ಗಣಿ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ - 2022 : ಗಣಿ ಸಚಿವಾಲಯ.


ಗಣಿಗಾರಿಕೆ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ಕಾಯ್ದೆಗಳು ಮತ್ತು ನಿಯಮಗಳ ತಿದ್ದುಪಡಿ

622 ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಸ್ಥಾಪನೆ; 2022 ರ ಅಕ್ಟೋಬರ್ ವರೆಗೆ ಸಂಗ್ರಹಿಸಿದ 71128.71 ಕೋಟಿ ರೂ.ಗಳಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನ

ಸಾಗರೋತ್ತರದಿಂದ  ವ್ಯೂಹಾತ್ಮಕ ಖನಿಜಗಳನ್ನು ಪಡೆಯಲು ಖನಿಜ ವಿದೇಶ ಇಂಡಿಯಾ ಲಿಮಿಟೆಡ್ (ಕೆ.ಎ.ಬಿ.ಐ.ಎಲ್.-ಕಾಬಿಲ್) ಪ್ರಯತ್ನಗಳನ್ನು ಹೆಚ್ಚಿಸಿದೆ

ಖನಿಜ ಪರಿಶೋಧನೆಗಾಗಿ ಏಕರೂಪದ ವೈಮಾನಿಕ-ಭೂಭೌತಿಕ ದತ್ತಾಂಶ ಪಡೆಯಲು ಜಿಎಸ್ಐನಿಂದ ರಾಷ್ಟ್ರೀಯ ವೈಮಾನಿಕ-ಭೂ ಭೌತಿಕ ನಕ್ಷೀಕರಣ (ಮ್ಯಾಪಿಂಗ್)

2021-22ನೇ ಹಣಕಾಸು ವರ್ಷದಲ್ಲಿ ಎಚ್.ಸಿ.ಎಲ್ 1812 ಕೋಟಿ ರೂ.ಗಳ ಅತ್ಯಧಿಕ ವಹಿವಾಟು ನಡೆಸಿದೆ. ಅಲ್ಲದೆ 3.57 ದಶಲಕ್ಷ ಟನ್ ಅದಿರು ಉತ್ಪಾದನೆಯ ಸಾಧನೆ ಮಾಡಿದೆ.

2021-22ನೇ ಹಣಕಾಸು ವರ್ಷದಲ್ಲಿ ನೆಲ್ಕೋ (ಎನ್.ಎ.ಎಲ್.ಸಿ.ಓ) 2952 ಕೋಟಿ ರೂ.ಗಳ ಅತ್ಯಧಿಕ ನಿವ್ವಳ ಲಾಭ ಮತ್ತು 6364 ಕೋಟಿ ರೂ.ಗಳ ರಫ್ತು ಗಳಿಕೆಯನ್ನು ದಾಖಲಿಸಿದೆ

Posted On: 26 DEC 2022 5:57PM by PIB Bengaluru

ಗಣಿಗಾರಿಕೆ ಚಟುವಟಿಕೆಯಲ್ಲಿ ಮತ್ತಷ್ಟು ವೇಗ ತರಲು ಕಾಯ್ದೆಗಳು ಮತ್ತು ನಿಯಮಗಳಲ್ಲಿ ತಿದ್ದುಪಡಿಗಳಿಗೆ ದಾರಿ ಮಾಡಿಕೊಡುವ ಸರಣಿ ನೀತಿ ಉಪಕ್ರಮಗಳು ಮತ್ತು ಸುಗಮ ವ್ಯಾಪಾರ 2022ರ ಸಾಲಿನಲ್ಲಿ ಭಾರತದ ಗಣಿಗಾರಿಕೆ ವಲಯವನ್ನು ಗುರುತಿಸುವಂತೆ ಮಾಡಿತು. ಗಣಿ ಸಚಿವಾಲಯವು ಕೈಗೊಂಡ ಅನೇಕ ವಿಶೇಷ ಉಪಕ್ರಮಗಳು ಕಾಯ್ದೆಗಳು ಮತ್ತು ನಿಯಮಗಳ ತಿದ್ದುಪಡಿಗಳಿಗೆ ಕಾರಣವಾಗಿ, ಆ ಮೂಲಕ ನಮ್ಮ ಗಣಿಗಾರಿಕೆ ವಲಯವು ವರ್ಷಗಳಿಂದ ಎದುರಿಸುತ್ತಿದ್ದ ಪ್ರಮುಖ ಅಡೆತಡೆಗಳು / ತೊಡಕುಗಳನ್ನು ತೊಡೆದುಹಾಕಿತು.

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ (ಜಿಎಸ್ಐ) ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನವೀನ ಖನಿಜ ಪರಿಶೋಧನಾ ಚಟುವಟಿಕೆಗಳನ್ನು ಕೈಗೊಂಡು, ಖನಿಜ ವಿದೇಶ ಭಾರತ ನಿಯಮಿತ (ಕಾಬಿಲ್)ದಿಂದ ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಚಿಲಿಯಂತಹ ದೇಶಗಳಿಂದ ವ್ಯೂಹಾತ್ಮಕ ಖನಿಜಗಳನ್ನು ಸಂಗ್ರಹಿಸಲು ಹೆಚ್ಚಿನ ಪ್ರಯತ್ನ ನಡೆಸಿದ್ದು, 2022ರಲ್ಲಿ ಗಣಿ ಸಚಿವಾಲಯವು ಕೈಗೊಂಡ ಪ್ರಮುಖ ಕ್ರಮಗಳ ಕೆಲವು ಮುಖ್ಯಾಂಶಗಳಾಗಿವೆ. 90 ಖನಿಜ ನಿಕ್ಷೇಪಗಳ ಯಶಸ್ವಿ ಹರಾಜು, 622 ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಸ್ಥಾಪನೆ ಮತ್ತು ಡಿಎಂಎಫ್ ಅಡಿಯಲ್ಲಿ 2022 ರ ಅಕ್ಟೋಬರ್ ವರೆಗೆ 71128.71 ಕೋಟಿ ರೂ.ಗಳ ಸಂಗ್ರಹ ಈ ಸಾಲಿನಲ್ಲಿ ಸಚಿವಾಲಯದ ಉಲ್ಲೇಖನಾರ್ಹ ಸಾಧನೆಗಳಾಗಿವೆ.

ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಗಣಿ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರ ಹಲವಾರು ಭೇಟಿಗಳು ಮತ್ತು ಪರಿಶೀಲನಾ ಸಭೆಗಳು 2022 ರಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಗಣಿ ಸಚಿವಾಲಯದ ಅಧೀನ ಕಚೇರಿಗಳು / ಪಿಎಸ್ಯುಗಳ ಅತ್ಯುತ್ತಮ ಕಾರ್ಯನಿರ್ವಹಣೆಗೆ ಸೂಕ್ತವಾದ ಉತ್ತೇಜನ ಒದಗಿಸಿದವು.

ಈ ಮೇಲಿನ ಕ್ರಮಗಳ ಜೊತೆಗೆ, ಸಚಿವಾಲಯವು ರಾಷ್ಟ್ರೀಯ ರಾಜಧಾನಿ ಮತ್ತು ಇತರ ರಾಜ್ಯಗಳಲ್ಲಿ ವಿವಿಧ ಬಾಧ್ಯಸ್ಥರನ್ನು ಒಳಗೊಂಡ ರಾಷ್ಟ್ರೀಯ ಗಣಿ ಸಮಾವೇಶಗಳು ಮತ್ತು ಪ್ರದರ್ಶನಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದು, ಭಾರತದ ಗಣಿ ಕ್ಷೇತ್ರಕ್ಕೆ ಹೆಚ್ಚಿನ ಉದ್ಯಮಿಗಳು / ಹೂಡಿಕೆದಾರರನ್ನು ಆಕರ್ಷಿಸಿದೆ.

ನೀತಿ ಉಪಕ್ರಮಗಳು: ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ

ಖನಿಜಗಳು (ಖನಿಜಾಂಶಗಳ ಪುರಾವೆಗಳು) ಎರಡನೇ ತಿದ್ದುಪಡಿ ನಿಯಮಗಳು, 2021 ಅನ್ನು 14.12.2021 ರಂದು ಅಧಿಸೂಚಿಸಲಾಗಿದ್ದು, ಇದು ಒಂದು ಪ್ರದೇಶಕ್ಕೆ ಸಂಬಂಧಿಸಿದಂತೆ ಸಂಯೋಜಿತ ಪರವಾನಗಿಯನ್ನು ಪಡೆಯಲು ಬಯಸುವ ಯಾವುದೇ ವ್ಯಕ್ತಿಗೆ ಸಂಯೋಜಿತ ಪರವಾನಗಿಯನ್ನು ನೀಡಲು ಪ್ರದೇಶದ ಹರಾಜಿಗಾಗಿ ಲಭ್ಯವಿರುವ ಭೂ-ವಿಜ್ಞಾನ ದತ್ತಾಂಶದೊಂದಿಗೆ ನಿರ್ದಿಷ್ಟ ನಮೂನೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶ ಒದಗಿಸುತ್ತದೆ.

ಸದರಿ ನಿಯಮಗಳ ಪ್ರಕಾರ, ಖನಿಜ ನಿಕ್ಷೇಪ (ಬ್ಲಾಕ್)ದ ಸಾಮರ್ಥ್ಯವನ್ನು ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರವು ಅಂತಹ ಪ್ರಸ್ತಾಪವನ್ನು ಸಮಿತಿಯ ಮುಂದೆ ಇಡತಕ್ಕದ್ದು. ಸಮಿತಿಯು ರಾಜ್ಯ ಸರಕಾರದಲ್ಲಿ ಈ ಪ್ರಸ್ತಾಪವನ್ನು ಸ್ವೀಕರಿಸಿದ ಅರವತ್ತು ದಿನಗಳೊಳಗಾಗಿ ಶಿಫಾರಸು ಮಾಡತಕ್ಕದ್ದು ಅಥವಾ ತಿರಸ್ಕರಿಸತಕ್ಕದ್ದು, ತದನಂತರ ರಾಜ್ಯ ಸರ್ಕಾರವು ಶಿಫಾರಸು ಮಾಡಲಾದ ನಿಕ್ಷೇಪವನ್ನು ಹರಾಜಿಗೆ ಅಧಿಸೂಚಿಸತಕ್ಕದ್ದು ಅಥವಾ ಅಂತಹ ಶಿಫಾರಸಿನ ಅರವತ್ತು ದಿನಗಳೊಳಗಾಗಿ ಆ ಶಿಫಾರಸನ್ನು ತಿರಸ್ಕರಿಸತಕ್ಕದ್ದು.

ಖನಿಜ (ಹರಾಜು) ನಾಲ್ಕನೇ ತಿದ್ದುಪಡಿ ನಿಯಮಗಳು, 2021 ಅನ್ನು ದಿನಾಂಕ 14.12.2021 ರಂದು ಅಧಿಸೂಚಿಸಲಾಗಿದೆ, ಇದು ಸಂಯೋಜಿತ ಪರವಾನಗಿಯನ್ನು ನೀಡಲು ವ್ಯಕ್ತಿಯು ಪ್ರಸ್ತಾಪಿಸಿದ ಪ್ರದೇಶವನ್ನು ಹರಾಜಿಗೆ ಹಾಕಿದರೆ, ಅಂತಹ ವ್ಯಕ್ತಿಯು ಸದರಿ ಪ್ರದೇಶದ ಹರಾಜಿನಲ್ಲಿ ಭಾಗವಹಿಸಲು ನಿರ್ದಿಷ್ಟಪಡಿಸಿದ ಮೊತ್ತದ ಶೇ. 50ರಷ್ಟು ಮಾತ್ರ ಬಿಡ್ ಭದ್ರತೆಯನ್ನು ಸಲ್ಲಿಸಬೇಕಾಗುತ್ತದೆ.

ಖನಿಜ (ಹರಾಜು) ತಿದ್ದುಪಡಿ ನಿಯಮಗಳು, 2022 ಅನ್ನು 18.02.2022 ರಂದು ಅಧಿಸೂಚಿಸಲಾಗಿದೆ. ದೊಡ್ಡ ಪ್ರದೇಶ ನಿಕ್ಷೇಪಗಳ ಹರಾಜಿಗೆ ಅನುಕೂಲವಾಗುವಂತೆ, ಹರಾಜಿನ ಮೂಲಕ ಸಂಯೋಜಿತ ಪರವಾನಗಿ ನೀಡಲು ಪ್ರಸ್ತಾಪಿಸಲಾದ ಪ್ರದೇಶವನ್ನು ಗುರುತಿಸಲು ಜಾಗತಿಕ ಸ್ಥಾನೀಕರಣ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಜೊತೆಗೆ, ಸಂಯೋಜಿತ ಪರವಾನಗಿಗಾಗಿ ಹರಾಜು ಮಾಡಬೇಕಾದ ಪ್ರದೇಶದ ವರ್ಗೀಕರಣದ ಅವಶ್ಯಕತೆಗಳಲ್ಲಿ, ಅರಣ್ಯ ಭೂಮಿ, ರಾಜ್ಯ ಸರ್ಕಾರದ ಸ್ವಾಮ್ಯದ ಭೂಮಿ ಮತ್ತು ರಾಜ್ಯ ಸರ್ಕಾರದ ಮಾಲೀಕತ್ವವಿಲ್ಲದ ಭೂಮಿ ಎಂಬುದನ್ನು ತೆಗೆದುಹಾಕಲಾಗಿದೆ.

 ಗಣಿ ಸಚಿವಾಲಯವು ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್) ಅಧಿನಿಯಮ, 1957 ರ ಎರಡನೇ ಅನುಸೂಚಿಯನ್ನು ದಿನಾಂಕ 15.03.2022ರ ಜಿ.ಎಸ್.ಆರ್. ಸಂಖ್ಯೆ 204 (ಇ) ರ ಮೂಲಕ ಗ್ಲೌಕೋನೈಟ್, ಮರದುಪ್ಪು (ಪೊಟ್ಯಾಶ್), ಪಚ್ಚೆ, ಮಾಲಿಬ್ಡಿನಮ್, ಪ್ಲಾಟಿನಂ ಸಮೂಹ ಖನಿಜಗಳು (ಪಿಜಿಎಂ), ಆಂಡಲೂಸೈಟ್, ಸಿಲ್ಲಿಮನೈಟ್ ಮತ್ತು ಕ್ಯಾನೈಟ್ ಗಳಿಗೆ ಸಂಬಂಧಿಸಿದಂತೆ ರಾಯಧನ ದರವನ್ನು ನಿರ್ದಿಷ್ಟಪಡಿಸಲು ತಿದ್ದುಪಡಿ ಮಾಡಲಾಗಿದೆ.

ಇದಲ್ಲದೆ, ಸಚಿವಾಲಯವು ಗ್ಲಾಕೊನೈಟ್ ಮತ್ತು ಮರದುಪ್ಪು (ಪೊಟ್ಯಾಷ್) ಸರಾಸರಿ ಮಾರಾಟ ಬೆಲೆಯನ್ನು ನಿರ್ದಿಷ್ಟಪಡಿಸಲು ದಿನಾಂಕ 15.03.2022 ರ ಜಿ.ಎಸ್.ಆರ್. ಸಂಖ್ಯೆ 205 (ಇ) ರ ಮೂಲಕ ಖನಿಜಗಳು (ಪರಮಾಣು ಮತ್ತು ಹೈಡ್ರೋ ಕಾರ್ಬನ್ಸ್ ಇಂಧನ ಖನಿಜ ಹೊರತುಪಡಿಸಿ) ರಿಯಾಯಿತಿ ತಿದ್ದುಪಡಿ ನಿಯಮಗಳು, 2022 ಅನ್ನು ಅಧಿಸೂಚಿಸಿದೆ.

ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ (ತಿದ್ದುಪಡಿ) ನಿಯಮಗಳು, 2022 ಅನ್ನು 11.04.2022 ರಂದು ಅಧಿಸೂಚಿಸಲಾಗಿದ್ದು, ಕಬ್ಬಿಣದ ಅದಿರಿನ ದತ್ತಾಂಶವನ್ನು ಶೇ.45 ರಿಂದ ಶೇ51 F ಗಿಂತ ಕಡಿಮೆ ಮತ್ತು ಶೇ.45 ಕ್ಕಿಂತ ಕಡಿಮೆ (ಮ್ಯಾಗ್ನೆಟೈಟ್ ಗಾಗಿ) ವರದಿ ಮಾಡಲು ಅನುವು ಮಾಡಿಕೊಡಲಾಗಿದೆ.
ಎಂ.ಎಂ.ಡಿ.ಆರ್. ಕಾಯ್ದೆ, 1957 ರ ಸೆಕ್ಷನ್ 10 ಎ (2) (ಬಿ) ಅಡಿಯಲ್ಲಿ ಅವಧಿ ಮೀರಿದ ರಿಯಾಯಿತಿದಾರರ ಪರಿಶೋಧನಾ ವೆಚ್ಚದ ಮರುಪಾವತಿಗಾಗಿ 03.06.2022 ರಂದು ಪರಿಶೋಧನಾ ವೆಚ್ಚದ ಮರುಪಾವತಿ ನಿಯಮಗಳು, 2022 ಅನ್ನು ಅಧಿಸೂಚನೆ ಹೊರಡಿಸಲಾಗಿದೆ.

1957ರ ಎಂಎಂಡಿಆರ್ ಕಾಯ್ದೆಯ 4ನೇ ಪ್ರಕರಣದ (1)ನೇ ಉಪಪ್ರಕರಣದ ಎರಡನೇ ನಿಬಂಧನೆಯ ಅಡಿಯಲ್ಲಿ ಹದಿಮೂರು ಮಾನ್ಯತೆ ಪಡೆದ ಖಾಸಗಿ ಖನಿಜ ಪರಿಶೋಧನಾ ಸಂಸ್ಥೆಗಳಿಗೆ ಸಂಭಾವ್ಯ ಪರವಾನಗಿ ಇಲ್ಲದೆ ನಿರೀಕ್ಷಣಾ ಕಾರ್ಯಾಚರಣೆಯನ್ನು ನಡೆಸುವ ಉದ್ದೇಶಕ್ಕಾಗಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ನಾವೀನ್ಯತೆಪೂರ್ಣ ಖನಿಜ ಪರಿಶೋಧನಾ ಉಪಕ್ರಮಗಳು - ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ)

2022-23ನೇ ಸಾಲಿನ ವಾರ್ಷಿಕ ಕಾರ್ಯಕ್ರಮದಲ್ಲಿ 2022ರ ನವೆಂಬರ್ ಅಂತ್ಯದವರೆಗೆ 19,000 ಚದರ ಕಿಲೋಮೀಟರ್ ಗುರಿಯಲ್ಲಿ 7,198 ಚದರ ಕಿ.ಮೀ.ಗಳ ವಿಶಿಷ್ಟ ಜ್ಞಾನ ವಿಷಯಾಧಾರಿತ ಮ್ಯಾಪಿಂಗ್ (1:25,000 ಪ್ರಮಾಣ (ಸ್ಕೇಲ್)ನಲ್ಲಿ) ಅನ್ನು ಜಿಎಸ್ಐ ಪೂರ್ಣಗೊಳಿಸಿದೆ.

