ಪ್ರಧಾನ ಮಂತ್ರಿಯವರ ಕಛೇರಿ
ಮೇಘಾಲಯದ ಶಿಲ್ಲಾಂಗ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ....
Posted On:
18 DEC 2022 3:19PM by PIB Bengaluru
ಮೇಘಾಲಯ ಗವರ್ನರ್ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ, ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ, ನನ್ನ ಕೇಂದ್ರ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಅಮಿತ್ ಭಾಯ್ ಶಾ, ಸರ್ಬಾನಂದ ಸೋನೋವಾಲ್, ಕಿರಣ್ ರಿಜಿಜು, ಜಿ ಕಿಶನ್ ರೆಡ್ಡಿ, ಬಿಎಲ್ ವರ್ಮಾ, ಮಣಿಪುರ, ಮಿಜೋರಾಂ, ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಸಿಕ್ಕಿಂನ ಎಲ್ಲಾ ಮುಖ್ಯಮಂತ್ರಿಗಳೇ ಮತ್ತು ಮೇಘಾಲಯದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!...
ಖುಬ್ಲೇಇ ಶಿಬೋನ್! (ಖಾಸಿ ಔರ್ ಜಯಂತಿಯಾ ಮೇ ನಮಸ್ತೆ) ನಾಮೆಂಗ್ ಅಮಾ! (ಗಾರೋ ಮೇ ನಮಸ್ತೆ)
ಮೇಘಾಲಯವು ಪ್ರಕೃತಿ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದೆ. ಈ ಸಮೃದ್ಧಿಯು ನಿಮ್ಮ ಆತಿಥ್ಯದಲ್ಲಿಯೂ ಪ್ರತಿಫಲಿಸುತ್ತದೆ. ಇಂದು ಮತ್ತೊಮ್ಮೆ ಮೇಘಾಲಯದ ಅಭಿವೃದ್ಧಿ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಸಂಪರ್ಕ, ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗಕ್ಕಾಗಿ ಹತ್ತಾರು ಯೋಜನೆಗಳಿಗಾಗಿ ಮೇಘಾಲಯದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು.
ಸಹೋದರರೇ ಮತ್ತು ಸಹೋದರಿಯರೇ...
ಇಂದು ಫುಟ್ಬಾಲ್ ವಿಶ್ವಕಪ್ ಅಂತಿಮ ಪಂದ್ಯಾವಳಿ (ಫೈನಲ್) ನಡೆಯುತ್ತಿರುವಂತಹ ಈ ಸಂದರ್ಭದಲ್ಲಿ ಫುಟ್ಬಾಲ್ ಪ್ರೇಮಿಗಳ ನಡುವೆ ನಾನಿಲ್ಲಿ ಫುಟ್ಬಾಲ್ ಮೈದಾನದಲ್ಲಿರುವುದು ಕಾಕತಾಳೀಯ. ಆ ಕಡೆ ಫುಟ್ಬಾಲ್ ಸ್ಪರ್ಧೆ ನಡೆಯುತ್ತಿದ್ದು, ಫುಟ್ಬಾಲ್ ಕ್ಷೇತ್ರದಲ್ಲಿ ಅಭಿವೃದ್ಧಿಗಾಗಿ ಪೈಪೋಟಿ ನಡೆಸುತ್ತಿದ್ದೇವೆ. ಕತಾರ್‌ನಲ್ಲಿ ಪಂದ್ಯ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ. ನಮ್ಮಗಳ ಉತ್ಸಾಹವೇನೂ ಕಡಿಮೆಯಿಲ್ಲ. ಸ್ನೇಹಿತರೇ.... ಫುಟ್ಬಾಲ್ ಮೈದಾನದಲ್ಲಿರುವಾಗ ಮತ್ತು ಫುಟ್ಬಾಲ್ ಜ್ವರ ಎಲ್ಲೆಡೆ ಇರುವಾಗ, ನಾವು ಫುಟ್ಬಾಲ್ ನ ವ್ಯಾಖ್ಯಾನದ ಬಗ್ಗೆ ಏಕೆ ಮಾತನಾಡಬಾರದು,ಅಲ್ಲವೇ? ಹೀಗಾಗಿ ಫುಟ್ಬಾಲ್‌ನ ಉದಾಹರಣೆ ನೀಡಿದ್ದೇನೆ. ಫುಟ್‌ಬಾಲ್‌ನಲ್ಲಿ ಯಾರಾದರೂ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸಿದರೆ ಅವರನ್ನು "ರೆಡ್ ಕಾರ್ಡ್ " ತೋರಿಸಿ ಹೊರಹಾಕುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದೇ ರೀತಿ, ಕಳೆದ 8 ವರ್ಷಗಳಲ್ಲಿ, ನಾವು ಈಶಾನ್ಯ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಅಡೆತಡೆಗಳಿಗೆ ರೆಡ್ ಕಾರ್ಡ್ ತೋರಿಸಿದ್ದೇವೆ. ಭ್ರಷ್ಟಾಚಾರ, ತಾರತಮ್ಯ, ಸ್ವಜನಪಕ್ಷಪಾತ, ಹಿಂಸಾಚಾರ, ಯೋಜನೆಗಳನ್ನು ಸ್ಥಗಿತಗೊಳಿಸುವುದು, ವೋಟ್ (ಮತ) ಬ್ಯಾಂಕ್ ರಾಜಕಾರಣವನ್ನು ತೊಡೆದುಹಾಕಲು ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆಯಾದರೂ ಈ ಕೆಡುಕುಗಳು ಮತ್ತು ರೋಗಗಳ ಬೇರುಗಳು ತುಂಬಾ ಆಳವಾಗಿವೆ ಎಂಬುದು ನಿಮಗೂ ಗೊತ್ತು, ದೇಶಕ್ಕೂ ಗೊತ್ತು.
