ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಹೃದಯಾಂತರಾಳದಲ್ಲಿ ಪ್ರತಿಯೊಬ್ಬರೂ ಚಲನಚಿತ್ರ ನಿರ್ಮಾಪಕರೇ ಎಂಬುದು ಸಿನೆಮಾ ಬಂಡಿಯ ಕೇಂದ್ರಬಿಂದುವಾಗಿದೆ


ಚಲನಚಿತ್ರವು ಸ್ವತಂತ್ರ ಚಿತ್ರರಂಗಕ್ಕೆ ಹೃತ್ಪೂರ್ವಕ ಗೌರವ ನಮನವಾಗಿದೆ: ರಾಜೇಶ್ ನಿಡಿಮೊರು

Posted On: 28 NOV 2022 5:02PM by PIB Bengaluru

ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಪರಿಕಲ್ಪನೆ ಮತ್ತು ಕಥಾವಸ್ತುವಿನ ಓಘವನ್ನು ಹಿಡಿಯುವುದು - ಆಟೋ ಚಾಲಕನಿಂದ ಸಿನೆಮಾವಾಲಾವರೆಗಿನ ಪಯಣದ ಹೃದಯಸ್ಪರ್ಶಿ ಕಥೆಯುಳ್ಳ ನಿರ್ದೇಶಕ ಪ್ರವೀಣ್ ಕಂಡ್ರೆಗುಲಾ ಅವರ ಹಾಸ್ಯ ಪ್ರಧಾನ 'ಸಿನೆಮಾ ಬಂಡಿ' ನಿಮ್ಮನ್ನು ಸೆಳೆಯುತ್ತದೆ.

ಇಂದು ಇಫ್ಫಿಯ 53ನೇ ಆವೃತ್ತಿಯಲ್ಲಿ ಪಿ.ಐ.ಬಿ. ಆಯೋಜಿಸಿದ್ದ ಇಫ್ಫಿ ಟೇಬಲ್ ಟಾಕ್ಸ್ ಅಧಿವೇಶನದಲ್ಲಿ ಮಾತನಾಡಿದ ಸಿನೆಮಾ ಬಂಡಿ ಚಿತ್ರದ ನಿರ್ಮಾಪಕ ರಾಜೇಶ್ ನಿಡಿಮೊರು 'ಚಿತ್ರಕಥೆ ಬರೆಯುವುದರಿಂದ ಹಿಡಿದು ನಿರ್ಮಾಪಕರಿಗೆ ಕಲ್ಪನೆಯನ್ನು ನೀಡುವವರೆಗೆ, ತರುವಾಯ ನಟರು ಮತ್ತು ತಾಣಗಳನ್ನು ಹುಡುಕುವುದು ಇತ್ಯಾದಿ ಈ ಚಿತ್ರದ ಪ್ರತಿಯೊಂದು ಅಂಶವೂ ಕಚ್ಚಾ ಆಗಿತ್ತು' ಎಂದು ಹೇಳಿದರು.

ವಾಸ್ತವವಾಗಿ ಆಳವಾಗಿ ಬೇರೂರಿರುವ ಹಾಸ್ಯ, ನೆಟ್ ಫ್ಲಿಕ್ಸ್ ನಲ್ಲಿ ಪ್ರಥಮ ಪ್ರದರ್ಶನಗೊಂಡ ಚಿತ್ರವು ಎರಡು ವಾರಗಳಿಂದ ನಂ.1 ಟ್ರೆಂಡಿಂಗ್ ನಲ್ಲಿದೆ. ನಿರ್ಮಾಪಕ ರಾಜೇಶ್ ನಿಡಿಮೊರು ಅವರು ಸರಿಯಾದ ಸ್ಟುಡಿಯೋ ಮತ್ತು ಹೆಸರಾಂತ ನಟರಿಲ್ಲದೆ ಈ ಚಿತ್ರವನ್ನು ಮಾಡಲು ಏಕೈಕ ಕಾರಣ ಅದರ ಅಧಿಕೃತ ಕಥೆ ಮತ್ತು ನಟನೆ ಎಂದು ವಿವರಿಸಿದರು. 'ಈ ಚಿತ್ರವು ಸ್ವತಂತ್ರ ಚಿತ್ರರಂಗಕ್ಕೆ ಹೃತ್ಪೂರ್ವಕ ಗೌರವ ನಮನವಾಗಿದೆ, ಸಾಮಾನ್ಯವಾಗಿ ಹೃದಯಾಂತರಾಳದಿಂದ ನಿರ್ಮಿಸಲಾಗಿದೆ. ನಮ್ಮ ವೃತ್ತಿಜೀವನದ ಸ್ವತಂತ್ರ ಪ್ರಾರಂಭವನ್ನು ಪುನರುಜ್ಜೀವಗೊಳಿಸಲು ಮತ್ತು ಮೊದಲ ಭಾವನೆಯನ್ನು ಮತ್ತೆ ಅನುಭವಿಸಲು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