2022-23ರ ವಾರ್ಷಿಕ ಕಾರ್ಯಕ್ರಮದಲ್ಲಿ 2022ರ ನವೆಂಬರ್ ವರೆಗೆ 250,000 ಚದರ ಕಿಲೋಮೀಟರ್ ಗುರಿಯಲ್ಲಿ 81,974 ಚ.ಕಿ.ಮೀ ರಾಷ್ಟ್ರೀಯ ಭೂರಾಸಾಯನಿಕ ಮ್ಯಾಪಿಂಗ್ (1:50,000 ಪ್ರಮಾಣದಲ್ಲಿ) ಪೂರ್ಣಗೊಳಿಸಲಾಗಿದೆ.

2022-23ನೇ ಸಾಲಿನ ವಾರ್ಷಿಕ ಕಾರ್ಯಕ್ರಮದ 1,00,000 ಚದರ ಕಿ.ಮೀ ಗುರಿಯ ಪೈಕಿ 29,506 ಚ.ಕಿ.ಮೀ ರಾಷ್ಟ್ರೀಯ ಭೂಭೌತಿಕ ನಕ್ಷೆ (1:50,000 ಪ್ರಮಾಣದಲ್ಲಿ) ನವೆಂಬರ್ 2022 ರವರೆಗೆ ಪೂರ್ಣಗೊಂಡಿದೆ.

2022-23ರ ವಾರ್ಷಿಕ ಕಾರ್ಯಕ್ರಮದಲ್ಲಿ 2022ರ ನವೆಂಬರ್ ಅಂತ್ಯದವರೆಗೆ 10,200 ಚದರ ಕಿಲೋಮೀಟರ್ ಗುರಿಯಲ್ಲಿ 5,613 ಚ.ಕಿ.ಮೀ. ದೊಡ್ಡ ಪ್ರಮಾಣದ ಮ್ಯಾಪಿಂಗ್ (1:10,000/12,500 ಪ್ರಮಾಣದಲ್ಲಿ) ಜಿಎಸ್ಐ ಪೂರ್ಣಗೊಳಿಸಿದೆ.

ರಾಷ್ಟ್ರೀಯ ವೈಮಾನಿಕ-ಭೂಭೌತಿಕ ಮ್ಯಾಪಿಂಗ್ ಕಾರ್ಯಕ್ರಮ (ಎನ್.ಎ.ಜಿ.ಎಂ.ಪಿ.)ವು, ಮೊದಲೇ-ಗುರುತಿಸಲಾದ ಸ್ಪಷ್ಟ ಭೌಗೋಳಿಕ ಸಂಭಾವ್ಯ ಪ್ರದೇಶದ ಮೇಲೆ ಏಕರೂಪದ ವೈಮಾನಿಕ-ಭೂಭೌತಿಕ ದತ್ತಾಂಶವನ್ನು ಪಡೆಯಲು ಜಿಎಸ್ಐನ ಪ್ರಮುಖ ಕಾರ್ಯಕ್ರಮವಾಗಿದೆ. ಜಿಎಸ್ಐ 2022-23 ರ ವಾರ್ಷಿಕ ಕಾರ್ಯಕ್ರಮದ ಸಮಯದಲ್ಲಿ, 2022 ರ ಡಿಸೆಂಬರ್ ಮಧ್ಯಭಾಗದವರೆಗೆ, ಹೆಚ್ಚಿನ ಅನ್ವೇಷಣೆಗಾಗಿ ಸಂಭಾವ್ಯ ಪ್ರದೇಶಗಳನ್ನು ಗುರುತಿಸಲು ಸುಮಾರು 25,086 ಲೈನ್ ಕಿ.ಮೀ. ಎನ್ಎಜಿಎಂಪಿ ಮೂಲಕ ಹಾರಾಟ ನಡೆಸಲಾಗಿದೆ. 2022-23ನೇ ಸಾಲಿನಲ್ಲಿ 322 ಖನಿಜ ಪರಿಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ವ್ಯೂಹಾತ್ಮಕ, ನಿರ್ಣಾಯಕ ಮತ್ತು ರಸಗೊಬ್ಬರ ಖನಿಜಗಳ ಅನ್ವೇಷಣೆಗೆ ಉತ್ತೇಜನ ನೀಡಲು, ಜಿಎಸ್ಐ 2022-23 ರ ಹಣಕಾಸು ವರ್ಷದಲ್ಲಿ ಆರ್.ಇ.ಇ., ಲಿ, ಮೋ, ರಸಗೊಬ್ಬರ ಖನಿಜಗಳು, ಟಂಗ್ ಸ್ಟನ್, ಗ್ರ್ಯಾಫೈಟ್ ಇತ್ಯಾದಿಗಳಂತಹ ನಿರ್ಣಾಯಕ ಮತ್ತು ವ್ಯೂಹಾತ್ಮಕ ಖನಿಜಗಳ ಬಗ್ಗೆ 125 ಯೋಜನೆಗಳನ್ನು ಕೈಗೊಂಡಿದೆ.

2022 ರಲ್ಲಿ ಜಿಎಸ್ಐ 16ಕ್ಕೂ ಹೆಚ್ಚು (ಜಿ 3 / ಜಿ 2) ವರದಿಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ. ಇವುಗಳಲ್ಲಿ, ಸುಣ್ಣದಕಲ್ಲು, ತಾಮ್ರ, ಬಾಕ್ಸೈಟ್, ಮಾಲಿಬ್ಡಿನಮ್, ಪಿಜಿಇ, ಪೊಟ್ಯಾಷ್ ಮತ್ತು ಕಬ್ಬಿಣ ಮತ್ತು ಮ್ಯಾಂಗನೀಸ್ ನ ತಲಾ ಎರಡು ನಿಕ್ಷೇಪಗಳು ಮತ್ತು ಕಬ್ಬಿಣ ಮತ್ತು ಬೇಸ್ ಮೆಟಲ್ ನ ತಲಾ ಒಂದು ನಿಕ್ಷೇಪ ಸೇರಿವೆ.

ಮಾರ್ಚ್ ನಲ್ಲಿ ಮೂರನೇ ಹಂತದಲ್ಲಿ 50 ಸಂಭಾವ್ಯ ಜಿ4 ಹಂತದ ನಿಕ್ಷೇಪಗಳನ್ನು ಮತ್ತು 2022 ರ ಜುಲೈನಲ್ಲಿ ನಾಲ್ಕನೇ ಹಂತದಲ್ಲಿ 50 ಸಂಭಾವ್ಯ ಜಿ 4 ಹಂತದ ನಿಕ್ಷೇಪಗಳನ್ನು ಸಂಯೋಜಿತ ಪರವಾನಗಿಗಾಗಿ ಹರಾಜಿಗಾಗಿ ಜಿಎಸ್ಐ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಿದೆ.

ಪ್ರಸ್ತುತ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಜಿಎಸ್ಐನ ಪ್ರಮುಖ ಭೂ ಪ್ರಾದೇಶಿಕ ಪೋರ್ಟಲ್ "ಭೂಕೋಶ್" ಮೂಲಕ ಸಂಬಂಧಪಟ್ಟ ಎಲ್ಲಾ ಬಾಧ್ಯಸ್ಥರ ಬಳಕೆಗಾಗಿ ಬಹು-ವಿಷಯಾಧಾರಿತ ಭೂವೈಜ್ಞಾನಿಕ ಮಾಹಿತಿಯನ್ನು ಮುಕ್ತವಾಗಿ ಪ್ರಸಾರ ಮಾಡುವ ಹೊಣೆಗಾರಿಕೆಯನ್ನು ಪೂರೈಸಲು ಜಿಎಸ್ಐ ಆನ್ ಲೈನ್ ಪ್ರಮುಖ ವಾಣಿಜ್ಯ ಅಂತರ್ಗತ ವ್ಯವಸ್ಥೆ (ಒಸಿಬಿಐಎಸ್) ಪೋರ್ಟಲ್ ಅನ್ನು ಆರಂಭಿಸಿದೆ. ಈ ದತ್ತಾಂಶವನ್ನು ಖನಿಜ ಮುನ್ಸೂಚನೆಗಾಗಿ ಮತ್ತು ಸಂಶೋಧನೆಯ ಮೂಲಕ ಹೊಸ ಜ್ಞಾನವನ್ನು ಸೃಷ್ಟಿಸಲು ಯಾರು ಬೇಕಾದರೂ ಬಳಸಬಹುದು. 2022 ರಲ್ಲಿ 29021 ಭೂ ಪ್ರಾದೇಶಿಕ ಮ್ಯಾಪ್ಸ್ ಮತ್ತು ಭೂ ಭೌತಿಕ ದತ್ತಾಂಶ ಸೆಟ್ ಗಳನ್ನು ಬಾಹ್ಯ ಬಳಕೆದಾರರು ಡೌನ್ಲೋಡ್ ಮಾಡಿದ್ದಾರೆ ಮತ್ತು ಜಿಎಸ್ಐನ "ಭೂಕೋಶ್" ಪೋರ್ಟಲ್ ನಲ್ಲಿ ನೋಂದಾಯಿತ ಬಳಕೆದಾರರು 41771 ಲಾಗಿನ್ ಹಿಟ್ ಮಾಡಿದ್ದಾರೆ.

ವಾರ್ಷಿಕ ಕಾರ್ಯಕ್ರಮ 2022-23 ರಲ್ಲಿ, ಹಲವಾರು ವ್ಯೂಹಾತ್ಮಕವಾಗಿ ಪ್ರಮುಖ ಪ್ರಕಟಣೆಗಳನ್ನು ಜಿಎಸ್ಐ ಬಿಡುಗಡೆ ಮಾಡಿದೆ.

ಈ ಮೇಲಿನವುಗಳಲ್ಲದೆ, 2022 ರಲ್ಲಿ ಜಿಎಸ್ಐ ತನ್ನ ಸಾರ್ವಜನಿಕ ಉತ್ತಮ ಭೂವೈಜ್ಞಾನಿಕ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಖನಿಜ ವಿದೇಶ ಭಾರತ ನಿಯಮಿತ (ಕೆ.ಎ.ಬಿ.ಐ.ಎಲ್-ಕಾಬಿಲ್)

ಸಾಗರೋತ್ತರವಾಗಿ ವ್ಯೂಹಾತ್ಮಕ ಖನಿಜಗಳ ಪಡೆಯುವಿಕೆ :-

ಭಾರತದಲ್ಲಿ ಸರಬರಾಜಿಗಾಗಿ ಸಾಗರೋತ್ತರ ಸ್ಥಳಗಳಲ್ಲಿ ವ್ಯೂಹಾತ್ಮಕ ಖನಿಜಗಳನ್ನು ಗುರುತಿಸಲು, ಪಡೆದುಕೊಳ್ಳಲು, ಅಭಿವೃದ್ಧಿಪಡಿಸಲು, ಸಂಸ್ಕರಿಸಲು ಮತ್ತು ವಾಣಿಜ್ಯಾತ್ಮಕವಾಗಿ ಬಳಸಲು ನೆಲ್ಸೋ (ಎನ್ಎಎಲ್.ಸಿ.ಒ,) ಎಚ್.ಸಿ.ಎಲ್ ಮತ್ತು ಎಂಇಸಿಎಲ್ ನಡುವೆ ಖನಿಜ ವಿದೇಶ ಭಾರತ ನಿಯಮಿತ (ಕಾಬಿಲ್) ಎಂಬ ಜೆವಿ ಕಂಪನಿಯನ್ನು 2019 ರಲ್ಲಿ ಸ್ಥಾಪಿಸಲಾಯಿತು. ಕಾಬಿಲ್ ಲಿಥಿಯಂ ಮತ್ತು ಕೋಬಾಲ್ಟ್ ನಂತಹ ಬ್ಯಾಟರಿ ಖನಿಜಗಳನ್ನು ಗುರುತಿಸಲು ಮತ್ತು ಸಂಗ್ರಹಿಸಲು ಗಮನ ಹರಿಸುತ್ತಿದೆ. ಆಸ್ಟ್ರೇಲಿಯಾ, ಅರ್ಜೆಂಟೈನಾ ಮತ್ತು ಚಿಲಿಯಲ್ಲಿ ಕೆಲವು ಕಂಪನಿಗಳು / ಯೋಜನೆಗಳೊಂದಿಗೆ ತೊಡಗಿಸಿಕೊಳ್ಳುತ್ತಿವೆ.   ಸಂಕ್ಷಿಪ್ತ ವಿವರಗಳು ಈ ಕೆಳಗಿನಂತಿವೆ:

             ಆಸ್ಟ್ರೇಲಿಯಾ:
 ಆಸ್ಟ್ರೇಲಿಯಾದ ಖನಿಜ ಸಂಪತ್ತುಗಳ ಲಿ ಮತ್ತು ಕೋ ಜೊತೆ ಜಂಟಿ ಯಥೋಚಿತ ಪರಿಶ್ರಮ ಮತ್ತು ಮತ್ತಷ್ಟು ಜಂಟಿ ಹೂಡಿಕೆಗಾಗಿ ಭಾರತದ ಕಾಬಿಲ್ ಮತ್ತು ಆಸ್ಟ್ರೇಲಿಯಾ ಸರ್ಕಾರದ ಕೈಗಾರಿಕೆ, ವಿಜ್ಞಾನ ಮತ್ತು ಸಂಪನ್ಮೂಲ ಇಲಾಖೆ (ಡಿಐಎಸ್ಇಆರ್) ನಿರ್ಣಾಯಕ ಖನಿಜ ಕಚೇರಿ (ಸಿಎಂಒ), ನಡುವೆ ವಿಸ್ತೃತ ಸಹಯೋಗದ ಚೌಕಟ್ಟಿನೊಂದಿಗೆ ತಿಳಿವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಒಪ್ಪಿತ ಕ್ರಮಗಳ ಅಡಿಯಲ್ಲಿ, ನಿರ್ಣಾಯಕ ಖನಿಜಗಳ ಮಾರುಕಟ್ಟೆ ಅನ್ವೇಷಣೆಯನ್ನು ಜುಲೈ 2022 ರಲ್ಲಿ ಆಸ್ಟ್ರೇಲಿಯಾವು ಸಿದ್ಧಪಡಿಸಿತು, ಅದರ ಆಧಾರದ ಮೇಲೆ ಹೆಚ್ಚಿನ ರೀತಿಯಲ್ಲಿ ಖನಿಜ ಸ್ವತ್ತುಗಳನ್ನು ತೊಡಗಿಸಿಕೊಳ್ಳಲು ಗುರುತಿಸಲಾಗುತ್ತದೆ.

ಕಾಬಿಲ್ ಮತ್ತು ಸಿಎಂಒ ಲಿಥಿಯಂ ಮತ್ತು ಕೋಬಾಲ್ಟ್ ಯೋಜನೆಗಳನ್ನು ಗುರುತಿಸಲು ವಾಣಿಜ್ಯ ಸಲಹಾ ಸೇವೆಗಳನ್ನು ತೊಡಗಿಸಿಕೊಳ್ಳಲು ಮತ್ತು ಆಸ್ಟ್ರೇಲಿಯಾದಲ್ಲಿ ಯೋಜನೆಗಳ ಮತ್ತಷ್ಟು ಯಥೋಚಿತ ಪರಿಶ್ರಮ ಖರೀದಿ ವಿಧಾನವನ್ನು ಪರಸ್ಪರ ಚರ್ಚಿಸಿದ್ದು, ಅಂತಿಮಗೊಳಿಸಿವೆ.

ವಾಣಿಜ್ಯ ಸಲಹೆಗಾರರನ್ನು ನೇಮಿಸಲು ಆರ್.ಎಫ್. ಕ್ಯೂ ಅನ್ನು ಅಕ್ಟೋಬರ್ 2022 ರಲ್ಲಿ ಸಿಎಂಒ ಆಸ್ಟ್ರೇಲಿಯಾ ಬಿಡುಗಡೆ ಮಾಡಿತು.  ವಾಣಿಜ್ಯಾತ್ಮಕ ಸಲಹೆಗಾರರನ್ನು ಜನವರಿ 2023 ರೊಳಗೆ ನೇಮಿಸಿಕೊಳ್ಳುವ ನಿರೀಕ್ಷೆಯಿದೆ.

                 ಅರ್ಜೆಂಟೀನಾ:-
ಅರ್ಜೆಂಟೀನಾದಲ್ಲಿ ಲೀಥಿಯಂ ಮತ್ತು ಇತರ ಖನಿಜ ಸಂಪತ್ತುಗಳ ಮೂಲವನ್ನು ಅನ್ವೇಷಿಸಲು ಜುಲೈ -ಸೆಪ್ಟೆಂಬರ್, 2020 ರಲ್ಲಿ ಜೆಇಎಂಎಸ್ಇ, ಸಿ.ಎ.ಎಂ.ವೈ.ಇ.ಎನ್. (ಕ್ಯಾಮ್ಯೆನ್) ಮತ್ತು ವೈಪಿಎಫ್ (ಅರ್ಜೆಂಟೀನಾದ ಸರ್ಕಾರಿ ಕಂಪನಿಗಳು) ನೊಂದಿಗೆ ಕಾಬಿಲ್ ಮೂರು ತಿಳಿವಳಿಕಾ ಒಡಂಬಡಿಕೆಗಳಿಗೆ ಅಂಕಿತ ಹಾಕಿದೆ.

ಅಕ್ಟೋಬರ್, 2022 ರಲ್ಲಿ, ಅರ್ಜೆಂಟೀನಾದ ಕ್ಯಾಮ್ಯೆನ್, ಬ್ಯೂನಸ್ ಐರಿಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ, ಅರ್ಜೆಂಟೀನಾದ ಕ್ಯಾಟಮಾರ್ಕಾದ ಲಾ ಅಗುಡಾ ಮತ್ತು ಎಲ್ ಇಂಡಿಯೋದಲ್ಲಿ ಎರಡು ಸಂಭಾವ್ಯ ಲಿಥಿಯಂ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದೆ.

ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ ಕ್ಯಾಮ್ಯೆನ್ ಪ್ರಸ್ತಾಪಿಸಿದ ಲಿಥಿಯಂ ಪರಿಶೋಧನಾ ಯೋಜನೆಗಳನ್ನು ನಿರ್ಧರಣೆ ಮತ್ತು ಮೌಲ್ಯಮಾಪನ ಮಾಡಲು ಭೂಗರ್ಭಶಾಸ್ತ್ರಜ್ಞರ ತಂಡವು 2022 ರ ನವೆಂಬರ್ 20 ರಿಂದ ಎರಡು ವಾರಗಳ ಅವಧಿಗೆ ಅರ್ಜೆಂಟೀನಾಕ್ಕೆ ಭೇಟಿ ನೀಡಿತು. ಪ್ರಾಥಮಿಕ ಮೌಲ್ಯಮಾಪನದ ನಂತರ, ಕಾಬಿಲ್ ಕಾಲಾನಂತರದಲ್ಲಿ ಲಿಥಿಯಂ ಹೊರತೆಗೆಯಲು ಯೋಜನೆಗಳನ್ನು ರೂಪಿಸುವ ಉದ್ದೇಶದೊಂದಿಗೆ ಗುರುತಿಸಲಾದ ಎರಡು ಸಂಭಾವ್ಯ ಕ್ಷೇತ್ರಗಳಲ್ಲಿ ಕ್ಯಾಮ್ಯೆನ್ ನೊಂದಿಗೆ ಪಾಲುದಾರನಾಗುವ ಆಸಕ್ತಿಯನ್ನು ಡಿಸೆಂಬರ್ 2022 ರಲ್ಲಿ ವ್ಯಕ್ತಪಡಿಸಿತು.