ಆದ್ದರಿಂದ ಅವುಗಳನ್ನು ತೊಡೆದುಹಾಕಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ನಮ್ಮ ಪ್ರಯತ್ನದ ಉತ್ತಮ ಫಲಿತಾಂಶಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಇಷ್ಟೇ ಅಲ್ಲ, ಇಂದು ಕೇಂದ್ರ ಸರ್ಕಾರ ಕ್ರೀಡೆಗೆ ಸಂಬಂಧಿಸಿದಂತೆ ಹೊಸ ವಿಧಾನಕ್ಕೂ ಮುಂದಾಗಿದೆ. ಇದು ಈಶಾನ್ಯಕ್ಕೆ, ಈಶಾನ್ಯದ ನನ್ನ ಸೈನಿಕರಿಗೆ, ಇಲ್ಲಿನ ಯುವಜನತೆಗೆ ನಮ್ಮ ಗಂಡುಮಕ್ಕಳು ಹಾಗೂ ಹೆಣ್ಣುಮಕ್ಕಳಿಗೆ ಪ್ರಯೋಜನವನ್ನೂ ನೀಡಿದೆ. ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಈಶಾನ್ಯದಲ್ಲಿದೆ. ಇಂದು, ಈಶಾನ್ಯದಲ್ಲಿ ವಿವಿಧೋದ್ದೇಶ ಸಭಾಂಗಣ, ಫುಟ್ಬಾಲ್ ಮೈದಾನ, ಅಥ್ಲೆಟಿಕ್ಸ್ ಟ್ರ್ಯಾಕ್ ಮುಂತಾದ 90 ಯೋಜನೆಗಳ ಕೆಲಸ ನಡೆಯುತ್ತಿದೆ. ಇಂದು ಶಿಲ್ಲಾಂಗ್‌ನಿಂದಲೇ ನಾನು ಹೇಳಬಲ್ಲೆ, ಕತಾರ್‌ನಲ್ಲಿ ನಡೆಯುತ್ತಿರುವ ಆಟದ ಮೇಲೆ ನಮ್ಮೆಲ್ಲರ ಕಣ್ಣುಗಳು ಇವೆ. ಮೈದಾನದಲ್ಲಿ ವಿದೇಶಿ ತಂಡಗಳಿವೆ ಎಂಬುದೂ ನಮಗೆ ಗೊತ್ತು.ಆದರೆ ನನ್ನ ದೇಶದ ಯುವ ಶಕ್ತಿಯ ಮೇಲೆ ನನಗೆ ನಂಬಿಕೆ ಇದೆ. ಆದ್ದರಿಂದಲೇ ಭಾರತದಲ್ಲಿ ನಾವು ಹೀಗೆ ಸಂಭ್ರಮಿಸುವ ಮತ್ತು ತ್ರಿವರ್ಣ ಧ್ವಜಕ್ಕೆ ಮೆರಗು ನೀಡುವ ದಿನ ದೂರವಿಲ್ಲ ಎಂಬುದನ್ನೂ ನಾನು ಅತಿ ಆತ್ಮವಿಶ್ವಾಸದಿಂದ ಹೇಳಬಲ್ಲೆ..
ಸಹೋದರ ಮತ್ತು ಸಹೋದರಿಯರೇ...
