ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಎಸ್.ಎ.ಐ.ಯ ಪಟಿಯಾಲ ಮತ್ತು ಸೋನಿಪತ್ ಕೇಂದ್ರಕ್ಕೆ ಭೇಟಿ ನೀಡಿದರು ಹಾಗು 85 ಕೋ.ರೂ.ಗಳ ಬಹು ಮೂಲಭೂತ ಯೋಜನೆಗಳನ್ನು ಉದ್ಘಾಟಿಸಿದರು.


ಈ ಪ್ರತಿಷ್ಠಿತ ಕೇಂದ್ರದಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳು ಸುಧಾರಿತ ವಸತಿ ಸೌಕರ್ಯವನ್ನು ಹೊಂದಿರುತ್ತಾರೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 17 DEC 2022 2:53PM by PIB Bengaluru

ಪ್ರಮುಖಾಂಶಗಳು:
• 300 ಹಾಸಿಗೆಯ ಹೊಸ ಹಾಸ್ಟೆಲ್ನ ನಿರ್ಮಾಣ ವೆಚ್ಚ ರೂ. 26.77 ಕೋಟಿ
• ಸಚಿವರು ಭಾರತದ ದಂತಕಥೆಯಾಗಿರುವ ಹಾಕಿ ಆಟಗಾರ ಮೇಜರ್ ಧ್ಯಾನ್ಚಂದ್ ಮತ್ತು ಓಟಗಾರ್ತಿ ಪಿ.ಟಿ ಉಷಾ ಅವರ ಹೆಸರಿನ ಹಾಸ್ಟೆಲ್ಗಳನ್ನು ಉದ್ಘಾಟಿಸಿದರು, ಇವುಗಳನ್ನು ಒಟ್ಟು 5.25 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಲಾಗಿದೆ ಮತ್ತು ಮೇಲ್ದರ್ಜೆಗೇರಿಸಲಾಗಿದೆ.

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಶನಿವಾರ ಪಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್ಎಸ್ಎನ್ಐಎಸ್) ಗೆ ಭೇಟಿ ನೀಡಿದರು ಮತ್ತು 300 ಹಾಸಿಗೆಗಳ ಹೊಸ ಹಾಸ್ಟೆಲ್ ಉದ್ಘಾಟಿಸಿದರು. ಇದನ್ನು 26.77 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಒಟ್ಟು 5.25 ಕೋಟಿ ವೆಚ್ಚದಲ್ಲಿ ಭಾರತದ ದಂತಕಥೆಯಾಗಿರುವ ಹಾಕಿ ಆಟಗಾರ ಮೇಜರ್ ಧ್ಯಾನ್ಚಂದ್ ಮತ್ತು ಓಟಗಾರ್ತಿ ಪಿಟಿ ಉಷಾ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಹಾಗು ಮೇಲ್ದರ್ಜೆಗೇರಿಸಲಾಗಿರುವ ಹಾಸ್ಟೆಲ್ಗಳನ್ನೂ ಸಚಿವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಠಾಕೂರ್, "ಕ್ರೀಡಾಪಟುಗಳಿಗೆ ಸಾಧ್ಯವಾದಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಸದಾ ಕ್ರೀಡಾಪಟುಗಳನ್ನು ಎಲ್ಲಾ ಸವಲತ್ತುಗಳ ಕೇಂದ್ರದಲ್ಲಿ ಇರಿಸುವ ಮಹತ್ವವನ್ನು ಸಾರಿದ್ದಾರೆ. ಈ 300 ಹಾಸಿಗೆಗಳ ಹಾಸ್ಟೆಲ್ ಮತ್ತು ಹಳೆಯ ಹಾಸ್ಟೆಲ್ಗಳ ಉನ್ನತೀಕರಣವು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ, ಇದರಿಂದಾಗಿ ಈ ಪ್ರತಿಷ್ಠಿತ ಕೇಂದ್ರದಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಲಭಿಸುವ ವಸತಿ ಸೌಕರ್ಯಗಳಲ್ಲಿ ಸುಧಾರಣೆಯಾಗಿದೆ” ಎಂದರು. 