                 ಚಿಲಿ:
ಚಿಲಿಯಲ್ಲಿರುವ ಭಾರತದ ರಾಯಭಾರಿಯ ಸಲಹೆಯಂತೆ, ಕಾಬಿಲ್ ವಿಷಯ ಬಹಿರಂಗಪಡಿಸದಿರುವ ಕರಡು ಒಪ್ಪಂದ (ಎನ್.ಡಿ.ಎ) ಕ್ಕೆ ಕೆಲವು ಮಾರ್ಪಾಡುಗಳನ್ನು ಸೂಚಿಸಿತು ಮತ್ತು ಚಿಲಿಯಲ್ಲಿ ಲಿಥಿಯಂ ಗಣಿಗಾರಿಕೆ ಯೋಜನೆಗಳನ್ನು ಜಂಟಿಯಾಗಿ ಮುಂದುವರಿಸಲು ಇಎನ್ಎಎಂಐ ಮತ್ತು ಕಾಬಿಲ್ ಎನ್.ಡಿ.ಎಗೆ ಸಹಿ ಹಾಕುವ ಮೊದಲು ಅವುಗಳ ಸಮ್ಮತಿಯನ್ನು ಇಎನ್ಎಎಂಐನೊಂದಿಗೆ ವಿನಿಮಯಮಾಡಿಕೊಂಡಿವೆ.

ಖನಿಜ ನಿಕ್ಷೇಪ ಹರಾಜು ಮತ್ತು ಜಿಲ್ಲಾ ಖನಿಜ ನಿಧಿ (ಡಿಎಂಎಫ್)

2022 ರ ಸಾಲಿನಲ್ಲಿ, 21.12.2022 ರವರೆಗೆ, ದೇಶದಲ್ಲಿ 90 ಖನಿಜ ನಿಕ್ಷೇಪಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಇವುಗಳಲ್ಲಿ 51 ಖನಿಜ ನಿಕ್ಷೇಪಗಳನ್ನು ಗಣಿ ಗುತ್ತಿಗೆ (ಎಂಎಲ್) ಗಾಗಿ ಹರಾಜು ಹಾಕಲಾಯಿತು ಮತ್ತು ಉಳಿದ 39 ನಿಕ್ಷೇಪಗಳನ್ನು ಸಂಯುಕ್ತ ಪರವಾನಗಿ (ಸಿಎಲ್) ಎಂದು ಹರಾಜು ಹಾಕಲಾಯಿತು.

23 ರಾಜ್ಯಗಳ 622 ಜಿಲ್ಲೆಗಳಲ್ಲಿ ಡಿಎಂಎಫ್ ಸ್ಥಾಪಿಸಲಾಗಿದೆ. ಡಿಎಂಎಫ್ ಅಡಿಯಲ್ಲಿ ಅಕ್ಟೋಬರ್ 2022 ರವರೆಗೆ ಒಟ್ಟು 71128.71 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಪಿ.ಎಂ.ಕೆ.ಕೆ.ಕೆ.ವೈ. ಅಡಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು, ಡಿ.ಎಂ.ಎಫ್. ಅಡಿಯಲ್ಲಿನ ಹಣವನ್ನು ಬಳಸಿಕೊಳ್ಳುವ ಮೂಲಕ, ವಿವಿಧ ಯೋಜನೆಗಳಿಗೆ 64185.76 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಮತ್ತು 37923.18 ಕೋಟಿ ರೂ.ಗಳನ್ನು ಬಳಸಲಾಗಿದೆ. ಈ ಯೋಜನೆಯಡಿ ಒಟ್ಟು 253747 ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು ವಿವಿಧ ರಾಜ್ಯಗಳ ಹೆಚ್ಚಿನ ಸಂಖ್ಯೆಯ ಜನರಿಗೆ ಅನುಕೂಲವಾಗುವಂತೆ 135912 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ಇಲ್ಲಿಯವರೆಗೆ, 18 ರಾಜ್ಯಗಳು ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರುಗಳನ್ನು ದೊಡ್ಡ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತ ಮಂಡಳಿಗೆ ಸೇರಿಸುವ ಬಗ್ಗೆ ದಿನಾಂಕ 23.04.2021 ರ ಆದೇಶವನ್ನು ಪಾಲಿಸಿವೆ, ಮತ್ತು 20 ರಾಜ್ಯಗಳು ದಿನಾಂಕ 12.07.2021 ರ ಆದೇಶವನ್ನು ಪಾಲಿಸಿವೆ, ಇದರ ಮೂಲಕ ರಾಜ್ಯಗಳು ಇತರ ಯಾವುದೇ ರಾಜ್ಯ ಮಟ್ಟದ  ನಿಧಿಗೆ (ಯಾವುದೇ ಹೆಸರಿನಿಂದ ಕರೆಯಲಾಗುವ) ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿ ಅಥವಾ ಇತರ ಯಾವುದೇ ನಿಧಿಗೆ ಡಿಎಂಎಫ್ ನಿಧಿಗಳನ್ನು ವರ್ಗಾಯಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, 316 ಡಿಎಂಎಫ್ ಟ್ರಸ್ಟ್ ಗಳಿಗೆ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 10 (46) ರ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.

ಗಣಿ ಸಚಿವಾಲಯವು ದಿನಾಂಕ 24.06.2022 ರ ಆದೇಶದ ಮೂಲಕ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಬೇಸ್ ಲೈನ್ ಸಮೀಕ್ಷೆ / ಮೌಲ್ಯಮಾಪನದ ಮೂಲಕ ಗುರುತಿಸಲಾದ ಫಲಶ್ರುತಿಗಳು ಮತ್ತು ಅಂತರಗಳ ಆಧಾರದ ಮೇಲೆ ಐದು ವರ್ಷಗಳ ದೃಷ್ಟಿಕೋನದ ಯೋಜನೆಯನ್ನು ತಯಾರಿಸಲು ಮತ್ತು ಡಿಎಂಎಫ್ ಅಡಿಯಲ್ಲಿನ ಕಾಮಗಾರಿಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿಧಿಯ ಬಳಕೆಯನ್ನು ನಿಯಂತ್ರಿಸಲು ನಿರ್ದೇಶನಗಳನ್ನು ನೀಡಿದೆ.

ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (ಎಚ್ ಸಿಎಲ್) ಸಾಧನೆಗಳು

ಕಂಪನಿಯು 2021-22ರ ಹಣಕಾಸು ವರ್ಷದಲ್ಲಿ ತೆರಿಗೆಗೆ ಮುನ್ನ 381.72 ಕೋಟಿ ರೂ. ಲಾಭ ಗಳಿಸಿದ್ದು, ಇದೇ ಮೊದಲ ಬಾರಿಗೆ 1812.21 ಕೋಟಿ ರೂ.ಗಳ ಗರಿಷ್ಠ ನಿವ್ವಳ ವಹಿವಾಟು ನಡೆಸಿದೆ.

2021-22ನೇ ಹಣಕಾಸು ವರ್ಷದಲ್ಲಿ ಎಚ್.ಸಿ.ಎಲ್ 74.20 ಕೋಟಿ ರೂ.ಗಳ ಲಾಭಾಂಶವನ್ನು ಸರ್ಕಾರಕ್ಕೆ ಪಾವತಿಸಿದೆ, ಇದು ಡಿಐಪಿಎಎಂ ಮಾರ್ಗಸೂಚಿಗಳ ಅನುಸರಣೆಯಲ್ಲಿ ತೆರಿಗೆಯ ನಂತರದ ಲಾಭದ (ಪಿಎಟಿ) ಶೇ.30.01 ರಷ್ಟಿದ್ದು, ಎಲ್ಲಾ ಷೇರುದಾರರಿಗೆ ಒಟ್ಟು ಲಾಭಾಂಶ ಪಾವತಿಯು ರೂ.112.17 ಕೋಟಿ ಆಗಿದೆ.

ಕಂಪನಿಯ ಸಾಲದ ಹೊಣೆಗಾರಿಕೆಯನ್ನು ಜೂನ್ 2020 ರಲ್ಲಿದ್ದ ಸುಮಾರು 1650 ಕೋಟಿ ರೂ.ಗಳ ಗರಿಷ್ಠದಿಂದ 31.11.2022 ಕ್ಕೆ ಸುಮಾರು 440 ಕೋಟಿ ರೂ.ಗಳಿಗೆ ಇಳಿಸಲಾಗಿದೆ.

Underground mining at MCP 4

ಲೋಹ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕಾಗಿ 24.06.22 ರಂದು ನವದೆಹಲಿಯಲ್ಲಿ ನಡೆದ ಫಾರ್ಚೂನ್ ಇಂಡಿಯಾದ "ದಿ ನೆಕ್ಸ್ಟ್ 500: ಬ್ರೇಕಿಂಗ್ ನ್ಯೂಸ್ ಫ್ರಾಂಟಿಯರ್ಸ್" ಕಾರ್ಯಕ್ರಮದಲ್ಲಿ ಎಚ್.ಸಿ.ಎಲ್ ಅನ್ನು ವಲಯದ ತಾರೆ (ಸೆಕ್ಟೋರಲ್ ಸ್ಟಾರ್)ಎಂದು ಗೌರವಿಸಲಾಯಿತು.

ಕಂಪನಿಯು ತನ್ನ ಗಣಿಗಾರಿಕೆ ಸಾಮರ್ಥ್ಯವನ್ನು ಈಗಿನ ವಾರ್ಷಿಕ ಸುಮಾರು 4.0 ದಶಲಕ್ಷ ಟನ್ ಗಳಿಂದ 12.2 ದಶಲಕ್ಷ ಟನ್ ಗಳಿಗೆ (ಅನುಷ್ಠಾನ ಹಂತದಲ್ಲಿದೆ) ಮತ್ತು ಅಸ್ತಿತ್ವದಲ್ಲಿರುವ ಗಣಿಗಳ ವಿಸ್ತರಣೆ, ಮುಚ್ಚಿದ ಗಣಿಗಳ ಪುನರಾರಂಭ ಮತ್ತು ಹೊಸ ಗಣಿಗಳನ್ನು ತೆರೆಯುವ ಮೂಲಕ ಎರಡನೇ ಹಂತದಲ್ಲಿ ವಾರ್ಷಿಕ 12.2 ದಶಲಕ್ಷ ಟನ್ ಗಳಿಂದ ವರ್ಷಕ್ಕೆ 20.2 ದಶಲಕ್ಷ ಟನ್ ಗಳಿಗೆ ಹೆಚ್ಚಿಸಲು ಯೋಜಿಸಿದೆ. 2021-22ರ ಆರ್ಥಿಕ ವರ್ಷದಲ್ಲಿ, ಎಚ್.ಸಿ.ಎಲ್ 3.57 ದಶಲಕ್ಷ ಟನ್ ಅದಿರು ಉತ್ಪಾದನೆ ಮಾಡಿದೆ.

ಎಚ್.ಸಿ.ಎಲ್ 2021-22ರ ಹಣಕಾಸು ವರ್ಷದಲ್ಲಿ 11700 ಮೀಟರ್ ಗಳಷ್ಟು (ಜನವರಿ 2022 ರಿಂದ ಡಿಸೆಂಬರ್, 2022 ರವರೆಗೆ) ಮೇಲ್ಮೈ ಪರಿಶೋಧನೆ ಕೊರೆಯುವ ಕಾರ್ಯ ನಡೆಸಿತು. ಇದಲ್ಲದೆ, ಕೊಲಿಹಾನ್ ಗಣಿ ಗುತ್ತಿಗೆಯಲ್ಲಿ ಭೂಭೌತಿಕ ಅನ್ವೇಷಣೆಯನ್ನು ನಡೆಸಲಾಗುತ್ತಿದೆ. ಸುರ್ದಾ ಮತ್ತು ಖೇತ್ರಿ ಗಣಿ ಗುತ್ತಿಗೆಯಲ್ಲಿ ಮೇಲ್ಮೈ ಪರಿಶೋಧನೆ ಡ್ರಿಲ್ಲಿಂಗ್ ಗಾಗಿ ಹೊಸ ಟೆಂಡರ್ ಗಳು ಅನುಮೋದನೆ ಹಂತದಲ್ಲಿವೆ.

 

Fh7ExCVaYAADQY0

ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು, ಭಾರತದ ದ್ವಿತೀಯ ಮಹಿಳೆ, ಡಾ. ಸುದೇಶ್ ಧನಕರ್ ಮತ್ತು ಗಣಿಗಳ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರೊಂದಿಗೆ 2022 ರ ನವೆಂಬರ್ ನಲ್ಲಿ ಖೇತ್ರಿ ತಾಮ್ರ ಸಂಕೀರ್ಣಕ್ಕೆ (ಕೆಸಿಸಿ) ಭೇಟಿ ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಗಣಿ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಅವರು ಕ್ರಮವಾಗಿ 22.09.2022 ಮತ್ತು 20.10.2022 ರಂದು ಕೋಲ್ಕತಾದ ಎಚ್.ಸಿ.ಎಲ್. ಸಾಂಸ್ಥಿಕ ಕಚೇರಿಗೆ ಭೇಟಿ ನೀಡಿ ಒಟ್ಟಾರೆ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು ಮತ್ತು ವಿಶೇಷ ಅಭಿಯಾನ 2 ರ ಕಡೆಗೆ ಕಂಪನಿಯ ಉಪಕ್ರಮವನ್ನು ಪರಿಶೀಲಿಸಿದರು.
 

1

 

1

ಎಚ್.ಸಿಎಲ್.ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರುಣ್ ಕುಮಾರ್ ಶುಕ್ಲಾ ಅವರಿಗೆ ಕಲ್ಲಿದ್ದಲು ಗಣಿಗಾರಿಕೆಯೇತರ ಉದ್ಯಮಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2021-22ನೇ ಸಾಲಿನ ಎಂಜಿಎಂಐ ಪ್ರಶಸ್ತಿಯನ್ನು 25.09.2022 ರಂದು ಕೋಲ್ಕತಾದಲ್ಲಿ ಭಾರತೀಯ ಗಣಿಗಾರಿಕೆ, ಭೂವೈಜ್ಞಾನಿಕ ಮತ್ತು ಲೋಹಶಾಸ್ತ್ರ ಸಂಸ್ಥೆ ವತಿಯಿಂದ ಪ್ರದಾನ ಮಾಡಲಾಗಿದೆ.

 

2020-21ನೇ ಹಣಕಾಸು ವರ್ಷದಲ್ಲಿ ಎಚ್.ಸಿ.ಎಲ್. ತಿಳಿವಳಿಕಾ ಒಡಂಬಡಿಕೆ ಶ್ರೇಯಾಂಕವನ್ನು 18.01.2022 ರಂದು ಡಿಪಿಇ 'ಅತ್ಯುತ್ತಮ' ಎಂದು ಘೋಷಿಸಿದೆ.

ಮಲಂಜ್ ಖಂಡ್ ತಾಮ್ರ ಯೋಜನೆ, ಗಣಿ ಪರಿಸರ ಮತ್ತು ಖನಿಜ ಸಂರಕ್ಷಣಾ ಸಪ್ತಾಹ 2021-22 ರಲ್ಲಿ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ 1 ನೇ ಬಹುಮಾನವನ್ನು ಗೆದ್ದಿದೆ, ಜೊತೆಗೆ ವ್ಯವಸ್ಥಿತ ಮತ್ತು ವೈಜ್ಞಾನಿಕ ಗಣಿಗಾರಿಕೆ, ತ್ಯಾಜ್ಯ ಸುರಿಯುವ ನಿರ್ವಹಣೆ ಮತ್ತು ಖನಿಜ ಪರಿಹಾರದಲ್ಲಿ ಮೊದ ಸ್ಥಾನ ಮತ್ತು  ಪುನಶ್ಚೇತನ ಮತ್ತು ಪುನರ್ವಸತಿಯಲ್ಲಿ 3ನೇ ಸ್ಥಾನ  ಗಳಿಸಿದೆ.

ಗಣಿ ಸುರಕ್ಷತಾ ನಾಗ್ಪುರ ವಲಯದ ಮಹಾನಿರ್ದೇಶನಾಲಯದ ಆಶ್ರಯದಲ್ಲಿ 2021-22ರ ಲೋಹಜೀವಕ ಗಣಿಗಳ ಸುರಕ್ಷತಾ ಸಪ್ತಾಹವನ್ನು ಆಯೋಜಿಸಲಾಗಿದೆ. ಎಂಸಿಪಿ ಘಟಕವು ವಿವಿಧ ವಿಭಾಗಗಳಲ್ಲಿ ನಾಲ್ಕು ಬಹುಮಾನಗಳನ್ನು ಗೆದ್ದುಕೊಂಡಿದೆ.

ಅಜ್ಮೀರ್ ಪ್ರದೇಶದ 32 ನೇ ಗಣಿ ಪರಿಸರ ಮತ್ತು ಖನಿಜ ಸಂರಕ್ಷಣಾ ಸಪ್ತಾಹ 2021-22 ರಲ್ಲಿ ಖೇತ್ರಿ ಕಾಪರ್ ಕಾಂಪ್ಲೆಕ್ಸ್ (ಕೆಸಿಸಿ) ಸಂಪೂರ್ಣ ಯಾಂತ್ರೀಕೃತ ಗುಂಪು ಬಿ (ಭೂಗತ ಗಣಿಗಳು) ವಿಭಾಗದಲ್ಲಿ ಗೆದ್ದ ಬಹುಮಾನಗಳು ಈ ಕೆಳಗಿನಂತಿವೆ: -

ಖೇತ್ರಿ ತಾಮ್ರದ ಗಣಿ:-
1. ಪರಿಸರ ಮೇಲ್ವಿಚಾರಣೆ: ಪ್ರಥಮ ಬಹುಮಾನ

2. ಮರುಅರಣ್ಯೀಕರಣ: 3ನೇ ಬಹುಮಾನ

3. ಪುನಶ್ಚೇತನ ಮತ್ತು ಪುನರ್ವಸತಿ: 3ನೇ ಬಹುಮಾನ

4. ಒಟ್ಟಾರೆ ಸಾಧನೆ: 3ನೇ ಬಹುಮಾನ

ಕೋಲಿಹಾನ್ ತಾಮ್ರದ ಗಣಿ:-

1. ತ್ಯಾಜ್ಯ ಸುರಿಯುವ ನಿರ್ವಹಣೆ: ದ್ವಿತೀಯ ಬಹುಮಾನ

2. ಖನಿಜ ಸಂರಕ್ಷಣೆ: 3ನೇ ಬಹುಮಾನ


 KCM-Jumbo drill

ದಿನಾಂಕ17.11.2022 ಮತ್ತು 18.11.2022 ರಂದು ಕ್ರಮವಾಗಿ ಕೆಂದಾಡಿಹ್ ಮತ್ತು ಸುರ್ದಾ ಗಣಿಯಲ್ಲಿ 60 ನೇ ಲೋಹಯುಕ್ತ ಗಣಿ ಸುರಕ್ಷತಾ ಸಪ್ತಾಹ ಸ್ಪರ್ಧೆ ನಡೆಯಿತು. ವಿವಿಧ ಟ್ರೇಡ್ ಟೆಸ್ಟ್ ನಲ್ಲಿ ಸುರ್ದಾ ಗಣಿ 1, 2 ಮತ್ತು 3  ಮತ್ತು ಕೆಂದಾಡಿಹ್ ಗಣಿ 1 ಮತ್ತು 2ನೇ ಬಹುಮಾನ ಪಡೆದವು.

