ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಭಾರತವು ಸಿನಿಮಾ ಚಿತ್ರೀಕರಣ, ಸಹ-ನಿರ್ಮಾಣ, ಪೋಸ್ಟ್ ಪ್ರೊಡಕ್ಷನ್, ಕಂಟೆಂಟ್ ಮತ್ತು ಚಿತ್ರರಂಗದಲ್ಲಿ ತಂತ್ರಜ್ಞಾನ ಪಾಲುದಾರರಿಗೆ ಪ್ರಧಾನ ಕೇಂದ್ರವಾಗಲಿದೆ: ಅನುರಾಗ್ ಸಿಂಗ್ ಠಾಕೂರ್


ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ್ತು ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ʻಐಎಫ್ಎಫ್ಐ 53ʼರ ಆರಂಭಿಕ ಚಲನಚಿತ್ರ ʻಅಲ್ಮಾ ಮತ್ತು ಆಸ್ಕರ್ʼನ ಜಾಗತಿಕ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು

#IFFIWood, 20 ನವೆಂಬರ್ 2022

"ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ಐ) ವಿಶ್ವದಾದ್ಯಂತದ ಚಲನಚಿತ್ರ ನಿರ್ದೇಶಕರಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ವೇದಿಕೆಯಾಗಿದೆ. ಸಹ-ನಿರ್ಮಾಣ, ಪೋಸ್ಟ್-ಪ್ರೊಡಕ್ಷನ್, ಚಲನಚಿತ್ರ ಚಿತ್ರೀಕರಣ, ಕಂಟೆಂಟ್ ಮತ್ತು ತಂತ್ರಜ್ಞಾನ ಪಾಲುದಾರರಿಗೆ ಭಾರತವು ಪ್ರಧಾನ ಕೇಂದ್ರವಾಗಲಿದೆ ಎಂದು ನನಗೆ ಖಾತ್ರಿಯಿದೆ," ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು ಗೋವಾದ ʻಐಎಫ್ಎಫ್ಐ 53ʼ ವೇದಿಕೆಯಲ್ಲಿ ಹೇಳಿದರು.

ʻಐಐಎಫ್ಐ 53ʼ ಉದ್ಘಾಟನೆ ಅಂಗವಾಗಿ ನಡೆದ ʻರೆಡ್ ಕಾರ್ಪೆಟ್ʼ ಕಾರ್ಯಕ್ರಮ ಹಾಗೂ ಆಸ್ಟ್ರಿಯಾದ ನಿರ್ದೇಶಕ ಡಯಟರ್ ಬರ್ನರ್ ಅವರ ʻಅಲ್ಮಾ ಮತ್ತು ಆಸ್ಕರ್ʼ ಚಿತ್ರದ ಜಾಗತಿಕ ಪ್ರೀಮಿಯರ್ನ ನೇಪಥ್ಯದಲ್ಲಿ ಸಚಿವರು ಮಾತನಾಡಿದರು. ವರ್ಷದಿಂದ ವರ್ಷಕ್ಕೆ ಚಲನಚಿತ್ರೋತ್ಸವವು ದೊಡ್ಡದಾಗುತ್ತಿದೆ. ಈ ವರ್ಷ ಅನೇಕ ಪ್ರಥಮ ಪ್ರದರ್ಶನಗಳಿವೆ. ಈ ವರ್ಷ ʻಐಎಫ್ಎಫ್ಐʼನಲ್ಲಿ 79ಕ್ಕೂ ಹೆಚ್ಚು ದೇಶಗಳ 280 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ನಾವು ಇಲ್ಲಿಯವರೆಗೆ ಏನು ಸಾಧಿಸಿದ್ದೇವೆ ಎಂಬುದರ ಬಗ್ಗೆ ಈ ಕಾರ್ಯಕ್ರಮವು ದೊಡ್ಡ ಮಟ್ಟದಲ್ಲಿ ಮಾತನಾಡುತ್ತದೆ ಎಂದು ಹೇಳಿದರು.

ʻಐಎಫ್ಎಫ್ಐʼನಲ್ಲಿ ಉದ್ಘಾಟನಾ ಸಮಾರಂಭಕ್ಕೆ ಮುಂಚಿತವಾಗಿ ಇದೇ ಮೊದಲ ಬಾರಿಗೆ ಆರಂಭಿಕ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು. ಪ್ರತಿ ವರ್ಷವೂ ನಾವು - ʻ75 ಯಂಗ್ ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋʼ ಉಪಕ್ರಮದಿಂದ ಹಿಡಿದು ಜಾಗತಿಕ ಪ್ರೀಮಿಯರ್ಗಳವರೆಗೆ ಪ್ರದರ್ಶನಗಳವರೆಗೆ ವಿಭಿನ್ನವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಂತರರಾಷ್ಟ್ರೀಯ ಚಲನಚಿತ್ರ ವೃತ್ತಿಪರರಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಸಚಿವರು ಒತ್ತಿ ಹೇಳಿದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆಯ ಸಹಾಯಕ ಸಚಿವ ಡಾ.ಎಲ್.ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಮತ್ತು ʻಅಲ್ಮಾ ಮತ್ತು ಆಸ್ಕರ್ʼ ಚಿತ್ರದ ತಾರಾಗಣ ಹಾಗೂ ಸಿಬ್ಬಂದಿ ಇಂದು  ಗೋವಾದ ಪಣಜಿಯ ಐನಾಕ್ಸ್ನಲ್ಲಿ ನಡೆದ ಚಲನಚಿತ್ರದ ಭವ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದರು. 