ಶ್ರೀ ಠಾಕೂರ್ ಅವರು ಎನ್.ಎಸ್.ಎನ್.ಐ.ಎಸ್. ಪಟಿಯಾಲದಲ್ಲಿ ಶೈಕ್ಷಣಿಕ ಕೋರ್ಸ್ಗಳಿಗೆ ಮೊದಲ ಬಾರಿಗೆ ಸೇರ್ಪಡೆಯಾದ ಕ್ರೀಡಾ ಕಾರ್ಯಕ್ಷಮತೆ ವಿಶ್ಲೇಷಣೆ ಕೋರ್ಸ್ ಉದ್ಘಾಟಿಸಿದರು. ಈ ಕೋರ್ಸ್ನ ಮೊದಲ ತಂಡದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ, ಶ್ರೀ. ಠಾಕೂರ್, "ಕ್ರೀಡಾಪಟುಗಳ ನೈಜ ಸಾಮರ್ಥ್ಯವನ್ನು ನಿರ್ಣಯಿಸಲು ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ಕಾರ್ಯಕ್ಷಮತೆಯ ವಿಶ್ಲೇಷಣೆಯನ್ನು ಸೇರಿಸುವುದು ಬಹಳ ಮುಖ್ಯ, ಇದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಒಟ್ಟಾರೆ ಪ್ರದರ್ಶನವನ್ನು ಸುಧಾರಿಸುವಲ್ಲಿ ಬಹಳ ದೂರ ಹೋಗಬಹುದು." ಎಂದರು.

ತಮ್ಮ ಭೇಟಿಯ ಸಮಯದಲ್ಲಿ, ಸಚಿವರು 400 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುವ ನಿಟ್ಟಿನಲ್ಲಿ ಕ್ರೀಡೆಗಳತ್ತ ಗಮನ ಹರಿಸಲು ಪ್ರೇರೇಪಿಸಿದರು. ಕೇಂದ್ರದಲ್ಲಿ ಅವರಿಗೆ ಲಭ್ಯವಿರುವ ಸೌಲಭ್ಯಗಳು ಮತ್ತು ಪ್ರಸ್ತುತ ವ್ಯವಸ್ಥೆಯಲ್ಲಿ ಅವರು ಬಯಸುವ ಸುಧಾರಣೆಗಳ ಕುರಿತು ಅವರು ಕ್ರೀಡಾಪಟುಗಳಿಂದ ಹಿಮ್ಮಾಹಿತಿಗಳನ್ನು ಕೇಳಿದರು.

ವರ್ಷಗಳಲ್ಲಿ ಎಸ್.ಎ.ಐ.ಪಟಿಯಾಲವು ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ದೇಶಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದ ಮತ್ತು ಒಲಿಂಪಿಕ್ ಪದಕಗಳನ್ನು ಗೆದ್ದ ಅನೇಕ ಪ್ರಸಿದ್ಧ ಕ್ರೀಡಾಪಟುಗಳನ್ನು ರೂಪಿಸಿದೆ.

2021 ರಲ್ಲಿ, ಎಸ್.ಎ.ಐ ಪಟಿಯಾಲಾದ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ಆರು ವಿಭಾಗಗಳಲ್ಲಿ ಒಟ್ಟು 72 ಪದಕಗಳನ್ನು ಗೆದ್ದಿದ್ದಾರೆ. 2022 ರಲ್ಲಿ, ಈ ಮೊತ್ತವು 195 ಪದಕಗಳಿಗೆ ಏರಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ, ಎಸ್.ಎ.ಐ ಪಟಿಯಾಲ ಅಥ್ಲೀಟ್ಗಳು ಕಾಮನ್ವೆಲ್ತ್ ಚಾಂಪಿಯನ್ಶಿಪ್ಗಳು, ಯುರೋಪಿಯನ್ ಓಪನ್ ಮತ್ತು ಜೂನಿಯರ್ ವರ್ಲ್ಡ್ ಚಾಂಪಿಯನ್ಶಿಪ್ಗಳಂತಹ ಸ್ಪರ್ಧೆಗಳಲ್ಲಿ 19 ಪದಕಗಳನ್ನು ಗೆದ್ದಿದ್ದಾರೆ.

****



(Release ID: 1884481) Visitor Counter : 247