ಹಿಂದೂಸ್ತಾನ್ ತಾಮ್ರ ನಿಯಮಿತದ ತಾಮ್ರದ ಗಣಿಗಳಿಗೆ 2020, 2019, 2018 ಮತ್ತು 2017ನೇ ಸಾಲಿನ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ (ಗಣಿಗಳು) ಗಳನ್ನು 08.03.2022ರಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು ಎಲ್ಎಎಫ್ ಪಿ (ಅತಿ ಉದ್ದದ ಅಪಘಾತ ಮುಕ್ತ ಅವಧಿ) ಮತ್ತು ಎಲ್.ಐ.ಎಫ್.ಆರ್.ಎಂ. (ಪ್ರತಿ ಲಕ್ಷ ಮಾವ ಪಾಳಿಗಳಿಗೆ ಅತ್ಯಂತ ಕಡಿಮೆ ಗಾಯದ ಆವರ್ತನ ದರ) ವಿಭಾಗಗಳಲ್ಲಿ ಪ್ರದಾನ ಮಾಡಿದ್ದಾರೆ.

ಭಾರತೀಯ ತಾಮ್ರ ಸಂಕೀರ್ಣ (ಐಸಿಸಿ), ಎಚ್.ಸಿ.ಎಲ್ ಘಾಟ್ಸಿಲಾ ಘಟಕವು ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಶ್ರೀ ರಾಮ ಮಂದಿರ, ಪಾರ್ಕೋಟಾ ನಿರ್ಮಾಣ ಮತ್ತು ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿ ಕಾರ್ಯಕ್ಕಾಗಿ ತಾಮ್ರದ ಪಟ್ಟಿಗಳನ್ನು ಪೂರೈಸಿತು.

Surda

2022ರ ಜೂನ್ ನಲ್ಲಿ ಕೋಲ್ಕತಾದಲ್ಲಿ 500 ಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಎಚ್.ಸಿ.ಎಲ್ ನೋಡಲ್ ಸಂಸ್ಥೆಯಾಗಿತ್ತು. ಜಿಎಸ್ಐ, ನೆಲ್ಕೋ, ಐಬಿಎಂ ಮತ್ತು ಎಂಇಸಿಎಲ್ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮವು ದೊಡ್ಡ ಯಶಸ್ಸನ್ನು ಕಂಡಿತು.

ಹೈದರಾಬಾದಿನ ಸಾರ್ವಜನಿಕ ಉದ್ದಿಮೆಯ ಸಂಸ್ಥೆಯಲ್ಲಿ ನಡೆದ "ನಿರ್ವಹಣೆಯಲ್ಲಿನ ವೈವಿಧ್ಯತೆ- ಮಹಿಳಾ ಕಾರ್ಯನಿರ್ವಾಹಕರ ಅಭಿವೃದ್ಧಿ" ಕುರಿತ 9ನೇ ರಾಷ್ಟ್ರೀಯ ಸಮ್ಮೇಳನದಲ್ಲಿ, ಹಿಂದೂಸ್ತಾನ್ ತಾಮ್ರ ನಿಯಮಿತದ  ಎಜಿಎಂ (ಸಿಸಿ ಮತ್ತು ಅಡ್ಮಿನ್) ಶ್ರೀಮತಿ ಸಂಪಾ ಚಕ್ರವರ್ತಿ ಲಾಹಿರಿ ಅವರಿಗೆ "ಉತ್ಕೃಷ್ಟ ಮಹಿಳೆ ಪ್ರಶಸ್ತಿ 2021" ನೀಡಿ ಗೌರವಿಸಲಾಯಿತು.

ಕಂಪನಿಯು ತನ್ನ ಎರವಲು ಮಿತಿಗಳಿಗಾಗಿ ಐ.ಸಿ.ಆರ್.ಎ. ಎ1+ (ಅಲ್ಪಾವಧಿಯ ಪ್ರಮಾಣದಲ್ಲಿ ಅತ್ಯುತ್ತಮ ಶ್ರೇಣೀಕರಣ) ಮತ್ತು ಐ.ಸಿ.ಆರ್.ಎ. ಎಎ+ (ಸ್ಥಿರ) (ದೀರ್ಘಾವಧಿ ಪ್ರಮಾಣದಲ್ಲಿ ಎರಡನೇ ಅತ್ಯುತ್ತಮ ಶ್ರೇಯಾಂಕ) ಅನ್ನು ಶ್ರೇಣೀಕರಣ ಮಾಡಲಾಗಿದೆ.

ತಾಮ್ರದ ವಿವಿಧ ಬಳಕೆದಾರರ ವಿಭಾಗಗಳಲ್ಲಿ ಕುಶಲಕರ್ಮಿಗಳಿಗೆ ಸೂಕ್ಷ್ಮ ಉದ್ಯಮಗಳನ್ನು ಉತ್ತೇಜಿಸಲು, ಅದರಲ್ಲೂ ವಿಶೇಷವಾಗಿ ಗತಿಸಿದ ಮೇಣದ ಎರಕಹೊಯ್ಯುವ ತಂತ್ರ ಬಳಸಿಕೊಂಡು ಲೋಹದ ಎರಕ ಹೊಯ್ಯುವ ಪ್ರಾಚೀನ ಕಲೆಯಾದ ಡೋಕ್ರಾ ಕುಶಲ ಕಲೆಯನ್ನು ಪುನಶ್ಚೇತನಗೊಳಿಸುವ ಗುರಿಯೊಂದಿಗೆ, ಜುಲೈ 2022 ರಲ್ಲಿ, ಎಚ್.ಸಿ.ಎಲ್ ಜಾರ್ಖಂಡ್ ನ ಕುಯಿಲಿಸುಟಾ ಗ್ರಾಮದಲ್ಲಿ ಒಂದು ವೇದಿಕೆಯನ್ನು ಪ್ರಾರಂಭಿಸಿತು. ಇದು ಆಜಾದಿ ಕಾ ಅಮೃತ ಮಹೋತ್ಸವದ ಅಪ್ರತಿಮ ಸಪ್ತಾಹದಲ್ಲಿ ಅದರ ವಿವಿಧ ರೂಪಗಳಲ್ಲಿ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. 

ರಾಷ್ಟ್ರೀಯ ಅಲ್ಯೂಮಿನಿಯಂ ಕಂಪನಿ ನಿಯಮಿತ (ನೆಲ್ಕೊ)

2021-22ನೇ ಹಣಕಾಸು ವರ್ಷದಲ್ಲಿ ನೆಲ್ಕೋ ಅದ್ಭುತ ಕಾರ್ಯಕ್ಷಮತೆಯನ್ನು ದಾಖಲಿಸಿದ್ದು, 14,181 ಕೋಟಿ ರೂ.ಗಳ ಕಾರ್ಯಾಚರಣೆಗಳಿಂದ ಆದಾಯವನ್ನು ಗಳಿಸಿದ್ದು, 2,952 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ, ಇದು ಕಂಪನಿಯ ಇಡೀ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ.

ಈ ವರ್ಷದಲ್ಲಿ 6,364 ಕೋಟಿ ರೂ.ಗಳ ರಫ್ತು ಗಳಿಕೆ ಮಾಡಿದ್ದು, ಇದು ಪ್ರಾರಂಭವಾದ ದಿನದಿಂದ ಅತ್ಯಧಿಕವಾಗಿದೆ.

2021-22ನೇ ಹಣಕಾಸು ವರ್ಷದಲ್ಲಿ ಪಾವತಿಸಿದ ಬಂಡವಾಳದ ಮೇಲೆ ಶೇ.130ರಷ್ಟು ಲಾಭಾಂಶವನ್ನು ಘೋಷಿಸಲಾಗಿದ್ದು, ಇದು ಪ್ರಾರಂಭವಾದ ದಿನದಿಂದ ಅತ್ಯಧಿಕವಾಗಿದೆ.

ಪ್ರಾರಂಭವಾದಾಗಿನಿಂದ ಮೊದಲ ಬಾರಿಗೆ 2021-22ರ ಹಣಕಾಸು ವರ್ಷದಲ್ಲಿ ಬಾಕ್ಸೈಟ್ ಉತ್ಪಾದನೆಯೂ (75.11 ಲಕ್ಷ ಟನ್) ಅತ್ಯಧಿಕವಾಗಿದೆ.

ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಎರಕ ಹೊಯ್ದ ಲೋಹದ ಉತ್ಪಾದನೆ (4.60 ಲಕ್ಷ ಟನ್) ಆಗಿದೆ.

12.01.2022 ರಂದು ಕುಲುಮೆ ಸ್ಥಾವರದಲ್ಲಿ ಪೂರ್ಣ 960 ಸಂಖ್ಯೆಗಳ ಪಾಟ್ ಕಾರ್ಯಾಚರಣೆಯನ್ನು ಸಾಧಿಸಲಾಗಿದೆ, ಇದು ಮೊದಲ ಬಾರಿಗೆ ಶೇ.100ರಷ್ಟು ಸಾಮರ್ಥ್ಯದ ಬಳಕೆಯನ್ನು ಸಾಧಿಸುವ ಒಂದು ಮೈಲಿಗಲ್ಲಾಗಿದೆ.

ಸಿಪಿಪಿ ಯಿಂದ ಗಣಿವರೆಗೆ ಶೂನ್ಯದ ತೆಳುವಾದ ಕೆಸರಿನ (ಸ್ಲರಿ) ಬೂದಿ ವಿಲೇವಾರಿ ವ್ಯವಸ್ಥೆಯನ್ನು ಜುಲೈ 2021 ರಲ್ಲಿ ಪ್ರಾರಂಭಿಸಲಾಗಿದೆ, ಇದು ದೀರ್ಘಕಾಲೀನ ಪರಿಸರ ಸ್ನೇಹಿ ಬೂದಿ ವಿಲೇವಾರಿಗೆ ಅನುವು ಮಾಡಿಕೊಡುತ್ತದೆ.

ಇದು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಅತ್ಯಧಿಕ ಒಟ್ಟು ಲೋಹ ಮಾರಾಟವನ್ನು (4.57 ಲಕ್ಷ ಟನ್) ಸಾಧಿಸಿದೆ.

2021ರಲ್ಲಿ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದ ಅಲ್ಯುಮಿನಾ ಮತ್ತು ಬಾಕ್ಸೈಟ್ ನ ಉತ್ಪಾದಕ ಎಂದು ಶ್ರೇಣೀಕರಣ ಮಾಡಲಾಗಿದೆ (ವುಡ್ ಮೆಕೆಂಜಿ ವರದಿಯ ಪ್ರಕಾರ).

ಉತ್ಕಲ್ ಡಿ ಮತ್ತು ಇ ಕಲ್ಲಿದ್ದಲು ಗಣಿಗಳಿಗೆ ಗಣಿ ಅಭಿವೃದ್ಧಿ ಮತ್ತು ಕಾರ್ಯಾಚರಣೆದಾರ (ಎಂಡಿಒ) ನಾಗಿ ಬೇಡಿಕೆ ಸಲ್ಲಿಸಲಾಗಿದೆ.

ಗುಜರಾತ್ ನ ಕಾಸ್ಟಿಕ್ ಸೋಡಾ ಸ್ಥಾವರಕ್ಕೆ, ಜಿಎಸಿಎಲ್ ನೊಂದಿಗೆ ಜೆವಿಯಲ್ಲಿ, 2022ರ ಫೆಬ್ರವರಿ 6 ರಂದು ತೈಲ ಉರಿಸುವಿಕೆಯೊಂದಿಗೆ ಒಗ್ಗೂಡಿದ ಇಂಧನ ಘಟಕದ ಮೊದಲ 260 ಟಿಪಿಎಚ್ ಕಲ್ಲಿದ್ದಲು ಚಾಲಿತ ಬಾಯ್ಲರ್ ನ ಉದ್ಘಾಟನೆ  ಮಾಡಲಾಯಿತು.

ಕಾಸ್ಟಿಕ್ ಬಾಷ್ಪೀಕರಣ ಘಟಕವನ್ನು 31.03.2022 ರಂದು ಪ್ರಾರಂಭಿಸಲಾಯಿತು.

2020-21ರಲ್ಲಿ ಇದು 343.19 ಕೋಟಿ ರೂ.ಗಳಿಗೆ ಹೋಲಿಸಿದರೆ, 2021-22ನೇ ಹಣಕಾಸು ಸಾಲಿನಲ್ಲಿ ಜಿಇಎಂ ಪೋರ್ಟಲ್ ಮೂಲಕ ಒಟ್ಟು 3121.45 ಕೋಟಿ ರೂ.ಗಳ (ಕಾಸ್ಟಿಕ್ ಸೋಡಾ ಸೇರಿದಂತೆ) ಖರೀದಿಸಲಾಗಿದೆ,.

ಎಂಎಸ್ಇಗಳಿಂದ ಶೇ.25ರಷ್ಟು ಕಡ್ಡಾಯ ಖರೀದಿ ಗುರಿಗೆ ಪ್ರತಿಯಾಗಿ, 2021-22ರ ಹಣಕಾಸು ವರ್ಷದಲ್ಲಿ ನೆಲ್ಕೋ ಒಟ್ಟು ಸಂಗ್ರಹಣೆಯ ಶೇ. 31.22ನ್ನು ಸಾಧಿಸಿದೆ.

ಗಣಿಗಾರಿಕೆ ಮತ್ತು ಲೋಹ ವಲಯದಲ್ಲಿ ಸುಸ್ಥಿರತೆಗಾಗಿ ನೆಲ್ಕೋ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ ಸುವರ್ಣ ಮಯೂರ ಪ್ರಶಸ್ತಿ -2021 ಕ್ಕೆ ಭಾಜನವಾಗಿದೆ. ಪರಿಸರ-ಸುಸ್ಥಿರ ರೂಢಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದನ್ನು ಈ ಪ್ರಶಸ್ತಿಯು ಪರಿಗಣಿಸುತ್ತದೆ.
 

 

Mines_1

 ಹಣಕಾಸು ವರ್ಷ 2022-23 ರಲ್ಲಿ ನೆಲ್ಕೋ ಕಾರ್ಯಕ್ಷಮತೆಯ ಮುಖ್ಯಾಂಶಗಳು (ನವೆಂಬರ್ 2022 ರವರೆಗೆ)

2,31,424 ಮೆಟ್ರಿಕ್ ಟನ್ ಅಲ್ಯೂಮಿನಿಯಂ ಎರಕಹೊಯ್ದ ಲೋಹದ ಉತ್ಪಾದನೆ ಆರಂಭದ ದಿನದಿಂದ ಯಾವುದೇ ಎಚ್.1 ನ ಅತ್ಯಧಿಕವಾಗಿದೆ.

ಒಟ್ಟು 2,32,237 ಮೆಟ್ರಿಕ್ ಟನ್ ಅಲ್ಯೂಮಿನಿಯಂ ಲೋಹದ ಮಾರಾಟ ಆರಂಭದಿಂದ ಯಾವುದೇ ಎಚ್.1 ನ ಅತ್ಯಧಿಕವಾಗಿದೆ.

ಉತ್ಕಲ್-ಡಿ ಕಲ್ಲಿದ್ದಲು ಗಣಿಗಳ ಗಣಿಗಾರಿಕೆ ಕಾರ್ಯಾಚರಣೆಯನ್ನು 09.11.2022 ರಂದು ಪ್ರಾರಂಭಿಸಲಾಗಿದೆ.

ಗುಜರಾತ್ ನ ಕಾಸ್ಟಿಕ್ ಸೋಡಾ ಘಟಕ (ಸಿಎಸ್ ಪಿ) ಜಿಎಸಿಎಲ್ ನೊಂದಿಗೆ ಜೆವಿಯಲ್ಲಿ 17.05.2022 ರಂದು ಕಾಸ್ಟಿಕ್ ಸೋಡಾ ಉತ್ಪಾದನೆಯನ್ನು ಪ್ರಾರಂಭಿಸಿದೆ. 1,300 ಡಿಎಂಟಿ ಕಾಸ್ಟಿಕ್ ಸೋಡಾದ ಮೊದಲ ಸರಕನ್ನು 20.08.2022 ರಂದು ನೆಲ್ಕೋ ಅಲ್ಯುಮಿನಾ ಶುದ್ಧೀಕರಣ ಘಟಕಕ್ಕೆ ಕಳುಹಿಸಲಾಗಿದೆ.

12.07.2022 ರಂದು ನವದೆಹಲಿಯಲ್ಲಿ ನಡೆದ ಗಣಿಗಳು ಮತ್ತು ಖನಿಜಗಳ 6 ನೇ ರಾಷ್ಟ್ರೀಯ ಸಮಾವೇಶದಲ್ಲಿ ನೆಲ್ಕೋದ ಪಂಚಪಟ್ಮಾಲಿ ಕೇಂದ್ರ ಮತ್ತು ಉತ್ತರ ಬಾಕ್ಸೈಟ್ ಗಣಿಗಳು "ಐದು ನಕ್ಷತ್ರಗಳ ಶ್ರೇಣೀಕರಣ" ಪ್ರಶಸ್ತಿಯನ್ನು ಪಡೆದಿವೆ.

ಸಿಐಐ-ಎಕ್ಸಿಮ್ (ರಫ್ತು-ಆಮದು) ಸ್ಥಾಪಿತ ವ್ಯಾಪಾರ ಉತ್ಕೃಷ್ಟತೆಯ ಅಡಿಯಲ್ಲಿ, ನೆಲ್ಕೋದ ಅಲ್ಯುಮಿನಾ ಶುದ್ಧೀಕರಣ ಘಟಕ ಪ್ಲಾಟಿನಂ ವರ್ಗ ಮತ್ತು ಪಂಚಪತ್ಮಾಲಿ ಬಾಕ್ಸೈಟ್ ಮೈನ್ಸ್ ಮತ್ತು ಕ್ಯಾಪ್ಟಿವ್ ಪವರ್ ಪ್ಲಾಂಟ್ ಘಟಕಗಳಿಗೆ ವ್ಯಾಪಾರ ಉತ್ಕೃಷ್ಟತೆಗಾಗಿ ತೆಗೆದುಕೊಂಡ ಉಪಕ್ರಮಗಳನ್ನು ಗುರುತಿಸಿ ಗೋಲ್ಡ್ ಪ್ಲಸ್ ವರ್ಗದ ಪ್ರಶಸ್ತಿಗಳನ್ನು ನೀಡಲಾಗಿದೆ.

