ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಆಲ್ ಇಂಡಿಯಾ ರೇಡಿಯೋ ಡಿಸೆಂಬರ್ 3, 2022 ರಂದು ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ವಾರ್ಷಿಕ ಆವೃತ್ತಿ ಕುರಿತು ಉಪನ್ಯಾಸವನ್ನು  ಪ್ರಸಾರ ಮಾಡಲಿದೆ.



 ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು  ಈ ಕುರಿತು ಭಾಷಣ ಮಾಡಲಿದ್ದಾರೆ.

 ರಾತ್ರಿ 9.30 ರಿಂದ ಆಲ್ ಇಂಡಿಯಾ ರೇಡಿಯೊದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರವು ಲಭ್ಯವಿರುತ್ತದೆ

 ದೂರದರ್ಶನ ನ್ಯೂಸ್ ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸವನ್ನು ರಾತ್ರಿ 10.30 ರಿಂದ ಪ್ರಸಾರ ಮಾಡಲಿದೆ.

Posted On: 02 DEC 2022 3:36PM by PIB Bengaluru

ಆಲ್ ಇಂಡಿಯಾ ರೇಡಿಯೋ ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸದ ವಾರ್ಷಿಕ ಆವೃತ್ತಿಯನ್ನು ಶನಿವಾರ, ಡಿಸೆಂಬರ್ 3, 2022 ರಂದು ಪ್ರಸಾರ ಮಾಡಲಿದೆ. ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಭಾಷಣ ಮಾಡಲಿದ್ದಾರೆ.  ಇದೇ‌   2022  ಡಿಸೆಂಬರ್ 3 ರ ರಾತ್ರಿ 9.30 ರಿಂದ ಆಲ್ ಇಂಡಿಯಾ ರೇಡಿಯೊದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ.  ಕೇಳುಗರು ಇದನ್ನು ಪ್ರಸಾರವನ್ನು  100.1FM GOLD, 102.6 FM ರೇನ್ಬೋ, ಆಲ್ ಇಂಡಿಯಾ ರೇಡಿಯೊದ ಪ್ರಾಥಮಿಕ ಚಾನೆಲ್‌ಗಳು, Twitter ನಲ್ಲಿ @airnewsalerts, NewsOnAirOfficial YouTube ಚಾನಲ್ ಮತ್ತು NewsOnAir ಅಪ್ಲಿಕೇಶನ್‌ಗೆ ಟ್ಯೂನ್ ಮಾಡಿ ಕೇಳಬಹುದು.

 ದೂರದರ್ಶನ ನ್ಯೂಸ್ ಅದೇ ದಿನ ರಾತ್ರಿ 10.30 ರಿಂದ ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸವನ್ನು ಪ್ರಸಾರ ಮಾಡಲಿದೆ.

 ಈ ವರ್ಷದ ಥೀಮ್ "ಅಮೃತ್ ಕಾಲ್ ಮೇ ಭಾರತೀಯತಾ" ಎಂಬುದು ಭಾರತದ ಸ್ವಾತಂತ್ರ್ಯದ 75 ವರ್ಷಗಳಿಗೆ ಹೊಂದಿಕೆಯಾಗುತ್ತದೆ.
ಡಾ.ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸ ಕುರಿತು:

ಡಾ. ರಾಜೇಂದ್ರ ಪ್ರಸಾದ್ ಸ್ಮಾರಕ ಉಪನ್ಯಾಸವನ್ನು ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದು, ಭಾರತದ ಮೊದಲ ರಾಷ್ಟ್ರಪತಿಯಾಗಿರುವ ಇವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಕೂಡ ಆಗಿದ್ದಾರೆ. ಡಾ.ರಾಜೇಂದ್ರ ಪ್ರಸಾದ್ ಅವರು  ಸರಳತೆಯ ಪ್ರತಿರೂಪವಾಗಿದ್ದರು.ಇವರು ವಿದ್ವಾಂಸರು ಮತ್ತು ಭಾರತದ ಮಹಾನ್ ದಾರ್ಶನಿಕರಲ್ಲೂ ಒಬ್ಬರಾಗಿದ್ದ ಡಾ.  ರಾಜೇಂದ್ರ ಪ್ರಸಾದ್ ಭಾರತೀಯತೆ ಅವರು ಭಾರತೀಯರ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ರಾಜೇಂದ್ರ ಪ್ರಸಾದ್ ಅವರ ಸ್ಮರಣಾರ್ಥ ಆಕಾಶವಾಣಿಯಿಂದ ಉಪನ್ಯಾಸ ಸರಣಿಯು 1969 ರಿಂದ ಗೌರವಾನ್ವಿತ ಸಂಪ್ರದಾಯವಾಗಿದೆ.  ಮಾಜಿ ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ, ಮಾಜಿ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಭಾರತೀಯ ಸಾಹಿತ್ಯದ ದಂತಕಥೆಗಳಾದ ಹಜಾರಿ ಪ್ರಸಾದ್ ದ್ವಿವೇದಿ, ಮಹಾದೇವಿ ವರ್ಮಾ, ಹರಿವಂಶ ರಾಯ್ ಬಚ್ಚನ್ ಭಾರತದ ಯಶಸ್ಸಿಗೆ ಕೊಡುಗೆ ನೀಡಿದವರಲ್ಲಿ ಪ್ರಮುಖರು. ಹಿಂದೆ, ಈ ಪ್ರತಿಷ್ಠಿತ ಸ್ಮಾರಕ ಉಪನ್ಯಾಸವನ್ನು ಸಾಂಸ್ಕೃತಿಕ ನೈತಿಕತೆ ಮತ್ತು ಅದರ ಪ್ರಗತಿಯ ಕುರಿತು ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ನೀಡಿದ್ದಾರೆ.

ಉಪನ್ಯಾಸದ ಧ್ವನಿಮುದ್ರಣವನ್ನು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರತಿ ವರ್ಷ ಡಿಸೆಂಬರ್ 3 ರಂದು ಆಲ್ ಇಂಡಿಯಾ ರೇಡಿಯೊದ ಸಂಪೂರ್ಣ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.  ಉಪನ್ಯಾಸ ಸರಣಿಯು ದೇಶದ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಸರವನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸುತ್ತದೆ.  ಈ ಉಪನ್ಯಾಸಗಳ ಮೂಲಕ ದೇಶದ ಸಾಧನೆಗಳು ಮತ್ತು ಭವಿಷ್ಯದ ನಿರೀಕ್ಷೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಾಗುತ್ತದೆ.

*****



(Release ID: 1880590) Visitor Counter : 122