ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಗೋವಾದಲ್ಲಿ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಫಲಕ ಪ್ರಸ್ತುತಿ: ಚಲನಚಿತ್ರೋತ್ಸವದ ಅಧಿಕೃತ ಪೂರ್ಣಪಟ್ಟಿ 

"ಎಲ್ಲರೂ ಓದುವ ಪುಸ್ತಕಗಳನ್ನೇ  ನೀವೂ ಓದಿದರೆ, ಬೇರೆಯವರು ಏನು ಯೋಚಿಸುತ್ತಾರೆಯೋ ಅದನ್ನು ಮಾತ್ರ ನೀವೂ ಯೋಚಿಸಲು ಸಾಧ್ಯ" ಎಂದು ಜಪಾನಿನ ಬರಹಗಾರ ಹರುಕಿ ಮುರಕಾಮಿ ಹೇಳುತ್ತಾರೆ.

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಈ ಸಂದರ್ಭದಲ್ಲಿ ಸಿದ್ಧವಾಗಿರುವ ನಾವು ಎಲ್ಲರೂ ನೋಡುತ್ತಿರುವ ಚಲನಚಿತ್ರಗಳನ್ನು ಮಾತ್ರ ವೀಕ್ಷಿಸಿದರೆ, ಎಲ್ಲರೂ ಏನು  ಭಾವಿಸುವರೋ ಅದನ್ನು ಮಾತ್ರ ನಾವು ಕೂಡ ಭಾವಿಸಬಹುದು, ಬದುಕಬಹುದು ಮತ್ತು ಅನುಭವಿಸಬಹುದು ಎಂದು ನಮಗೆ ನಾವೇ ಹೇಳಿಕೊಳ್ಳುವ ಸಮಯ ಬಂದಿರಬಹುದಲ್ಲವೇ?

ಹೌದು, ಚಲನಚಿತ್ರೋತ್ಸವಗಳನ್ನು ವಿಶೇಷವಾಗಿಸುವ ಒಂದು ವೈಶಿಷ್ಟ್ಯವೆಂದರೆ ಚಲನಚಿತ್ರಗಳು ಕಲಾತ್ಮಕ ತೇಜಸ್ಸಿನ ಸಾರ ಸಂಗ್ರಹ. ಈಗ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 53 ನೇ ಆವೃತ್ತಿಯ ಮುಖ್ಯ ಗುರಿ ಭಾರತ ಮತ್ತು ವಿದೇಶಗಳ ಪ್ರೇಕ್ಷಕರಿಗೆ ಅತ್ಯುತ್ತಮ ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನಿಮಾಗಳನ್ನು ತೋರಿಸುವುದಾಗಿದೆ. 

ಆದ್ದರಿಂದ, ಚಲನಚಿತ್ರೋತ್ಸವ ಆಚರಣೆ ಸಂದರ್ಭದಲ್ಲಿ, ನಾವು ನಿಮಗೆ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಭಾರತೀಯ ಮತ್ತು ಅಂತರಾಷ್ಟ್ರೀಯ ಸಿನಿಮಾಗಳ ಪಟ್ಟಿಗಳನ್ನು ಒಮ್ಮೆ ನೋಡಿ.

53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಭಾರತೀಯ ಸಿನಿಮಾ ಪಟ್ಟಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ 

IFFI 53ರಲ್ಲಿ ಪ್ರದರ್ಶನಗೊಳ್ಳುವ ಅಂತಾರಾಷ್ಟ್ರೀಯ ಸಿನಿಮಾಗಳ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.

ಚಿತ್ರೋತ್ಸವಕ್ಕೆ ಬರುತ್ತಿರುವವರಿಗೆ ಈ ಪಟ್ಟಿ ಸಹಾಯವಾಗಬಹುದು. 

ನಿಮಗೆ ಉತ್ಸವದಲ್ಲಿ ಈ ಬಾರಿ ವೈಯಕ್ತಿಕವಾಗಿ ಭಾಗಿಯಾಗಲು ಸಾಧ್ಯವಾಗದಿದ್ದರೂ, ಮುಂದಿನ ದಿನಗಳಲ್ಲಿ ಇಂತಹ ಸದಭಿರುಚಿಯ ಚಿತ್ರಗಳನ್ನು ನೋಡಲು  ನಿಮ್ಮ ಮನಸ್ಸು, ಹೃದಯ,  ತುಡಿಯಬಹುದು ಎಂದು ಭಾವಿಸುತ್ತೇವೆ. 

*****

iffi reel

(Release ID: 1876737) Visitor Counter : 200