ವಾರ್ತಾ ಮತ್ತು ಪ್ರಸಾರ ಸಚಿವಾಲಯ

2014 ರಿಂದ ಈಶಾನ್ಯ ಭಾರತದಲ್ಲಿ ಶಾಂತಿಯ ಯುಗ, ನಾಗರಿಕ ಸಾವುಗಳಲ್ಲಿ 80% ಕುಸಿತ, ಸುಮಾರು 6000 ಉಗ್ರಗಾಮಿಗಳು ಶರಣಾಗಿದ್ದಾರೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


​​​​​​​ಹಲವು ಪ್ರದೇಶಗಳಿಂದ  ಎ.ಎಫ್.ಎಸ್.ಪಿ. ಕಾಯಿದೆ ಹಿಂದೆ ಸರಿಯಿತು, ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್
ಸಂಕಷ್ಟದಲ್ಲಿರುವ ಭಾರತೀಯರ ಜೀವನ ಸಂರಕ್ಷಣೆ ಸರ್ಕಾರದ ಪರಮೋಚ್ಛ ಕಾಳಜಿಯಾಗಿದೆ, ವಂದೇ ಭಾರತ್ ಮೂಲಕ 1.83 ಕೋಟಿ ನಾಗರಿಕರನ್ನು ರಕ್ಷಿಸಲಾಗಿದೆ

"ಭಾರತವು ಭಯೋತ್ಪಾದನೆಯ ವಿರುದ್ಧ ಜಗತ್ತನ್ನು ಒಟ್ಟುಗೂಡಿಸುತ್ತದೆ, ಆದರೆ ನೆರೆಯ ದೇಶವು ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ"

Posted On: 19 DEC 2022 1:17PM by PIB Bengaluru

“‘ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ’ ಎಂಬ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ” ಎಂದು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಇಂದು ಹೇಳಿದ್ದಾರೆ. ಭಯೋತ್ಪಾದನೆಯನ್ನು ಎದುರಿಸಲು ಭಾರತ ಸರ್ಕಾರದ ವಿವಿಧ ಪ್ರಯತ್ನಗಳ ಕುರಿತು ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ನೀಡಿದ ವಿವರವಾದ ಹೇಳಿಕೆಯಲ್ಲಿ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, “ಕೇಂದ್ರ ಸರ್ಕಾರವು ಯು.ಎ.ಪಿ.ಎ.ಯನ್ನು ಬಲಪಡಿಸುವ ಮೂಲಕ, ಕಾನೂನು ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದೆ, ಅದೇ ಸಮಯದಲ್ಲಿ ನಿಯಮಾವಳಿಯ ಜಾರಿ ಮಟ್ಟದಲ್ಲಿಯೂ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ತಿದ್ದುಪಡಿ) ಕಾಯ್ದೆಯನ್ನು ಪರಿಚಯಿಸುವ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗೆ ನಿಜವಾದ ಫೆಡರಲ್ ರಚನೆಯನ್ನು ನೀಡುವ ಮೂಲಕ ಮತ್ತು ಈ ಕ್ರಮಗಳ ಸಾಮೂಹಿಕ ಪರಿಣಾಮವು ಭಯೋತ್ಪಾದನೆಯ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸುವಲ್ಲಿ ಯಶಸ್ಸು ಕಂಡಿದೆ” ಎಂದು ಕೇಂದ್ರ ಸಚಿವರು ಹೇಳಿದರು.

“ಜಾಗತಿಕ ಅತ್ಯುನ್ನತ ಮಟ್ಟದಲ್ಲಿ ಭಾರತವು ತನ್ನ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮತ್ತು ಸಭೆಗಳಲ್ಲಿ ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಒಂದಾಗುವಂತೆ ಜಗತ್ತನ್ನು ಒತ್ತಾಯಿಸಿದ್ದಾರೆ.  2000 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳ ಭಾಗವಹಿಸಿದ್ದ 90 ನೇ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ಸಮಾರೋಪ ಕಾರ್ಯಕ್ರಮವು 'ಭಯೋತ್ಪಾದನಾ ಕಾಯ್ದೆ ವಿರುದ್ಧ ಜಾಗತಿಕ ಕ್ರಮ' ಘೋಷಣೆಯೊಂದಿಗೆ ಕೊನೆಗೊಂಡಿತು” ಎಂದು ಸಚಿವರು ಹೇಳಿದರು.  

