ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಮೊಹಾಲಿಯ ಐಐಎಸ್ಇಆರ್ನಲ್ಲಿ ‘ಏಕತಾ ಓಟʼಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ 


ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸ್ವಚ್ಛ ಭಾರತ 2.0 ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು

ಇದುವರೆಗೆ 2 ಲಕ್ಷ ಕೆಜಿಗೂ ಹೆಚ್ಚು ಕಸ ಸಂಗ್ರಹವಾಗಿದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

Posted On: 31 OCT 2022 4:57PM by PIB Bengaluru

ಇಂದು ಅಕ್ಟೋಬರ್ 31 ರಂದು ದೇಶದಾದ್ಯಂತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ಆಚರಿಸಲಾಗುವ 'ರಾಷ್ಟ್ರೀಯ ಏಕತಾ ದಿನ' ಸಂದರ್ಭದಲ್ಲಿ, ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮೊಹಾಲಿಯ ಐಐಎಸ್ಇಆರ್ನಲ್ಲಿ ʼಏಕತಾ ಓಟʼಕ್ಕೆ ಚಾಲನೆ ನೀಡಿದರು ಹಾಗೂ ‘ಸ್ವಚ್ಛ ಭಾರತ 2.0’ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಗೌರವಾನ್ವಿತ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮೊಹಾಲಿಯ ಐಐಎಸ್ಇಆರ್ನಲ್ಲಿ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಈ ರಾಷ್ಟ್ರಮಟ್ಟದ ಸಮಾರೋಪ ಸಮಾರಂಭವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ದೇಶದ ಏಕತೆ ಮತ್ತು ಸಮಗ್ರತೆಗೆ ಸರ್ದಾರ್ ಪಟೇಲ್ ಅವರ ಕೊಡುಗೆಯು ಸ್ಫೂರ್ತಿಯ ಮೂಲವಾಗಿ ಮುಂದುವರಿಯುತ್ತದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಪ್ರೇರಣೆಯಿಂದ ದೇಶದಾದ್ಯಂತ 75 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕತಾ ಓಟವನ್ನು ಆಯೋಜಿಸಲಾಗಿದ್ದು, ಇದರಲ್ಲಿ ದೇಶಾದ್ಯಂತ ಯುವಜನರು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂದರು. ಅಲ್ಲದೆ ಈ ಬಾರಿಯ ಸ್ವಚ್ಛತಾ ಅಭಿಯಾನಕ್ಕೆ ದೇಶದ ಯುವಜನರಿಂದ ಉತ್ತಮ ಸ್ಪಂದನೆಯೂ ಸಿಕ್ಕಿದೆ ಎಂದರು. ನೆಹರು ಯುವ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಒಟ್ಟಾಗಿ ಸ್ವಚ್ಛತೆಯಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದರು. ಗಾಂಧಿ ಜಯಂತಿ ಮತ್ತು ರಾಷ್ಟ್ರೀಯ ಏಕತಾ ದಿನದ ನಡುವೆ 100 ಕೆಜಿ ಕಸವನ್ನು ಸಂಗ್ರಹಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಕೇವಲ 19 ದಿನಗಳಲ್ಲಿ ಈ ದೊಡ್ಡ ಗುರಿಯನ್ನು ಸಾಧಿಸಿದ್ದೇವೆ. ಇಲ್ಲಿಯವರೆಗೆ ಒಟ್ಟು 2,08,83,704 ಕೆಜಿ ಕಸ ಸಂಗ್ರಹಿಸಲಾಗಿದೆ. ಸಂಗ್ರಹವಾದ ತ್ಯಾಜ್ಯದಲ್ಲಿ ಇದುವರೆಗೆ 2,04,84,176 ಕೆಜಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮೊಹಾಲಿಯ ಐಐಎಸ್ಇಆರ್ನಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಅಮೃತ ಕಾಲದಲ್ಲಿ ದೇಶವನ್ನು ಸದೃಢ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದ ಅನುಸಾರ ದೇಶದ ಯುವಕರು ಮುನ್ನಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, 1200 ಸ್ವಯಂಸೇವಕರು ಭಾಗವಹಿಸಿದ್ದ ‘ಏಕತಾ ಓಟʼಕ್ಕೂ ಸಚಿವರು ಚಾಲನೆ ನೀಡಿದರು.

ಮಾನ್ಯ ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ‘ಏಕತಾ ಓಟʼಕ್ಕೆ ಚಾಲನೆ ನೀಡಿದರು.

ಸ್ವಚ್ಛ ಭಾರತ 2.0 ಸಮಾರೋಪ ಸಮಾರಂಭದಲ್ಲಿ ಎಸ್ಎಎಸ್ ನಗರ ಜಿಲ್ಲಾಧಿಕಾರಿ ಶ್ರೀ ಅಮಿತ್ ತಲ್ವಾರ್, ಐಐಎಸ್ಇಆರ್ನ ನಿರ್ದೇಶಕ ಶ್ರೀ ಜೆ ಗೌರಿಶಂಕರ್, ಐಐಎಸ್ಇಆರ್ನ ರಿಜಿಸ್ಟ್ರಾರ್ ಶ್ರೀ ಪ್ರದೀಪ್ ಸಿಂಗ್, ಶ್ರೀಮತಿ. ಹರಿಂದರ್ ಕೌರ್, RD, NSS, ಪಂಜಾಬ್ ಮತ್ತು ಚಂಡೀಗಢ ಎನ್ವೈಕೆಎಸ್ ನಿರ್ದೇಶಕ ಶ್ರೀ ಸುರಿಂದರ್ ಸೈನಿ, ಹರಿಯಾಣ ಎನ್ವೈಕೆಎಸ್ ನಿರ್ದೇಶಕಿ ಶ್ರೀಮತಿ ಮಧು ಚೌಧರಿ ಉಪಸ್ಥಿತರಿದ್ದರು.

******


(Release ID: 1872496) Visitor Counter : 136