ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

​​​​​​​ನಾಳೆ- ನವೆಂಬರ್ 19 ರಂದು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ಒಂದು ತಿಂಗಳ ಅವಧಿಯ ‘ಕಾಶಿ-ತಮಿಳು ಸಂಗಮಮ್‌"  ಅನ್ನು ಉದ್ಘಾಟಿಸಲಿದ್ದಾರೆ.


​​​​​​​ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಪ್ರಧಾನಮಂತ್ರಿಯವರ ಕಾಶಿ ಭೇಟಿಯ ಮುನ್ನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

Posted On: 18 NOV 2022 4:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ‘ಕಾಶಿ- ತಮಿಳು ಸಂಗಮಮ್’ ಎಂಬ ತಿಂಗಳ ಅವಧಿಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.  'ಕಾಶಿ ತಮಿಳು ಸಂಗಮಮ್ ' ಅನ್ನು ವಾರಾಣಸಿಯಲ್ಲಿ (ಕಾಶಿ) ನವೆಂಬರ್ 17 ರಿಂದ ಡಿಸೆಂಬರ್ 16, 2022 ರವರೆಗೆ ಆಯೋಜಿಸಲಾಗಿದ್ದು, ಇದು ದೇಶದ ಪ್ರಮುಖ ಐತಿಹಾಸಿಕ ಪ್ರದೇಶಗಳಾದ ತಮಿಳುನಾಡು ಮತ್ತು ಕಾಶಿ ಈ ಎರಡರ ನಡುವಿನ ಹಳೆಯ ಕೊಂಡಿಗಳನ್ನು ಮರುಶೋಧಿಸಿ ಜೋಡಿಸುವ, ಎರಡರ ಸಾಂಪ್ರದಾಯಿಕ ಸಂಸ್ಕೃತಿಯನ್ನು ಆಚರಿಸುವ ಪರಂಪರೆಯನ್ನು ಕಲಿಯುವ ಉದ್ದೇಶದಿಂದ ಆಯೋಜಿಸಲಾಗಿದೆ.

https://static.pib.gov.in/WriteReadData/userfiles/image/image001ERMW.jpg

ಪ್ರಧಾನ ಮಂತ್ರಿಗಳು ಕಾಶಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ವಾರಾಣಸಿಯಲ್ಲಿ ಪೂರ್ವಭಾವಿ ವ್ಯವಸ್ಥೆಗಳ ಪರಿಶೀಲನೆಗಾಗಿ ಕಾರ್ಯಕ್ರಮದ ಸಿದ್ಧತೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.  ಈ ಹಿಂದೆ ಅವರು ಭಾರತ ಸರ್ಕಾರದ ರೈಲ್ವೇ ಸಚಿವರು,  ತಮಿಳುನಾಡು ರಾಜ್ಯಪಾಲರು, ಯುಪಿ ಸರ್ಕಾರದ ಅಧಿಕಾರಿಗಳು ಮತ್ತು ಇತರ ಪ್ರಮುಖ ಪಾಲುದಾರರೊಂದಿಗೆ ಕಾಶಿ-ತಮಿಳು ಸಂಗಮಮ್‌ನ  ಆಯೋಜನೆಯ‌ ಯಶಸ್ವಿ ಸಂಘಟನೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸಿದರು.

 ಸಂಸ್ಕೃತಿ, ಜವಳಿ, ರೈಲ್ವೇ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, I&B (ಐ ಎಂಡ್ ಬಿ) ಇತ್ಯಾದಿ ಮತ್ತು ಯುಪಿ ಸರ್ಕಾರದ ಇತರ ಸಚಿವಾಲಯಗಳ ಸಹಯೋಗದೊಂದಿಗೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಕಾಶಿ-ತಮಿಳು ಸಂಗಮಮ್ ಅನ್ನು ಆಯೋಜಿಸುತ್ತಿದೆ. ಈ ಎರಡೂ ಪ್ರದೇಶಗಳ ವಿದ್ವಾಂಸರು, ವಿದ್ಯಾರ್ಥಿಗಳು, ತತ್ವಜ್ಞಾನಿಗಳು, ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರೊಂದಿಗೆ  ಇತರ ಹಂತಗಳ ಜನರು ಒಟ್ಟಿಗೆ ಸೇರಲು, ಅವರ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಪರಸ್ಪರ ವಿನಿಮಯಮಾಡಿಕೊಳ್ಳಲು ಮತ್ತು ಪರಸ್ಪರರ ಅನುಭವದಿಂದ ಕಲಿಯಲೋಸುಗ ಈ ಕಾರ್ಯಕ್ರಮವು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.  ಈ ಪ್ರಯತ್ನವು ಭಾರತೀಯ ಜ್ಞಾನ ವ್ಯವಸ್ಥೆಗಳ ಸಂಪತ್ತನ್ನು ಆಧುನಿಕ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು NEP 2020 ರ ಮಹತ್ವದೊಂದಿಗೆ ಸಿಂಕ್ ಆಗಿದೆ.  IIT (ಐಐಟಿ)ಮದ್ರಾಸ್ ಮತ್ತು BHU (ಬಿಎಚ್‌ಯು)ಕಾರ್ಯಕ್ರಮದ ಎರಡು ಅನುಷ್ಠಾನ ಸಂಸ್ಥೆಗಳಾಗಿವೆ.

 ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತ್ಯ, ಸಂಸ್ಕೃತಿ, ಕುಶಲಕರ್ಮಿಗಳು, ಆಧ್ಯಾತ್ಮಿಕ, ಪರಂಪರೆ, ವ್ಯಾಪಾರ, ಉದ್ಯಮಿಗಳು, ವೃತ್ತಿಪರರು ಮುಂತಾದ 12 ವಿಭಾಗಗಳ ಅಡಿಯಲ್ಲಿ ತಮಿಳುನಾಡಿನ 2500 ಕ್ಕೂ ಹೆಚ್ಚಿನ ಮಂದಿ ವಾರಣಾಸಿಗೆ 8 ದಿನಗಳ ಈ ಪ್ರವಾಸದಲ್ಲಿ ಭೇಟಿ ನೀಡಲಿದ್ದಾರೆ.  ಅವರು ಸೆಮಿನಾರ್‌ಗಳು, ಲೆಕ್ ಡೆಮ್‌ಗಳು, ಸೈಟ್ ಭೇಟಿಗಳು ಇತ್ಯಾದಿಗಳಲ್ಲಿ ಒಂದೇ ರೀತಿಯ ವ್ಯಾಪಾರ, ವೃತ್ತಿ ಮತ್ತು ಆಸಕ್ತಿಯ ಸ್ಥಳೀಯ ಜನರೊಂದಿಗೆ ಸಂವಹನ ನಡೆಸಲು 12 ವರ್ಗಗಳಲ್ಲಿ ಪ್ರತಿಯೊಂದಕ್ಕೂ ವಿಶೇಷ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗವಹಿಸುತ್ತಿದ್ದಾರೆ .  ಪ್ರವಾಸಿಗರು ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಸೇರಿದಂತೆ ವಾರಾಣಸಿ ಮತ್ತು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.  BHU (ಬಿಎಚ್‌ಯು) ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.  ಅವರು ಎರಡು ಪ್ರದೇಶಗಳಲ್ಲಿನ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ತುಲನಾತ್ಮಕ ಅಭ್ಯಾಸಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ತಮ್ಮತಮ್ಮ ಕಲಿಕೆಗಳನ್ನು ದಾಖಲಿಸಲಿದ್ದಾರೆ.   200 ವಿದ್ಯಾರ್ಥಿಗಳನ್ನು ಒಳಗೊಂಡ ಮೊದಲ ತಂಡದ ಪ್ರಯಾಣಿಕ ಪ್ರತಿನಿಧಿಗಳು ನವೆಂಬರ್ 17 ರಂದು ಚೆನ್ನೈನಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿದ್ದು, ಅವರ ರೈಲನ್ನು ತಮಿಳುನಾಡು ರಾಜ್ಯಪಾಲ ಶ್ರೀ ಆರ್.ಎನ್ ರವಿ ಅವರು ಚೆನ್ನೈ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

 ಇದರೊಂದಿಗೆ ಎರಡು ಪ್ರದೇಶಗಳ ಕೈಮಗ್ಗ, ಕರಕುಶಲ ವಸ್ತುಗಳು, ODOP (ಓಡಿಓಪಿ)ಉತ್ಪನ್ನಗಳು, ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಪಾಕಪದ್ಧತಿ, ಕಲಾ ಪ್ರಕಾರಗಳು, ಇತಿಹಾಸ, ಪ್ರವಾಸಿ ಸ್ಥಳಗಳು ಇತ್ಯಾದಿಗಳ ಒಂದು ತಿಂಗಳ ಪ್ರದರ್ಶನವನ್ನು ವಾರಾಣಸಿಯಲ್ಲಿ ಸ್ಥಳೀಯ ಜನರ ಅನುಕೂಲಕ್ಕಾಗಿ ಇರಿಸಲಾಗುತ್ತಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ತಮಿಳುನಾಡಿನಿಂದ ಬರುವ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.  ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಗಾಯಕ ಇಳಯರಾಜ ಅವರ ಗಾಯನ ಮತ್ತು ಪುಸ್ತಕ ಬಿಡುಗಡೆಯಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.

 *****



(Release ID: 1877113) Visitor Counter : 118