ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕೋಲ್ಕತ್ತಾದಲ್ಲಿ ನಡೆದ 25 ನೇ ಪೂರ್ವ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು


ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 1,000ಕ್ಕೂ ಹೆಚ್ಚು ಸಮಸ್ಯೆಗಳನ್ನು ಕುರಿತು ವಲಯ ಸಭೆಗಳಲ್ಲಿ ಚರ್ಚಿಸಿ ಶೇ.93 ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದು ದೊಡ್ಡ ಸಾಧನೆಯಾಗಿದೆ.
 
2006 ರಿಂದ 2013 ರವರೆಗಿನ 8 ವರ್ಷಗಳಲ್ಲಿ, ವಲಯ ಮಂಡಳಿಗಳ ಒಟ್ಟು 6 ಸಭೆಗಳು (ವರ್ಷಕ್ಕೆ ಸರಾಸರಿ ಒಂದಕ್ಕಿಂತ ಕಡಿಮೆ ಸಭೆ), ಆದರೆ 2014 ರಿಂದ 8 ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ, ಒಟ್ಟು 23 ಸಭೆಗಳು (ಇಂದಿನ ಸಭೆ ಸೇರಿದಂತೆ) ನಡೆದಿವೆ (ವರ್ಷಕ್ಕೆ ಸರಾಸರಿ 3 ಸಭೆಗಳು)
 
ಸಭೆಗಳ ಆಯೋಜನೆ ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಅವು ಫಲಿತಾಂಶ-ಆಧಾರಿತವಾಗಿವೆ, ಇದು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದಿಂದ ಸಾಧ್ಯವಾಗಿದೆ ಮತ್ತು ಇದರಲ್ಲಿ ಅಂತರ-ರಾಜ್ಯ ಮಂಡಳಿ ಸಚಿವಾಲಯ ಸಕ್ರಿಯ ಪಾತ್ರವನ್ನು ವಹಿಸುತ್ತಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪೂರ್ವ ವಲಯದ ರಾಜ್ಯಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗತಿ ಶಕ್ತಿ ಯೋಜನೆಯಲ್ಲಿ ಪೂರ್ವ ಪ್ರದೇಶದ ರಾಜ್ಯಗಳು ಪ್ರಮುಖ ಪಾಲನ್ನು ಹೊಂದಿವೆ, ಏಕೆಂದರೆ ಶ್ರೀ ಮೋದಿಯವರು ಯಾವಾಗಲೂ ಈ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
 
ಮುಂ

Posted On: 17 DEC 2022 4:43PM by PIB Bengaluru

ದೇಶದ ಪೂರ್ವ ಪ್ರದೇಶದಲ್ಲಿ ಎಡಪಂಥೀಯ ಉಗ್ರವಾದವು ಬಹುತೇಕ ಅಂತ್ಯಗೊಂಡಿದೆ ಮತ್ತು ಎಡಪಂಥೀಯ ಉಗ್ರವಾದದ ಮೇಲೆ ಸಾಧಿಸಿರುವ ಈ ನಿರ್ಣಾಯಕ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಬೇಕು, ಈ ರಾಜ್ಯಗಳಲ್ಲಿ ಅದು ಮತ್ತೆ ಹೊರಹೊಮ್ಮಬಾರದು ಮತ್ತು ಈ ರಾಜ್ಯಗಳು ದೇಶದ ಇತರ ಭಾಗಗಳಿಗೆ ಸಮಾನವಾಗಿ ಅಭಿವೃದ್ಧಿ ಹೊಂದಬೇಕು.

https://static.pib.gov.in/WriteReadData/userfiles/image/image0018IFV.jpg

 ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಎನ್‌ಸಿಒಆರ್‌ಡಿ ವ್ಯವಸ್ಥೆಯನ್ನು ರಚಿಸಬೇಕು ಮತ್ತು ಅದರ ನಿಯಮಿತ ಸಭೆಗಳನ್ನು ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು, ಇಂದು ದೇಶದಲ್ಲಿ ಡ್ರಗ್ಸ್ ವಿರುದ್ಧದ ಹೋರಾಟವು ನಿರ್ಣಾಯಕ ಹಂತದಲ್ಲಿದೆ ಮತ್ತು ಕೃತಕ ಬುದ್ಧಿಮತ್ತೆ  ಮೂಲಕ ಮಾದಕ ವಸ್ತುಗಳ ವಿರುದ್ಧದ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸುವ ಅಗತ್ಯವಿದೆ. 

