ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕೇಂದ್ರ ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಖೇಲೋ ಇಂಡಿಯಾ ಡ್ಯಾಶ್‌ಬೋರ್ಡ್ ಅನ್ನು ಬಿಡುಗಡೆ ಮಾಡಿದರು.
ಡ್ಯಾಶ್‌ಬೋರ್ಡ್ ಜನರಿಗೆ ಖೇಲೋ ಇಂಡಿಯಾ ಯೋಜನೆಯ ಎಲ್ಲಾ ಮಾಹಿತಿಯನ್ನು ಸುಲಭವಾಗಿ ದೊರಕುವಂತೆ ಮಾಡುತ್ತದೆ.
Posted On:
23 DEC 2022 5:46PM by PIB Bengaluru
ಪ್ರಮುಖ ಮುಖ್ಯಾಂಶಗಳು:
* ಈ ಡ್ಯಾಶ್‌ಬೋರ್ಡ್‌ನಲ್ಲಿ ಜಿಯೋಟ್ಯಾಗ್ ಮಾಡುವಿಕೆಯೊಂದಿಗೆ ಆಟದ ಮೈದಾನಗಳ ಕುರಿತಾದ ಮಾಹಿತಿ ಲಭ್ಯವಿದೆ.
* ಭಾರತದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ನಿಸಿತ್ ಪ್ರಮಾಣಿಕ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಖೇಲೋ ಇಂಡಿಯಾದ ಹೊಸ ಡ್ಯಾಶ್‌ಬೋರ್ಡ್ ಅನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು, ಇದು ಖೇಲೋ ಇಂಡಿಯಾ ಯೋಜನೆ ಮತ್ತು ಖೇಲೋ ಇಂಡಿಯಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ಅಂಕಿಅಂಶಗಳ ದತ್ತಾಂಶವನ್ನು ಹೊಂದಿದೆ. ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀ ನಿಸಿತ್ ಪ್ರಮಾಣಿಕ್ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ)ದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಖೇಲೋ ಇಂಡಿಯಾ ಡ್ಯಾಶ್‌ಬೋರ್ಡ್ ಅನ್ನು ಸರಿಯಾದ ಅಗತ್ಯವಾದ ಸಮಯದಲ್ಲಿ ನವೀಕರಿಸಲಾಗುತ್ತದೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಖೇಲೋ ಇಂಡಿಯಾ ಯೋಜನೆಯ ವಿವಿಧ ಕೊಡುಗೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುವ ಅನನ್ಯ ಏಕ ಪ್ರಮುಖ ವೇದಿಕೆಯಾಗಿದೆ.

ಡ್ಯಾಶ್‌ಬೋರ್ಡ್ ಕುರಿತು ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಡ್ಯಾಶ್‌ಬೋರ್ಡ್ ಕುರಿತು ಮಾತನಾಡಿ, “ನೀವು ಭಾರತ ಸರ್ಕಾರವು ಮಾಡುತ್ತಿರುವ ಕೆಲಸವನ್ನು ನೋಡಿದರೆ ಅದರ ಕೆಲಸದಲ್ಲಿ ಸುಲಭ ಪ್ರವೇಶ ಮತ್ತು ಪಾರದರ್ಶಕತೆಗೆ ಯಾವಾಗಲೂ ಮೊದಲ ಆದ್ಯತೆಯನ್ನು ನೀಡಲಾಗಿದೆ ಎಂಬುದನ್ನು ನೀವು ಗಮನಿಸಿರುತ್ತೀರಿ. ವ್ಯವಹಾರ ಮಾಡುವುದು ಸುಲಭವಾಗಲೀ, ಜೀವನ ಸುಲಭವಾಗಲೀ ಅಥವಾ ಅನುಸರಣೆಯು ಸುಲಭವಾಗಲೀ ಎಂಬ ಈ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಖೇಲೋ ಇಂಡಿಯಾ ಡ್ಯಾಶ್‌ಬೋರ್ಡ್ ಅನ್ನು ಪ್ರಾರಂಭಿಸಲಾಗಿದೆ. ಈ ವಿಶಿಷ್ಟ ವೇದಿಕೆಯು ಪ್ರತಿಯೊಬ್ಬ ವ್ಯಕ್ತಿಗೆ, ಅದು ಸಾಮಾನ್ಯ ವ್ಯಕ್ತಿಯಾಗಿರಲಿ ಅಥವಾ ಕ್ರೀಡಾಪಟುವಾಗಲಿ, ಖೇಲೋ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಯಾವುದೇ ಮಾಹಿತಿಯನ್ನು ಪಡೆಯಲು ಆಸಕ್ತರು ವಿವಿಧ ಸ್ಥಳಗಳಿಗೆ ಭೇಟಿ ನೀಡಬೇಕಾಗಿಲ್ಲ. ಡ್ಯಾಶ್‌ಬೋರ್ಡ್ ಖೇಲೋ ಇಂಡಿಯಾ ಬಗೆಗಿನ ಸಂಪೂರ್ಣ ಮಾಹಿತಿ ಒದಗಿಸುವ ವೇದಿಕೆಯಾಗಿದೆ.ಈ ಡ್ಯಾಶ್‌ಬೋರ್ಡ್‌ನಲ್ಲಿ ಜಿಯೋಟ್ಯಾಗ್ ಮಾಡುವಿಕೆಯೊಂದಿಗೆ ಆಟದ ಮೈದಾನಗಳ ಕುರಿತು ಮಾಹಿತಿ ಸಹ ಲಭ್ಯವಿದೆ ಎಂದು ವಿವರಿಸಿದರು.