“ಸರ್ಜಿಕಲ್ ಸ್ಟ್ರೈಕ್‌ ನಿಂದ ಬಾಲಕೋಟ್ ಸ್ಟ್ರೈಕ್‌ ವರೆಗೆ ಭಯೋತ್ಪಾದನೆಯ ವಿರುದ್ಧ ಸರ್ಕಾರಗಳ ಸಂಕಲ್ಪವನ್ನು ಮತ್ತೆ ಮತ್ತೆ ಸ್ಪಷ್ಟವಾಗಿ ಹಾಗೂ ದಿಟ್ಟವಾಗಿ ಪ್ರದರ್ಶಿಸಲಾಗಿದೆ. ನಮ್ಮ ಸಶಸ್ತ್ರ ಪಡೆಗಳ ದಿಟ್ಟ ಕ್ರಮವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ 168% ರಷ್ಟು ಗಣನೀಯ ಇಳಿಕೆಗೆ ಕಾರಣವಾಗಿದೆ. ಅದೇ ರೀತಿ, ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣಗಳಲ್ಲಿ ನಾವು 94% ರಷ್ಟು ಶಿಕ್ಷೆಯ ಪ್ರಮಾಣವನ್ನು ಸಾಧಿಸಿದ್ದೇವೆ” ಎಂದು ಕೇಂದ್ರ ಸಚಿವ ಶ್ರೀ ಠಾಕೂರ್ ಹೇಳಿದರು.

ಈಶಾನ್ಯ ಭಾರತದಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ತೆಗೆದುಕೊಂಡ ಪ್ರಯತ್ನಗಳ ಕುರಿತು ಸಚಿವರು ಸುದೀರ್ಘವಾಗಿ ಮಾತನಾಡಿದರು ಮತ್ತು “2014 ರಿಂದ ಭಾರತದ ಈಶಾನ್ಯ ಪ್ರದೇಶದಲ್ಲಿ ಶಾಂತಿಯ ಯುಗವು ಉದಯಿಸಿದೆ. ಬಂಡಾಯ/ ಉಗ್ರ ಹಿಂಸಾಚಾರವು 80 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಮತ್ತು ನಾಗರಿಕರ ತೀವ್ರ ಸಾವು-ನೋವುಗಳಲ್ಲಿ 89 ಪ್ರತಿಶತದಷ್ಟು ಕುಸಿತವನ್ನು ಕಂಡಿವೆ. 2014 ರಿಂದ ಸುಮಾರು ಆರು ಸಾವಿರ ಉಗ್ರಗಾಮಿಗಳ ಶರಣಾಗತಿಯ ಸಾಧನೆ ಇದಕ್ಕೆ ಪೂರಕವಾಗಿದೆ.

“ಭಯೋತ್ಪಾದನೆಯನ್ನು ಎದುರಿಸಲು ಸಶಸ್ತ್ರ ಕ್ರಮವನ್ನು ಮೀರಿ ಹೋಗಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಪ್ರದೇಶದಾದ್ಯಂತ ಶಾಶ್ವತ ಶಾಂತಿಯ ವಾತಾವರಣವನ್ನು ಸೃಷ್ಟಿಸಲು ಪೂರಕ ಕೆಲಸ ಮಾಡಿದೆ. ಈ ಶಾಂತಿ ಉಪಕ್ರಮಗಳು ಕೇಂದ್ರ ಸರ್ಕಾರದ ಸಾಧನೆಗಳ ಪರಂಪರೆಯಾಗಿದೆ” ಎಂದು ಈ ಕುರಿತು ವಿವರಿಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಕೇಂದ್ರ ಸರ್ಕಾರವು ಸಹಿ ಮಾಡಿದ ಶಾಂತಿ ಒಪ್ಪಂದಗಳನ್ನು ಪಟ್ಟಿ ಮಾಡಿದರು.