ಬಜೆಟ್, ಟೆಂಡರ್, ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಆಚರಣೆಗಳಿಗೆ ಮಾತ್ರ ಅಭಿವೃದ್ಧಿ ಸೀಮಿತವಾಗಿಲ್ಲ. ಇಂತಹವು 2014 ರ ಮೊದಲು ಸೀಮಿತವಾಗಿದ್ದವು. ರಿಬ್ಬನ್ ಕಟ್ಟರ್‌ಗಳು ಕೈಗೆ ಬಂದಿದ್ದವು, ಮುಖಂಡರು ಹಾರ ಹಾಕುತ್ತಿದ್ದರು, ಜಿಂದಾಬಾದ್ ಎಂಬ ಘೋಷಣೆಗಳೂ ಮೊಳಗಿದವು. ಹೀಗೆ ಮಾಡಿದ್ದರಿಂದಾದ ಬದಲಾವಣೆಯಾದರೂ ಏನು? ಅಭಿವೃದ್ಧಿಯಾದರೂ ಏನು? ಏನೂ ಇಲ್ಲ.ಆದರೆ ಇಂದು ನಮ್ಮ ಸರ್ಕಾರದಿಂದಾಗಿ ದೇಶ ಬದಲಾಗಿದೆ. ಇಂದು ಆಗಿರುವ ಬದಲಾವಣೆ ನಮ್ಮ ಉದ್ದೇಶದಲ್ಲಿ ಬಂದಿದೆ. ಇದು ನಮ್ಮ ನಿರ್ಣಯಗಳಲ್ಲಿ ಬಂದಿದೆ. ಬದಲಾವಣೆ ಅಭಿವೃದ್ಧಿ ನಮ್ಮ ಆದ್ಯತೆಗಳಲ್ಲಿ ಬಂದಿದೆ, ಇದು ನಮ್ಮ ಕೆಲಸದ ಸಂಸ್ಕೃತಿಯಲ್ಲಿ ಬಂದಿದೆ, ಬದಲಾವಣೆ ಪ್ರಕ್ರಿಯೆ ಮತ್ತು ಫಲಿತಾಂಶಗಳಲ್ಲಿಯೂ ಬಂದಿದೆ. ಆಧುನಿಕ ಮೂಲಸೌಕರ್ಯ, ಆಧುನಿಕ ಸಂಪರ್ಕದೊಂದಿಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ನಮ್ಮ ನಿರ್ಣಯವಾಗಿದೆ. ಭಾರತದ ಅಭಿವೃದ್ಧಿಗಾಗಿ ಪ್ರತಿಯೊಬ್ಬರ ಪ್ರಯತ್ನಗಳೊಂದಿಗೆ ಕ್ಷಿಪ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ಭಾರತದ ಪ್ರತಿಯೊಂದು ಪ್ರದೇಶವನ್ನು, ಪ್ರತಿಯೊಂದು ವಿಭಾಗವನ್ನು ಸಂಪರ್ಕಿಸುವುದು ಇದರ ಉದ್ದೇಶವಾಗಿದೆ. ಕೊರತೆ ಅಭಾವವನ್ನು ಹೋಗಲಾಡಿಸುವುದು, ಅಂತರವನ್ನು ಕಡಿಮೆ ಮಾಡುವುದು, ಸಾಮರ್ಥ್ಯ ವರ್ಧನೆ, ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದು ನಮ್ಮ ಆದ್ಯತೆಯಾಗಿದೆ. ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯ ಅರ್ಥ ಪ್ರತಿ ಯೋಜನೆ, ಪ್ರತಿ ಕಾರ್ಯಕ್ರಮವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂಬುದಾಗಿದೆ.
ಸ್ನೇಹಿತರೇ...
