ಪರಿಸರ ಮತ್ತು ಅರಣ್ಯ ಸಚಿವಾಲಯ

ಕೆನಡಾದ ಮಾಂಟ್ರಿಯಲ್‌ ನಲ್ಲಿ ಜರುಗಿದ ಯು.ಎನ್. ಜೈವಿಕ ವೈವಿಧ್ಯ ಸಮ್ಮೇಳನ, ಸಿ.ಒ.ಪಿ.15 ಇದರ ಸಮಗ್ರ ಸಭೆಯನ್ನು ಉದ್ದೇಶಿಸಿ ಕೇಂದ್ರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಭಾಷಣ ಮಾಡಿದರು


"ಜಾಗತಿಕ ಜೀವವೈವಿಧ್ಯ ಚೌಕಟ್ಟಿನಲ್ಲಿ ನಿಗದಿಪಡಿಸಲಾದ ಮಹತ್ವಾಕಾಂಕ್ಷೆಯ ಉದ್ದೇಶಗಳು ಮತ್ತು ಗುರಿಗಳು, ಸದಾ ವಾಸ್ತವಿಕ ಮತ್ತು ಪ್ರಾಯೋಗಿಕವಾಗಿರಬೇಕು" : ಕೇಂದ್ರ ಸಚಿವ ಶ್ರೀ ಯಾದವ್

Posted On: 18 DEC 2022 10:01AM by PIB Bengaluru

ಕೆನಡಾದ ಮಾಂಟ್ರಿಯಲ್‌ ನಲ್ಲಿ ಜರುಗಿದ ಯು.ಎನ್. ಜೈವಿಕ ವೈವಿಧ್ಯ ಸಮ್ಮೇಳನ, ಸಿ.ಒ.ಪಿ.15 ಇದರ ಸಮಗ್ರ ಸಭೆಯಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಭಾಷಣ ಮಾಡಿದರು

ಸನ್ಮಾನ್ಯ ಅಧ್ಯಕ್ಷರೇ, ಗೌರವಾನ್ವಿತ ಸಜ್ಜನರೇ ಮತ್ತು ಮಹಿಳೆಯರೇ ,

“ಈ ಸಮ್ಮೇಳನವು 2020 ರ ನಂತರದ ಜಾಗತಿಕ ಜೀವವೈವಿಧ್ಯ ರೂಪುರೇಷೆಗಳನ್ನು ಜಾರಿಗೆ ತರಲು ಒಮ್ಮತದ ಹಂತವನ್ನು ತಲುಪುತ್ತದೆ. ತಮ್ಮ ಅಮೂಲ್ಯ ಕೊಡುಗೆಯನ್ನು ಎಲ್ಲರೂ ಅಂಗೀಕರಿಸುತ್ತಾರೆ” ಎಂದು ನಾನು ಭಾವಿಸುತ್ತೇನೆ. “ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಮಾನವ ಯೋಗಕ್ಷೇಮ ಮತ್ತು ಜಾಗತಿಕ ಸುಸ್ಥಿರತೆಯನ್ನು ಮುನ್ನಡೆಸಲು ಪರಿಸರ ವ್ಯವಸ್ಥೆಯ ಅವನತಿಯನ್ನು ಹಿಮ್ಮೆಟ್ಟಿಸುವುದು ಮತ್ತು ಜಾಗತಿಕ ಜೀವವೈವಿಧ್ಯದ ನಷ್ಟವನ್ನು ತಡೆಯುವುದು ಅತ್ಯಗತ್ಯ. ಜಾಗತಿಕ ಜೀವವೈವಿಧ್ಯ ಚೌಕಟ್ಟಿನಲ್ಲಿ ನಿಗದಿಪಡಿಸಲಾದ ಗುರಿಗಳು ಮತ್ತು ಉದ್ದೇಶಗಳು ಯಾವತ್ತೂ ವಾಸ್ತವಿಕ ಮತ್ತು ಪ್ರಾಯೋಗಿಕವಾಗಿರಬೇಕು. ಹಾಗೂ ಇವುಗಳು ನಮ್ಮ ಮಹತ್ವಾಕಾಂಕ್ಷೆಯಾಗಿರಬೇಕು; ಹವಾಮಾನ ಬದಲಾವಣೆಯ ಪ್ರಕ್ರಿಯೆಗಳು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುವುದರಿಂದ ಜೈವಿಕ ವೈವಿಧ್ಯತೆಯ ಸಂರಕ್ಷಣೆಯು ಹೊಣೆಗಾರಿಕೆಯು ಎಲ್ಲಡೆ ಸಾಮಾನ್ಯವಾಗಿರಬೇಕು,  ಆದರೆ ಅವುಗಳು ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳನ್ನು ಆಧರಿಸಿರಬೇಕು.”

