ಚುನಾವಣಾ ಆಯೋಗ
ನೂತನ ಚುನಾವಣಾ ಆಯುಕ್ತರಾಗಿ ಶ್ರೀ ಅರುಣ್ ಗೋಯೆಲ್ ಅಧಿಕಾರ ಸ್ವೀಕಾರ
Posted On:
21 NOV 2022 2:48PM by PIB Bengaluru
ಶ್ರೀ ಅರುಣ್ ಗೋಯೆಲ್ ಅವರು ಇಂದು ಭಾರತದ ನೂತನ ಚುನಾವಣಾ ಆಯುಕ್ತರಾಗಿ (ಇ.ಸಿ) ಅಧಿಕಾರ ವಹಿಸಿಕೊಂಡರು.
ಪ್ರಸ್ತುತ ನೇಪಾಳದಲ್ಲಿ ನಡೆಯುತ್ತಿರುವ ನೇಪಾಳ ರಾಷ್ಟ್ರೀಯ ಚುನಾವಣೆಯ ಅಂತರಾಷ್ಟ್ರೀಯ ವೀಕ್ಷಕರಾಗಿರುವ ಭಾರತೀಯ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರು ಚುನಾವಣಾ ಆಯುಕ್ತರಾಗಿ ನೇಮಕರಾದ ಶ್ರೀ ಅರುಣ್ ಗೋಯೆಲ್ ಅವರಿಗೆ ಕರೆ ಮಾಡಿ ಅಭಿನಂದಿಸಿದರು. ಶ್ರೀ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯೋಗಕ್ಕೆ ಶ್ರೀ ರಾಜೀವ್ ಕುಮಾರ್ ಅವರು ಸ್ವಾಗತಿಸಿದರು. “ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಒಳಗೊಂಡ, ಸುಲಭವಾಗಿ ಲಭ್ಯವಾಗುವ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಯೋಗದ ಪ್ರಯತ್ನಗಳನ್ನು ಶ್ರೀ ಗೋಯೆಲ್ ಅವರ ವಿಶಾಲವಾದ ಮತ್ತು ವೈವಿಧ್ಯಮಯ ಆಡಳಿತಾತ್ಮಕ ಅನುಭವವು ಮತ್ತಷ್ಟು ಬಲಪಡಿಸುತ್ತದೆ ಎಂದು ಶ್ರೀ ರಾಜೀವ್ ಕುಮಾರ್ ಅವರು ಈ ಸಂದರ್ಭದಲ್ಲಿ ಹೇಳಿದರು.
ಶ್ರೀ ಅರುಣ್ ಗೋಯೆಲ್, ಭಾ.ಆ.ಸೇ (ಪಂಜಾಬ್ ಕೇಡರ್ - 1985 ಬ್ಯಾಚ್)
* ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಚರ್ಚಿಲ್ ಕಾಲೇಜಿನಿಂದ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಡಿಸ್ಟಿಂಕ್ಷನ್ ಜೊತೆಗೆ ಸ್ನಾತಕೋತ್ತರ ಪದವಿ
* ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂ.ಎಸ್ಸಿ. )
ಭಾರತ ಸರ್ಕಾರದ ಸೇವೆಯಲ್ಲಿ ನಿರ್ವಹಿಸಿದ ವಿವಿಧ ಹುದ್ದೆಗಳು ಅವಧಿ
ಕಾರ್ಯದರ್ಶಿ, ಬೃಹತ್ ಕೈಗಾರಿಕೆಗಳ ಸಚಿವಾಲಯ 2020 – 2022
(ಭಾರತದಲ್ಲಿ ಇ-ವಾಹನ ವ್ಯವಸ್ಥೆ ಯಶಸ್ಸಿನತ್ತ ಸಾಗಲು ಪ್ರಯತ್ನ ಮಾಡಿದರು)
ಕಾರ್ಯದರ್ಶಿ, ಸಂಸ್ಕೃತಿ ಸಚಿವಾಲಯ 2018 - 2019
ಎ.ಎಸ್. & ಎಫ್.ಎ., ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2017
ಉಪಾಧ್ಯಕ್ಷರು, ದೆಹಲಿ ಅಭಿವೃದ್ಧಿ ಪ್ರಾಧಿಕಾರ 2015 - 2016
ಜಂಟಿ ಕಾರ್ಯದರ್ಶಿ, ಹಣಕಾಸು ಸಚಿವಾಲಯ, ಕಂದಾಯ ಇಲಾಖೆ 2012 - 2014
ಜಂಟಿ ಕಾರ್ಯದರ್ಶಿ, ನಗರಾಭಿವೃದ್ಧಿ ಸಚಿವಾಲಯ 2011
ಪಂಜಾಬ್ ಸರ್ಕಾರದಲ್ಲಿ ನಿರ್ವಹಿಸಿದ ವಿವಿಧ ಹುದ್ದೆಗಳು ಅವಧಿ
ಪ್ರಧಾನ ಕಾರ್ಯದರ್ಶಿ (ವಿದ್ಯುತ್ ಮತ್ತು ನೀರಾವರಿ, ಪಂಜಾಬ್ ಸರ್ಕಾರ) 2010
ಪ್ರಧಾನ ಕಾರ್ಯದರ್ಶಿ (ವಸತಿ ಮತ್ತು ನಗರಾಭಿವೃದ್ಧಿ ಪಂಜಾಬ್ ಸರ್ಕಾರ) 2007 - 2009
ಕಾರ್ಯದರ್ಶಿ, (ಖರ್ಚು ಇಲಾಖೆ, ಪಂಜಾಬ್ ಸರ್ಕಾರ) 2006
ವ್ಯವಸ್ಥಾಪಕ ನಿರ್ದೇಶಕರು, ಪಂಜಾಬ್ ಇಂಡಸ್ಟ್ರೀಸ್ & ರಫ್ತು ನಿಗಮ (ಪಂಜಾಬ್ ಸರ್ಕಾರ) 2003 - 2005
ವ್ಯವಸ್ಥಾಪಕ ನಿರ್ದೇಶಕರು, ಪಂಜಾಬ್ ವೇರ್ ಹೌಸಿಂಗ್ ಕಾರ್ಪೊರೇಶನ್ , (ಪಂಜಾಬ್ ಸರ್ಕಾರ) 2001 - 2002
ಜಿಲ್ಲಾ ಚುನಾವಣಾ ಅಧಿಕಾರಿ/ಜಿಲ್ಲಾಧಿಕಾರಿ, ಲುಧಿಯಾನ (ಪಂಜಾಬ್ ) 1995 - 2000
ವ್ಯವಸ್ಥಾಪಕ ನಿರ್ದೇಶಕರು, ಚಂಡೀಗಢ ಇಂಡಸ್ಟ್ರಿಯಲ್ & ಟೂರಿಸಂ ಅಭಿವೃದ್ಧಿ ನಿಗಮ (ಪಂಜಾಬ್ ಸರ್ಕಾರ) 1994
ಜಿಲ್ಲಾ ಚುನಾವಣಾ ಅಧಿಕಾರಿ/ಜಿಲ್ಲಾಧಿಕಾರಿ, ಭಟಿಂಡಾ (ಪಂಜಾಬ್ ) 1993
*****
(Release ID: 1877719)
Visitor Counter : 212