ನಾವು ಕೇಂದ್ರ ಸರ್ಕಾರದ ಆದ್ಯತೆಗಳನ್ನು ಬದಲಾಯಿಸಿದಾಗ, ಅದರ ಸಕಾರಾತ್ಮಕ ಪರಿಣಾಮವು ಇಡೀ ದೇಶದಲ್ಲಿ ಗೋಚರಿಸುತ್ತದೆ. ಈ ವರ್ಷ ದೇಶದಲ್ಲಿ 7 ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿಯನ್ನು ಮೇಘಾಲಯದ ಸಹೋದರ ಸಹೋದರಿಯರು ಈ ಅಂಕಿಅಂಶವನ್ನು ನೆನಪಿಸಿಕೊಳ್ಳುತ್ತಾರೆ, ಈಶಾನ್ಯದ ನನ್ನ ಸಹೋದರ ಸಹೋದರಿಯರು ಇದನ್ನು ನೆನಪಿಸಿಕೊಳ್ಳುತ್ತಾರೆ. ಕೇಂದ್ರ ಸರಕಾರ ಕೇವಲ ಮೂಲಸೌಕರ್ಯಕ್ಕಾಗಿ 7 ಸಾವಿರ ಕೋಟಿ ರೂ. ಖರ್ಚು ಮಾಡಿದೆ.ಆದರೆ ಇದು 8 ವರ್ಷಗಳ ಹಿಂದೆ ಈ ವೆಚ್ಚ 2 ಲಕ್ಷ ಕೋಟಿ ರೂ.ಗಿಂತ ಕಡಿಮೆ ಇತ್ತು. ಅದೇನೆಂದರೆ, ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಕೇವಲ 2 ಲಕ್ಷ ಕೋಟಿ ರೂಪಾಯಿಗೆ ಮೂಲಸೌಕರ್ಯ ಅಭಿವೃದ್ಧಿ ತಲುಪಿತ್ತು.ಈ 8 ವರ್ಷಗಳಲ್ಲಿ ನಾವು ಸುಮಾರು 4 ಪಟ್ಟು ಇದರ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಇಂದು, ಅನೇಕ ರಾಜ್ಯಗಳು ಪರಸ್ಪರ ಮೂಲಸೌಕರ್ಯಕ್ಕಾಗಿ ಪೈಪೋಟಿ ನಡೆಸುತ್ತಿವೆ, ಮತ್ತು ರಾಜ್ಯರಾಜ್ಯಗಳ ನಡುವೆ ಪೈಪೋಟಿಯೂ ಇದೆ. ರಾಜ್ಯಗಳ ನಡುವೆ ಅಭಿವೃದ್ಧಿಗಾಗಿ ಪೈಪೋಟಿ ಇದೆ. ಇಂದು ದೇಶದಲ್ಲಿ ಆಗಿರುವ ಈ ಬದಲಾವಣೆಯ ದೊಡ್ಡ ಫಲಾನುಭವಿಯೆಂದರೆ, ಈ ನನ್ನ ಈಶಾನ್ಯ ಭಾಗ. ಶಿಲ್ಲಾಂಗ್ ಸೇರಿದಂತೆ ಈಶಾನ್ಯದ ಎಲ್ಲಾ ರಾಜಧಾನಿಗಳನ್ನು ರೈಲು ಸೇವೆಯೊಂದಿಗೆ ಸಂಪರ್ಕಿಸುವ ಕೆಲಸ ವೇಗವಾಗಿ ನಡೆಯುತ್ತಿದೆ. 2014 ರ ಮೊದಲು, ಪ್ರತಿ ವಾರ ಕೇವಲ 900 ವಿಮಾನಗಳು ಮಾತ್ರ ಸಾಧ್ಯವಾಗಿತ್ತು.ಆದರೆ ಇಂದು ನಮ್ಮ ಸರ್ಕಾರದಿಂದಾಗಿ ಅವುಗಳ ಸಂಖ್ಯೆ ಸುಮಾರು ಒಂದು ಸಾವಿರದ ಒಂಬೈನೂರನ್ನು ತಲುಪಿದೆ. ಮೊದಲು 900 ಇದ್ದದ್ದು ಈಗ 1900 ಆಗಲಿದೆ. ಇಂದು, ಉಡಾನ್ ಯೋಜನೆಯಡಿಯಲ್ಲಿ ಮೇಘಾಲಯದಲ್ಲಿ 16 ಮಾರ್ಗಗಳಲ್ಲಿ ವಿಮಾನ ಸೇವೆ ನಡೆಯುತ್ತಿದೆ. ಇದರಿಂದಾಗಿ ಮೇಘಾಲಯದ ಜನರು ಅಗ್ಗದ ವಿಮಾನ ಸೇವೆಯ ಲಾಭ ಪಡೆಯುತ್ತಿದ್ದಾರೆ. ಮೇಘಾಲಯ ಮತ್ತು ಈಶಾನ್ಯ ಭಾಗದ ರೈತರು ಉತ್ತಮ ವಾಯು ಸಂಪರ್ಕದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಉಡಾನ್ ಯೋಜನೆಯಿಂದ ಇಲ್ಲಿನ ಹಣ್ಣು ತರಕಾರಿಗಳು ದೇಶ-ವಿದೇಶದ ಮಾರುಕಟ್ಟೆಗಳಿಗೆ ಸುಲಭವಾಗಿ ತಲುಪುವಂತಾಗಿದೆ.
ಸ್ನೇಹಿತರೇ...
