ಸಂಸ್ಕೃತಿ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಮಟ್ಟದ ವಂದೇ ಭಾರತಂ ನೃತ್ಯ ಉತ್ಸವ 2023 ಸ್ಪರ್ಧೆಯ ಅಂತಿಮ ಪ್ರದರ್ಶನಕ್ಕಾಗಿ 980 ನೃತ್ಯಗಾರರು ಆಯ್ಕೆಯಾಗಿದ್ದಾರೆ


ಅಂತಿಮ ಸ್ಪರ್ಧಿಗಳಿಂದ ಆಯ್ಕೆಯಾದ 500 ನೃತ್ಯಗಾರರು  2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ನಾರಿ ಶಕ್ತಿ' ವಿಷಯದ ಮೇಲೆ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಾರೆ.

Posted On: 20 DEC 2022 1:06PM by PIB Bengaluru

ಮುಖ್ಯಾಂಶಗಳು:

* ವಂದೇ ಭಾರತಂ ನೃತ್ಯ ಉತ್ಸವ 2023 ಇದರ ಅಂತಿಮ ಪ್ರದರ್ಶನವು 20ನೇ ಡಿಸೆಂಬರ್, 2022 ರ ಸಂಜೆ ವಿಶೇಷ ಕಾರ್ಯಕ್ರಮದೊಂದಿಗೆ ಜರುಗಲಿದೆ.  ಲೋಕಸಭಾಧ‍್ಯಕ್ಷರಾದ ಶ್ರೀ ಓಂ ಬಿರ್ಲಾ ಮತ್ತು ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯದ ರಾಜ್ಯಗಳ ಸಚಿವ ಶ್ರೀ ಜಿ.ಕೆ. ರೆಡ್ಡಿ ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

* 2023 ರ ಗಣರಾಜ್ಯೋತ್ಸವ ಆಚರಣೆ  ಅಂಗವಾಗಿ ಕೇಂದ್ರ ರಕ್ಷಣಾ ಸಚಿವಾಲಯದ ಪರವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆ ವಂದೇ ಭಾರತಂ ನೃತ್ಯ ಉತ್ಸವ 2023 ಒಂದು ಅನನ್ಯ ಕಾರ್ಯಕ್ರಮವಾಗಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯವು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಾದ ವಂದೇ ಭಾರತಂ ನೃತ್ಯ ಉತ್ಸವ 2023 ಪ್ರದರ್ಶನವನ್ನು ಆಯೋಜಿಸಿದೆ. ರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯ ಅಂತಿಮ ಪ್ರದರ್ಶನದಲ್ಲಿ ಭಾಗವಹಿಸಲು ಒಟ್ಟು 980 ನೃತ್ಯಗಾರರನ್ನು ಆಯ್ಕೆ ಮಾಡಲಾಗಿದೆ. ನವದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಜರುಗಿದ ಸ್ಪರ್ಧೆಯ ಮೊದಲ ದಿನದ ಪ್ರದರ್ಶನವು ಡಿಸೆಂಬರ್ 19, 2022ರಂದು ನಡೆಯಿತು ಮತ್ತು ಅಂತಿಮ ಸ್ಪರ್ಧೆಯನ್ನು ಡಿಸೆಂಬರ್ 20, 2022 ರಂದು ಆಯೋಜಿಸಲಾಗಿದೆ.

    

 

      

 ಸಂಗ್ರೇನ್ ಡ್ಯಾನ್ಸ್ ಅಕಾಡೆಮಿ, ಸಂಗ್ರೇನ್ ಅಂಬ್ರೆಲಾ ಡ್ಯಾನ್ಸ್ (ತ್ರಿಪುರ)

ಶ್ರದ್ಧಾ ಮತ್ತು ಅದಿತಿ, ಭಾರತನಾಟ್ಯಂ (ಕರ್ನಾಟಕ)

20ನೇ ಡಿಸೆಂಬರ್, 2022 ರ ಸಂಜೆ ವಿಶೇಷ ಕಾರ್ಯಕ್ರಮಗಳೊಂದಿಗೆ ಅಂತಿಮ ಕಲಾಪ್ರದರ್ಶನ ನಡೆಯಲಿದೆ. ಲೋಕಸಭಾಧ‍್ಯಕ್ಷರಾದ ಶ್ರೀ ಓಂ ಬಿರ್ಲಾ ;  ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವಲಯದ ರಾಜ್ಯಗಳ ಸಚಿವ ಶ್ರೀ ಜಿ.ಕೆ. ರೆಡ್ಡಿ; ಕೇಂದ್ರ ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್; ಕೇಂದ್ರ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಕೇಂದ್ರ ರಕ್ಷಣಾ ಖಾತೆ ರಾಜ್ಯ ಖಾತೆ ಸಚಿವ ಶ್ರೀ ಅಜಯ್ ಭಟ್  ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

