ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕೇಂದ್ರದ ಸಂಗ್ರಹಾಗಾರದಲ್ಲಿ ಸಾಕಷ್ಟು ಆಹಾರ ಧಾನ್ಯ ದಾಸ್ತಾನು: ಕೇಂದ್ರ
159 ಲಕ್ಷ ಮೆ.ಟನ್ ಗೋಧಿಯು 01.01.2023 ರಂದು ಲಭ್ಯವಿರುತ್ತದೆ, ಇದು ಬಫರ್ ನಾರ್ಮ್ ಅವಶ್ಯಕತೆಯ 138 ಲಕ್ಷ ಮೆ.ಟನ್ ಗಿಂತ ಹೆಚ್ಚುಇದೆ.
12.12.2022 ರಂತೆ ಕೇಂದ್ರದ ಸಂಗ್ರಹಾರದಲ್ಲಿ 182 ಲಕ್ಷ ಮೆ.ಟನ್ ಗೋಧಿ ಲಭ್ಯವಿದೆ
Posted On:
15 DEC 2022 10:38AM by PIB Bengaluru
ಎನ್ಎಫ್ಎಸ್ಎ ಮತ್ತು ಅದರ ಇತರ ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಹಾಗೂ ಪಿಎಂಜಿಕೆಎವೈ ಯೋಜನೆಯ ಹೆಚ್ಚುವರಿ ಹಂಚಿಕೆಗಾಗಿ ಕೇಂದ್ರೀಯ ಸಂಗ್ರಹಾರದ ಅಡಿಯಲ್ಲಿ ಭಾರತ ಸರ್ಕಾರವು ಸಾಕಷ್ಟು ಆಹಾರ ಧಾನ್ಯ ದಾಸ್ತಾನುಗಳನ್ನು ಹೊಂದಿದೆ. ಜನವರಿ 1, 2023 ರಂತೆ ಸುಮಾರು 159 ಲಕ್ಷ ಮೆ.ಟನ್ ಗೋಧಿ ಲಭ್ಯವಿರುತ್ತದೆ, ಇದು ಜನವರಿ 1 ರ ಬಫರ್ ನಾರ್ಮ್ ಅವಶ್ಯಕತೆಯ 138 ಲಕ್ಷ ಮೆ.ಟನ್ ಗಿಂತ ಹೆಚ್ಚಾಗಿದೆ. 12.12.2022 ರಂತೆ, ಕೇಂದ್ರ ಸಂಗ್ರಹಾಗಾರದಲ್ಲಿ ಸುಮಾರು 182 ಲಕ್ಷ ಮೆ.ಟನ್ ಗೋಧಿ ಲಭ್ಯವಿದೆ.
ಭಾರತ ಸರ್ಕಾರಕ್ಕೆ ಗೋಧಿಯ ಬೆಲೆಯ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಮತ್ತು ಇತರ ಸರಕುಗಳೊಂದಿಗೆ ವಾರಕ್ಕೊಮ್ಮೆ ನಿಯಮಿತವಾಗಿ ಅದನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅಗತ್ಯವಿದ್ದಾಗ ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭಾರತ ಸರ್ಕಾರವು ಯಾವುದೇ ಬೆಲೆ ಏರಿಕೆಯನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು 13.05.2022 ರಿಂದ ಜಾರಿಗೆ ಬರುವಂತೆ ರಫ್ತು ನಿಯಮಗಳನ್ನು ವಿಧಿಸಲಾಗಿದೆ. ಇದಲ್ಲದೆ, ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸಂಗ್ರಹಾರದಲ್ಲಿ ಸಾಕಷ್ಟು ಗೋಧಿ ದಾಸ್ತಾನು ಹೊಂದಲು ಅಕ್ಕಿಯ ಪರವಾಗಿ ಎನ್ಎಫ್ಎಸ್ ಎ ಮತ್ತು ಪಿಎಂಜಿಕೆಎವೈ ಯೋಜನೆಯ ಅಡಿಯಲ್ಲಿ ಹಂಚಿಕೆಗಳನ್ನು ಪರಿಷ್ಕರಿಸಲಾಗಿದೆ.