ಇಂದು ಶಂಕುಸ್ಥಾಪನೆಯಾದ ಯೋಜನೆಗಳಿಂದ ಮೇಘಾಲಯದ ಸಂಪರ್ಕವು ಮತ್ತಷ್ಟು ಬಲಗೊಳ್ಳಲಿದೆ. ಕಳೆದ 8 ವರ್ಷಗಳಲ್ಲಿ ಮೇಘಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಮೇಘಾಲಯದಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ಕಳೆದ 8 ವರ್ಷಗಳಲ್ಲಿ ನಿರ್ಮಿಸಲಾದ ಗ್ರಾಮೀಣ ರಸ್ತೆಗಳ ಸಂಖ್ಯೆ ಹಿಂದಿನ 20 ವರ್ಷಗಳಿಗಿಂತ ಏಳು ಪಟ್ಟು ಹೆಚ್ಚಾಗಿದೆ.
ಸಹೋದರರೇ ಮತ್ತು ಸಹೋದರಿಯರೇ..
ಡಿಜಿಟಲ್ ಸಂಪರ್ಕವು ಈಶಾನ್ಯದ ಯುವ ಶಕ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಡಿಜಿಟಲ್ ಸಂಪರ್ಕವು ಸಂಭಾಷಣೆಯಿಂದ ಮಾತ್ರ ಪ್ರಯೋಜನ ಪಡೆಯುತ್ತದೆಯೇ ಹೊರತು ಸಂವಹನದಿಂದಲ್ಲ. ಇದರಿಂದ ಪ್ರವಾಸೋದ್ಯಮದಿಂದ ತಂತ್ರಜ್ಞಾನದವರೆಗೆ, ಶಿಕ್ಷಣದಿಂದ ಆರೋಗ್ಯದವರೆಗೆ, ಪ್ರತಿಯೊಂದು ಕ್ಷೇತ್ರದಲ್ಲೂ ಸೌಲಭ್ಯಗಳು ಮತ್ತು ಅವಕಾಶಗಳು ಹೆಚ್ಚಾಗುತ್ತವೆ. ಇದರೊಂದಿಗೆ, ಜಗತ್ತಿನಲ್ಲಿ ವೇಗವಾಗಿ ಹೊರಹೊಮ್ಮುತ್ತಿರುವ ಡಿಜಿಟಲ್ ಆರ್ಥಿಕತೆಯ ಸಾಮರ್ಥ್ಯವೂ ಹೆಚ್ಚಾಗುತ್ತದೆ. 2014 ಕ್ಕೆ ಹೋಲಿಸಿದರೆ, ಈಶಾನ್ಯದಲ್ಲಿ ಆಪ್ಟಿಕಲ್ ಫೈಬರ್ ಕವರೇಜ್ ಸುಮಾರು 4 ಪಟ್ಟು ಹೆಚ್ಚಾಗಿದೆ. ಆದರೆ ಮೇಘಾಲಯದಲ್ಲಿ ಇದು 5 ಪಟ್ಟು ಹೆಚ್ಚಾಗಿದೆ. ಈಶಾನ್ಯದ ಪ್ರತಿಯೊಂದು ಮೂಲೆಗೂ ಉತ್ತಮ ಮೊಬೈಲ್ ಸಂಪರ್ಕಕ್ಕಾಗಿ 6,000 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಇಂದು ಮೇಘಾಲಯದಲ್ಲಿ ಹಲವಾರು 4G ಮೊಬೈಲ್ ಟವರ್‌ಗಳ ಉದ್ಘಾಟನೆ ಈ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ. ಈ ಮೂಲಸೌಕರ್ಯ ಇಲ್ಲಿನ ಯುವಕರಿಗೆ ಹೊಸ ಅವಕಾಶಗಳನ್ನು ನೀಡಲಿದೆ. ಐಐಎಂ ಉದ್ಘಾಟನೆ ಮತ್ತು ಮೇಘಾಲಯದಲ್ಲಿ ಟೆಕ್ನಾಲಜಿ ಪಾರ್ಕ್‌ನ ಶಂಕುಸ್ಥಾಪನೆಯು ಶಿಕ್ಷಣ ಮತ್ತು ಗಳಿಕೆಯ ಅವಕಾಶಗಳನ್ನು ವಿಸ್ತರಿಸುತ್ತದೆ. ಇಂದು, ಈಶಾನ್ಯದ ಬುಡಕಟ್ಟು ಪ್ರದೇಶಗಳಲ್ಲಿ 150 ಕ್ಕೂ ಹೆಚ್ಚು ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ, ಅವುಗಳಲ್ಲಿ 39 ಮೇಘಾಲಯದಲ್ಲಿವೆ. ಮತ್ತೊಂದೆಡೆ, ಯುವಕರು ಐಐಎಂಗಳಂತಹ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ಶಿಕ್ಷಣದ ಪ್ರಯೋಜನವನ್ನು ಪಡೆಯಲಿದ್ದಾರೆ.