ಗೌರವಾನ್ವಿತರೇ,

“ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ, ಗ್ರಾಮೀಣ ಸಮುದಾಯಗಳಿಗೆ ಕೃಷಿಯು ಒಂದು ಪ್ರಮುಖ ಆರ್ಥಿಕ ವ್ಯವಸ್ಥೆಯಾಗಿದೆ, ಮತ್ತು ಈ ಕ್ಷೇತ್ರಗಳಿಗೆ ಒದಗಿಸಲಾದ ನಿರ್ಣಾಯಕ ಬೆಂಬಲವನ್ನು ಮರುನಿರ್ದೇಶಿಸಲು ಸಾಧ್ಯವಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ ಭದ್ರತೆಯು ಅತ್ಯಂತ ಮಹತ್ವದ್ದಾಗಿರುವಾಗ, ಕೀಟನಾಶಕ ಕಡಿತದಲ್ಲಿ ಸಂಖ್ಯಾತ್ಮಕ ಗುರಿಗಳನ್ನು ಸೂಚಿಸುವುದು ಅನಗತ್ಯ ಮತ್ತು ಅದನ್ನು ರಾಷ್ಟ್ರೀಯ ಸಂದರ್ಭಗಳು, ಆದ್ಯತೆಗಳು ಮತ್ತು ಸಾಮರ್ಥ್ಯಗಳ ಆಧಾರದ ಮೇಲೆ ನಿರ್ಧರಿಸಲು ದೇಶಗಳಿಗೆ ನಿರ್ಧರಿಸಲು ಬಿಡಬೇಕು. ಜೀವವೈವಿಧ್ಯ ಸಂರಕ್ಷಣೆಗೆ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಮತ್ತು ಸಮಗ್ರ ರೀತಿಯಲ್ಲಿ ಪುನಃಸ್ಥಾಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜೀವವೈವಿಧ್ಯದ ಸಂರಕ್ಷಣೆಗಾಗಿ ಪ್ರಕೃತಿ ಆಧಾರಿತ ಪರಿಹಾರಗಳು, ಪರಿಸರ ವ್ಯವಸ್ಥೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.  “

ಗೌರವಾನ್ವಿತರೇ,

“ಇದರ ಯಶಸ್ವಿ ಅನುಷ್ಠಾನವು ಸಮಾನವಾಗಿ ಮಹತ್ವಾಕಾಂಕ್ಷೆಯ ಸಂಪನ್ಮೂಲ ಕ್ರೋಢೀಕರಣ ಕಾರ್ಯವಿಧಾನ ಹಾಗೂ ನಾವು ಅಳವಡಿಸುವ  ವಿಧಾನಗಳ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಅಭಿವೃದ್ಧಿಶೀಲ-ದೇಶದಗಳಿಗೆ ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸಲು ಹೊಸ ಮತ್ತು ಮೀಸಲಾದ ಕಾರ್ಯವಿಧಾನವನ್ನು ರಚಿಸುವ ಅವಶ್ಯಕತೆಯಿದೆ. ಭಾರತವು ಎಲ್ಲಾ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಂಪೂರ್ಣವಾಗಿ ಬದ್ಧವಾಗಿದೆ. ಆದ್ದರಿಂದ ಸಿ.ಒ.ಪಿ. 15 ರಲ್ಲಿ ಮಹತ್ವಾಕಾಂಕ್ಷೆಯ ಮತ್ತು ವಾಸ್ತವಿಕ ಜಾಗತಿಕ ಜೀವವೈವಿಧ್ಯ ಚೌಕಟ್ಟನ್ನು ರೂಪಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಿದರೆ ಸಾಧ್ಯವಾಗುತ್ತದೆ. “

ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು.



(Release ID: 1884627) Visitor Counter : 159