ಕಂಪನಿ ಕೈಗೆತ್ತಿಕೊಂಡಿರುವ ಪ್ರಮುಖ ಸಿಎಸ್ಆರ್ ಚಟುವಟಿಕೆಗಳು:-

ಸ್ಥಳೀಯ ಜನರ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ನೆಲ್ಕೋ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.  ಕೆಲವು ಗಮನಾರ್ಹ ಮಹತ್ವಾಕಾಂಕ್ಷಿ ಸಿಎಸ್ಆರ್ ಆಗಿವೆ.

ಕಂಪನಿಯ ಸ್ಕೀಮ್ ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

"ನಲ್ಕೋ-ಕಿ-ಲಾಡ್ಲಿ" ಯೋಜನೆ: ಈ ಯೋಜನೆಯು ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಗೆ ಅನುಗುಣವಾಗಿದೆ. ಬಿಪಿಎಲ್ ಕುಟುಂಬದ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. (816 ಫಲಾನುಭವಿಗಳು)

ಇಂದ್ರಧನುಷ್ ಯೋಜನೆ: ಬುಡಕಟ್ಟು ಮಕ್ಕಳಿಗೆ ಉಚಿತ ವಸತಿ ಶಿಕ್ಷಣವನ್ನು ಪ್ರಾಯೋಜಿಸುವುದು (ಕೋರಾಪಟ್ ಜಿಲ್ಲೆಯ 34 ಹಳ್ಳಿಗಳ 1,100 ಫಲಾನುಭವಿಗಳು).

ಎಂಟು ಸಂಚಾರಿ ಆರೋಗ್ಯ ಘಟಕಗಳ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ (ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ)

ನೆಲ್ಕೊ ಮತ್ತು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಗಳು

ಒಡಿಶಾದಾದ್ಯಂತ 110 ಶಾಲೆಗಳಲ್ಲಿ 300 ಸ್ಮಾರ್ಟ್ ಕ್ಲಾಸ್ ರೂಮ್ ಗಳ ಉದ್ಘಾಟನೆ.

ಎಸ್. ಮತ್ತು ಪಿ. ಹಾಗೂ ಎಂ. ಮತ್ತು ಆರ್. ಸಂಕೀರ್ಣಗಳೆರಡರಲ್ಲೂ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು, ಕುಟುಂಬ ಸದಸ್ಯರು, ಸಿಐಎಸ್ಎಫ್ ಸಿಬ್ಬಂದಿ, ಹೊರವಲಯದ ಹಳ್ಳಿಗಳ ಜನರು ಮತ್ತು ಸಾರ್ವಜನಿಕರು ಉದಾತ್ತ ಉದ್ದೇಶಕ್ಕಾಗಿ ರಕ್ತದಾನದಲ್ಲಿ ಭಾಗವಹಿಸಿದ್ದರು. ಒಟ್ಟು 792 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಭೀಮಾ ಭೋಯಿ ಸರ್ಕಾರಿ ಪ್ರೌಢಶಾಲೆಗೆ ಬಿಳಿ ಕೋಲು, ಬ್ರೈಲ್ ಪೇಪರ್ ರೋಲ್ ಗಳು, ಮಾಸ್ಕ್ ಗಳು ಮತ್ತು ಧ್ವನಿ ವ್ಯವಸ್ಥೆಯಂತಹ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಗಿದೆ.

ನೆಲ್ಕೊ ಸ್ವಚ್ಛತಾ ಅಭಿಯಾನ:

ತನ್ನ ಎಲ್ಲಾ ಕಚೇರಿಗಳು, ಉತ್ಪಾದನಾ ಘಟಕಗಳು, ಪ್ರಾದೇಶಿಕ ಕಚೇರಿಗಳು, ಸಾಂಸ್ಥಿಕ ಕಚೇರಿಗಳು, ಟೌನ್ ಷಿಪ್ ಗಳು, ಅಂಚಿನಲ್ಲಿರುವ ಹಳ್ಳಿಗಳು ಮತ್ತು ಶಾಲೆಗಳಲ್ಲಿ ತನ್ನ ನೌಕರರು, ಟೌನ್ ಷಿಪ್ ನಿವಾಸಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ.

ತನ್ನ ಎಲ್ಲಾ ತಾಣ ಕಚೇರಿಗಳು, ಉತ್ಪಾದನಾ ಘಟಕಗಳು, ಪ್ರಾದೇಶಿಕ ಕಚೇರಿಗಳು ಮತ್ತು ಸಾಂಸ್ಥಿಕ ಕಚೇರಿಗಳಲ್ಲಿ ಹಳೆಯ ಕಡತಗಳನ್ನು ಸ್ವಚ್ಛಗೊಳಿಸುವುದು ಮತ್ತು ವಿಲೇವಾರಿ ಮಾಡುವುದು.

ಖನಿಜ ಅನ್ವೇಷಣೆ ಮತ್ತು ಸಮಾಲೋಚನಾ ಎಲ್ ಟಿ. (ಎಂ.ಇ.ಸಿ.ಎಲ್.)

ಇಲಾಖಾ ಸಂಪನ್ಮೂಲಗಳ ಮೂಲಕ ಕೊರೆಯುವ ಕಾರ್ಯಕ್ಷಮತೆಯು ಮೀ 233452 ಆಗಿದೆ. 2022 ರ ಮಾರ್ಚ್ ತಿಂಗಳಲ್ಲಿ, ಕಂಪನಿಯು 48945 ಮೀ. ಸಮಗ್ರ ಇಲಾಖಾ ಸಂಪನ್ಮೂಲಗಳ ಮೂಲಕ ಡ್ರಿಲ್ಲಿಂಗ್ ಉತ್ಪಾದನೆಯನ್ನು ದಾಖಲಿಸಿದೆ.

ನವೆಂಬರ್ 22 ರವರೆಗಿನ ಒಟ್ಟು ಆದಾಯ 173.86 ಕೋಟಿ ರೂ. ಆಗಿತ್ತು.

2022ರಲ್ಲಿ (ನವೆಂಬರ್-22 ರವರೆಗೆ), ಎಂಇಸಿಎಲ್ ವಿವಿಧ ಖನಿಜ ಸರಕುಗಳು ಉದಾ. ಕಲ್ಲಿದ್ದಲು, ಲಿಗ್ನೈಟ್, ತಾಮ್ರ, ಕಬ್ಬಿಣದ ಅದಿರು, ಮ್ಯಾಂಗನೀಸ್, ಗ್ರ್ಯಾಫೈಟ್, ಪೊಟ್ಯಾಷ್, ಮುಂತಾದ 26 ಸಂಖ್ಯೆಗಳ ಭೂವೈಜ್ಞಾನಿಕ ವರದಿಗಳನ್ನು ಸಲ್ಲಿಸಿದ್ದು, 2600.46 ದಶಲಕ್ಷ ಟನ್ ಸಂಪನ್ಮೂಲಗಳನ್ನು ರಾಷ್ಟ್ರೀಯ ಖನಿಜ ದಾಸ್ತಾನಿಗೆ ಸೇರಿಸಿದೆ, ಅವುಗಳಲ್ಲಿ 10 ಭೂವೈಜ್ಞಾನಿಕ ವರದಿಗಳನ್ನು ಎನ್ಎಂಇಟಿಗೆ ಸಲ್ಲಿಸಲಾಗಿದೆ.

ಕಲ್ಲಿದ್ದಲು ಮತ್ತು ಲಿಗ್ನೈಟ್ ನಲ್ಲಿ ಅನ್ವೇಷಣಾತ್ಮಕ ಕೊರೆಯುವಿಕೆಯಲ್ಲಿ ಜಿಎಸ್ಐಗೆ ಪೂರಕವಾಗಿ ಕೋಲ್ಕತಾದ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ (ಜಿಎಸ್ಐ) ಮತ್ತು ನಾಗಪುರದ ಖನಿಜ ಪರಿಶೋಧನೆ ಮತ್ತು ಸಲಹಾ ಸಂಸ್ಥೆ ನಿಯಮಿತದ ನಡುವೆ ತಿಳಿವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ.

ಆಧುನೀಕರಣ ಕಾರ್ಯಕ್ರಮದ ಅಡಿಯಲ್ಲಿ, ಎಂಇಸಿಎಲ್ ತಾಂತ್ರಿಕ ಆವಿಷ್ಕಾರಗಳ ಆಗಮನ ಮತ್ತು ಸುಧಾರಿತ ತಂತ್ರಾಂಶ ಮತ್ತು ಸಲಕರಣೆಗಳ ಅಳವಡಿಕೆ ಇತ್ಯಾದಿಗಳಾದ ಡೇಟಾಮೈನ್ ಸ್ಟುಡಿಯೋ-ಆರ್.ಎಂ, ಜಿಯೋವಿಯಾಮಿನೆಕ್ಸ್ ಮತ್ತು ಜಿಯೋ ಸರ್ಪ್ಯಾಕ್ (ಡಸಾಲ್ಟ್ ಸಿಸ್ಟಮ್, ಫ್ರಾನ್ಸ್), ಆರ್ಕ್ ಜಿಐಎಸ್, ಎರ್ಡಾಸ್ ಇಮ್ಯಾಜಿನ್, ಸ್ಲಿಮ್ಹೋಲ್ ಭೂ ಭೌತಿಕ ಲಾಗಿಂಗ್ ಸಿಸ್ಟಂ, ಕೋರ್ ಸ್ಕ್ಯಾನರ್, ಎಕ್ಸ್ಆರ್.ಎಫ್, ಐಸಿಪಿ ಎಂಎಸ್, ಐಸಿಪಿ ಒಇಎಸ್ ಇತ್ಯಾದಿಗಳನ್ನು ಅಳವಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದೆ.

ವ್ಯೂಹಾತ್ಮಕ ವೈವಿಧ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ, ಸುಸ್ಥಿರತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಎಂಇಸಿಎಲ್ ತನ್ನ ಚಟುವಟಿಕೆಗಳನ್ನು ವ್ಯಾಪಾರ ಮಟ್ಟ ಮತ್ತು ಸಾಂಸ್ಥಿಕ ಮಟ್ಟದ ವೈವಿಧ್ಯೀಕರಣ ಎರಡೂ ಕ್ಷೇತ್ರಗಳಲ್ಲಿ ವೈವಿಧ್ಯೀಕರಿಸುತ್ತಿದೆ. ಇದಲ್ಲದೆ ಎಂಇಸಿಎಲ್ ತನ್ನ ಹರಾಜು ಉದ್ದೇಶಕ್ಕಾಗಿ ಖನಿಜ ನಿಕ್ಷೇಪದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ತಾಂತ್ರಿಕ ಬೆಂಬಲಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಮಾಲೋಚನೆಯನ್ನು ಸಹ ಒದಗಿಸುತ್ತಿದೆ. ಎಂಇಸಿಎಲ್ ವಿವಿಧ ರಾಜ್ಯ ಸರ್ಕಾರಗಳು, ಸಿಪಿಎಸ್ಇಗಳು ಮತ್ತು ಇತರ ಸಂಸ್ಥೆಗಳಿಗೆ ರೆಫರಿ ಏಜೆನ್ಸಿಯಾಗಿ ಭೂರಾಸಾಯನಿಕ ವಿಶ್ಲೇಷಣೆ ಸೇವೆಗಳನ್ನು ಸಹ ಒದಗಿಸುತ್ತಿದೆ.

ವ್ಯಾಪಾರ ಅಭಿವೃದ್ಧಿ ಮತ್ತು ವಾಣಿಜ್ಯ ವಿಭಾಗದ ಮೂಲಕ, ಸ್ಪರ್ಧಾತ್ಮಕ ಟೆಕ್ನೋ-ವಾಣಿಜ್ಯ ಕೊಡುಗೆಗಳು ಮತ್ತು ತಿಳಿವಳಿಕಾ ಒಡಂಬಡಿಕೆ ಮಾರ್ಗ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಖಾಸಗಿ ಮತ್ತು ಸಾರ್ವಜನಿಕ ವಲಯಗಳಿಂದ ಹೆಚ್ಚಿನ ಕೆಲಸಗಳನ್ನು ಸೃಷ್ಟಿಸಲು / ಪಡೆಯಲು ಕಠಿಣ ಪ್ರಯತ್ನಗಳನ್ನು ಮುಂದುವರಿಸಲಾಗುತ್ತಿದೆ. ಇದರ ಪರಿಣಾಮವಾಗಿ, 2022ರಲ್ಲಿ, ಆರ್ಡರ್ ಪುಸ್ತಕದ ಒಟ್ಟು ಮೌಲ್ಯವು 31.12.2022 ರವರೆಗೆ ತಾತ್ಕಾಲಿಕವಾಗಿ 253.98 ಕೋಟಿ ರೂ.ಗಳಷ್ಟಿತ್ತು. ಇದರಲ್ಲಿ ನೆಲ್ಕೋ, ಆರ್.ಎಸ್.ಎಂಎಂಎಲ್, ಎಚ್.ಸಿಎಲ್, ಎನ್ಎಂಡಿಸಿ, ಎಫ್ಎಜಿಎಂಐಎಲ್, ಜಿಎಸ್ಐ, ಸಿಎಂಪಿಡಿಐಎಲ್, ಡಿಎಂಜಿ ಗೋವಾ, ಅದಾನಿ ಮುಂತಾದ ವಿವಿಧ ಗ್ರಾಹಕರ ಗುತ್ತಿಗೆ ಕಾಮಗಾರಿ ಮತ್ತು ಕಲ್ಲಿದ್ದಲು ಸಚಿವಾಲಯದ (ಎಂಒಸಿ) ಪರವಾಗಿ ಎನ್ಎಂಇಟಿ ಅನುದಾನಿತ ಕಾಮಗಾರಿ ಮತ್ತು ಕಲ್ಲಿದ್ದಲು ಪರಿಶೋಧನಾ ಪ್ರಚಾರ ಕಾರ್ಯವನ್ನು ಒಳಗೊಂಡಿದೆ.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ: ಕಲ್ಲಿದ್ದಲು, ಲಿಗ್ನೈಟ್, ಕಬ್ಬಿಣದ ಅದಿರು, ತಾಮ್ರ, ಸತು, ಸುಣ್ಣದಕಲ್ಲು ಮುಂತಾದ ಎಲ್ಲಾ ಪ್ರಮುಖ ಖನಿಜಗಳ ಅನ್ವೇಷಣೆ, ದೇಶದ ವಿವಿಧ ದೂರದ ಭಾಗಗಳಲ್ಲಿನ ಅಭಿವೃದ್ಧಿ ಗಣಿಗಾರಿಕೆಗೆ ಎಂಇಸಿಎಲ್ ಒಂದು ಪ್ರಮುಖ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಸಾಮಾನ್ಯವಾಗಿ, ಎಂಇಸಿಎಲ್ ನ ಅನ್ವೇಷಣೆ / ಅಭಿವೃದ್ಧಿ ಗಣಿ ಯೋಜನೆಗಳು ದೂರದ ಪ್ರದೇಶಗಳಲ್ಲಿವೆ.

ಕಂಪನಿಯ ವ್ಯವಹಾರವನ್ನು ನಡೆಸುವಾಗ, ಸಿಎಸ್ಆರ್ ಮತ್ತು ಎಸ್ಡಿ ಉಪಕ್ರಮಗಳ ಮೂಲಕ ನಮ್ಮ ಕೆಲಸದ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮೂಲಸೌಕರ್ಯ, ಆರೋಗ್ಯ ಮತ್ತು ಆರೋಗ್ಯಕರ ಸಾಂಸ್ಕೃತಿಕ ಅಭಿವೃದ್ಧಿಗೆ ಅವಕಾಶವನ್ನು ಒದಗಿಸಲು ತನ್ನ ಕಾರ್ಯಾಚರಣೆಯ ಭೌಗೋಳಿಕ ಪ್ರದೇಶದಲ್ಲಿ ಭಾಗವಹಿಸಲು ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಲು ಅದು ಬದ್ಧವಾಗಿದೆ.

ಯೋಜನೆಗಳು/ ಸಿಎಚ್.ಕ್ಯು/ವಲಯ ಕಚೇರಿಗಳ ಸುತ್ತಲೂ ವಾಸಿಸುವ ಜನಸಂಖ್ಯೆಯ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಸುಸ್ಥಿರ ರೀತಿಯಲ್ಲಿ ವ್ಯವಸ್ಥಿತವಾಗಿ ಪೂರೈಸಲು, ಅಗತ್ಯಕ್ಕನುಗುಣವಾಗಿ, ಸಿ.ಎಸ್.ಆರ್./ಎಸ್.ಡಿ. ಕಾಮಗಾರಿಗಳ ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಗಾಗಿ ಒಂದು ನೀತಿ ಅತ್ಯಗತ್ಯ.  ಅದರಂತೆ, ಎಂಇಸಿಎಲ್ ಸಿಎಸ್ಆರ್ ಮತ್ತು ಎಸ್.ಡಿ. ನೀತಿ, ಎಂಇಸಿಎಲ್ ಯೋಜನೆಗಳ ಸುತ್ತಲೂ ವಿವಿಧ ಸಿಎಸ್ಆರ್ / ಎಸ್ಡಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವ ಹಿಂದಿನ ರೂಢಿಗಳು ಮತ್ತು ಅನುಭವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ.  ಈ ನಿಟ್ಟಿನಲ್ಲಿ ಡಿಪಿಇ ಮಾರ್ಗಸೂಚಿಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ.

2022 ರ ಸಾಧನೆಗಳ ಮುಖ್ಯಾಂಶಗಳು (ಡಿಸೆಂಬರ್, 2022 ರವರೆಗೆ)

ಎಂಇಸಿಎಲ್ 2600.46 ದಶಲಕ್ಷ ಟನ್ ಖನಿಜ ನಿಕ್ಷೇಪಗಳನ್ನು ರಾಷ್ಟ್ರೀಯ ಖನಿಜ ದಾಸ್ತಾನು ಪಟ್ಟಿಗೆ ಸೇರಿಸಿದೆ.

ಎಂಇಸಿಎಲ್ 2021-22ನೇ ಸಾಲಿಗೆ ಭಾರತ ಸರ್ಕಾರಕ್ಕೆ 33.95 ಕೋಟಿ ರೂ.ಗಳ ಲಾಭಾಂಶವನ್ನು ನೀಡಿದೆ.

