ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಪಿಐಬಿ ಸಂಶೋಧನಾ ವಿಭಾಗದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ; ಸಾಮರ್ಥ್ಯ ವರ್ಧನೆ ಕಾರ್ಯಾಗಾರದ ಉದ್ಘಾಟನೆ


ಜನಸಮುದಾಯದೊಂದಿಗೆ ಹೆಚ್ಚು ಉತ್ತಮ ಸಂಪರ್ಕ ಸಾಧಿಸಲು, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ವಸ್ತುವಿಷಯವನ್ನು ರಚಿಸುವ ಅಗತ್ಯದ ಪ್ರತಿಪಾದನೆ 

Posted On: 28 OCT 2022 6:28PM by PIB Bengaluru

ಕೇಂದ್ರ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ಸಂಶೋಧನಾ ವಿಭಾಗ ತನ್ನ ಮೊದಲ ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಅದರ ಕಾರ್ಯಚಟುವಟಿಕೆಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ಪಿಐಬಿಯ ಪ್ರಧಾನ ಮಹಾ ನಿರ್ದೇಶಕ ಶ್ರೀ ಸತ್ಯೇಂದ್ರ ಪ್ರಕಾಶ್ ಅವರು ಪರಾಮರ್ಶಿಸಿದರು. ಸರ್ಕಾರದ ನಿರ್ಧಾರಗಳು ಮತ್ತು ನೀತಿಗಳ ಸಂಪೂರ್ಣ ದೃಷ್ಟಿಕೋನವನ್ನು ಮಾಧ್ಯಮಗಳಿಗೆ ನೀಡುವ ಸಲುವಾಗಿ, ಸರ್ಕಾರದ ಸಂವಹನವನ್ನು ಉಲ್ಲೇಖಿತ ಮೌಲ್ಯದ ಸಂಶೋಧನಾ ಸಾಮಗ್ರಿಗಳಿಂದ ಬೆಂಬಲಿಸಬೇಕಾದ ದೀರ್ಘಕಾಲದ ಅಗತ್ಯವನ್ನು ಪರಿಹರಿಸಲು ಸಂಶೋಧನಾ ಘಟಕವನ್ನು ಸ್ಥಾಪಿಸಲಾಗಿದೆ.

 2021ರ ಅಕ್ಟೋಬರ್ ನಲ್ಲಿ ತನ್ನ ಪಯಣ ಪ್ರಾರಂಭಿಸಿದ ಸಂಶೋಧನಾ ಘಟಕವು, ಪಿಐಬಿ ಮತ್ತು ಇತರ ಅಧಿಕೃತ ವಾಹಿನಿಗಳ ಮೂಲಕ ಮಾಧ್ಯಮ ಮತ್ತು ಜನರಿಗೆ ಮಾಹಿತಿ ಪ್ರಸಾರವನ್ನು ಬಲಪಡಿಸಲು ಸರ್ಕಾರದ ಉಪಕ್ರಮಗಳ ಬಗ್ಗೆ ಸತ್ಯ-ಆಧಾರಿತ, ಉತ್ತಮ ಸಂಶೋಧನಾ ವಿಷಯವನ್ನು ಸೃಷ್ಟಿಸುತ್ತಿದೆ.  ಈ ಘಟಕ ತನ್ನ ಪ್ರಾರಂಭದಿಂದಲೂ ವಿವರಣಾತ್ಮಕ, ವಾಸ್ತವ ಪಟ್ಟಿಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳು, ವೈಶಿಷ್ಟ್ಯಗಳು ಇತ್ಯಾದಿಗಳ ರೂಪದಲ್ಲಿ ಸುಮಾರು 450 ದಾಖಲೆಗಳನ್ನು ರಚಿಸಿದೆ, ಇದು ವಿವಿಧ ಮಾಧ್ಯಮ ವೇದಿಕೆಗಳಿಂದ ಉತ್ತಮವಾಗಿ ಸ್ವೀಕೃತವಾಗಿದೆ.  

