ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ವಿಚಕ್ಷಣ ಜಾಗೃತಿ ಸಪ್ತಾಹ 2022 ರ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಅಕ್ಟೋಬರ್ 31 ರಿಂದ ನವೆಂಬರ್ 06, 2022 ರವರೆಗೆ ವಿವಿಧ ಚಟುವಟಿಕೆಗಳ ಆಯೋಜನೆ


"ಭ್ರಷ್ಟಾಚಾರ ಮುಕ್ತ ಭಾರತ - ವಿಕಸಿತ ಭಾರತ" ಮತ್ತು "ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ" ಮುಖ್ಯ ವಿಷಯಗಳಾಗಿತ್ತು

ಪಾರದರ್ಶಕತೆಯನ್ನು ಉತ್ತೇಜಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಶೇ.100ರಷ್ಟು ಇ-ಕಚೇರಿಯ ಬಳಕೆಯನ್ನು ಜಾರಿಗೆ ತಂದಿದೆ

ಸಚಿವಾಲಯವು ಜಿಇಎಂ ಪೋರ್ಟಲ್ ಮೂಲಕ ಎಲ್ಲಾ ಖರೀದಿ ಮಾಡುತ್ತಿದೆ

 ಪ್ರಬಂಧ ಮತ್ತು ಬಿತ್ತಿಪತ್ರ ರಚನೆ ಸ್ಪರ್ಧೆಗಳ ಆಯೋಜನೆ

Posted On: 06 NOV 2022 11:37AM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ನಿಗ್ರಹ ವಿಚಕ್ಷಣೆಯ ಜಾಗರೂಕತೆಯ ನೈಜ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತು ಎಲ್ಲಾ ದಾಖಲೆಗಳು ಮತ್ತು ಎಲ್ಲಾ ಕೆಲಸಗಳ ಪಾರದರ್ಶಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಸಚಿವಾಲಯವು ಇ-ಕಚೇರಿಯ ಶೇ.100ರಷ್ಟು ಬಳಕೆಯನ್ನು ಜಾರಿಗೆ ತಂದಿದೆ. ಅಲ್ಲದೆ, ಸಚಿವಾಲಯವು ಎಲ್ಲಾ ಖರೀದಿಯನ್ನು ಜಿಇಎಂ ಪೋರ್ಟಲ್ ಮೂಲಕ ಮಾಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವಿಚಕ್ಷಣಾ ಜಾಗೃತಿ ಸಪ್ತಾಹ 2022 ರ ಅಡಿಯಲ್ಲಿ ಪ್ರಬಂಧ ಮತ್ತು ಭಿತ್ತಿಪತ್ರ ರಚನೆ ಸ್ಪರ್ಧೆಗಳನ್ನು ಆಯೋಜಿಸಿತ್ತು
 
ಇದಲ್ಲದೆ, ಪಾರದರ್ಶಕತೆ ಮತ್ತು ಸಮಗ್ರತೆಯ ಅಗತ್ಯದ ಬಗ್ಗೆ ಸರ್ಕಾರಿ ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸಲು, ಸಚಿವಾಲಯವು 31.10.2022 ರಿಂದ 06.11.2022 ರವರೆಗೆ "ಭ್ರಷ್ಟಾಚಾರ ಮುಕ್ತ ಭಾರತ - ವಿಕಸಿತ ಭಾರತ", "ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ" ಎಂಬ ವಿಷಯದ ಮೇಲೆ ವಿಚಕ್ಷಣ ಜಾಗೃತಿ ಸಪ್ತಾಹ 2022 ರ ಆಚರಣೆಯಲ್ಲಿ ಹಲವು ಚಟುವಟಿಕೆಗಳನ್ನು ಆಯೋಜಿಸಿತ್ತು.  ಸಚಿವಾಲಯವು ಸಪ್ತಾಹದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಿತು:-
i.    ಈ ಸಪ್ತಾಹವು ದಿನಾಂಕ 31.10.2022 ರಂದು ಸಚಿವಾಲಯದ ಎಲ್ಲಾ ಉದ್ಯೋಗಿಗಳು ಆನ್ ಲೈನ್ ಸಮಗ್ರತೆಯ ಪ್ರತಿಜ್ಞೆ ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಯಿತು.
ii.    ಶಾಸ್ತ್ರೀಭವನದ ಸಚಿವಾಲಯದ ಆವರಣದಲ್ಲಿ ಮತ್ತು ಜೀವನ್ ವಿಹಾರ್ ಹಾಗೂ ಜೀವನ್ ತಾರಾ ಕಟ್ಟಡದ ವಿವಿಧ ಸ್ಥಳಗಳಲ್ಲಿ ಫಲಕಗಳನ್ನು ಪ್ರದರ್ಶಿಸಲಾಯಿತು.
iii.    ಸಿವಿಸಿ ಹೊರಡಿಸಿದ ಸೂಚನೆಗಳನ್ನು ಸಚಿವಾಲಯದ ಎಲ್ಲಾ ಸಂಬಂಧಿತ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು, ಸಪ್ತಾಹದಲ್ಲಿ ವಿಭಿನ್ನವಾದ ಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿನಂತಿಸಲಾಗಿತ್ತು.
iv.    ಕಚೇರಿಯಲ್ಲಿ (ನಡೆವಳಿಕೆಯ ನಿಯಮಗಳಿಗೆ ಅನುಸಾರವಾಗಿ) ಅನುಸರಿಸಬೇಕಾದ ಮಾಡಬಹುದಾದ್ದು ಮತ್ತು ಮಾಡಬಾರದ ವಿಷಯಗಳಿಗೆ ಸಂಬಂಧಿಸಿದ ಸುತ್ತೋಲೆಯನ್ನು ಸಚಿವಾಲಯದ ಎಲ್ಲಾ ವಿಭಾಗಗಳ ನಡುವೆ ವಿತರಿಸಲಾಯಿತು.
v.    02.11.2022 ರಂದು ಪ್ರಬಂಧ ಮತ್ತು ಭಿತ್ತಿಪತ್ರ ರಚನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

*****


(Release ID: 1874089)