ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಅಳವಡಿಕೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಡಿಜಿಟಲ್ ಆರೋಗ್ಯ ಪರಿಹಾರ ಪೂರೈಕೆದಾರರಿಗೆ 4 ಕೋಟಿ ರೂ.ಗಳವರೆಗೆ ಪ್ರೋತ್ಸಾಹಕಗಳನ್ನು ನೀಡುವ ಯೋಜನೆಯನ್ನು ಎನ್‌ ಹೆಚ್‌ ಎ ಘೋಷಿಸಿದೆ

Posted On: 22 DEC 2022 11:01AM by PIB Bengaluru

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ ಹೆಚ್‌ ಎ) ವು ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಭಾಗೀದಾರರಿಗೆ ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆ (ಡಿ ಹೆಚ್‌ ಐ ಎಸ್‌) ಘೋಷಿಸಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಅಡಿಯಲ್ಲಿ ದೇಶದಲ್ಲಿ ಡಿಜಿಟಲ್ ಆರೋಗ್ಯ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯ ಅಡಿಯಲ್ಲಿ ಪ್ರೋತ್ಸಾಹಕಗಳನ್ನು ಆಸ್ಪತ್ರೆಗಳು ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ಮತ್ತು ಆಸ್ಪತ್ರೆ/ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ (ಹೆಚ್‌ ಎಂ ಐ ಎಸ್‌) ಮತ್ತು ಪ್ರಯೋಗಾಲಯ ನಿರ್ವಹಣೆ ಮಾಹಿತಿ ವ್ಯವಸ್ಥೆ (ಎಲ್‌ ಎಂ ಐ ಎಸ್‌) ನಂತಹ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಒದಗಿಸುವವರಿಗೆ ಒದಗಿಸಲಾಗುತ್ತದೆ.

ಡಿ ಹೆಚ್‌ ಐ ಎಸ್‌ಅಡಿಯಲ್ಲಿ, ಅರ್ಹ ಆರೋಗ್ಯ ಸೌಲಭ್ಯಗಳು ಮತ್ತು ಡಿಜಿಟಲ್ ಪರಿಹಾರಗಳ ಕಂಪನಿಗಳು ಅವರು ರಚಿಸುವ ಡಿಜಿಟಲ್ ಆರೋಗ್ಯ ದಾಖಲೆಗಳ ಸಂಖ್ಯೆ ಮತ್ತು ಎ ಬಿ ಹೆಚ್‌ ಎ (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಗೆ ಲಿಂಕ್ ಮಾಡುವ ಆಧಾರದ ಮೇಲೆ ರೂ.4 ಕೋಟಿಗಳವರೆಗೆ ಹಣಕಾಸಿನ ಪ್ರೋತ್ಸಾಹವನ್ನು ಗಳಿಸಲು ಸಾಧ್ಯವಾಗುತ್ತದೆ. ಎಬಿಡಿಎಂನ ಹೆಲ್ತ್ ಫೆಸಿಲಿಟಿ ರಿಜಿಸ್ಟ್ರಿ (ಹೆಚ್‌ ಎಫ್ ಆರ್‌) ಯಲ್ಲಿ ನೋಂದಾಯಿಸಲಾದ ಮತ್ತು ಯೋಜನೆಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅರ್ಹತಾ ಮಾನದಂಡವನ್ನು ಪೂರೈಸುವ ಆರೋಗ್ಯ ಸೌಲಭ್ಯಗಳು (ಆಸ್ಪತ್ರೆಗಳು ಮತ್ತು ರೋಗನಿರ್ಣಯ ಪ್ರಯೋಗಾಲಯಗಳು) ಈ ಪ್ರೋತ್ಸಾಹವನ್ನು ಪಡೆಯಬಹುದು.

