ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ಟ್ಯಾಂಗೋಗೆ ಸಿದ್ಧ!


ಅಂತಾರಾಷ್ಟ್ರೀಯ ಚಲನಚಿತ್ರ ಹಬ್ಬದ 53ನೇ ಆವೃತ್ತಿಯಲ್ಲಿ ಏಳು ಅರ್ಜೆಂಟೀನಿಯನ್ ಚಲನಚಿತ್ರಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿವೆ.

ಅರ್ಜೆಂಟೀನಾ‌ ದೇಶದ ವ್ಯಕ್ತಿತ್ವವು ಟ್ಯಾಂಗೋ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ತೋರಿಸಿಕೊಳ್ಳುತ್ತದೆ‌.ಅಲ್ಲದೇ ಅಲ್ಲಿನವರ ಪ್ರಕಾರ ಅರ್ಜೆಂಟೀನಾ ದೇಶವು ಹುರುಪು ಮತ್ತು ಉತ್ಸಾಹದಿಂದ ತುಂಬಿದೆ. ಟ್ಯಾಂಗೋಗೆ ಮಾತ್ರವಲ್ಲದೆ ಚಲನಚಿತ್ರ ತಯಾರಿಕೆಯ ಅತ್ಯಂತ ದೃಢವಾದ ಮತ್ತು ಪ್ರಭಾವಶಾಲಿ ಇತಿಹಾಸಕ್ಕೂ ಹೆಸರುವಾಸಿಯಾದ ಈ ದೇಶ ಕಲೆ ಮತ್ತು ಮನರಂಜನೆಯ  ಕೇಂದ್ರವಾಗಿದೆ ಎಂಬುದರಲ್ಲೇನೂ ಆಶ್ಚರ್ಯವೇನಿಲ್ಲ.  ಪ್ಯಾರಿಸ್‌ನಲ್ಲಿ ಪ್ರಾರಂಭವಾದ ಒಂದು ವರ್ಷದ ನಂತರ 1896 ರಲ್ಲಿ ಲುಮಿಯೆರ್‌ನ ಸಿನೆಮ್ಯಾಟೋಗ್ರಾಫ್ ಅನ್ನು ಆಮದು ಮಾಡಿಕೊಂಡ ಮೊದಲ ದೇಶಗಳಲ್ಲಿ ಅರ್ಜೆಂಟೀನಾ ದೇಶ ಒಂದಾಗಿದೆ.  ವಿಶ್ವದ ಮೊದಲ ಅನಿಮೇಟೆಡ್ ಚಲನಚಿತ್ರ, ಎಲ್ ಅಪೋಸ್ಟೋಲ್ ಅರ್ಜೆಂಟೀನಾದಲ್ಲಿ ಕೂಡ ನಿರ್ಮಿಸಲಾಯಿತು.  ಹೊಸ ಅರ್ಜೆಂಟೀನಾದ ಸಿನಿಮಾವನ್ನು ಲುಕ್ರೆಸಿಯಾ ಮಾರ್ಟೆಲ್, ಮಾರ್ಟಿನ್ ರೆಜ್ಟ್‌ಮ್ಯಾನ್ ಮತ್ತು ಪ್ಯಾಬ್ಲೊ ಟ್ರೆಪೆರೊ ಮುಂತಾದವರು ಮುನ್ನಡೆಸಿದ್ದಾರೆ.  ಇಂತಹ ಶ್ರೀಮಂತ ಸಿನಿಮಾ ಸಂಪ್ರದಾಯವನ್ನು ಹೊಂದಿರುವ ಈ ದೇಶದಿಂದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಫ್ ಇಂಡಿಯಾ ನಿಮಗೆ 7 ಆಯ್ಕೆ ಮಾಡಿದ  ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತಿದೆ.

ರೋಡ್ರಿಗೋ ಗೆರೆರೊ ನಿರ್ದೇಶನದ 2021 ರ ಚಲನಚಿತ್ರ 'ಸೆವೆನ್ ಡಾಗ್ಸ್' ಅಂತರಾಷ್ಟ್ರೀಯ ಸ್ಪರ್ಧಾ ವಿಭಾಗದ ಅಡಿಯಲ್ಲಿ ಅಸ್ಕರ್ ಗೋಲ್ಡನ್ ಪೀಕಾಕ್‌ಗೆ ನಾಮನಿರ್ದೇಶನಗೊಂಡಿದೆ.  ಈ ಚಿತ್ರವು ಅರ್ಜೆಂಟೀನಾದ ನಿರ್ದೇಶಕರ ನಾಲ್ಕನೇ ವೈಶಿಷ್ಟ್ಯವಾಗಿದೆ.  ಕೇವಲ 80 ನಿಮಿಷಗಳ ರನ್‌ಟೈಮ್‌ನೊಂದಿಗೆ, ಚಲನಚಿತ್ರವು ಮನುಷ್ಯ ಮತ್ತು ಅವನ ಸಾಕುಪ್ರಾಣಿಗಳ ನಡುವಿನ ಬಾಂಧವ್ಯವನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆ.