ಚಿತ್ರವು ನಿಜವಾಗಿಯೂ ಉತ್ತಮ ಮನರಂಜನಾ ಚಲನಚಿತ್ರವಾಗುತ್ತಿತ್ತು ಎಂದು ಪ್ರತಿಪಾದಿಸಿದ ನಿರ್ಮಾಪಕರು, ಆದರೆ ಅದರ ಕಚ್ಚಾತನ ಮತ್ತು ನೈಜತೆಯು ಅದನ್ನು ಅನನ್ಯವಾಗಿಸಿದೆ ಎಂದರು. ರಾಜೇಶ್ ನಿಡಿಮೊರು ಅವರು ಚಲನಚಿತ್ರ ನಿರ್ಮಾಪಕರಿಗೆ ಇತರ ಚಲನಚಿತ್ರ ನಿರ್ಮಾಪಕರೊಂದಿಗೆ ಸಂವಹನ ನಡೆಸಲು ಮತ್ತು ಅವರ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಇಫ್ಫಿ ರೂಪಿಸಿರುವ ವೇದಿಕೆ  ದೇಶದ ಅತ್ಯುತ್ತಮ ವ್ಯವಸ್ಥೆಯಾಗಿದೆ ಎಂದು ಒತ್ತಿ ಹೇಳಿದರು.

ಪ್ರತಿಯೊಬ್ಬರೂ ಹೃದಯಾಂತರಾಳದಲ್ಲಿ ಚಲನಚಿತ್ರ ನಿರ್ಮಾಪಕರಾಗಿರುತ್ತಾರೆ ಮತ್ತು ಅವರ ಇಚ್ಛಾಶಕ್ತಿ ತೋರಿದರೆ, ಯಾರು ಬೇಕಾದರೂ ಚಲನಚಿತ್ರವನ್ನು ಮಾಡಬಹುದು ಎಂಬುದನ್ನು ಚಿತ್ರ ತಯಾರಕರು ನಮಗೆ ತಿಳಿಸಲು ಪ್ರಯತ್ನಿಸುತ್ತಾರೆ. 'ನನ್ನ ತಂದೆ ನನಗೆ ಕ್ಯಾಮೆರಾ ನೀಡಿದಾಗ ನನ್ನ ಬಾಲ್ಯದಿಂದ ವೈಯಕ್ತಿಕ ಸ್ಫೂರ್ತಿಯನ್ನು ಪಡೆಯುವ ಮೂಲಕ, ನಾನು ಅದರೊಂದಿಗೆ ಏನನ್ನಾದರೂ ಮಾಡಲು ಬಯಸಿದೆ. ಆದ್ದರಿಂದ ಈ ಚಿತ್ರ ಮಾಡುವ ಆಲೋಚನೆ ನನ್ನನ್ನು ಸೆಳೆಯಿತು' ಎಂದು ನಿರ್ದೇಶಕ ಪ್ರವೀಣ್ ಕಂಡ್ರೆಗುಲಾ ಹೇಳಿದರು. ಚಿತ್ರದಲ್ಲಿನ ನಟರು ನಟಿಸಲಿಲ್ಲ ಆದರೆ ಅವರು ಆ ಪಾತ್ರಗಳನ್ನು ಜೀವಂತಗೊಳಿಸಿದರು. ನಿಜವಾದ ಅಭಿವ್ಯಕ್ತಿಗಳನ್ನು ಪಡೆಯಲು, ನಾವು ಕ್ಯಾಮೆರಾ ಸೆಟಪ್ ಅನ್ನು ಮರೆಮಾಡಿದ್ದೇವೆ ಎಂದು ಅವರು ಹೇಳಿದರು.