ಎನ್‌ಎಚ್‌ಎ, ಸಿಇಒ ಡಾ. ಆರ್.ಎಸ್. ಶರ್ಮಾ ಈ ಕುರಿತು ವಿವರ ನೀಡಿದ್ದಾರೆ.  “ಈ ಯೋಜನೆಯು ಹೆಚ್ಚು ಹೆಚ್ಚು ಆರೋಗ್ಯ ಸೌಲಭ್ಯಗಳು ಮತ್ತು ಡಿಜಿಟಲ್ ಸಾಫ್ಟ್‌ವೇರ್ ಕಂಪನಿಗಳು ಮುಂದೆ ಬರಲು ಮತ್ತು ರೋಗಿಗಳನ್ನು ಕೇಂದ್ರೀಕರಿಸಿದ ಆರೋಗ್ಯ ಸೇವೆಯನ್ನು ಒದಗಿಸಲು ಎಬಿಡಿಎಂಗೆ ಸೇರಲು ಪ್ರೋತ್ಸಾಹಿಸುತ್ತದೆ. ಈ ಆರ್ಥಿಕ ಪ್ರೋತ್ಸಾಹ ಯೋಜನೆಯ ಮೂಲಕ, ನಾವು ಡಿಜಿಟಲ್ ಆರೋಗ್ಯವನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುತ್ತಿದ್ದೇವೆ. ಇದಲ್ಲದೆ, ನಾವು ಪರಿಹಾರ (ಹೆಚ್‌ ಎಂ ಐ ಎಸ್/ಎಲ್ ಎಂ ಐ ಎಸ್‌) ಪೂರೈಕೆದಾರರನ್ನು ಪ್ರೋತ್ಸಾಹ ಯೋಜನೆಯಲ್ಲಿ ಸೇರಿಸುತ್ತೇವೆ, ಇದರಿಂದಾಗಿ ಅವರು ಇತರ ಆರೋಗ್ಯ ಸೌಲಭ್ಯಗಳನ್ನು ಮತ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಅನುಕೂಲವಾಗುವಂತೆ ನಿರ್ವಹಿಸುತ್ತಾರೆ. ಯುಪಿಐ, ಟಿಬಿ ಪ್ರಕರಣಗಳ ವರದಿ, ಜನನಿ ಸುರಕ್ಷಾ ಯೋಜನೆ ಮುಂತಾದ ಇತರ ನಾಗರಿಕ ಕೇಂದ್ರಿತ ಕಾರ್ಯಕ್ರಮಗಳ ತ್ವರಿತ ಅಳವಡಿಕೆಗೆ ಚಾಲನೆ ನೀಡುವಲ್ಲಿ ಪ್ರೋತ್ಸಾಹಕವು ವೇಗವರ್ಧಕ ಪಾತ್ರವನ್ನು ವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಎಬಿಡಿಎಂ ನ ಡಿಜಿಟಲ್ ಆರೋಗ್ಯ ಪ್ರೋತ್ಸಾಹ ಯೋಜನೆಯ ಪ್ರಮುಖ ಅಂಶಗಳು:

1. ಈ ಕೆಳಗಿನ ಸಂಸ್ಥೆಗಳಿಗೆ ಪ್ರೋತ್ಸಾಹಕಗಳನ್ನು ಒದಗಿಸಲಾಗುವುದು:

1.     10 ಅಥವಾ ಅದಕ್ಕೂ ಹೆಚ್ಚಿನ ಹಾಸಿಗೆಗಳನ್ನು ಹೊಂದಿರುವ ಆರೋಗ್ಯ ಸೌಲಭ್ಯಗಳು

2.     ಪ್ರಯೋಗಾಲಯ/ರೇಡಿಯಾಲಜಿ ರೋಗನಿರ್ಣಯ ಕೇಂದ್ರಗಳು

3.    ಡಿಜಿಟಲ್ ಪರಿಹಾರ ಕಂಪನಿಗಳು (ಎಬಿಡಿಎಂ ಸಕ್ರಿಯಗೊಳಿಸಿದ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ಸಂಸ್ಥೆಗಳು)