   

 ಗೆಡಿ ಲೋಕ ನೃತ್ಯ (ಛತ್ತೀಸ್‌ಗಢ)

 ಮನೀಶಾ ನೃತ್ಯಾಲಯ, ಶಾಸ್ತ್ರೀಯ, (ಮಹಾರಾಷ್ಟ್ರ)

2023 ರ ಗಣರಾಜ್ಯೋತ್ಸವದ ಆಚರಣೆ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಕೇಂದ್ರ ರಕ್ಷಣಾ ಸಚಿವಾಲಯವು ಜಂಟಿಯಾಗಿ ಆಯೋಜಿಸುತ್ತಿರುವ ನೃತ್ಯ ಸ್ಪರ್ಧೆ ಕಾರ್ಯಕ್ರಮವಾಗಿದೆ. ಇದು ರಾಜ್ಯ-ಕೇಂದ್ರಾಡಳಿತ ಮಟ್ಟ, ವಲಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ರೂಪದಲ್ಲಿ 3 ಹಂತಗಳಲ್ಲಿ ನಡೆದಿರುತ್ತದೆ.     

    

ಸ್ವಾತಿ ಅಗರ್ವಾಲ್ ಮತ್ತು ಗುಂಪು, ಶಾಸ್ತ್ರೀಯ, (ರಾಜಸ್ಥಾನ)

 ಅಚ್ ಡ್ಯಾನ್ಸ್ ಗ್ರೂಪ್, ಜುಮುರ್, (ಒಡಿಶಾ)

ಜಾನಪದ/ಬುಡಕಟ್ಟು, ಶಾಸ್ತ್ರೀಯ ಮತ್ತು ಸಮಕಾಲೀನ/ಸಮ್ಮಿಳನದ ಪ್ರಕಾರಗಳಲ್ಲಿ 17-30 ವರ್ಷ ವಯಸ್ಸಿನ ಕಲಾವಿದರಿಂದ ಕಳೆದ ಅಕ್ಟೋಬರ್ 15 ರಿಂದ ನವೆಂಬರ್ 10, 2022 ವರೆಗೆ ಅರ್ಜಿಗಳನ್ನು ಆಹ್ವಾನಿಸಲಾಯಿತು. ಆನಂತರ ನವೆಂಬರ್ 17 ರಿಂದ ಡಿಸೆಂಬರ್ 10 ರವರೆಗೆ 2022 ಕೇಂದ್ರ ಸಂಸ್ಕೃತಿ ಸಚಿವಾಲಯದ ಏಳು ವಲಯಗಳ ಸಾಂಸ್ಕೃತಿಕ ಕೇಂದ್ರಗಳಲ್ಲಿ ರಾಜ್ಯ-ಕೇಂದ್ರಾಡಳಿತ ಮಟ್ಟದ ಮತ್ತು ವಲಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗಿದೆ.

ಅಂತಿಮ ಸ್ಪರ್ಧೆಯಲ್ಲಿ ಆಯ್ಕೆಯಾದ 500 ನೃತ್ಯಗಾರರು 2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ನಾರಿ ಶಕ್ತಿ' ವಿಷಯದ ಮೇಲೆ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಿದ್ದಾರೆ. ಈ ಉದ್ದೇಶಕ್ಕಾಗಿ ಹೆಸರಾಂತ ನೃತ್ಯ ಸಂಯೋಜಕರು, ಸಂಯೋಜಕರು, ಬರಹಗಾರರು ಮತ್ತು ಸೃಜನಶೀಲ ವಿನ್ಯಾಸಕರರು ಸೇರಿರುವ ವಿಶೇಷ ಸೃಜನಶೀಲ ತಂಡವು ಸಾಂಸ್ಕೃತಿಕ ಪ್ರದರ್ಶನದ ಪರಿಕಲ್ಪನೆ ಮಾಡುತ್ತಿದೆ.

*****


(Release ID: 1885146) Visitor Counter : 179