Still from ‘Seven Dogs’

ಆಂಡ್ರಿಯಾ ಬ್ರಾಗಾ ನಿರ್ದೇಶನದ 'ಸೆಲ್ಫ್ ಡಿಫೆನ್ಸ್' ಚಿತ್ರವು ನಿರ್ದೇಶಕರ ಅತ್ಯುತ್ತಮ ಚೊಚ್ಚಲ ವೈಶಿಷ್ಟ್ಯಕ್ಕಾಗಿ ಪ್ರಶಸ್ತಿಯ ಮುಂಚೂಣಿಯಲ್ಲಿದೆ. ಈ  ಚಲನಚಿತ್ರವು ತನ್ನ ಹಿಂದಿನ  ಸರಣಿ   ಕೊಲೆಗಳನ್ನು ಭೇದಿಸುವ ಪ್ರಯತ್ನ ಮತ್ತು ಸಮಸ್ಯೆಗಳನ್ನು ಪರಿಹರಿಸಲು ತನ್ನ ಊರಿಗೆ ಹಿಂದಿರುಗಿದ ಪ್ರಾಸಿಕ್ಯೂಟರ್ ಕಥೆಯನ್ನಾಧರಿಸಿದೆ.

Still from ‘Self Defence’

ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶನಗೊಳ್ಳುವ ಅರ್ಜೆಂಟೀನಾ ಮೂಲದ ಇತರ ಚಲನಚಿತ್ರಗಳೆಂದರೆ ಮಿಸ್ ವೈಬೋರ್ಗ್ (2022), ದಿ ಬಾರ್ಡರ್ಸ್ ಆಫ್ ಟೈಮ್ (2021), ದಿ ಸಬ್‌ಸ್ಟಿಟ್ಯೂಟ್ (2022), ರೋಬ್ ಆಫ್ ಜೆಮ್ಸ್ (2022) ಮತ್ತು ಈಮಿ (2022).

 ಆದ್ದರಿಂದ, ನೀವು ಅರ್ಜೆಂಟೀನಾ‌‌ ದೇಶವನ್ನು ಇದುವರೆಗೆ ದಂತಕಥೆಗಳಿಂದಾಗಿ ಮಾತ್ರ ತಿಳಿದಿದ್ದರೆ, ಇದರ ಇನ್ನಷ್ಟು ವೈಶಿಷ್ಟ್ಯಗಳನ್ನು ತಿಳಿಯಲು ಈ ನವೆಂಬರ್ 2022 ರಲ್ಲಿ ಗೋವಾದಲ್ಲಿನ ಕೌಂಟಿಯ ಸಿನಿಮೀಯ ವೈಭವವನ್ನು ಅನುಭವಿಸಲು ಸಿದ್ಧರಾಗಿರಿ.

IFFI (ಐಎಫ್‌ಎಫ್‌ಐ) ಬಗ್ಗೆ : 

 1952 ರಲ್ಲಿ ಸ್ಥಾಪನೆಯಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), ಏಷ್ಯಾದ ಪ್ರಮುಖ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ.  ಚಲನಚಿತ್ರಗಳು, ಅವು ಹೇಳುವ ಕಥೆಗಳು ಮತ್ತು ಅವುಗಳನ್ನು   ಗುರುತಿಸುವಂತೆ ಮಾಡುವುದು ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ದೇಶವಾಗಿದೆ.  ಈ ರೀತಿ ಮಾಡುವ ಮೂಲಕ ನಾವು ಚಲನಚಿತ್ರಗಳ ಬಗ್ಗೆ  ಮೆಚ್ಚುಗೆ ಮತ್ತು ಉತ್ಕಟ ಪ್ರೀತಿಯನ್ನು ಬೆಳೆಸಲು, ಚಿತ್ರಗಳನ್ನು ಪ್ರಚುರ ಪಡಿಸಲು ಪ್ರಯತ್ನಿಸುತ್ತೇವೆ. ವಿಶಾಲವಾದ‌ ಇಂತಹ ಪ್ರಯತ್ನದಿಂದಾಗಿ ಜನರ ನಡುವೆ ಪ್ರೀತಿ, ತಿಳಿವಳಿಕೆ ಮತ್ತು ಭ್ರಾತೃತ್ವ ಸಂಬಂಧ ಮತ್ತು ವೈಯಕ್ತಿಕ  ಸಾಮೂಹಿಕ ಶ್ರೇಷ್ಠತೆಯ ಹೊಸ ಶಿಖರಗಳನ್ನು ಅಳೆಯಲು ಹಾಹೂ  ಪ್ರೇರೇಪಿಸಲು ಚಲನಚಿತ್ರೋತ್ಸವ ಸಹಕಾರಿಯಾಗಿದೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಪ್ರತಿ ವರ್ಷ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆತಿಥೇಯ ರಾಜ್ಯವಾದ ಗೋವಾ ಸರ್ಕಾರದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಇದರ ಸಹಯೋಗದೊಂದಿಗೆ ನಡೆಸುತ್ತದೆ.  53 ನೇ IFFI ಯ ಎಲ್ಲಾ ಸಂಬಂಧಿತ ನವೀಕರಣಗಳನ್ನು ಉತ್ಸವದ ವೆಬ್‌ಸೈಟ್ http://www.iffigoa.org ನಲ್ಲಿ, PIB ವೆಬ್‌ಸೈಟ್‌ನಲ್ಲಿ (pib.gov.in), Twitter, Facebook ಮತ್ತು Instagram ನಲ್ಲಿ IFFI ನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು PIB ಗೋವಾದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪಡೆಯಬಹುದಾಗಿದೆ.
ಚಲನಚಿತ್ರೋತ್ಸವ ಆಚರಣೆಯಂತಹ  ಕಪ್‌ನಿಂದ ನಾವೆಲ್ಲ ಯಥೇಚ್ಛವಾಗಿ ಸವಿಯನ್ನು ಹೀರೋಣ ಮತ್ತು ಅದರ ಸಂತೋಷವನ್ನು ಪರಸ್ಪರ ಹಂಚಿಕೊಳ್ಳೋಣ.

*****

iffi reel

(Release ID: 1876538) Visitor Counter : 173