ಭಾರತ ಸರ್ಕಾರವು ಈ ವರ್ಷ ಗೋಧಿ ಬೆಳೆಯ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ)ಯನ್ನು ರೂ.2125/ಕ್ವಿಂಟಾಲ್ ಗೆ ಕಳೆದ ವರ್ಷದ ಕನಿಷ್ಠ ಬೆಂಬಲ ಬೆಲೆ ರೂ 2015/ಕಿಂಟಾಲ್ ಹೋಲಿಸಿದಾಗ ಹೆಚ್ಚಿಸಿದೆ. ಹೀಗಾಗಿ, ಎಂಎಸ್ಪಿಯಲ್ಲಿ ರೂ. 110/ಕ್ಟಿಂಟಾಲ್ ಜೊತೆಗೆ ಸಾಕಷ್ಟು ಉತ್ತಮ ಹವಾಮಾನ ಪರಿಸ್ಥಿತಿಗಳೊಂದಿಗೆ, ಮುಂದಿನ ಋತುವಿನಲ್ಲಿ ಗೋಧಿಯ ಉತ್ಪಾದನೆ ಮತ್ತು ಸಂಗ್ರಹಣೆಯು ಸಾಮಾನ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ ಋತುವಿನಲ್ಲಿ ಗೋಧಿ ಸಂಗ್ರಹವು ಏಪ್ರಿಲ್ 2023 ರಿಂದ ಪ್ರಾರಂಭವಾಗಲಿದೆ ಮತ್ತು ಆರಂಭಿಕ ಮೌಲ್ಯಮಾಪನದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಗೋಧಿ ಬೆಳೆ ಬಿತ್ತನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ದೇಶಾದ್ಯಂತ ಎಲ್ಲಾ ಕಲ್ಯಾಣ ಯೋಜನೆಗಳ ಅಗತ್ಯತೆಗಳನ್ನು ಪೂರೈಸಲು ಕೇಂದ್ರದ ಸಂಗ್ರಾಹಾರದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯವಿವೆ ಮತ್ತು ಬೆಲೆಗಳು ನಿಯಂತ್ರಣದಲ್ಲಿರುತ್ತವೆ ಎಂದು ಭಾರತ ಸರ್ಕಾರ ಖಚಿತಪಡಿಸಿದೆ.
ಭೌಗೋಳಿಕ-ರಾಜಕೀಯ ಪರಿಸ್ಥಿತಿಯ ಪರಿಣಾಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಎಂಎಸ್ಪಿ ಗಿಂತ ಹೆಚ್ಚಿನ ಬೆಲೆಗೆ ರೈತರು ಮಾರಾಟ ಮಾಡುವುದರ ಜೊತೆಗೆ ಕಡಿಮೆ ಉತ್ಪಾದನೆಯಿಂದಾಗಿ ಕಳೆದ ಋತುವಿನಲ್ಲಿ ಗೋಧಿಯ ಸಂಗ್ರಹವು ಕಡಿಮೆ ಮಟ್ಟದಲ್ಲಿದ್ದರೂ, ಮುಂದಿನ ಗೋಧಿ ಬೆಳೆ ಬರುವವರೆಗೆ ದೇಶದ ಅಗತ್ಯಕ್ಕೆ ಕೇಂದ್ರೀಯ ಸಂಗ್ರಹಾರದಲ್ಲಿ ಪೂರೈಸಲು ಗೋಧಿಯ ಸಾಕಷ್ಟು ದಾಸ್ತಾನು ಇನ್ನೂ ಲಭ್ಯವಿರುತ್ತದೆ.
*****
(Release ID: 1883943)
Visitor Counter : 176