ಜನವರಿ 2020 ರಲ್ಲಿ ಬೋಡೋ ಒಪ್ಪಂದ,

2 ಜನವರಿ 2020 ರಲ್ಲಿ ಬ್ರೂ-ರಿಯಾಂಗ್ ಒಪ್ಪಂದ,

3 ಆಗಸ್ಟ್ 2019 ರಲ್ಲಿ ಎನ್.ಎಲ್.ಎಫ್.ಟಿ.-ತ್ರಿಪುರಾ ಒಪ್ಪಂದ,

4 ಸೆಪ್ಟೆಂಬರ್ 2021 ರಲ್ಲಿ ಕರ್ಬಿ ಆಂಗ್ಲಾಂಗ್ ಒಪ್ಪಂದ,

5 ಮಾರ್ಚ್ 2022 ರಲ್ಲಿ ಅಸ್ಸಾಂ-ಮೇಘಾಲಯ ಅಂತರ ರಾಜ್ಯ ಗಡಿ ಒಪ್ಪಂದ.

“ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಹಿಂಪಡೆಯುವ ಸಮಯದಲ್ಲಿ ಇದೊಂದು ಕೇವಲ ಚರ್ಚೆಯ ವಿಷಯವಾಗುವ ಬದಲು, ಕೇಂದ್ರ ಸರ್ಕಾರವು ಇಡೀ ತ್ರಿಪುರ ಮತ್ತು ಮೇಘಾಲಯ ಸೇರಿದಂತೆ ಈಶಾನ್ಯದ ಹೆಚ್ಚಿನ ಭಾಗದಿಂದ ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಕಾನೂನನ್ನು ಸಕಾಲಿಕವಾಗಿ ಹಿಂದಕ್ಕೆ ತೆಗೆದುಕೊಂಡಿದೆ. ಇದು ಅರುಣಾಚಲ ಪ್ರದೇಶದ 3 ಜಿಲ್ಲೆಗಳಲ್ಲಿ ಮಾತ್ರ ಇಂದು ಜಾರಿಯಲ್ಲಿದೆ, ಅಸ್ಸಾಂನ ಶೇಕಡಾ 60 ರಷ್ಟು ಅಸ್ಫಾ (ಎ.ಎಫ್‌.ಎಸ್‌.ಪಿ.ಎ.) ಕಾಯಿದೆಯಿಂದ ಮುಕ್ತವಾಗಿದೆ, 6 ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆಗಳನ್ನು ಸಮಸ್ಯೆ ಪ್ರದೇಶದ ವರ್ಗದಿಂದ ತೆಗೆದುಹಾಕಲಾಗಿದೆ, 7 ಜಿಲ್ಲೆಗಳಲ್ಲಿ 15 ಪೊಲೀಸ್ ಠಾಣೆಗಳನ್ನು ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯ ವ್ಯಾಪ್ತಿಯಿಂದ ತೆಗೆದುಹಾಕಲಾಗಿದೆ.” ಎಂದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಕುರಿತು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಪರಾಮರ್ಶನ ನಡೆಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, “ಸಂಕಷ್ಟದಲ್ಲಿರುವ ಭಾರತೀಯರ ಜೀವ ರಕ್ಷಿಸುವುದು ಕೇಂದ್ರ ಸರ್ಕಾರಕ್ಕೆ ಅತ್ಯುನ್ನತ ಕಾಳಜಿಯಾಗಿದೆ ಮತ್ತು ವಿಶ್ವದಾದ್ಯಂತ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ನಮ್ಮ ದೇಶವು ಮುಂಚೂಣಿಯಲ್ಲಿದೆ” ಎಂದು ಸಚಿವ ಶ್ರೀ ಠಾಕೂರ್ ಅವರು ಕೆಲವೊಂದು ಸಾಧನೆಗಳನ್ನು ಪಟ್ಟಿ ಮಾಡಿ ಮಾಧ್ಯಮಗಳಿಗೆ ವಿವರಿಸಿದರು.

1 ಫೆಬ್ರವರಿ-ಮಾರ್ಚ್ 2022 ರಲ್ಲಿ ಆಪರೇಷನ್ ಗಂಗಾ ಅಡಿಯಲ್ಲಿ 22,500 ನಾಗರಿಕರನ್ನು ರಕ್ಷಿಸಲಾಗಿದೆ.

2 ದೇವಿ ಶಕ್ತಿ ಕಾರ್ಯಾಚರಣೆಯಲ್ಲಿ 670 ಭಾರತೀಯ ನಾಗರಿಕರನ್ನು ಅಫ್ಘಾನಿಸ್ತಾನದಿಂದ ರಕ್ಷಿಸಲಾಗಿದೆ.