https://static.pib.gov.in/WriteReadData/userfiles/image/image002QQQY.jpg

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಕೋಲ್ಕತ್ತಾದಲ್ಲಿ ನಡೆದ 25 ನೇ ಪೂರ್ವ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ಮುಖ್ಯಮಂತ್ರಿಗಳು, ಬಿಹಾರದ ಉಪಮುಖ್ಯಮಂತ್ರಿ ಮತ್ತು ಒಡಿಶಾದ ಸಚಿವರು ಮತ್ತು ಮಂಡಳಿ ಅಡಿಯಲ್ಲಿ ಬರುವ ಗೃಹ ಸಚಿವಾಲಯ ಮತ್ತು ರಾಜ್ಯಗಳ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಗೃಹ ಸಚಿವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಕಳೆದ 8 ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 1,000 ಕ್ಕೂ ಹೆಚ್ಚು ಸಮಸ್ಯೆಗಳನ್ನು ವಲಯ ಮಂಡಳಿಗಳ ಸಭೆಗಳಲ್ಲಿ ಚರ್ಚಿಸಲಾಗಿದೆ ಮತ್ತು ಅವುಗಳಲ್ಲಿ ಶೇ.93 ರಷ್ಟನ್ನು ಪರಿಹರಿಸಲಾಗಿದೆ, ಇದು ದೊಡ್ಡ ಸಾಧನೆಯಾಗಿದೆ ಎಂದರು. 2006 ರಿಂದ 2013 ರವರೆಗಿನ 8 ವರ್ಷಗಳಲ್ಲಿ, ವಲಯ ಮಂಡಳಿಗಳ ಒಟ್ಟು 6 ಸಭೆಗಳನ್ನು ನಡೆಸಲಾಗಿದೆ (ವರ್ಷಕ್ಕೆ ಸರಾಸರಿ ಒಂದಕ್ಕಿಂತ ಕಡಿಮೆ ಸಭೆ), ಆದರೆ 2014 ರಿಂದ 8 ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕದ ಹೊರತಾಗಿಯೂ, ಒಟ್ಟು 23 ಸಭೆಗಳನ್ನು (ಇಂದಿನ ಸಭೆ ಸೇರಿದಂತೆ) ನಡೆಸಲಾಗಿದೆ (ವರ್ಷಕ್ಕೆ ಸರಾಸರಿ 3 ಸಭೆಗಳು). ವಲಯ ಮಂಡಳಿ ಸಭೆಗಳ ಆಯೋಜನೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಮತ್ತು ಫಲಿತಾಂಶಗಳು ಸಹ ಗೋಚರಿಸುತ್ತಿವೆ, ಇದು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಸಹಕಾರದಿಂದ ಸಾಧ್ಯವಾಗಿದೆ ಮತ್ತು ಅಂತರರಾಜ್ಯ ಮಂಡಳಿಯ ಸಚಿವಾಲಯವು ಇದರಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image003ERBZ.jpg

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಪೂರ್ವ ವಲಯದ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗತಿ ಶಕ್ತಿ ಯೋಜನೆಯಲ್ಲಿ ಪೂರ್ವ ಪ್ರದೇಶದ ರಾಜ್ಯಗಳು ಪ್ರಮುಖ ಪಾಲನ್ನು ಹೊಂದಿವೆ. ಶ್ರೀ ಮೋದಿಯವರು ಈ ಪ್ರದೇಶದ ಅಭಿವೃದ್ಧಿಗೆ ಯಾವಾಗಲೂ ಒತ್ತು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಮುಂದಿನ 25 ವರ್ಷಗಳಲ್ಲಿ, ಆಜಾದಿ ಕಾ ಅಮೃತ ಕಾಲದ ಅವಧಿಯಲ್ಲಿ, ದೇಶದ ಪೂರ್ವ ಪ್ರದೇಶವು ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ಶಾ ಹೇಳಿದರು. 25 ನೇ ಪೂರ್ವ ವಲಯ ಮಂಡಳಿ ಸಭೆಯು ಉತ್ತಮ ಮತ್ತು ಸಕಾರಾತ್ಮಕ ವಾತಾವರಣದಲ್ಲಿ ನಡೆಯಿತು, ಅನೇಕ ವಿಷಯಗಳ ಬಗ್ಗೆ ಒಮ್ಮತ ಮೂಡಿತು. ಹಾಗೆಯೇ ಬಾಕಿ ಇರುವ ಸಮಸ್ಯೆಗಳನ್ನು ಸಮಾಲೋಚನೆಗಳ ಮೂಲಕ ಪರಿಹರಿಸಲಾಗುವುದು ಎಂದು ಶ್ರೀ ಶಾ ಹೇಳಿದರು.

ದೇಶದ ಪೂರ್ವ ಪ್ರದೇಶದಿಂದ ಎಡಪಂಥೀಯ ಉಗ್ರವಾದವನ್ನು ಬಹುತೇಕ ನಿರ್ಮೂಲನೆ ಮಾಡಲಾಗಿದೆ ಮತ್ತು ಎಡಪಂಥೀಯ ಉಗ್ರವಾದದ ಮೇಲೆ ಸಾಧಿರುವ ಈ ನಿರ್ಣಾಯಕ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎಡಪಂಥೀಯ ಉಗ್ರವಾದವಾದ ಮುಕ್ತ ರಾಜ್ಯಗಳಲ್ಲಿ ಉಗ್ರವಾದವು ಮತ್ತೆ ಹೊರಹೊಮ್ಮಬಾರದು ಮತ್ತು ಈ ರಾಜ್ಯಗಳು ದೇಶದ ಇತರ ಭಾಗಗಳಿಗೆ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಒತ್ತಿ ಹೇಳಿದರು. ಎನ್‌ಸಿಒಆರ್‌ಡಿ ಕಾರ್ಯವಿಧಾನದ ಜಿಲ್ಲಾ ಮಟ್ಟದ ರಚನೆ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆಗಾಗಿ ಅದರ ನಿಯಮಿತ ಸಭೆಗಳನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಲೂವಂತೆ ಕೇಂದ್ರ ಗೃಹ ಸಚಿವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ದೇಶದಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ ಈಗ ನಿರ್ಣಾಯಕ ಹಂತದಲ್ಲಿದ್ದು, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾದಕ ವಸ್ತುಗಳ ವಿರುದ್ಧದ ಅಭಿಯಾನವನ್ನು ಚುರುಕುಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

*****(Release ID: 1884488) Visitor Counter : 135