ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಐ.ಎಫ್.ಎಫ್.ಐ. 53 ನಲ್ಲಿ ಪ್ರಪ್ರಥಮ ಬಾರಿ ಏರ್ಪಡಿಸಲಾದ ಅತ್ಯಾಧುನಿಕ ಚಲನಚಿತ್ರ ತಂತ್ರಜ್ಞಾನದ ಪ್ರದರ್ಶನವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಉದ್ಘಾಟಿಸಿದರು


ಸಮಕಾಲೀನ ಸಿನಿಮಾ ನಿರ್ಮಾಣಕ್ಕಾಗಿ ತಮ್ಮ ಅತ್ಯಾಧುನಿಕ ಉಪಕರಣಗಳನ್ನು ಪ್ರಮುಖ ಉತ್ಪಾದಕರು ಪ್ರದರ್ಶಿಸಿದರು

Posted On: 21 NOV 2022 6:08PM by PIB Bengaluru

ತಂತ್ರಜ್ಞಾನ ಮತ್ತು ಚಲನಚಿತ್ರ ಕಲೆ/ಸಿನಿಮಾ ಮತ್ತು ಕಲಾ ಸೌಂದರ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪ್ರದರ್ಶಿಸುವ ಚಲನಚಿತ್ರ ತಂತ್ರಜ್ಞಾನ ಪ್ರದರ್ಶನವನ್ನು ಗೋವಾದಲ್ಲಿ ನಡೆದ ಐ.ಎಫ್.ಎಫ್.ಐ. 2022 ನಲ್ಲಿಂದು (ನವೆಂಬರ್ 21, 2022 ರಂದು) ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಉದ್ಘಾಟಿಸಿದರು. ಐ.ಎಫ್.ಎಫ್.ಐ. ನ ಪ್ರದರ್ಶನವನ್ನು ಉದ್ಘಾಟಿಸಿದ ಸಚಿವರು, ನಂತರ ವಿವಿಧ ಮಳಿಗೆಳಿಗೆ ಭೇಟಿ ನೀಡಿದರು ಮತ್ತು ಈ ಅನನ್ಯ ಚೊಚ್ಚಲ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಅತ್ಯಾಧುನಿಕ ಜಾಗತಿಕ ಮಟ್ಟದ ಉಪಕರಣಗಳು ಮತ್ತು ತಂತ್ರಜ್ಞಾನಗಳನ್ನು ವೀಕ್ಷಿಸಿದರು.

   

   

ಗೋವಾದಲ್ಲಿ ನಡೆದ ಚಲನಚಿತ್ರ ತಂತ್ರಜ್ಞಾನ ಪ್ರದರ್ಶನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭೇಟಿ ನೀಡಿದ ಸಂದರ್ಭ.

ತಂತ್ರಜ್ಞಾನ ಮತ್ತು ಚಲನಚಿತ್ರ ಕಲೆ/ಸಿನಿಮಾ ಮತ್ತು ಕಲಾ ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು, ಉಪಕರಣಗಳನ್ನು ಮತ್ತು ತಂತ್ರಜ್ಞಾನವನ್ನು 53 ನೇ ಐ.ಎಫ್.ಎಫ್.ಐ.ನಲ್ಲಿ ಏರ್ಪಡಿಸಲಾದ ಚಲನಚಿತ್ರ ತಂತ್ರಜ್ಞಾನ ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ಚಲನಚಿತ್ರ ಕಲೆ ಮತ್ತು ಕಲಾ ಸೌಂದರ್ಯಶಾಸ್ತ್ರ ಹಾಗೂ ತಂತ್ರಜ್ಞಾನದ ಪರಸ್ಪರ ಸಂಪರ್ಕಗಳ ಮೂಲಕ ಹೊಂದಿಸಿಕೊಳ್ಳುವ ಅಂಶಗಳು ಹೇಗೆ ಒಟ್ಟಿಗೆ ಕಲಾರೂಪದಲ್ಲಿ ಸೇರುತ್ತವೆ ಎಂಬ ಉತ್ಕೃಷ್ಟ ಅನುಭವವನ್ನು ಪ್ರದರ್ಶನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಚಲನಚಿತ್ರ ಪ್ರೇಮಿಗಳು ವೀಕ್ಷಿಸಿ ಅನುಭವ ಪಡೆದರು.