ಕೇಂದ್ರ ಸಚಿವರ ಹೇಳಿಕೆಗೆ ಧ್ವನಿಗೂಡಿಸಿದ ಶ್ರೀ ಪ್ರಮಾಣಿಕ್ ಅವರು, "ಈ ವೇದಿಕೆಯು ಜನರಿಗೆ ಖೇಲೋ ಇಂಡಿಯಾ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಇನ್ನು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ, ಫಿಟ್ ಇಂಡಿಯಾ ಮತ್ತು ಆಟದ ಮೈದಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಗತಿಯ ಮಾಹಿತಿಯನ್ನು ಬಗ್ಗೆ ತಿಳಿಯುವ ಕೊಂಡಿಯನ್ನು ಪ್ರವೇಶಿಸಲು ಸಹ ಸಹಾಯ ಮಾಡುತ್ತದೆ" ಎಂದು ತಿಳಿಸಿದರು.
ಅನನ್ಯ ವೇದಿಕೆಯು ಖೇಲೋ ಇಂಡಿಯಾ ಸೆಂಟರ್‌ಗಳು (ಕೆಐಸಿಗಳು), ಖೇಲೋ ಇಂಡಿಯಾ ಅಕಾಡೆಮಿಗಳು, ಎಸ್‌ಎಐ ತರಬೇತಿ ಕೇಂದ್ರಗಳು ಮತ್ತು ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಎನ್‌ಸಿಒಇಗಳು) ಬಗೆಗಿನ ದತ್ತಾಂಶಗಳನ್ನು ಹೊಂದಿದೆ. ಇದು ಕ್ರೀಡಾಪಟುಗಳಿಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ತರಬೇತಿ ಲಭ್ಯವಿರುವ ಹತ್ತಿರದ ತರಬೇತಿ ಕೇಂದ್ರವನ್ನು ಗುರುತಿಸಲು ಸಹಾಯ ಮಾಡುತ್ತದೆ. ನಿರ್ದಿಷ್ಟ ಕ್ರೀಡೆಯನ್ನು ಅನುಸರಿಸುವ ಯಾವುದೇ ಅಥ್ಲೀಟ್‌ಗೆ ಭಾರತದಾದ್ಯಂತ ತಮ್ಮ ಆಯ್ಕೆಯ ಕೇಂದ್ರವನ್ನು ಹುಡುಕಲು ಸಹಾಯ ಮಾಡಲು ಕೇಂದ್ರಗಳನ್ನು ಭಾರತದ ನಕ್ಷೆಯಲ್ಲಿ ಜಿಯೋಟ್ಯಾಗ್ ಮಾಡಲಾಗಿದೆ.
ಈ ಕೆಳಗಿನ ಲಿಂಕ್‌ನಲ್ಲಿ ಒಬ್ಬರು ಖೇಲೋ ಇಂಡಿಯಾ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಬಹುದಾಗಿದೆ- https://dashboard.kheloindia.gov.in/khelo_india_dashboard/
*****
(Release ID: 1886189)
Visitor Counter : 178