ಭಾರತೀಯ ಗಣಿ ಶಾಖೆ (ಇಂಡಿಯನ್ ಬ್ಯೂರೋ ಆಫ್ ಮೈನ್ಸ್ -ಐಬಿಎಂ): -

ಐ.ಬಿ.ಎಂ.ನ ಪ್ರಮುಖ ಕಾರ್ಯಗಳ ಚಾರ್ಟರ್, ಅಂದರೆ ವಿವಿಧ ಕ್ಷೇತ್ರ ತಪಾಸಣೆಗಳನ್ನು ನಡೆಸುವುದು, ಓರ್ ಡ್ರೆಸ್ಸಿಂಗ್ ತನಿಖೆಗಳನ್ನು ನಡೆಸುವುದು, ಕೆಲವು ಪ್ರಮುಖ ಸಾಧನೆಗಳೆಂದರೆ;

ಗಣಿಗಳ ಸ್ಟಾರ್ ಶ್ರೇಣೀಕರಣ ಆನ್ ಲೈನ್ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ಸುಸ್ಥಿರ ಅಭಿವೃದ್ಧಿ ಚೌಕಟ್ಟು (ಎಸ್ಡಿಎಫ್) ಅನುಷ್ಠಾನ: ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು 12.07.2022 ರಂದು ಗಣಿಗಳು ಮತ್ತು ಖನಿಜಗಳ ಕುರಿತ 6 ನೇ ರಾಷ್ಟ್ರೀಯ ಸಮಾವೇಶ -2022 ಅನ್ನು ಉದ್ಘಾಟಿಸಿದರು ಮತ್ತು 2020-21 ರ ಕಾರ್ಯಕ್ಷಮತೆ ವರ್ಷದಲ್ಲಿ ಗಣಿಗಳ ಸ್ಟಾರ್ ಶ್ರೇಣೀಕರಣ ಅಡಿಯಲ್ಲಿ ಪಂಚತಾರಾ ಶ್ರೇಣಿ ಪಡೆದ 40 ಗಣಿಗಳನ್ನು ಸನ್ಮಾನಿಸಲಾಗಿದೆ.
 

 

 ಗಣಿ ಕಣ್ಗಾವಲು ವ್ಯವಸ್ಥೆ (ಎಂಎಸ್ಎಸ್) ಉಪಗ್ರಹ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯಾಗಿದ್ದು, ಸ್ವಯಂಚಾಲಿತ ದೂರ ಸಂವೇದಿ ಪತ್ತೆ ತಂತ್ರಜ್ಞಾನದ ಮೂಲಕ ಅಕ್ರಮ ಗಣಿಗಾರಿಕೆ ಚಟುವಟಿಕೆಯ ನಿದರ್ಶನಗಳನ್ನು ನಿಗ್ರಹಿಸುವ ಮೂಲಕ ಸ್ಪಂದನಶೀಲ ಖನಿಜ ಆಡಳಿತದ ಆಡಳಿತವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಗಣಿಗಾರಿಕೆ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಂಡು, 2021-22 ರಲ್ಲಿ 3 ನೇ ಹಂತದಲ್ಲಿ, ಪ್ರಮುಖ ಖನಿಜಗಳಿಗಾಗಿ 177 ಪ್ರಚೋದಕಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿಯವರೆಗೆ, 89 ಪ್ರಚೋದಕಗಳನ್ನು ಪರಿಶೀಲಿಸಲಾಗಿದೆ ಮತ್ತು 12 ಅನಧಿಕೃತ ಗಣಿಗಾರಿಕೆ ಪ್ರಕರಣಗಳು ಪತ್ತೆಯಾಗಿವೆ. 4ನೇ ಹಂತದಲ್ಲಿ, 2022-23 ನೇ ಸಾಲಿನಲ್ಲಿ ಪ್ರಮುಖ ಖನಿಜಗಳಿಗಾಗಿ ಇತ್ತೀಚೆಗೆ 61 ಪ್ರಚೋದಕಗಳನ್ನು ಉತ್ಪಾದಿಸಲಾಗಿದೆ ಮತ್ತು ಅವುಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ. ಪರಿಶೀಲನೆಯನ್ನು ಇನ್ನೂ ನಡೆಸಬೇಕಾಗಿದೆ.

ಗಣಿಗಾರಿಕೆ ಕಣ್ಗಾವಲು ವ್ಯವಸ್ಥೆಯ ತರಬೇತಿಯಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 179 ಅಧಿಕಾರಿಗಳು ಭಾಗವಹಿಸಿದ್ದರು.

ಗಣಿ  ಸ್ಥಿರಾಸ್ತಿ ವ್ಯವಸ್ಥೆ (ಎಂಟಿಎಸ್) ಅಡಿಯಲ್ಲಿ, ಎಂಟಿಎಸ್ ರಿಟರ್ನ್ಸ್ ಮತ್ತು ರಿಜಿಸ್ಟ್ರೇಷನ್ ಮಾಡ್ಯೂಲ್ ಗಳು 2022 ರ ಏಪ್ರಿಲ್ ತಿಂಗಳಿನಿಂದ ಸಲ್ಲಿಸಲಾದ ರಿಟರ್ನ್ಸ್ ಗಳನ್ನು ಅನುಮತಿಸುವ ಮೂಲಕ 2022 ರ ಮೇ 1 ರಿಂದ ಯಶಸ್ವಿಯಾಗಿ ಲೈವ್ ಆನ್ ಆಗಿವೆ. ನೋಂದಣಿ, ರಿಟರ್ನ್ಸ್ ಮತ್ತು ಮೈನಿಂಗ್ ಪ್ಲ್ಯಾನ್ ಮಾಡ್ಯೂಲ್ ಗಳನ್ನು 12.7.2022 ರಂದು ನಡೆದ 6 ನೇ ಗಣಿಗಾರಿಕೆ ಸಮಾವೇಶದಲ್ಲಿ ಪ್ರಾರಂಭಿಸಲಾಯಿತು. 12.7.2022 ರ ನಂತರ ಸಲ್ಲಿಸಲಾದ ಗಣಿಗಾರಿಕೆ ಯೋಜನೆಗಳನ್ನು ಆನ್ ಲೈನ್ ಪೋರ್ಟಲ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಇತರ ಮಾಡ್ಯೂಲ್ ಗಳಿಗೆ ಸಂಬಂಧಿಸಿದಂತೆ ಡಿಪಿಆರ್ ಪ್ರಗತಿಯಲ್ಲಿದೆ ಮತ್ತು ಅವು ಹಂತ ಹಂತವಾಗಿ ಕಾರ್ಯರೂಪಕ್ಕೆ ಬರುತ್ತವೆ.

ಡ್ರೋನ್ ಅಪ್ಲಿಕೇಶನ್ ಅನುಷ್ಠಾನದ ಭಾಗವಾಗಿ, ಏಪ್ರಿಲ್ 2022 ರಿಂದ ಡಿಸೆಂಬರ್ 2022 ರವರೆಗೆ ಪ್ರತಿ ತಿಂಗಳು ಎಂಟು ದಿನಗಳ ತರಬೇತಿಯನ್ನು ಎಚ್.ಕ್ಯೂ ಮತ್ತು ಐಬಿಎಂನ ಪ್ರಾದೇಶಿಕ ಕಚೇರಿಗಳ 10 ರಿಂದ 12 ಅಧಿಕಾರಿಗಳಿಗೆ ಜಿಐಎಸ್ನ ಬೇಸಿಕ್ಸ್ ಮತ್ತು ಡ್ರೋನ್ ಸಮೀಕ್ಷೆಯ ದತ್ತಾಂಶದ ಸಂಸ್ಕರಣೆಯ ಬಗ್ಗೆ ನೀಡಲಾಗಿದೆ.

ಯುಎವಿ ಸಮೀಕ್ಷೆಗೆ ಸಂಬಂಧಿಸಿದ ಚಟುವಟಿಕೆಗಳು: ಡ್ರೋನ್ ಸಮೀಕ್ಷೆ ನಡೆಸಲು ಮತ್ತು ಗಣಿಗಾರಿಕೆ ಪ್ರದೇಶಗಳ ಡಿಜಿಟಲ್ ವೈಮಾನಿಕ ಚಿತ್ರಗಳನ್ನು ಐಬಿಎಂಗೆ ಸಲ್ಲಿಸಲು ಎಂಸಿಡಿಆರ್, 2017 ರ ನಿಯಮ 34 ಎ ಯ ಉಪ ನಿಯಮ (5) ರ ಅಡಿಯಲ್ಲಿ ಐಬಿಎಂ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನಗಳನ್ನು ಹೊರಡಿಸಿದೆ. ಎಂಸಿಡಿಆರ್ 2017ರ ನಿಯಮ 34ಎ ಅಡಿಯಲ್ಲಿ ಗೇಣಿದಾರರು ಸಲ್ಲಿಸಿದ ಡ್ರೋನ್ / ಉಪಗ್ರಹ ದತ್ತಾಂಶದ ಸ್ವೀಕೃತಿಯ ರಿಜಿಸ್ಟರ್ ಅನ್ನು ಐಬಿಎಂನಲ್ಲಿ ನಿರ್ವಹಿಸಲಾಗುತ್ತಿದೆ.  ನವೆಂಬರ್, 2022 ರ ವೇಳೆಗೆ 617 ಗಣಿ ಗುತ್ತಿಗೆಗಳ ದತ್ತಾಂಶವನ್ನು ಸ್ವೀಕರಿಸಲಾಗಿದೆ. ಡ್ರೋನ್ / ಉಪಗ್ರಹ ದತ್ತಾಂಶವನ್ನು ಸಲ್ಲಿಸಲು ಎಸ್ಒಪಿಯಲ್ಲಿ ಉಲ್ಲೇಖಿಸಲಾದ ಅವಶ್ಯಕತೆಗಳೊಂದಿಗೆ ಡ್ರೋನ್ / ಉಪಗ್ರಹ ದತ್ತಾಂಶವನ್ನು ಸಹ ಪರಿಶೀಲಿಸಲಾಗುತ್ತಿದೆ.

ಡ್ರೋನ್ ದತ್ತಾಂವನ್ನು ಬಳಸಿಕೊಂಡು ಗಣಿ ಪಿಟ್ ವಿಶ್ಲೇಷಣೆ

 
ಪ್ರಸಕ್ತ ವರ್ಷದಲ್ಲಿ, ಸೆಪ್ಟೆಂಬರ್ 2022 ರವರೆಗೆ ಖನಿಜಗಳ ಮತ್ತು ಅಕ್ಟೋಬರ್, 2022 ರವರೆಗೆ ಲೋಹಗಳ ಸರಾಸರಿ ಮಾರಾಟ ಬೆಲೆಯನ್ನು (ಎಎಸ್ಪಿ) ಐಬಿಎಂ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಭಾರತೀಯ ಖನಿಜ ವಾರ್ಷಿಕ ಪುಸ್ತಕ 2020 (ಸಂಪುಟ. 1 ರಿಂದ 3 ರವರೆಗೆ) ಖನಿಜ ಮಾಹಿತಿ ಕುರಿತ ಅರ್ಧ ವಾರ್ಷಿಕ ಅವಧಿಗೆ ಅಂದರೆ ಅಕ್ಟೋಬರ್ 20 ರಿಂದ ಮಾರ್ಚ್ 21ರವರೆಗೆ, ಏಪ್ರಿಲ್ 2021 ರಿಂದ ಸೆಪ್ಟೆಂಬರ್, 2021ರವರೆಗೆ ಮತ್ತು ಅಕ್ಟೋಬರ್ 21 ರಿಂದ ಮಾರ್ಚ್ 22 ರವರೆಗೆ ಪ್ರಮುಖ ಪ್ರಕಟಣೆಗಳನ್ನು ಐಬಿಎಂ ಹೊರತಂದಿದೆ, 2019-20 ಮತ್ತು 2020-21 ರ ವರ್ಷದ ಖನಿಜಗಳ ಅಂಕಿಅಂಶ ಪ್ರೊಫೈಲ್ ಗಳು ಮತ್ತು 2020-21 ರ ಸಂಚಿಕೆಗಳು, ಗಣಿ ಗುತ್ತಿಗೆ ಮತ್ತು ಪ್ರಾಸ್ಪೆಕ್ಟಿಂಗ್ ಪರವಾನಗಿಗಳ ಬುಲೆಟಿನ್ 2020 ಮತ್ತು 2021 ರ ಫೆಬ್ರವರಿಯವರೆಗೆ ಖನಿಜ ಉತ್ಪಾದನೆಯ ಮಾಸಿಕ ಅಂಕಿಅಂಶಗಳು  ಎಲ್ಲಾ ಬಾಧ್ಯಸ್ಥರ ಹಿತಾಸಕ್ತಿಗಾಗಿ ತಾಂತ್ರಿಕ ದತ್ತಾಂಶವನ್ನು ಪ್ರಸಾರ ಮಾಡಲಾಗುತ್ತಿದೆ.

ಮಾನವ ಸಂಪನ್ಮೂಲಗಳ ಸಾಮರ್ಥ್ಯ ವರ್ಧನೆಯ ಭಾಗವಾಗಿ, 2022-23 ರಲ್ಲಿ, ನವೆಂಬರ್ 2022 ರವರೆಗೆ, ಐಬಿಎಂ 09 ತರಬೇತಿ ಕಾರ್ಯಕ್ರಮಗಳನ್ನು ನಡೆಸಿತು, ಇದರಲ್ಲಿ 129 ಐಬಿಎಂ, 301 ಕೈಗಾರಿಕೆ ಮತ್ತು 21 ರಾಜ್ಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದವು.

2022-23ನೇ ಸಾಲಿನಲ್ಲಿ, ಐಬಿಎಂ ಕಚೇರಿಗಳು 2022 ರ ನವೆಂಬರ್ 16 ರಿಂದ 30 ರವರೆಗೆ ಕಚೇರಿ ಆವರಣದಲ್ಲಿ ಮತ್ತು ಗಣಿಗಾರಿಕೆ ಸ್ಥಳ ಪ್ರದೇಶಗಳು, ಹತ್ತಿರದ ಹಳ್ಳಿಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಪಖ್ವಾಡಾವನ್ನು ನಡೆಸಿದವು.

ವಿಶೇಷ ಅಭಿಯಾನ 2.0 ನ್ನು (i) ಬಾಕಿ ಉಳಿದಿರುವ ಉಲ್ಲೇಖಗಳು ಮತ್ತು ಕುಂದುಕೊರತೆಗಳ ವಿಲೇವಾರಿ (ii) ದಾಖಲೆ ನಿರ್ವಹಣೆ (ಕಡತ ಯಜ್ಞ) (iii) ಗುಜರಿ/ ಹಳತಾದ ವಸ್ತುಗಳ ವಿಲೇವಾರಿ ಮತ್ತು (iv) ಕಚೇರಿ ಆವರಣದಲ್ಲಿ ಸ್ವಚ್ಛತಾ ಅಭಿಯಾನವನ್ನು ಐಬಿಎಂನಲ್ಲಿ ನಡೆಯುತ್ತಿದೆ.  ಅಭಿಯಾನದ ಅವಧಿಯಲ್ಲಿ 39277 ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ 19453 ಕಡತ ಯಜ್ಞಕ್ಕೆ ಗುರುತಿಸಲಾಗಿದ್ದು, ನಂತರ ಅವುಗಳನ್ನು ವಿಲೆವಾರಿ ಮಾಡಲಾಗಿದೆ. ಸ್ಕ್ರ್ಯಾಪ್ ಮತ್ತು ಹಳೆಯ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ ಮತ್ತು 2,58,514/- ರೂ.ಗಳ ಆದಾಯವನ್ನು ಗಳಿಸಲಾಗಿದೆ. ದಾಖಲೆ ನಿರ್ವಹಣೆ ಮತ್ತು ಗುಜರಿ ವಿಲೇವಾರಿಯ ನಂತರ 7000 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗುತ್ತದೆ/ ಸೃಷ್ಟಿಸಲಾಗುತ್ತದೆ. ಇದಲ್ಲದೆ, ಶಾಲೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಪ್ರಾದೇಶಿಕ ಕಚೇರಿಗಳಿಂದ 24 ವಿಶೇಷ ಅಭಿಯಾನದ ಹೊರಾಂಗಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಭಿಯಾನದೋಪಾದಿಯಲ್ಲಿ ರೋಜ್ಗಾರ್ ಮೇಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ : ಡಿಒಪಿಟಿಯ ದಿನಾಂಕ 16.09.2022 ರಂದು ಒ.ಎಂ. ರೀತ್ಯ ತನ್ನ ನೇಮಕಾತಿ ಅಭಿಯಾನದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಸ್ಟೇಟಸ್ ಪೋರ್ಟಲ್ ಗೆ (ಗಣಿ ಸಚಿವಾಲಯ ಅಭಿಯಾನದೋಪಾದಿಯಲ್ಲಿ ಭರ್ತಿ ಮಾಡಬೇಕಾದ ಖಾಲಿ ಹುದ್ದೆಗಳ ವಿವರಗಳನ್ನು ಒಳಗೊಂಡ ಪೋರ್ಟಲ್) ಪ್ರವೇಶವನ್ನು ನೀಡಿದೆ ಎಂದು ಮಾಹಿತಿ ನೀಡಿದೆ.  URL: https://doptonline.nic.in/mr/) ಗಣಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ. ಅದರಂತೆ 22.10.2022 ರಂದು 02 ಅಭ್ಯರ್ಥಿಗಳಿಗೆ (ಸಹಾಯಕ) ಮತ್ತು 22.11.2022 ರಂದು 109 ಅಭ್ಯರ್ಥಿಗಳಿಗೆ (64 ಎಂಟಿಎಸ್ ಮತ್ತು 45 ಶೀಘ್ರಲಿಪಿಗಾರರು) ನೇಮಕಾತಿ ಆಫರ್ ನೀಡಲಾಗಿದೆ.

ಜವಾಹರಲಾಲ್ ನೆಹರು ಅಲ್ಯೂಮಿನಿಯಂ ಸಂಶೋಧನೆ ಅಭಿವೃದ್ಧಿ ಮತ್ತು ವಿನ್ಯಾಸ ಕೇಂದ್ರ (ಜೆಎನ್ಆರ್.ಡಿಡಿಸಿ), ನಾಗ್ಪುರ 2022-23ನೇ ಸಾಲಿನಲ್ಲಿ 2022-23ನೇ ಸಾಲಿನಲ್ಲಿ ಜೆಎನ್ಆರ್.ಡಿಡಿಸಿ ಮೂರು ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು ವಿವಿಧ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಹದಿಮೂರು ,ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ.