2. ಎ ಬಿ ಹೆಚ್‌ ಎ-ಸಂಯೋಜಿತ ವಹಿವಾಟುಗಳ ಸಂಖ್ಯೆಯ ಆಧಾರದ ಮೇಲೆ ಅಂದರೆ ಡಿಜಿಟಲ್ ಆರೋಗ್ಯ ದಾಖಲೆಗಳ ರಚನೆ ಮತ್ತು ಅವುಗಳನ್ನು ಎ ಬಿ ಹೆಚ್‌ ಎ ಗೆ ಲಿಂಕ್ ಮಾಡಲಾಗುವ ಆಧಾರದಲ್ಲಿ ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತದೆ. 
 

ಆರೋಗ್ಯ ಸೌಲಭ್ಯ

ಮೂಲಭೂತ ಮಟ್ಟದ ಮಾನದಂಡಗಳು   

ಪ್ರೋತ್ಸಾಹಕಗಳು 

ಆಸ್ಪತ್ರೆಗಳು

ತಿಂಗಳಿಗೆ ಪ್ರತಿ ಹಾಸಿಗೆಗೆ 50 ವಹಿವಾಟು

ಮೂಲ ಮಟ್ಟಕ್ಕಿಂತ ಅಧಿಕ ಹೆಚ್ಚುವರಿ ವಹಿವಾಟಿಗೆ 20 ರೂ.

ರೋಗನಿರ್ಣಯದ ಸೌಲಭ್ಯಗಳು / ಪ್ರಯೋಗಾಲಯಗಳು

ತಿಂಗಳಿಗೆ 500 ವಹಿವಾಟು

ಮೂಲ ಮಟ್ಟಕ್ಕಿಂತ ಹೆಚ್ಚಿನ ಹೆಚ್ಚುವರಿ ವಹಿವಾಟಿಗೆ 15 ರೂ.

3. ಡಿಜಿಟಲ್ ಪರಿಹಾರ ಕಂಪನಿಗಳಿಗೆ (ಡಿ ಎಸ್‌ ಸಿ) ತಮ್ಮ ಡಿಜಿಟಲ್ ಪರಿಹಾರಗಳನ್ನು ಬಳಸಿಕೊಂಡು ಅರ್ಹ ಆರೋಗ್ಯ ಸೌಲಭ್ಯಗಳಿಂದ ಪಡೆದ ಪ್ರೋತ್ಸಾಹದ ಮೊತ್ತದ ಶೇ.25 ರಷ್ಟು ಪ್ರೋತ್ಸಾಹಕವನ್ನು ನೀಡಲಾಗುತ್ತದೆ.

4. ನೇರ ಪ್ರೋತ್ಸಾಹಕಗಳಿಗೆ (ಕ್ಲಿನಿಕ್‌ಗಳು/ಸಣ್ಣ ಆಸ್ಪತ್ರೆಗಳು/ಹೆಲ್ತ್ ಲಾಕರ್‌ಗಳು/ಟೆಲಿಕನ್ಸಲ್ಟೇಶನ್ ಪ್ಲಾಟ್‌ಫಾರ್ಮ್‌ಗಳು ಇತ್ಯಾದಿ) ಅರ್ಹವಲ್ಲದ ಸೌಲಭ್ಯಗಳು ನಡೆಸುವ ಎ ಬಿ ಹೆಚ್‌ ಎ ಲಿಂಕ್ಡ್ ವಹಿವಾಟುಗಳಿಗಾಗಿ, ಡಿಜಿಟಲ್ ಪರಿಹಾರ ಕಂಪನಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ.
 