ಸಹೋದರರೇ ಮತ್ತು ಸಹೋದರಿಯರೇ...,
ಬಿಜೆಪಿ, ಎನ್ ಡಿಎ ಸರ್ಕಾರ ಈಶಾನ್ಯ ಭಾಗದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಈ ವರ್ಷವೇ, 3 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅವು ನೇರವಾಗಿ ಈಶಾನ್ಯಕ್ಕೆ ಅಥವಾ ಅವು ಈಶಾನ್ಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡಲಿವೆ. ಪರ್ವತ್‌ಮಾಲಾ ಯೋಜನೆಯಡಿ ರೋಪ್ ವೇ ಜಾಲ ನಿರ್ಮಿಸಲಾಗುತ್ತಿದೆ. ಇದು ಈಶಾನ್ಯದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಅನುಕೂಲವನ್ನು ಹೆಚ್ಚಿಸುತ್ತದೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೂ ಕಾರಣವಾಗುತ್ತದೆ. PM DEVINE (ಪಿಎಂಡಿವೈನ್) ಯೋಜನೆಯು ಈಶಾನ್ಯದ ಅಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ನೀಡಲಿದೆ. ಈ ಯೋಜನೆಯೊಂದಿಗೆ, ಈಶಾನ್ಯಕ್ಕೆ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ಸುಲಭವಾಗಿ ಅನುಮೋದಿಸಲಾಗುತ್ತದೆ. ಇಲ್ಲಿ ಮಹಿಳೆಯರು ಮತ್ತು ಯುವಕರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲಾಗುವುದು. ಪಿಎಂ-ಡಿವೈನ್ ಅಡಿಯಲ್ಲಿ ಮುಂಬರುವ 3-4 ವರ್ಷಗಳವರೆಗೆ 6 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ...
ದೀರ್ಘಕಾಲ ಸರ್ಕಾರದಲ್ಲಿದ್ದ ಪಕ್ಷಗಳು ಈಶಾನ್ಯಕ್ಕೆ ವಿಭಜನೆಯ ಕಲ್ಪನೆಯನ್ನು ಹೊಂದಿದ್ದವು ಮತ್ತು ನಾವು DEVINE (ಡಿವೈನ್) ಕಲ್ಪನೆಯೊಂದಿಗೆ ಬಂದಿದ್ದೇವೆ. ಬೇರೆ ಬೇರೆ ಸಮುದಾಯಗಳಿರಲೀ, ಅಥವಾ ಬೇರೆಬೇರೆ ಪ್ರದೇಶಗಳಿರಲೀ ,ಅಲ್ಲಿ ನಾವು ಎಲ್ಲಾ ರೀತಿಯ ವಿಭಜನೆಗಳನ್ನು ತೆಗೆದುಹಾಕುತ್ತಿದ್ದೇವೆ. ಇಂದು, ಈಶಾನ್ಯದಲ್ಲಿ ನಾವು ವಿವಾದಗಳ ಗಡಿಗಳನ್ನು ಮಾಡುತ್ತಿಲ್ಲ.ಬದಲಿಗೆ ನಾವು ಅಭಿವೃದ್ಧಿ ಕಾರಿಡಾರ್‌ಗಳನ್ನು ಮಾಡುತ್ತಿದ್ದೇವೆ. ನಾವು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಕಳೆದ 8 ವರ್ಷಗಳಲ್ಲಿ ಹಲವು ಸಂಘಟನೆಗಳು ಹಿಂಸೆಯ ಹಾದಿ ಬಿಟ್ಟು ಶಾಶ್ವತ ಶಾಂತಿಯ ಹಾದಿ ಹಿಡಿದಿವೆ. ಈಶಾನ್ಯದಲ್ಲಿ, AFSPA ಸಶಸ್ತ್ರ ಪಡೆಗಳು (ವಿಶೇಷ ಅಧಿಕಾರಗಳು) ಕಾಯಿದೆ (AFSPA) ಅಗತ್ಯವಿಲ್ಲ. ಇದಕ್ಕಾಗಿ, ರಾಜ್ಯ ಸರ್ಕಾರಗಳ ಸಹಾಯದಿಂದ ನಿರಂತರವಾಗಿ ಪರಿಸ್ಥಿತಿಗಳನ್ನು ಸುಧಾರಿಸಲಾಗುತ್ತಿದೆ. ಇಷ್ಟೇ ಅಲ್ಲ, ರಾಜ್ಯಗಳ ನಡುವೆ ದಶಕಗಳಿಂದ ನಡೆಯುತ್ತಿದ್ದ ಗಡಿ ವಿವಾದಗಳೂ ಬಗೆಹರಿಯುತ್ತಿವೆ.
ಸ್ನೇಹಿತರೇ...