ನಿಯೋಜಿತ ವಲಯ ತಜ್ಞ
ಜೆ.ಎನ್.ಎ.ಆರ್.ಡಿ.ಡಿ.ಸಿ. ಈ ಕೆಳಗಿನ ಪ್ರಮುಖ ಪ್ರಾಧಿಕಾರಗಳಿಗೆ ನಿಯೋಜಿತ ವಲಯ ತಜ್ಞನಾಗಿದೆ:-

ನೀತಿ ಆಯೋಗ -

ಕೆಂಪು ಮಣ್ಣು ಮತ್ತು ಕಲ್ಲಿದ್ದಲು ಹಾರು ಬೂದಿಯಿಂದ ಆರ್.ಇ.ಇ. (ಅಪರೂಪದ ಭೂ ಘಟಕ)

ಅಲ್ಯೂಮಿನಿಯಂ ವಲಯದಲ್ಲಿ ಸಂಪನ್ಮೂಲ ದಕ್ಷತೆ ಮತ್ತು ವೃತ್ತಾಕಾರದ ಆರ್ಥಿಕತೆ

ಇಂಧನ ದಕ್ಷತೆಯ ಶಾಖೆ (ಬಿಇಇ), ಇಂಧನ ಸಚಿವಾಲಯ -

"ವರ್ಧಿತ ಇಂಧನ ದಕ್ಷತೆಗಾಗಿ ರಾಷ್ಟ್ರೀಯ ಅಭಿಯಾನ" ಕ್ಕಾಗಿ ಅಲ್ಯೂಮಿನಿಯಂ ವಲಯದ ತಜ್ಞರು-ಪಿಎಟಿ 2/3/4 ಚಕ್ರ ಬಿಐಎಸ್, ಭಾರತೀಯ ಮಾನಕ ಸಂಸ್ಥೆ ಎ.ಎಲ್-ಸ್ಕ್ರ್ಯಾಪ್ ಗಾಗಿ ಮಾರ್ಗಸೂಚಿಗಳು ಅಲ್ಯೂಮಿನಿಯಂ ಮಿಶ್ರಲೋಹಗಳು ಮತ್ತು ಉತ್ಪನ್ನಗಳ ಗುಣಮಟ್ಟ ಗಣಿ ಸಚಿವಾಲಯ
ರಾಷ್ಟ್ರೀಯ ಕಬ್ಬಿಣೇತರ ಲೋಹ ಸ್ಕ್ರ್ಯಾಪ್ ಪುನರ್ ಬಳಕೆ ಚೌಕಟ್ಟು ಕಬ್ಬಿಣೇತರ ಪ್ರಾಥಮಿಕ ಮತ್ತು ಮಾಧ್ಯಮಿಕ ಸೆಕ್ಟರ್ ಗಾಗಿ ವೃತ್ತಾಕಾರದ ಆರ್ಥಿಕತೆಯ ಕ್ರಮಗಳು ಎನ್.ಎಫ್.ಎಂ.ಐ.ಎಂ.ಎಸ್. (ಅಲ್ಯುಮಿನಿಯಂ, ತಾಮ್ರ, ಸೀಸ ಮತ್ತು ಸತುವಿನ ಆಮದು ಮೇಲ್ವಿಚಾರಣಾ ವ್ಯವಸ್ಥೆ)
ಅಲ್ಯೂಮಿನಿಯಂ ವಲಯದಲ್ಲಿ ಆಮದು ಬದಲಿಗಾಗಿ ಅಂತರ ಸಚಿವಾಲಯ ಸಮಿತಿ ಲೋಹ ಮರುಬಳಕೆ ಪ್ರಾಧಿಕಾರ (ಎಂ.ಆರ್.ಎ) "ರಾಷ್ಟ್ರೀಯ ಕಬ್ಬಿಣೇತರ ಲೋಹ ಸ್ಕ್ರ್ಯಾಪ್ ಪುನರ್ ಬಳಕೆ ಚೌಕಟ್ಟು 2020" ರಲ್ಲಿ ನಿಗದಿಪಡಿಸಿರುವಂತೆ ಎಂಆರ್.ಎಗಾಗಿ ನಿಗದಿಪಡಿಸಲಾದ ಶಾಸನಬದ್ಧವಲ್ಲದ ಕಾರ್ಯಗಳನ್ನು ನಿರ್ವಹಿಸಲು ಜೆಎನ್ಆರ್.ಡಿಡಿಸಿಯನ್ನು ಗಣಿ ಸಚಿವಾಲಯವು ಲೋಹ ಮರುಬಳಕೆ ಪ್ರಾಧಿಕಾರ (ಎಂಆರ್,ಎ) ನಾಮನಿರ್ದೇಶನ ಮಾಡಿದೆ.

ಕಲ್ಲಿದ್ದಲಿಗಾಗಿ ರೆಫರಿ ಪ್ರಯೋಗಾಲಯ

ಧನ್ ಬಾದ್ ನ ಸಿಎಸ್ಐಆರ್-ಸಿಐಎಂಎಫ್ಆರ್.ನಿಂದ ಕಲ್ಲಿದ್ದಲಿನ ಮೂರನೇ ವ್ಯಕ್ತಿಯ ಕಲ್ಲಿದ್ದಲು ಮಾದರಿ ವಿಶ್ಲೇಷಣೆಗಾಗಿ ಜೆಎನ್ಆರ್.ಡಿಡಿಸಿ ರೆಫರಿ ಪ್ರಯೋಗಾಲಯವನ್ನು ನಾಮನಿರ್ದೇಶನ ಮಾಡಿದೆ.

ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳು

26ನೇ ಅಂತಾರಾಷ್ಟ್ರೀಯ ಕಬ್ಬಿಣೇತರ ಲೋಹಗಳ ಸಮ್ಮೇಳನ (ಐಸಿಎನ್ಎಫ್ಎಂ-2022) ; ರಾಡಿಸನ್ ಬ್ಲೂ, ನಾಗ್ಪುರ್ 8-9 ಜುಲೈ 2022 ರಂದು ಜೆಎನ್ಆರ್.ಡಿಡಿಸಿ ಜೊತೆಯಾಗಿ ಸಂಘಟಿಸಿತು : www.nonferrousmeet.net/

10ನೇ ಅಂತಾರಾಷ್ಟ್ರೀಯ ಐಬಿಎಎಎಸ್ ಸಮ್ಮೇಳನ ಮತ್ತು ವಸ್ತುಪ್ರದರ್ಶನ- ರಾಯಪುರ; ಐಬಿಎಎಎಸ್ – ಜೆಎನ್ಆರ್.ಡಿಡಿಸಿ 2022 ಸೆಪ್ಟೆಂಬರ್ 14-17, 2022 ಮತ್ತು ಕಬ್ಬಿಣೇತರ ಲೋಹ ಪುನರ್ ಬಳಕೆ ಕುರಿತು ಒಂದು ದಿನದ ಚಿಂತನ-ಮಂಥನ ಅಧಿವೇಶನವನ್ನು ಜೆಎನ್ಎರ್.ಡಿಡಿಸಿ ಜೊತೆಯಾಗಿ-ಆಯೋಜಿಸಿತ್ತು  https://www.ibaas.info/

40ನೇ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ, ಐಸಿಎಸ್ಒಬಿಎ 2022 ಅನ್ನು 2022 ರ  ಅಕ್ಟೋಬರ್ 10-14 ರ ಅವಧಿಯಲ್ಲಿ ಗ್ರೀಸ್ ನ ಅಥೆನ್ಸ್ ನ ರಾಡಿಸನ್ ಬ್ಲೂ ಉದ್ಯಾನದಲ್ಲಿ ಬಾಕ್ಸೈಟ್, ಅಲ್ಯುಮಿನಾ ಮತ್ತು ಅಲ್ಯುಮಿನಿಯಂನ ಅಧ್ಯಯನ ಕುರಿತ ಅಂತಾರಾಷ್ಟ್ರೀಯ ಸಮಿತಿಯು ಆಯೋಜಿಸಿತ್ತು  . ಜೆ.ಎನ್.ಎ.ಆರ್.ಡಿ.ಡಿ.ಸಿ. ನಿರ್ದೇಶಕರು ಭಾಗವಹಿಸಿ,'ಭಾರತೀಯ ಅಲ್ಯೂಮಿನಿಯಂ ವಲಯದಲ್ಲಿ ಸಂಪನ್ಮೂಲ ದಕ್ಷತೆ ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು ಚೌಕಟ್ಟು' ಎಂಬ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಿದರು.

ಪೇಟೆಂಟ್
ದಿನಾಂಕ 25.04.2022 ರ ಸಂಖ್ಯೆ 202221024081 ಮೂಲಕ "ಬಾಕ್ಸೈಟ್ ಉಳಿಕೆಯಲ್ಲಿ ಅಪರೂಪದ ಭೂಮಿಯ ಮೂಲವಸ್ತುಗಳ ಉಪಯೋಗಿ ಸಂಸ್ಕರಣೆ ಮತ್ತು ಸಮೃದ್ಧಿಗಾಗಿ" ಒಂದು ಪೇಟೆಂಟ್ ಅನ್ನು ಸಲ್ಲಿಸಲಾಗಿದೆ.

 ಜೆಎನ್ಆರ್.ಡಿಡಿಸಿ ಅಭಿವೃದ್ಧಿಪಡಿಸಿದ ವಿವಿಧ ನವೀನ ಪ್ರಕ್ರಿಯೆ ಮತ್ತು ಉತ್ಪನ್ನಗಳಿಗೆ ಐದು ಪೇಟೆಂಟ್ ಗಳನ್ನು ಮಂಜೂರು ಮಾಡಲಾಗಿದೆ.
 
ಎಸ್.ಎನ್.    ಪೇಟೆಂಟ್ ವಿವರಗಳು       
1    ಕುಲುಮೆಯ ಗ್ರೇಡ್ ಅಲ್ಯುಮಿನಾವನ್ನು ತಯಾರಿಸುವ ಒಂದು ಪ್ರಕ್ರಿಯೆ:
ದಿನಾಂಕ 29/08/2022 ರಂದು ಸಂಖ್ಯೆ 404896 ಮೂಲಕ ಮಂಜೂರು ಮಾಡಲಾಗಿದೆ. ಸಂಶೋಧಕರು :: ಎಸ್ ಬಿ ರಾಯ್, ಎಂ ಜೆ ಚಡ್ಡಾ, ಎಂ ಟಿ ನಿಮ್ಜೆ, ಆರ್ ಜೆ ಶರ್ಮಾ, ಕೆ ಜೆ ಕುಲಕರ್ಣಿ ಮತ್ತು ಕೆ ಆರ್ ರಾವ್ (ಜೆಎನ್.ಎಆರ್.ಡಿಡಿಸಿ)       

2    ತ್ಯಾಜ್ಯದಿಂದ ಅಥವಾ ಕಡಿಮೆ ದರ್ಜೆಯ ಅಲ್ಯೂಮಿನಿಯಂ ಡ್ರೋಸ್ ನಿಂದ ಕಡಿಮೆ ಫೆರಿಕ್ ಅಲುಮ್ ಅನ್ನು ತಯಾರಿಸುವ ಪ್ರಕ್ರಿಯೆ
ದಿನಾಂಕ 12/09/2022 ರಂದು ಸಂಖ್ಯೆ 406384 ಮೂಲಕ ಮಂಜೂರು ಮಾಡಲಾಗಿದೆ

ಸಂಶೋಧಕರು : ಡಾ. ಉಪೇಂದ್ರ ಸಿಂಗ್, ಜೆ. ಮುಖ್ಯೋಪಾಧ್ಯಾಯ, (ಜೆಎನ್ ಆರ್ ಡಿಡಿಸಿ) ಮತ್ತು ಬಿನುತಾ ಪಾತ್ರಾ ಮತ್ತು ಪಿ ಬಂಡೋಪಾಧ್ಯಾಯ (ನೆಲ್ಕೋ)       

3    "ಅಲ್ಯೂಮಿನಿಯಂ ಕೈಗಾರಿಕೆಗಳ ಅಪಾಯಕಾರಿ 1 ನೇ ಕಟ್ ಎಸ್.ಪಿ.ಎಲ್ ತ್ಯಾಜ್ಯವನ್ನು ಸೋಡಿಯಂ, ಫ್ಲೋರೈಡ್ ಮತ್ತು ಕಾರ್ಬನ್ ಮೌಲ್ಯದ ಆಯ್ದ ಶಾಖಾ ಸಂಸ್ಕರಣೆ ಮತ್ತು ಮರುಪಡೆಯುವಿಕೆಯ ಮೂಲಕ ಅಜೈವಿಕ ವಿಷಕಾರಿ ಸೈನೈಡ್ ಅನ್ನು ವಿಷಕಾರಿಯಲ್ಲದ ಪ್ರಭೇದಗಳಿಗೆ ಪರಿವರ್ತಿಸುವ ಮೂಲಕ ಅಪಾಯಕಾರಿಯಲ್ಲದ ವಸ್ತುವಾಗಿ ಪರಿವರ್ತಿಸುವ ಪ್ರಕ್ರಿಯೆ

ದಿನಾಂಕ 21/09/2022 ರಂದುಸಂಖ್ಯೆ  407276 ಮೂಲಕ ಮಂಜೂರು ಮಾಡಲಾಗಿದೆ.
ಸಂಶೋಧಕರು : ಎಂ.ಟಿ.ನಿಮ್ಜೆ, ಮೊಹಮ್ಮದ್ ನಜರ್, ಅನುಪಮ್ ಅಗ್ನಿಹೋತ್ರಿ, (ಜೆಎನ್ಆರ್.ಡಿ.ಡಿಸಿ) ಮತ್ತು ಎ.ಎಸ್.ಪಿ.ಮಿಶ್ರಾ (ವೇದಾಂತ)  

4    ಅಲ್ಯುಮಿನಾ ಹೈಡ್ರೇಟ್ ನಿಂದ ಕಬ್ಬಿಣದ ಆಯ್ದ ಲೀಚಿಂಗ್ ಪ್ರಕ್ರಿಯೆ 28/09/2022 ರಂದು ಸಂಖ್ಯೆ 407793 ಮೂಲಕ ಮಂಜೂರು ಮಾಡಲಾಗಿದೆ
ಸಂಶೋಧಕರು : ಡಾ.ಮೊಹಮ್ಮದ್ ನಜರ್, ಎಂ.ಟಿ.ನಿಮ್ಜೆ, ಎಸ್.ಪಿ.ಪುಟ್ಟೇವಾರ್, ಅನುಪಮ್ ಅಗ್ನಿಹೋತ್ರಿ (ಜೆಎನ್ಆರ್.ಡಿಡಿಸಿ) ಮತ್ತು ಸುಬ್ರತ್ ಕರ್, ವಿ.ಕೃಷ್ಣ ಕುಮಾರಿ ಪಿ.ಕೆ.ಬೆಹೆರಾ, (ನೆಲ್ಕೋ)       

5    ಒಂದು ಹಗುರ ಫೋಮ್ಡ್ ಜಿಯೋಪಾಲಿಮರ್ (LWFGEOP) ಮತ್ತು ಅದರ ತಯಾರಿಕೆ ದಿನಾಂಕ 12/10/2022 ರಂದು ಸಂಖ್ಯೆ 409005 ಮೂಲಕ ಮಂಜೂರು ಮಾಡಲಾಗಿದೆ

ಸಂಶೋಧಕರು :  ಡಾ.ಮೊಹಮ್ಮದ್ ನಜರ್, ಮುಖೇಶ್ ಚಡ್ಡಾ, ಪ್ರವೀಣ್ ಭುಕ್ಟೆ, ನುಮಾನುದ್ದೀನ್ ಆಜಾದ್, ಶಾಮವಾದ್ಸಾರಿಯಾ, ಸುರೇಶ್ ಪುತ್ತೇವಾರ್, ಅನುಪಮ್ ಅಗ್ನಿಹೋತ್ರಿ (ಜೆನಾರ್ಡ್ ಡಿಸಿ) ಮತ್ತು ಸಾಕೇತ್ ಜೈನ್ (ಸ್ವರ್ಣಲತಾ ಹೋಲ್ಡಿಂಗ್ಸ್)      
 
ಶಕ್ತಿ ಪ್ಲಾಸ್ಟಿಕ್ಸ್ ಮುಂಬ ಗೆ ತಂತ್ರಜ್ಞಾನ ವರ್ಗಾವಣೆ

ರಾಸಾಯನಿಕ ಡಿಲಮಿನೇಷನ್ ಪ್ರಕ್ರಿಯೆಯನ್ನು ಜೆಎನ್ಎರ್.ಡಿ.ಡಿಸಿ ಬಹು ಪದರ ಪ್ಲಾಸ್ಟಿಕ್ ವೇಸ್ಟ್ (ಎಂಎಲ್ಪಿಡಬ್ಲ್ಯೂ) ಗಾಗಿ ಅಭಿವೃದ್ಧಿಪಡಿಸಿದೆ, ಇದು ತಿರಸ್ಕರಿಸಿದ ಬಹು ಪದರಗಳಿಂದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ವಸ್ತುಗಳ ಸುಧಾರಿತ ಶುದ್ಧತೆಯನ್ನು ಶಕ್ತಗೊಳಿಸುತ್ತದೆ. ಮರುಬಳಕೆಗಾಗಿ ದೇಶಾದ್ಯಂತದ ವಿವಿಧ ಸಂಗ್ರಹ ಕೇಂದ್ರಗಳಿಂದ ಸಂಗ್ರಹಿಸುವ ವಿವಿಧ ರೀತಿಯ ಎಂಎಲ್ಪಿಗಳನ್ನು ಸಂಸ್ಕರಿಸಲು ಜೆಎನ್.ಎ.ಆರ್.ಡಿಡಿಸಿ ಅಭಿವೃದ್ಧಿಪಡಿಸಿದ ಮರುಬಳಕೆ ಪ್ರಕ್ರಿಯೆಯನ್ನು ಮುಂಬೈನ ಮೆಸರ್ಸ್ ಶಕ್ತಿ ಪ್ಲಾಸ್ಟಿಕ್ಸ್ ಗೆ ವರ್ಗಾಯಿಸಿತು. 08.12.2019 ರಂದು 201921050658 ಸಂಖ್ಯೆಯ ಮೂಲಕ ಈ ಪ್ರಕ್ರಿಯೆಗೆ ಪೇಟೆಂಟ್ ಅನ್ನು ಈಗಾಗಲೇ ಸಲ್ಲಿಸಲಾಗಿದೆ.

ಹೊಸ ಸೌಲಭ್ಯಗಳು / ಪ್ರಯೋಗಾಲಯಗಳ ಉದ್ಘಾಟನೆ

ಭಾರತ ಸರ್ಕಾರದ ಗಣಿ ಸಚಿವಾಲಯದ  ಕಾರ್ಯದರ್ಶಿ, ಶ್ರೀ ವಿವೇಕ್ ಭಾರದ್ವಾಜ್, ಐಎಎಸ್, 2022 ರ ಡಿಸೆಂಬರ್ 6 ರಂದು ನಾಗ್ಪುರದ ಜೆಎನ್ಆರ್.ಡಿ.ಡಿಸಿಯ ಪರಿಶೀಲನೆಯನ್ನು ಕೈಗೊಂಡರು. ಶ್ರೀ ಭಾರದ್ವಾಜ್ ಅವರು ಮೂರು ಹೊಸ ಪ್ರಯೋಗಾಲಯ ಸೌಲಭ್ಯಗಳನ್ನು ಉದ್ಘಾಟಿಸಿದರು (i) ಕಾರ್ಬನ್ ಸಲ್ಫ್ಯೂರ್ನಾಲಿಜರ್, ನೇರ ಪಾದರಸ ವಿಶ್ಲೇಷಕ ಮತ್ತು ಟಿಸಿಎಲ್ಪಿ (ii) ಅಲ್ಯೂಮಿನಿಯಂ ಮತ್ತು ಅಲ್ಯೂಮಿನಿಯಂ ಮಿಶ್ರಲೋಹಗಳ ವಿಶ್ಲೇಷಣೆಗೆ ಉಲ್ಲೇಖ ಸಾಮಗ್ರಿಗಳು ಮತ್ತು (iii) ಕಲ್ಲಿದ್ದಲು ಹಾರುಬೂದಿಯಿಂದ ಚೇತರಿಸಿಕೊಳ್ಳಲು ಘಟಕ ಎಎಲ್ಎಫ್ 3 ಮತ್ತು ಸಿಲಿಕಾ (ಎಸ್ಐಒ2) ಘಟಕವನ್ನು ಉದ್ಘಾಟಿಸಿದರು.

