಯ ಕಾಲೇಜಿನ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ಅವರು ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು, ದಾದಿಯರು, ಭದ್ರತೆ ಮತ್ತು ನೈರ್ಮಲ್ಯ ಸೇವೆಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಚರ್ಚಿಸಿದರು ಮತ್ತು ಗುಣಮಟ್ಟದ ಆಸ್ಪತ್ರೆ ನಿರ್ವಹಣೆ, ಕ್ಲಿನಿಕಲ್ ಅಭ್ಯಾಸಗಳು, ಸೋಂಕು ನಿಯಂತ್ರಣ ಕ್ರಮಗಳು, ನೈರ್ಮಲ್ಯ ಪ್ರಕ್ರಿಯೆಗಳು ಮತ್ತು ರೋಗಿಗಳಿಗೆ ಸಂಬಂಧಿಸಿದ  ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ ಅವಕಾಶಗಳ ಕುರಿತು ಅವರ ಹಲವಾರು ಸಲಹೆಗಳನ್ನು ತಾಳ್ಮೆಯಿಂದ ಆಲಿಸಿದರು. ಆರೋಗ್ಯ ರಕ್ಷಣೆ. ಸಾಂಕ್ರಾಮಿಕದ ಸಮಯದಲ್ಲಿ ಅವರು ದಿಂದ 24 ಗಂಟೆ ಸೇವೆಗಳನ್ನು ಒದಗಿಸಲು ತಮ್ಮ ಅನುಭವವನ್ನು ಹಂಚಿಕೊಂಡರು. ಪ್ರತಿ ವಾರ ತಮ್ಮ ತಂಡಗಳನ್ನು ಭೇಟಿ ಮಾಡುವಂತೆ, ಎಲ್ಲಾ ಇಲಾಖೆಗಳ ಭೌತಿಕ ಭೇಟಿಯನ್ನು ಕೈಗೊಳ್ಳುವಂತೆ ಮತ್ತು ಉತ್ತಮ ಸೇವೆಯನ್ನು  ಖಚಿತಪಡಿಸಿಕೊಳ್ಳಲು ಅವರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವಂತೆ ಡಾ.ಮಾಂಡವಿಯ ಅವರು ಇಲಾಖಾ ಮುಖ್ಯಸ್ಥರಿಗೆ ಸಲಹೆ ನೀಡಿದರು. ಸಾಂಕ್ರಾಮಿಕ ಸಮಯದಲ್ಲಿ ವೈದ್ಯರು ನೀಡಿದ ಅದ್ಬುತ ಕೆಲಸವನ್ನು ಶ್ಲಾಘಿಸಿದರು.

ಡಾ ಮಾಂಡವಿಯಾ ಅವರು ಆಲಕ್ಷಯುತ  ನವವಳಿಕೆ ಬಗ್ಗೆ ಎಚ್ಚರಿಕೆ ನೀಡಿದರು ಮತ್ತು ಸೂಕ್ತ ಕೋವಿಡ್ ನಡವಳಿಕೆಯನ್ನು ಅನುಸರಿಸಲು ಪ್ರತಿಯೊಬ್ಬರನ್ನು ಆಗ್ರಹಿಸಿದರು. ಜಾಗರೂಕರಾಗಿರಲು, ಪರಿಶೀಲಿಸದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಮತ್ತು ಉನ್ನತ ಮಟ್ಟದ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅವರು ಒತ್ತಿ ಹೇಳಿದರು. “ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಭಾರತವೂ ಪ್ರಕರಣಗಳಲ್ಲಿ ಏರಿಕೆಗೆ ಸಾಕ್ಷಿಯಾಗಬಹುದು. ಆದ್ದರಿಂದ ಉಪಕರಣಗಳು, ಪ್ರಕ್ರಿಯೆಗಳು ಮತ್ತು ಮಾನವ ಸಂಪನ್ಮೂಲಗಳ ವಿಷಯದಲ್ಲಿ ಸಂಪೂರ್ಣ ಕೋವಿಡ್ ಮೂಲಸೌಕರ್ಯವು ಕಾರ್ಯಾಚರಣೆಯ ಸಿದ್ಧತೆಯ ಸ್ಥಿತಿಯಲ್ಲಿರುವುದು ಮುಖ್ಯವಾಗಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಅತುಲ್ ಗೋಯೆಲ್, ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಎಲ್.ಶೆರ್ವಾ, ನೈರ್ಮಲ್ಯ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

****



(Release ID: 1886901) Visitor Counter : 138