ʻಐಎಫ್ಎಫ್ಐʼ ಸುತ್ತಲೂ ಸೃಷ್ಟಿಸಿದ ಆಹ್ಲಾದಕರ ಮತ್ತು ಹಬ್ಬದ ಮನಸ್ಥಿತಿಯ ಬಗ್ಗೆ ಮಾತನಾಡಿದ ಡಾ. ಎಲ್. ಮುರುಗನ್ ಅವರು, ʻಐಎಫ್ಎಫ್ಐʼ ಇಡೀ ಜಗತ್ತನ್ನು ಸಂಪರ್ಕಿಸುತ್ತಿದೆ ಎಂದು ಹೇಳಿದರು. ಈ ಉತ್ಸವದಲ್ಲಿ ವಿಶ್ವದಾದ್ಯಂತದ ಚಲನಚಿತ್ರ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ʻಐಎಫ್ಎಫ್ಐʼ ವಿಶ್ವದಾದ್ಯಂತ ಕೊಂಡೊಯ್ಯುತ್ತಿದೆ ಎಂದು ಅವರು ಹೇಳಿದರು.

ʻಅಲ್ಮಾ ಮತ್ತು ಆಸ್ಕರ್ʼ ನಿರ್ದೇಶಕ ಡೈಟರ್ ಬರ್ನರ್ ಅವರು ಚಿತ್ರದ ಉತ್ಕಟ ಪ್ರೇಮಕಥೆಯ ಬಗ್ಗೆ ಒಳನೋಟವನ್ನು ನೀಡಿದರು. ಈ ಚಿತ್ರವು ಸುಂದರ, ಧೈರ್ಯಶಾಲಿ ಹಾಗೂ ಸಾಮಾಜಿಕ ಸಂಪ್ರದಾಯಗಳಿಗೆ ಸವಾಲೊಡ್ಡಿದ ಪ್ರಸಿದ್ಧ ವಿಯೆನ್ನಾದ ಮಹಿಳೆ ಅಲ್ಮಾ ಮಾಹ್ಲರ್ ಮತ್ತು ಪ್ರಯೋಗಶೀಲ ನಾಟಕಕಾರ, ಅಭಿವ್ಯಕ್ತಿವಾದಿ ವರ್ಣಚಿತ್ರಕಾರನಾಗಿದ್ದ ಆಸ್ಕರ್ ಕೊಕೊಶ್ಕಾ ಕುರಿತದ್ದಾಗಿದೆ ಎಂದು ತಿಳಿಸಿದರು. ಅವರಿಬ್ಬರ ನಡುವಿನ ಪ್ರೇಮ ವ್ಯವಹಾರವು ಕೊನೆಗೆ ಅವರನ್ನು ಸ್ವಯಂ ವಿನಾಶದ ಅಂಚಿಗೆ ಕೊಂಡೊಯ್ಯಿತಾದರೂ ಕಲೆಯ ಇತಿಹಾಸದಲ್ಲಿ ಅವರು ಕುರುಹುಗಳನ್ನು ಬಿಟ್ಟುಹೋದರು ಎಂದು ನಿರ್ದೇಶಕರು ಮಾಹಿತಿ ನೀಡಿದರು.

ʻಐಎಫ್ಎಫ್ಐ 53ʼನಲ್ಲಿ ಆರಂಭಿಕ ಚಿತ್ರ ʻಅಲ್ಮಾ ಮತ್ತು ಆಸ್ಕರ್ ʼಗಾಗಿ ʻರೆಡ್ ಕಾರ್ಪೆಟ್ʼ ಕಾರ್ಯಕ್ರಮದ ದೃಶ್ಯಗಳು

 

ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಸಹಾಯಕ ಸಚಿವ ಡಾ.ಎಲ್. ಮುರುಗನ್ ಅವರು ʻಐಎಫ್ಎಫ್ಐʼ 53ರ ಆರಂಭಿಕ ಚಿತ್ರ 'ಅಲ್ಮಾ ಮತ್ತು ಆಸ್ಕರ್'ಗಾಗಿ ʻರೆಡ್ ಕಾರ್ಪೆಟ್ʼಗೆ ಆಗಮಿಸುತ್ತಿರುವುದು.

'ಅಲ್ಮಾ ಮತ್ತು ಆಸ್ಕರ್' ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ತಾರಾಗಣದೊಂದಿಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಕೇಂದ್ರ ರಾಜ್ಯ ಸಚಿವ ಡಾ.ಎಲ್. ಮುರುಗನ್ .

ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಆಸ್ಟ್ರಿಯಾದ ಚಲನಚಿತ್ರ 'ಅಲ್ಮಾ ಮತ್ತು ಆಸ್ಕರ್' ನಿರ್ದೇಶಕ ಡೈಟರ್ ಬರ್ನರ್ ಅವರನ್ನು ಸನ್ಮಾನಿಸಿದರು.

ʻಐಎಫ್ಎಫ್ಐʼ53ರಲ್ಲಿ ಆರಂಭಿಕ ಚಲನಚಿತ್ರ 'ಅಲ್ಮಾ ಮತ್ತು ಆಸ್ಕರ್' ಪ್ರದರ್ಶನ ಹಾಗೂ ಚಲನಚಿತ್ರದ  ಜಾಗತಿಕ ಪ್ರೀಮಿಯರ್ನಲ್ಲಿ ಚಿತ್ರತಂಡ ಮತ್ತು ಗಣ್ಯರು.

*****

iffi reel

(Release ID: 1877596) Visitor Counter : 163