ಗೃಹ ವ್ಯವಹಾರಗಳ ಸಚಿವಾಲಯ

ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಇಂದು ನವದೆಹಲಿಯ 'ಸದೈವ್ ಅಟಲ್' ಸ್ಮಾರಕದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದಿವಂಗತ ಅಟಲ್‌ಜೀಯವರಿಗೆ  ಶ್ರದ್ಧಾಂಜಲಿ ಸಲ್ಲಿಸಿ ಸಮಿಸಿದರು.


ಅಟಲ್ ಜೀ ಅವರ ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ಸಮರ್ಪಣಾಭಾವವು ರಾಷ್ಟ್ರದ ಸೇವೆ ಮಾಡಲು ನಮಗೆ ಸದಾ ಸ್ಫೂರ್ತಿ ನೀಡುತ್ತದೆ.

ಭಾರತೀಯ ರಾಜಕೀಯದ ಪರಾಕಾಷ್ಠೆಯಾದ ಅಟಲ್ ಜೀಯವರ ಜೀವನವು ದೇಶವನ್ನು  ವೈಭವ ಸಾರ್ಥಕತೆಗೆ ಮರಳಿ ಕೊಂಡೊಯ್ಯಲು ಸಮರ್ಪಿತವಾಗಿದೆ.

ಅವರ ನಾಯಕತ್ವದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ನವ ಯುಗಕ್ಕೆ ಅಡಿಪಾಯ ಹಾಕುವ ಮೂಲಕ, ಅವರು ಭಾರತದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದ್ದರು ಮತ್ತು ಸಾರ್ವಜನಿಕರಲ್ಲಿ ರಾಷ್ಟ್ರೀಯ ಹೆಮ್ಮೆಯ ಭಾವವನ್ನು ತುಂಬಿದ್ದ ಮಹಾನ್ ವ್ಯಕ್ತಿ.

 ಇಂದು ಅಟಲ್ ಜೀ‌ ಅವರ ಜನ್ಮದಿನದಂದು ಅವರಿಗೆ ಹೃತ್ಪೂರ್ವಕ ನಮನಗಳು.

Posted On: 25 DEC 2022 1:56PM by PIB Bengaluru

ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಇಂದು ನವದೆಹಲಿಯ 'ಸದೈವ್ ಅಟಲ್' ಸ್ಮಾರಕದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಶಾ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಅಟಲ್ ಜೀ ಅವರ ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ಸಮರ್ಪಣಾ ಮನೋಭಾವವು ದೇಶ ಸೇವೆ ಮಾಡಲು ನಮಗೆ ಸದಾ ಪ್ರೇರಣೆ ನೀಡುತ್ತದೆ ಎಂದು ಶ್ರೀ ಅಮಿತ್ ಶಾ ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಭಾರತೀಯ ರಾಜಕೀಯದ ಪರಾಕಾಷ್ಠೆಯಾದ ಅಟಲ್ ಜೀ ಅವರ ಜೀವನವು ದೇಶವನ್ನು ಅದರ ಅಂತಿಮ ವೈಭವಕ್ಕೆ ಮರಳಿ ಕೊಂಡೊಯ್ಯಲು ಸಮರ್ಪಿತವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು.  ಅವರ ನಾಯಕತ್ವದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಯುಗದ ಅಡಿಪಾಯವನ್ನು ಹಾಕುವ ಮೂಲಕ, ಅಟಲ್ ಜೀ ಅವರು ಭಾರತದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದವರು ಮತ್ತು ಸಾರ್ವಜನಿಕರಲ್ಲಿ ರಾಷ್ಟ್ರೀಯ ಹೆಮ್ಮೆಯ ಭಾವವನ್ನು ತುಂಬಿದರು.  ಇಂದು, ಅವರ ಜನ್ಮದಿನದಂದು, ನಾನು ಅಟಲ್ ಜೀ ಅವರಿಗೆ ನನ್ನ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

************(Release ID: 1886520) Visitor Counter : 131