ಡಿಜಿಟಲ್ ಪರಿಹಾರ (ಹೆಚ್‌ ಎಂ ಐ ಎಸ್ ಮತ್ತು‌ ಎಲ್‌ ಎಂ ಐ ಎಸ್) ಕಂಪನಿಗಳಿಗೆ ವೆಚ್ಚ ಪ್ರೋತ್ಸಾಹ  

ಆಸ್ಪತ್ರೆಗಳು/ಲ್ಯಾಬ್‌ಗಳು ತಮ್ಮ ಸಾಫ್ಟ್‌ವೇರ್ ಅನ್ನು ಬಳಸುವ ಪ್ರತಿಯೊಂದು ವಹಿವಾಟಿಗೆ ಈ ನೀತಿಯ ಅಡಿಯಲ್ಲಿ ಪ್ರೋತ್ಸಾಹಕಗಳನ್ನು ಪಡೆಯುತ್ತವೆ.

ಅರ್ಹ ಆರೋಗ್ಯ ಸೌಲಭ್ಯಗಳು ಪಡೆದ ಪ್ರೋತ್ಸಾಹದ ಮೊತ್ತದ ಶೇ.25  

ಇತರ ವಹಿವಾಟುಗಳಿಗೆ (ಆರೋಗ್ಯ ಲಾಕರ್‌ಗಳು, ಟೆಲಿಕನ್ಸಲ್ಟೇಶನ್ ಪ್ಲಾಟ್‌ಫಾರ್ಮ್‌ಗಳು, ಸಣ್ಣ ಚಿಕಿತ್ಸಾಲಯಗಳು ಇತ್ಯಾದಿ ಸೇರಿದಂತೆ),

ವಹಿವಾಟುಗಳು ತಿಂಗಳಿಗೆ 200 ಕ್ಕಿಂತ ಹೆಚ್ಚು ಇದ್ದರೆ    ಪ್ರತಿ ವಹಿವಾಟಿಗೆ 5 ರೂ     

ಸಾರ್ವಜನಿಕ ವಲಯದ ಸೌಲಭ್ಯಗಳಿಗಾಗಿ, ರೋಗಿ ಕಲ್ಯಾಣ ಸಮಿತಿಯ ಅಡಿಯಲ್ಲಿರುವ ನಿಧಿಗಳಿಗೆ ಪ್ರೋತ್ಸಾಹಕಗಳನ್ನು ಸೇರಿಸಲಾಗುತ್ತದೆ. 1ನೇ ಜನವರಿ 2023 ರಿಂದ ಪ್ರಾರಂಭವಾಗುವ ಆರು ತಿಂಗಳ ಅವಧಿಗೆ ಈ ಪ್ರೋತ್ಸಾಹಕ ಯೋಜನೆಯ ಅಂದಾಜು ಆರಂಭಿಕ ಹಣಕಾಸಿನ ವೆಚ್ಚವು 50 ಕೋಟಿ ರೂ. ಆಗಿರುತ್ತದೆ.

ಇದಲ್ಲದೆ, ಯೋಜನೆಯ ಬಗ್ಗೆ ವಿವರಗಳನ್ನು ಒದಗಿಸಲು ಡಿಸೆಂಬರ್ 23, 2022 ರಿಂದ ಎನ್‌ ಹೆಚ್‌ ಎ ಯಿಂದ ಸಾರ್ವಜನಿಕ ವೆಬಿನಾರ್‌ಗಳನ್ನು ಆಯೋಜಿಸಲಾಗುತ್ತದೆ. ವೆಬಿನಾರ್‌ಗಳ ವೇಳಾಪಟ್ಟಿ ಮತ್ತು ಲಿಂಕ್ https://abdm.gov.in/dhis ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಡಿ ಹೆಚ್‌ ಐ ಎಸ್‌ನ ಪೂರ್ಣ ಪಠ್ಯವು ಇಲ್ಲಿ ಲಭ್ಯವಿದೆ: https://abdm.gov.in:8081/uploads/Digital_Health_Incentive_Scheme_550e710e09.pdf

*****



(Release ID: 1885708) Visitor Counter : 174