ಪಾತ್ರಗಳ ಕಚ್ಚಾತನ, ಹಳ್ಳಿಗಾಡಿನ ಚಿತ್ರಣವು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ ಮತ್ತು ಚಿತ್ರವನ್ನು ಕರ್ನಾಟಕದ ಮುಳಬಾಗಿಲು ತಾಲ್ಲೂಕಿನ ಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕಥೆ ಬರೆದ ವಸಂತ ಮರಿಂಗಂಟಿ ಮಾತನಾಡಿ, ಗ್ರಾಮವು ಕೇವಲ 20-25 ಮನೆಗಳನ್ನು ಹೊಂದಿದ್ದು ಪ್ರತ್ಯೇಕವಾಗಿದೆ ಮತ್ತು ಸ್ವಚ್ಛವಾಗಿದೆ. ಅದು ನಮಗೆ ಒಂದು ಚಲನಚಿತ್ರದ ಸೆಟ್ ನಂತೆ ಇತ್ತು. ಚಿತ್ರೀಕರಣ ಮಾಡಲು ವಾತಾವರಣವು ನಮಗೆ ತುಂಬಾ ಆಹ್ಲಾದಕರವಾಗಿತ್ತು ಮತ್ತು ಕಥೆಗೆ ಸೂಕ್ತವಾಗಿತ್ತು ಎಂದರು.

ಸಾರಾಂಶ: ಬಡ ಮತ್ತು ಬದುಕಲು ಹೆಣಗಾಡುತ್ತಿದ್ದ ಆಟೋ ಚಾಲಕ ವೀರಬಾಬು ಹಳ್ಳಿಯಲ್ಲಿ ತನ್ನ ಆಟೋದಲ್ಲಿ ಬಿಟ್ಟುಹೋದ ದುಬಾರಿ ಕ್ಯಾಮೆರಾವನ್ನು ನೋಡುತ್ತಾನೆ. ಹಳ್ಳಿಯ ಏಕೈಕ ಮದುವೆಗಳ ಛಾಯಾಗ್ರಾಹಣ ಮಾಡುವ ಗಣಪತಿ, ಸೂಪರ್ ಸ್ಟಾರ್ ಗಳ ಬ್ಲಾಕ್ ಬಸ್ಟರ್ ಚಲನಚಿತ್ರಗಳನ್ನು ತಯಾರಿಸಲು ಬಳಸಲಾಗುವ ದುಬಾರಿ ಕ್ಯಾಮೆರಾ ಇದು ಎಂದು ಅವನಿಗೆ ಹೇಳುತ್ತಾನೆ. ನಂತರ ಸಾಹಸಿಗ ವೀರಬಾಬು 'ಸೂಪರ್ ಸ್ಟಾರ್' ಕ್ಯಾಮೆರಾದೊಂದಿಗೆ ಬ್ಲಾಕ್ ಬಸ್ಟರ್ ಚಿತ್ರ ಮಾಡಲು ನಿರ್ಧರಿಸುತ್ತಾನೆ, ಛಾಯಾಗ್ರಾಹಕನು ನೆರವಿಗೆ ನಿಂತರೆ,  ಇಡೀ ಹಳ್ಳಿ ಚಿತ್ರದಲ್ಲಿ ನಟಿಸುತ್ತದೆ. ಹೀಗಾಗಿ, ಆಟೋವಾಲಾದಿಂದ ಸಿನೆಮಾವಾಲಾ ಆಗುವ ಪಯಣ ಪ್ರಾರಂಭಿಸುತ್ತದೆ.

*****



(Release ID: 1879670) Visitor Counter : 138