ಪ್ರಶಸ್ತಿಗಳು / ಮಾನ್ಯತೆ
ಕಬ್ಬಿಣೇತರ ಲೋಹ (ಐಸಿಎನ್ಎಫ್ಎಂ-2022) ಕುರಿತ 26 ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಉಪೇಂದ್ರ ಸಿಂಗ್ ಎಚ್ಒಡಿ (ವಿಶ್ಲೇಷಣಾತ್ಮಕ) ಗೆ ವೈಜ್ಞಾನಿಕ ಉತ್ಕೃಷ್ಟತೆ ಪ್ರಶಸ್ತಿ; ರಾಡಿಸನ್ ಬ್ಲೂ, ನಾಗ್ಪುರ್ 8-9 ಜುಲೈ 2022 ರಂದು  "ಪಾಲಿ-ಅಲ್ಯೂಮಿನಿಯಂ ಕ್ಲೋರೈಡ್ ತಯಾರಿಕೆ" ಎಂಬ ಭಿತ್ತಿಪತ್ರಕ್ಕೆ 2ನೇ ಬಹುಮಾನ; ಐಸಿಎನ್ಎಫ್ಎಂ-2022 ರಲ್ಲಿ ಜ್ಯೋತಿ ಪೆಂಡಮ್, ಸೋನಾಲಿ ತ್ವ್ರಾನಿ, ಮಯೂರ್ ತಿರ್ಪುಡೆ, ಡಾ. ಉಪೇಂದ್ರ ಸಿಂಗ್ ಮತ್ತು ಡಾ. ಎ. ಅಗ್ನಿಹೋತ್ರಿ ಐಬಿಎಎಎಸ್-2022 ರಲ್ಲಿ ರಾಯ್ಪುರದಲ್ಲಿ ಡಾ.ಪ್ರಿಯಾಂಕಾ ನಾಯರ್, ಡಾ.ಪೂಜಾ ಯಾದವ್, ಸಂದೀಪ್ ಕೋವೆ, ಜ್ಯೋತಿ ಪೆಂಡಂ, ಡಾ.ಉಪೇಂದ್ರ ಸಿಂಗ್ ಮತ್ತು ಡಾ.ಅನುಪಮ್ ಅಗ್ನಿಹೋತ್ರಿ ಅವರ "ಅಲ್ಯೂಮಿನಿಯಂ ಫಾಯಿಲ್ ನಿಂದ 3 ಎನ್ ಶುದ್ಧ ಆಲ್ಫಾ- ನ್ಯಾನೋ ಅಲ್ಯುಮಿನಾದ ಸಂಶ್ಲೇಷಣೆ" ಪ್ರಬಂಧಕ್ಕೆ ಮೊದಲ ಬಹುಮಾನ.

ಸ್ವಚ್ಛ ಭಾರತ ಅಭಿಯಾನ

ಜೆಎನ್ಆರ್.ಡಿಡಿಸಿ ಎಲ್ಲಾ ಪ್ರಯೋಗಾಲಯಗಳು ಮತ್ತು ಕಚೇರಿ ಆವರಣಗಳ ಸ್ವಚ್ಛತೆಗಾಗಿ ವಿಶೇಷ ಅಭಿಯಾನವನ್ನು ಕೈಗೊಂಡಿತು. ಮೇಲಿನ ಕಾರ್ಯಕ್ರಮದ ಸ್ಫೂರ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಅಕ್ಟೋಬರ್ 2022 ರಲ್ಲಿ ಸ್ವಚ್ಚತಾ ಪಖ್ವಾಡವನ್ನು ಆಚರಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಜೆ.ಎನ್.ಆರ್.ಡಿ.ಡಿ.ಸಿ. ಸ್ವಚ್ಛ ಕ್ರಿಯಾ ಯೋಜನೆ (i) ತಾಂತ್ರಿಕ ಸಂಕೀರ್ಣದ ಕಚೇರಿ ರಸ್ತೆಯನ್ನು ಮರು-ಕಾರ್ಪೆಟ್ ಮಾಡುವುದು (ii) ಸಾಮೂಹಿಕ ನೆಡುತೋಪು ಕಾರ್ಯಕ್ರಮಗಳು (iii) ಅಭಿಲೇಖಾಲಯದ ಕಡತಗಳ ಪರಿಶೀಲನೆ ಮತ್ತು ವಿಲೇವಾರಿ (iv) ಅತಿಥಿಗೃಹ ಮತ್ತು ನೈರ್ಮಲ್ಯ ಸೌಲಭ್ಯಗಳ ನವೀಕರಣ (v) ಗುಜರಿ ವಿಲೇವಾರಿ ಜೆಎನ್ಆರ್.ಡಿಡಿಸಿಯ 800 ಮೀಟರ್ ಸಿಮೆಂಟ್ ರಸ್ತೆಯನ್ನು ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಶ್ರೀಮತಿ ನಿರುಪಮಾ ಕೊಟ್ರು ಅವರು ಜುಲೈ 2022 ರಂದು ಉದ್ಘಾಟಿಸಿದರು.

ರಾಕ್ ಮೆಕ್ಯಾನಿಕ್ಸ್ ಕುರಿತ ರಾಷ್ಟ್ರೀಯ ಸಂಸ್ಥೆ (ಎನ್.ಐ.ಆರ್.ಎಂ.)

ಪರಾಮರ್ಶೆಯ ಅವಧಿಯಲ್ಲಿ (2022) ವಿವಿಧ ಭೌಗೋಳಿಕ-ವೈಜ್ಞಾನಿಕ ಯೋಜನೆಗಳ (ನಾಗರಿಕ, ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯಗಳು) ಅಗತ್ಯಗಳನ್ನು ಪೂರೈಸುವ 16.6 ಕೋಟಿ ಮೌಲ್ಯದ 66 ಯೋಜನೆಗಳನ್ನು ಪೂರ್ಣಗೊಳಿಸಿದೆ. ಸುಧಾರಿತ ಭೂವೈಜ್ಞಾನಿಕ, ಆಂತರಿಕ ಒತ್ತಡ ಮಾಪನಗಳು, ಸಾಂಖ್ಯಿಕ ಮಾಡೆಲಿಂಗ್, ಉತ್ಖನನ ವಿನ್ಯಾಸ, ಎಂಜಿನಿಯರಿಂಗ್ ಭೂಭೌತಿಕ ತನಿಖೆಗಳು, ಮೇಲ್ಮೈ ಮತ್ತು ಭೂಗತದಿಂದ ಸುಧಾರಿತ ಭೂಕಂಪ ಮತ್ತು ಸೂಕ್ಷ್ಮ ಭೂಕಂಪನ ಮೇಲ್ವಿಚಾರಣೆ, ಭೂಕಂಪದ ಅಪಾಯದ ಅಂದಾಜು, ಮತ್ತು ಇಳಿಜಾರುಗಳು / ಭೂಗತ ಉತ್ಖನನಗಳ ಸ್ಥಿರತೆಯ ಮೂಲಕ ವೈಜ್ಞಾನಿಕ ತನಿಖೆಗಳು ಮತ್ತು ವೈಜ್ಞಾನಿಕ ಉಪಕ್ರಮಗಳು ಟರ್ನ್ ಕೀ ಆಧಾರದ ಮೇಲೆ ಯೋಜನೆಗಳಿಗೆ ಗಮನಾರ್ಹ ಮೌಲ್ಯವರ್ಧನೆಯಾಗಿವೆ.

ಎನ್.ಐ.ಆರ್.ಎಂ. ವಿಶೇಷ ಕ್ಷೇತ್ರಗಳು:

ತಾಣ ಗುಣಲಕ್ಷಣೀಕರಣ ತನಿಖೆ - ಎಂಜಿನಿಯರಿಂಗ್ ಭೂವೈಜ್ಞಾನಿಕ, ಎಂಜಿನಿಯರಿಂಗ್ ಭೂ ಭೌತಿಕ, ಭೂ ತಂತ್ರಜ್ಞಾನ ಇನ್-ಸಿತು ತನಿಖೆ, ಭೂಕಂಪನ ಕುರಿತ ಅಧ್ಯಯನಗಳು

ವಿನ್ಯಾಸ ಮತ್ತು ಉತ್ಖನನ - ಮೇಲ್ಮೈ ಮತ್ತು ಭೂಗತ ಗಣಿ ವಿನ್ಯಾಸ, ಉತ್ಖನನ ಎಂಜಿನಿಯರಿಂಗ್, ನಿಯಂತ್ರಿತ ಸ್ಫೋಟ, ಸಂಖ್ಯಾತ್ಮಕ ಮಾಡೆಲಿಂಗ್, ಬೆಟ್ಟದ ಇಳಿಜಾರುಗಳ ವಿನ್ಯಾಸ

ಸುಧಾರಿತ ಮೇಲ್ವಿಚಾರಣೆ – ಮೈಕ್ರೋಸಿಸ್ಮಿಕ್ ಮೇಲ್ವಿಚಾರಣೆ, ಎಂಜಿನಿಯರಿಂಗ್ ಭೂಕಂಪಶಾಸ್ತ್ರೀಯ ತನಿಖೆ, ಇಳಿಜಾರು ಸ್ಥಿರತೆಯ ಮೇಲ್ವಿಚಾರಣೆ, ಸಾಂಪ್ರದಾಯಿಕ ಉಪಕರಣೀಕರಣ

ಪರೀಕ್ಷಾ ಸೇವೆಗಳು - ಕಲ್ಲುಬಂಡೆ ಮಾದರಿಗಳು ಮತ್ತು ತಂತಿ ಹಗ್ಗಗಳ ಪ್ರಯೋಗಾಲಯದ ಪರೀಕ್ಷೆ ಮತ್ತು ಎನ್ಡಿಟಿ ತಂತ್ರವನ್ನು ಬಳಸಿಕೊಂಡು ವಿವಿಧ ಗಣಿಗಾರಿಕೆ ಪರಿಕರಗಳ ಮೂಲೆ ನೆಲೆಯಲ್ಲಿ (ಇನ್-ಸಿತು) ಪರೀಕ್ಷೆ

ಜಲವಿದ್ಯುತ್ ಯೋಜನೆಗಳಲ್ಲಿ ಶಿಲಾ ಉತ್ಖನನದ ವಿನ್ಯಾಸ ಮತ್ತು ಸಂಖ್ಯಾತ್ಮಕ ಮಾಡೆಲಿಂಗ್ ಪ್ರಗತಿಯಲ್ಲಿರುವ ಉತ್ಖನನಗಳ ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ಅಪಾರವಾಗಿ ಸಹಾಯಕವಾಗಿದೆ. ಸುಧಾರಿತ ಮಾಡೆಲಿಂಗ್ ಮತ್ತು ಇನ್ ಸ್ಟ್ರುಮೆಂಟೇಶನ್ ಅನ್ನು ಉದ್ಯಮವು ಯಾವುದೇ ಅಡೆತಡೆಯಿಲ್ಲದೆ ತನ್ನ ಗರಿಷ್ಠ ದಕ್ಷತೆಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಮತ್ತೆ ಮತ್ತೆ ಪರಿಶೋಧಿಸುತ್ತಿದೆ. ವಿವಿಧ ಸ್ಥಳಗಳಲ್ಲಿನ ಮೂಲನೆಲೆ ಒತ್ತಡ ಮಾಪನಗಳು, ಪ್ರವೇಶಾರ್ಹತೆ ಮತ್ತು ವಿರೂಪಗೊಳಿಸುವಿಕೆ ಪರೀಕ್ಷೆಗಳೊಂದಿಗೆ ಸಂಯೋಜಿಸಲ್ಪಟ್ಟ ಎನ್ಐಆರ್.ಎಂ ಉತ್ಖನನ ಮತ್ತು ನಿರ್ಮಾಣದ ಸಮಯದಲ್ಲಿ ಬಂಡೆ ಸಮೂಹದ ವರ್ತನೆಯ ಬಗ್ಗೆ ಪ್ರಮುಖ ಸುಳಿವುಗಳನ್ನು ಒದಗಿಸಿದೆ.

ಎನ್ಐಆರ್.ಎಂ ಮೇಲ್ಮೈ ಮತ್ತು ಭೂಗತ ಗಣಿಗಳಿಗಾಗಿ ಸುಧಾರಿತ ಭೂಕಂಪ ಅಪಾಯ ಪತ್ತೆ ಮತ್ತು ಮೈಕ್ರೋಸೀಸ್ಮಿಕ್ ಮೇಲ್ವಿಚಾರಣೆಯನ್ನು ನಡೆಸುತ್ತಿದೆ. ವಿವಿಧ ಚಟುವಟಿಕೆಗಳನ್ನು ಯೋಜಿಸಲು ಮತ್ತು ಒಳಗೊಂಡಿರುವ ರಚನೆಗಳ ಸುರಕ್ಷತೆಗೆ ಒಳಹರಿವುಗಳು ಅತ್ಯಗತ್ಯವಾಗಿವೆ. ಭೂಗರ್ಭದಲ್ಲಿನ ಬಂಡೆಗಳ ಭೂಕಂಪದ ವರ್ತನೆಯ ಕಾಲಕಾಲಕ್ಕೆ ವರದಿ ಮಾಡುವುದು ಗಣಿಗಾರಿಕೆಯ ಕಾರ್ಯಾಚರಣೆಗಳನ್ನು ಅಡೆತಡೆಯಿಲ್ಲದೆ ಅಥವಾ ದೀರ್ಘಕಾಲದವರೆಗೆ ಸ್ಥಗಿತಗೊಳ್ಳದೆ ಮುಂದುವರಿಸಲು ಗಮನಾರ್ಹವಾಗಿ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ.  ಪರಿಹಾರಗಳನ್ನು ಒದಗಿಸುವುದರ ಜೊತೆಗೆ, ಎನ್ಐಆರ್.ಎಂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ವಿಚಾರ ಸಂಕಿರಣಗಳು, ತಜ್ಞರು ಪರಾಮರ್ಶಿಸಿದ ನಿಯತಕಾಲಿಕಗಳು ಮತ್ತು ಇತರ ತಾಂತ್ರಿಕ ಪ್ರಕಟಣೆಗಳ ಮೂಲಕ ಉತ್ತಮ ಗುಣಮಟ್ಟದ ವೈಜ್ಞಾನಿಕ ಕೃತಿಗಳನ್ನು ಪ್ರಕಟಿಸಲು ಶ್ರಮಿಸುತ್ತದೆ.

ಕೈಗಾರಿಕಾ ತರಬೇತಿ: ಎನ್ಐಆರ್.ಎಂ. ಸ್ಥಳದಲ್ಲಿಯೇ ತರಬೇತಿ ಮತ್ತು ವರ್ಚುವಲ್ ಆನ್ಲೈನ್ ಕಾರ್ಯಕ್ರಮಗಳ ಮೂಲಕ ಕೈಗಾರಿಕಾ ಎಂಜಿನಿಯರ್ ಗಳು, ಅಸೋಸಿಯೇಟ್ ಗಳಿಗೆ ವೈಜ್ಞಾನಿಕ ಯೋಜನೆಗಳಲ್ಲಿ ತರಬೇತಿ ನೀಡುತ್ತದೆ. ಎಕೆಎಎಂ (ಭಾರತದ ಸ್ವಾತಂತ್ರ್ಯದ 75 ವರ್ಷಗಳು) ತಾಂತ್ರಿಕ ಸಾಪ್ತಾಹಿಕ ಉಪನ್ಯಾಸಗಳ ಮೂಲಕ ಎನ್ಐಆರ್.ಎಂ ಉದ್ಯಮದ ತಜ್ಞರು ಮತ್ತು ಸಂಸ್ಥೆಯ ವಿಜ್ಞಾನಿಗಳ ಭಾಗವಹಿಸುವಿಕೆಯೊಂದಿಗೆ ಸುಧಾರಿತ ಉಪನ್ಯಾಸಗಳ ಸರಣಿಯನ್ನು ಯಶಸ್ವಿಯಾಗಿ ನಡೆಸಿತ್ತು. ಫೆಬ್ರವರಿ 2022 ರಲ್ಲಿ ಭಾರತ ಸರ್ಕಾರದ ಗಣಿ ಸಚಿವಾಲಯ ಪ್ರಾಯೋಜಿಸಿದ ಕಾರ್ಯಕ್ರಮದ ಅಡಿಯಲ್ಲಿ ಭೂಕಂಪದ ಮೇಲ್ವಿಚಾರಣೆ ಕೌಶಲ್ಯಗಳಿಗೆ ಅಗತ್ಯವಾದ ಮೂಲಭೂತ ಅರಿವು ಮತ್ತು ರೂಢಿಗಳ ಬಗ್ಗೆ ಎನ್ಐಆರ್.ಎಂ ಕೌಶಲ್ಯಗಳನ್ನು ಒದಗಿಸಿತು.

ಕೈಗಾರಿಕೆ - ಶೈಕ್ಷಣಿಕ ಸಂವಹನ: ಎನ್ಐಆರ್.ಎಂ. ವಿಜ್ಞಾನಿಗಳು ತಮ್ಮ ಪರಿಣತಿಯ ಮುಂದುವರಿದ ಕ್ಷೇತ್ರಗಳಲ್ಲಿ ಹೆಚ್ಚಿನ ಕೌಶಲ್ಯ ಮತ್ತು ಪಿಎಚ್.ಡಿ.ಯಂತಹ ಪದವಿಗಳನ್ನು ಗಳಿಸಲು ಶ್ರಮಿಸುತ್ತಾರೆ. ಅಂತಹ ಕೆಲಸಗಳು ಬಲವಾದ ಉದ್ಯಮ-ಶೈಕ್ಷಣಿಕ ಸಂಬಂಧವನ್ನು ಖಚಿತಪಡಿಸುತ್ತವೆ ಮತ್ತು ಯುವ ಎಂಜಿನಿಯರ್ ಗಳು, ವಿಜ್ಞಾನ ಪದವೀಧರರಿಗೆ ಸಂಸ್ಥೆಯ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಅವಕಾಶಗಳನ್ನು ಒದಗಿಸುತ್ತವೆ. ಇದು ಜ್ಞಾನ, ಕೌಶಲ್ಯ ಮತ್ತು ಉನ್ನತ ಗುಣಮಟ್ಟದ ವೈಜ್ಞಾನಿಕ ಪರಿಹಾರದ ಉನ್ನತೀಕರಣಕ್ಕೆ ದ್ವಿಮುಖ ಅವಕಾಶಗಳನ್ನು ಶಕ್ತಗೊಳಿಸುತ್ತದೆ.

****


(Release ID: 1886891) Visitor Counter : 378