“ಉತ್ಸವದ ಭಾಗವಾಗಿ ಪ್ರದರ್ಶಿಸಲ್ಪಟ್ಟ ಚಲನಚಿತ್ರ ತಂತ್ರಜ್ಞಾನ ಪ್ರದರ್ಶನದ ಮೊದಲ ಆವೃತ್ತಿಯು ಈಗಾಗಲೇ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ತಂದಿದೆ. ಚಲನಚಿತ್ರ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಮಾರುಕಟ್ಟೆಯಲ್ಲಿ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನವನ್ನು ನವೀಕರಿಸಿಕೊಳ್ಳಲು ಮತ್ತು ಕಲಿಯಲು ಇದು ಸುವರ್ಣಾವಕಾಶವಾಗಿದೆ” ಎಂದು ಎಫ್.ಟಿ.ಐ.ಐ. ನಿರ್ದೇಶಕ ಶ್ರೀ ಸಂದೀಪ್  ಶಹಾರೆ ಅವರು ಹೇಳಿದರು.

ಪಣಜಿಯ ಡಿ.ಬಿ. ರಸ್ತೆಯಲ್ಲಿರುವ ಕಲಾ ಅಕಾಡೆಮಿಯ ಪಕ್ಕದಲ್ಲಿರುವ ಫುಟ್ಬಾಲ್ ಮೈದಾನದಲ್ಲಿ ನವೆಂಬರ್ 21-27, 2022 ರ ಅವಧಿಯಲ್ಲಿ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆ ವರೆಗೆ ಪ್ರದರ್ಶನವು ತೆರೆದಿರುತ್ತದೆ.

ಸೋನಿ, ಕ್ಯಾನನ್, ಝೈಸ್, ರೆಡ್, ಲೈಕಾ, ಅಲ್ಟಾಸ್, ಡಿಝೋ, ಅಪ್ಯೂಚರ್ ಲೈಟ್ಸ್, ಹಂಸಾ ಸಿನಿ ಎಕ್ವಿಪ್ಮೆಂಟ್ ಮುಂತಾದ ಸಿನಿಮಾ ಉಪಕರಣಗಳ ಜಾಗತಿಕ ಪ್ರಮುಖ ಉತ್ಪಾದಕರು, ತಯಾರಕರು ಮತ್ತು ಮಾರಾಟಗಾರ ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಸಮಕಾಲೀನ ಸಿನಿಮಾ ನಿರ್ಮಾಣದಲ್ಲಿ ಉದ್ಯಮ ದಿಗ್ಗಜರು - ತಜ್ಞರು ಬಳಸುತ್ತಿರುವ ತಮ್ಮ ಅತ್ಯಾಧುನಿಕ ಉಪಕರಣಗಳನ್ನು ಕೂಡಾ ಅವರಿಲ್ಲಿ ಪ್ರದರ್ಶಿಸುತ್ತಿದ್ದಾರೆ. ಪ್ರದರ್ಶನದಲ್ಲಿನ ಪ್ಯಾಲೆಟ್ ಕ್ಯಾಮೆರಾಗಳು, ಲೆನ್ಸ್ ಗಳು, ಲೈಟ್ ಗಳು, ಗ್ರಿಪ್ ಗಳು, ಕಲರ್ ಗ್ರೇಡಿಂಗ್ ಸಾಫ್ಟ್ ವೇರ್, ಅನಿಮೇಷನ್, ವಿ.ಎಫ್.ಎಕ್ಸ್., ಎ.ಆರ್, ವಿ.ಆರ್, ಆಡಿಯೊ ಮಾನಿಟರ್‌ ಗಳು, ಅಕೌಸ್ಟಿಕ್ಸ್, ರಿಯಲ್ ಟೈಮ್ ಡಬ್ಬಿಂಗ್, ಟಾಕ್-ಬ್ಯಾಕ್ ಗಳು, ಸಂರಕ್ಷಣೆ ಮತ್ತು ಮರುಸ್ಥಾಪನೆ ವ್ಯವಸ್ಥೆ ಇತ್ಯಾದಿಗಳ ತಯಾರಕರಾದ್ಯಂತ ಚಲನಚಿತ್ರ ರಂಗದ ಸರ್ವ ಪ್ರಕಾರಗಳೂ ಪ್ರದರ್ಶನದಲ್ಲಿ ಉಪಲಭ್ಯವಿದೆ. ಸುಮಾರು 7000 ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನ ಮಳಿಗೆಗಳು ಹರಡಿಕೊಂಡಿವೆ ಹಾಗೂ ಪ್ರದರ್ಶನ ಸ್ಥಳದಲ್ಲಿ ಚರ್ಚೆಗಳಿಗೆ, ವಿವಿಧ ಸಮಾವೇಶಗಳಿಗೆ ಮತ್ತು ಕಾರ್ಯಾಗಾರಗಳಿಗಾಗಿ  ಮೀಸಲಾದ ಪ್ರತ್ಯೇಕ ವಿಶೇಷ ಸ್ಥಳಾವಕಾಶಗಳಿವೆ.

******



(Release ID: 1877844) Visitor Counter : 123