ನಮಗೆ ಈಶಾನ್ಯ, ನಮ್ಮ ಗಡಿ ಪ್ರದೇಶಗಳು ಅಂತಿಮ ಬಿಂದು. ಆದರೆ ಇದು ಭದ್ರತೆ ಮತ್ತು ಸಮೃದ್ಧಿಯ ಹೆಬ್ಬಾಗಿಲು. ರಾಷ್ಟ್ರದ ಭದ್ರತೆಯೂ ಇಲ್ಲಿಂದಲೇ ಖಾತ್ರಿಯಾಗುತ್ತದೆ ಮತ್ತು ಇತರ ದೇಶಗಳೊಂದಿಗೆ ವ್ಯಾಪಾರ ಸಂಪರ್ಕವೂ ಇಲ್ಲಿಂದಲೇ ನಡೆಯುತ್ತದೆ. ಅದಕ್ಕಾಗಿಯೇ ಮತ್ತೊಂದು ಪ್ರಮುಖ ಯೋಜನೆ ಇದೆ, ಇದು ಈಶಾನ್ಯ ರಾಜ್ಯಗಳಿಗೆ ಪ್ರಯೋಜನಕಾರಿಯಾಗಿದೆ. ರೋಮಾಂಚಕ ಗಡಿ ಗ್ರಾಮವನ್ನಾಗಿಸುವ ಯೋಜನೆ ಇದಾಗಿದೆ. ಇದರ ಅಡಿಯಲ್ಲಿ ಗಡಿ ಗ್ರಾಮಗಳಲ್ಲಿ ಉತ್ತಮ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಗಡಿ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಸಂಪರ್ಕ ಹೆಚ್ಚಿದರೆ ಶತ್ರುಗಳಿಗೆ ಲಾಭ ಎಂಬುದನ್ನು ಹಿಂದೆ ಹೇಳಲಾಗುತ್ತಿತ್ತು.ಆದರೆ ನಾನು ಇದನ್ನು ಊಹಿಸಲೂ ಸಾಧ್ಯವೂ ಇಲ್ಲ. ಹಿಂದಿನ ಸರ್ಕಾರದ ಈ ಚಿಂತನೆಯಿಂದಾಗಿ ಈಶಾನ್ಯ ಸೇರಿದಂತೆ ದೇಶದ ಎಲ್ಲ ಗಡಿ ಪ್ರದೇಶಗಳಲ್ಲಿ ಸಂಪರ್ಕ ಸುಧಾರಣೆ ಸಾಧ್ಯವಾಗಿಲ್ಲ. ಆದರೆ ಇಂದು ಕ್ಷಣಮಾತ್ರದಲ್ಲಿ ಹೊಸ ರಸ್ತೆಗಳು, ಹೊಸ ಸುರಂಗಗಳು, ಹೊಸ ಸೇತುವೆಗಳು, ಹೊಸ ರೈಲು ಮಾರ್ಗಗಳು, ಹೊಸ ಏರ್‌ಸ್ಟ್ರಿಪ್‌ಗಳು, ಅಗತ್ಯವಿದ್ದಲ್ಲಿ ಒಂದರ ಹಿಂದೆ ಒಂದರಂತೆ ನಿರ್ಮಾಣ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಒಂದು ಕಾಲದಲ್ಲಿ ನಿರ್ಜನವಾಗಿದ್ದ ಗಡಿ ಗ್ರಾಮಗಳನ್ನು ಜೀವಂತಗೊಳಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ನಮ್ಮ ನಗರಗಳಿಗೆ ಮುಖ್ಯವಾದ ವೇಗ. ನಮ್ಮ ಗಡಿಗಳಲ್ಲಿಯೂ ಅದೇ ವೇಗವನ್ನು ಹೊಂದಿರುವುದು ಅವಶ್ಯಕ. ಇದರಿಂದ ಇಲ್ಲಿ ಪ್ರವಾಸೋದ್ಯಮವೂ ಹೆಚ್ಚಲಿದ್ದು, ಊರು ಬಿಟ್ಟವರು ಸಹ ಹಿಂದಿರುಗಿ ಬರಲಿದ್ದಾರೆ.
ಸ್ನೇಹಿತರೇ...