3 2021-22ರಲ್ಲಿ ನಡೆದ ವಂದೇ ಭಾರತ್ ಮಿಷನ್ ಅಡಿಯಲ್ಲಿ, ಕೋವಿಡ್-19ರ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಮಾರು 1.83 ಕೋಟಿ ನಾಗರಿಕರನ್ನು ಅವರ ಸ್ವಂತ ಮನೆಗೆ ಮರಳಿ ಕರೆತರಲಾಯಿತು, ಮತ್ತು ಇದು ರಕ್ಷಣಾ ಕಾರ್ಯಾಚರಣೆಗಳಲ್ಲೇ ಅತಿದೊಡ್ಡ ಯಶಸ್ಸಿನಲ್ಲಿ ಒಂದಾಗಿದೆ.  

4 ಚೀನಾದ ವುಹಾನ್‌ ನಿಂದ 654 ನಾಗರಿಕರನ್ನು ಭಾರತ ರಕ್ಷಿಸಿದೆ.

ಕೇವಲ ಭಾರತೀಯರಷ್ಟೇ ಅಲ್ಲ, ಸಂಕಷ್ಟದಲ್ಲಿರುವ ವಿದೇಶಿ ಪ್ರಜೆಗಳಿಗೂ ಭಾರತ ಸಹಾಯ ಹಸ್ತ ನೀಡಿದೆ.

2016 ರಲ್ಲಿ, ಆಪರೇಷನ್ ಸಂಕಟ್ ಮೋಚನ್ ಅಡಿಯಲ್ಲಿ, 2 ನೇಪಾಳದ ನಾಗರಿಕರು ಸೇರಿದಂತೆ 155 ಜನರನ್ನು ದಕ್ಷಿಣ ಸುಡಾನ್‌ ನಿಂದ ಕರೆತರಲಾಯಿತು.

ಆಪರೇಷನ್ ಮೈತ್ರೀ ಸಮಯದಲ್ಲಿ ನೇಪಾಳದಿಂದ 5000 ಭಾರತೀಯರನ್ನು ರಕ್ಷಿಸಲಾಗಿದೆ ಮತ್ತು 170 ವಿದೇಶಿ ಪ್ರಜೆಗಳನ್ನು ನೇಪಾಳದಿಂದ ರಕ್ಷಿಸಲಾಗಿದೆ.

ಆಪರೇಷನ್ ರಾಹತ್ 1,962 ವಿದೇಶಿಯರು ಸೇರಿದಂತೆ 6,710 ಜನರನ್ನು ಯೆಮನ್‌ ನಿಂದ ರಕ್ಷಿಸಲಾಗಿದೆ.

ಈ ಎಲ್ಲಾ ಪ್ರಯತ್ನಗಳು ವಿಶ್ವದಲ್ಲಿ ಭಾರತಕ್ಕೆ ಸೃಷ್ಟಿಸಿದ ಸ್ಥಾನಮಾನದ ಕುರಿತು ಮಾತನಾಡಿದ ಕೇಂದ್ರ ಸಚಿವರು, “ಭಾರತವು ಇತರ ದೇಶಗಳಿಗೆ ಅವರ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲಾ ಸಹಾಯವನ್ನು ಸುಲಭವಾಗಿ ನೀಡುವ ಮತ್ತು ಭಯೋತ್ಪಾದನೆಯ ವಿರುದ್ಧ ಬಲವಾಗಿ ಕಾರ್ಯನಿರ್ವಹಿಸುವ ವಿಶ್ವಾಸಾರ್ಹ ದೇಶವಾಗಿ ಕಾಣುತ್ತಿದೆ. ಮತ್ತು ನಮ್ಮ ನೆರೆಯ ದೇಶವು ಭಯೋತ್ಪಾದನೆಗೆ ಆಶ್ರಯ ನೀಡುವ ಹಾಗೂ ಹಿಂಸಾಚಾರದ ಮೌಲ್ಯಗಳನ್ನು ಪ್ರತಿಪಾದಿಸುವ ಒಂದು ದೇಶವಾಗಿ ಮಾತ್ರ ಕಂಡುಬರುತ್ತದೆ” ಎಂದು ಹೇಳಿದರು.

*****



(Release ID: 1884825) Visitor Counter : 150