ಸಂಶೋಧನಾ ವಿಭಾಗವು ತನ್ನ ಸದಸ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಸಾಮರ್ಥ್ಯ ವರ್ಧನೆ ಕಾರ್ಯಾಗಾರವನ್ನು ಸಹ  ಶ್ರೀ ಚಂದ್ರ ಈ ಸಂದರ್ಭದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಕಾರ್ಯದರ್ಶಿಯವರು, ಜನಸಾಮಾನ್ಯರನ್ನು ಉತ್ತಮವಾಗಿ ತಲುಪಲು ಮತ್ತು ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸಂವಹನಕ್ಕಾಗಿ ವಸ್ತುವಿಷಯವನ್ನು ರಚಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಕಣ್ಣಿಗೆ ಕಾಣುವಂತಹ ಫಲಿತಾಂಶಗಳೊಂದಿಗೆ ವಿವಿಧ ಯೋಜನೆಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಅವರು ತಂಡವನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಅದರ ಕೆಲಸವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಹಾಯ ಮಾಡಲು ಅಮೂಲ್ಯವಾದ ಆಧಾನಗಳನ್ನು ನೀಡಿದರು. ಕಾರ್ಯಾಗಾರದ ಉದ್ಘಾಟನಾ ಅಧಿವೇಶನದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ವಿಕ್ರಮ್ ಸಹಾಯ್ ಮತ್ತು ಭಾರತೀಯ ಮಾಹಿತಿ ಸೇವೆಯ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 

ಸಂಶೋಧನಾ ವಿಭಾಗದ ರಚನೆಯು ಕಳೆದ ಒಂದು ವರ್ಷದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅತ್ಯಂತ ಮಹತ್ವದ ಹೊಸ ಉಪಕ್ರಮಗಳಲ್ಲಿ ಒಂದಾಗಿದ್ದು, ಸರ್ಕಾರಿ ಸಂವಹನ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಯಶಸ್ವಿಯಾಗಿ ರೂಪಿಸಿದೆ ಎಂದು ಕಾರ್ಯದರ್ಶಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸತ್ಯೇಂದ್ರ ಪ್ರಕಾಶ್ ಅವರು, ಮಾಧ್ಯಮಗಳು ಮತ್ತು ಸಾರ್ವಜನಿಕರ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ನೀಡಲು ಸರ್ಕಾರಿ ಸಂವಹನವನ್ನು ಬೆಂಬಲಿಸಲು ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದರು. ವಿಭಾಗದ ಪಾತ್ರಗಳು ಮತ್ತು ನಿರೀಕ್ಷೆಗಳ ಮೇಲೆ ಬೆಳಕು ಚೆಲ್ಲಿದ ಅವರು, ಪಿಐಬಿ ವೇದಿಕೆಯನ್ನು ವಿಷಯ ಸಮೃದ್ಧ, ನಿಖರ, ಆಕರ್ಷಕ ಮತ್ತು ಓದುಗರಿಗೆ ಆಕರ್ಷಕವಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸರ್ಕಾರಿ ಸಂವಹನಕಾರರು ತಮ್ಮ ಉತ್ಪನ್ನದ ಅಂತಿಮ ಗ್ರಾಹಕನನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.
ಸಂಶೋಧನಾ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾದ ಶ್ರೀ ಆಶಿಶ್ ಗೋಯಲ್ ಅವರು ಸಂಶೋಧನಾ ವಿಭಾಗದ ಅವಲೋಕನವನ್ನು ಪ್ರಸ್ತುತಪಡಿಸಿದರು. ಅವರು ವಿಭಾಗದ ಆರಂಭಿಕ ದಿನಗಳಿಂದ ಇಂದಿನವರೆಗಿನ ಪ್ರಗತಿಯನ್ನು ಉಲ್ಲೇಖಿಸಿದರು, ಕಳೆದ ವರ್ಷದಲ್ಲಿ ಮಾಡಿದ ಕೆಲಸದ ವೈವಿಧ್ಯಮಯ ಸ್ವರೂಪವನ್ನು ಮತ್ತು ಮುಂದಿನ ದಿನಗಳಿಗಾಗಿ ಕಲ್ಪಿಸಲಾಗಿರುವ ವಿಷಯಗಳನ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದರು.

ಕಾರ್ಯಾಗಾರದ ಎರಡು ಮಧ್ಯಾಹ್ನದ ಅಧಿವೇಶನಗಳು ತಮ್ಮ ವಸ್ತುವಿಷಯಕ್ಕೆ ಹೆಚ್ಚಿನ ಮೌಲ್ಯವನ್ನು ಸೇರಿಸಬಲ್ಲ ಹೊಸ ಸಾಧನಗಳು ಮತ್ತು ಪರಿಕಲ್ಪನೆಗಳನ್ನು ಪರಿಚಯಿಸುವ ಮೂಲಕ ಸಂಶೋಧನಾ ವಿಭಾಗದ ತಂಡದ ಸಾಮರ್ಥ್ಯ ವರ್ಧನೆಯತ್ತ ಗಮನ ಹರಿಸಿದವು. ಸಮೂಹ ಸಂವಹನ ಕುರಿತ ಭಾರತೀಯ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ -ಐಐಎಂಸಿ)ಯ ಪ್ರೊಫೆಸರ್ ಡಾ. ಅನುಭೂತಿ ಯಾದವ್ ಅವರು 'ವಿಷುಯಲ್ ಸಂವಹನ: ಉಪಕರಣ ಮತ್ತು ಕೌಶಲ್ಯ' ಕುರಿತ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಂಶೋಧನಾ ದಾಖಲೆಗಳ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುವ ಮತ್ತು ನಿರ್ದಿಷ್ಟ ಪ್ರೇಕ್ಷಕರಿಗೆ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವ ವೈವಿಧ್ಯಮಯ ಶ್ರೇಣಿಯ ಉಪಕರಣಗಳನ್ನು ಪಾಲ್ಗೊಂಡವರಿಗೆ ಪರಿಚಯಿಸಿದರು. 'ಸಂವಹನ ಸಂಶೋಧನೆ: ವಿಧಾನಶಾಸ್ತ್ರ ಮತ್ತು ಉಪಕರಣಗಳು' ಕುರಿತ ಗೋಷ್ಠಿಯ ಮೂಲಕ ಭಾಗವಹಿಸುವವರನ್ನು ತೊಡಗಿಸಿಕೊಳ್ಳಲಾಯಿತು, ಅಲ್ಲಿ ಐಐಎಂಸಿಯ ಪ್ರೊಫೆಸರ್ ಡಾ. ಶಾಶ್ವತಿ ಗೋಸ್ವಾಮಿ ಮತ್ತು ಐಐಎಂಸಿಯ ಸಂಶೋಧನಾ ಅಧಿಕಾರಿ ಶ್ರೀಮತಿ ಅನನ್ಯಾ ರಾಯ್ ಅವರು ಸಂವಹನ ಸಂಶೋಧನೆಯ ಸೂಕ್ಷ್ಮತೆಗಳ ಮೂಲಕ ಅವರಿಗೆ ಮಾರ್ಗದರ್ಶನ ನೀಡಿದರು.

ಸಂಶೋಧನಾ ವಿಭಾಗ ರಚಿಸಿದ  ವಿವರಣೆಗಳು, ವಾಸ್ತವ ಪರಿಶೀಲನಾ ಹಾಳೆ ಗಳು, ಪದೇ ಪದೇ ಕೇಳಲಾಗುವ ಪ್ರಶ್ನೆಗಳು, ಲೇಖನಗಳು  ಮತ್ತು ಅಮೃತ್ ಯಾತ್ರಾ ಸರಣಿಗಳನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

    

***



(Release ID: 1871707) Visitor Counter : 119