ಕಳೆದ ವರ್ಷ ನಾನು ವ್ಯಾಟಿಕನ್ ಸಿಟಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದಾಗ ಅಲ್ಲಿ ನಾನು ಅವರ ಹೋಲಿನೆಸ್ ಪೋಪ್ ಅವರನ್ನು ಭೇಟಿಯಾಗಿದ್ದೆ. ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದ್ದೇನೆ. ಈ ಸಭೆಯು ನನ್ನ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತ್ತು. ಇಡೀ ಮನುಕುಲ ಇಂದು ಎದುರಿಸುತ್ತಿರುವ ಸವಾಲುಗಳ ಕುರಿತು ನಾವಿಬ್ಬರೂ ಚರ್ಚಿಸಿದ್ದೇವೆ. ಏಕತೆ ಮತ್ತು ಸೌಹಾರ್ದತೆಯ ಮನೋಭಾವದಿಂದ ಎಲ್ಲರೂ ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಕುರಿತು ಒಮ್ಮತದ ಪ್ರಯತ್ನಗಳಿಗಾಗಿ ಒಮ್ಮತ ತೀರ್ಮಾನವನ್ನು ಮಾಡಲಾಯಿತು. ಇಂತಹ ಏಕತೆ ಸೌಜಹಾರ್ದತೆಯ ಮನೋಭಾವನೆಯನ್ನು ನಾವು ಬಲಪಡಿಸಬೇಕು.
ಸ್ನೇಹಿತರೇ...,
ನಮ್ಮ ಬುಡಕಟ್ಟು ಸಮಾಜವು ಶಾಂತಿ ಮತ್ತು ಅಭಿವೃದ್ಧಿಯ ರಾಜಕೀಯದಿಂದ ಹೆಚ್ಚು ಪ್ರಯೋಜನ ಪಡೆದಿದೆ. ಬುಡಕಟ್ಟು ಸಮಾಜದ ಸಂಪ್ರದಾಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ಬಿದಿರು ಕಟಾವು ನಿಷೇಧವನ್ನು ತೆಗೆದುಹಾಕಿದ್ದೇವೆ. ಇದು ಬಿದಿರಿಗೆ ಸಂಬಂಧಿಸಿದ ಬುಡಕಟ್ಟು ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿತು. ಅರಣ್ಯದಿಂದ ಪಡೆದ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಈಶಾನ್ಯದಲ್ಲಿ 850 ವನ್ ಧನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅನೇಕ ಸ್ವ-ಸಹಾಯ ಗುಂಪುಗಳು ಅವರೊಂದಿಗೆ ಸಂಬಂಧ ಹೊಂದಿವೆ. ಇದರಲ್ಲಿ ನಮ್ಮ ಅನೇಕ ತಾಯಂದಿರು ಮತ್ತು ಸಹೋದರಿಯರು ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಮೂಲಸೌಕರ್ಯಗಳಾದ ಮನೆ, ನೀರು, ವಿದ್ಯುತ್, ಗ್ಯಾಸ್ ಕೂಡ ಈಶಾನ್ಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡಿದೆ. ಕಳೆದ ವರ್ಷಗಳಲ್ಲಿ, ಮೇಘಾಲಯದಲ್ಲಿ ಮೊದಲ ಬಾರಿಗೆ 2 ಲಕ್ಷ ಮನೆಗಳಿಗೆ ವಿದ್ಯುತ್ ತಲುಪಿದೆ. ಬಡವರಿಗಾಗಿ ಸುಮಾರು 70 ಸಾವಿರ ಮನೆಗಳು ಮಂಜೂರಾಗಿವೆ. ಸುಮಾರು ಮೂರು ಲಕ್ಷ ಕುಟುಂಬಗಳು ಪ್ರಥಮ ಬಾರಿಗೆ ನಲ್ಲಿ ನೀರಿನ ಸೌಲಭ್ಯ ಪಡೆದಿವೆ. ಇಂತಹ ಸೌಲಭ್ಯಗಳ ದೊಡ್ಡ ಫಲಾನುಭವಿಗಳು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರಾಗಿದ್ದಾರೆ.
ಸ್ನೇಹಿತರೇ...,
ಈಶಾನ್ಯದಲ್ಲಿ ಈ ಕ್ಷಿಪ್ರ ಅಭಿವೃದ್ಧಿಯ ನದಿಹೀಗೆ ಹರಿಯಲು ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್ ಹಬ್ಬ ಬರಲಿದೆ. ಇಂದು, ನಾನು ಈಶಾನ್ಯಕ್ಕೆ ಬಂದಿದ್ದು, ಈ ದೇಶದ ಎಲ್ಲಾ ದೇಶವಾಸಿಗಳಿಗೆ, ಈಶಾನ್ಯದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಮುಂಬರುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಖುಬ್ಲೇಇ ಶಿಬೋನ್ ! (ಖಾಸಿ ಔರ್ ಜಯಂತಿಯಾ ಮೇ ಧನ್ಯವಾದ್)ಮಿತೆಲಾ ..! (ಗಾರೋ ಮೇ ಧನ್ಯವಾದ್)
*****
(Release ID: 1884793)
Visitor Counter : 174
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam